Breaking News

Monthly Archives: ಜೂನ್ 2023

3 ತಿಂಗಳಲ್ಲಿ ಬೆಂಗಳೂರನ್ನು ಟ್ರಾಫಿಕ್‌ ಮುಕ್ತ ಸಿಟಿ ಮಾಡಿ- ಅಧಿಕಾರಿಗಳಿಗೆ ಗೃಹ ಸಚಿವ ಜಿ.ಪರಮೇಶ್ವರ್ ಗಡುವು

ಬೆಂಗಳೂರು : ಬೆಂಗಳೂರು ನಗರ ಸಂಚಾರ ದಟ್ಟಣೆಯಿಂದ ವಿಶ್ವಮಟ್ಟದಲ್ಲಿ‌ ಅಪಖ್ಯಾತಿಗೆ ಒಳಗಾಗಿದೆ. ಹೀಗಾಗಿ ನಗರ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್‌ಮುಕ್ತ ನಗರ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿ.ಪರಮೇಶ್ವರ್, ಎಸಿಪಿ ಮೇಲ್ಮಟ್ಟ ಪೊಲೀಸ್​ ಅಧಿಕಾರಿಗಳೊಂದಿಗೆ ಇಂದು ನಗರ ಪೊಲೀಸ್ ಇಲಾಖೆಯ ಕಾರ್ಯಗಳ ಬಗ್ಗೆ ಸಭೆ …

Read More »

ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ.: ಆರ್.ಬಿ.ತಿಮ್ಮಾಪೂರ್

ಬೆಂಗಳೂರು: ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ. ಯಾವುದೇ ಅಧಿಕೃತ ಆದೇಶವೂ ಆಗಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮದ್ಯದ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಬಂದಿಲ್ಲ. ಮದ್ಯದ ದರ ಹೆಚ್ಚಳ ಮಾಡಿದರೆ ಮಾಹಿತಿ ನೀಡುತ್ತೇನೆ ಎಂದರು. ಅಬಕಾರಿ ಇಲಾಖೆಯಿಂದ ಯಾವುದೇ ದರ ಏರಿಕೆ ಮಾಡಿಲ್ಲ. ನನಗೆ ಮಾಹಿತಿಯೂ ಇಲ್ಲ. ದರ ಏರಿಕೆ ಇದುವರೆಗೂ …

Read More »

ಒಣಗುತ್ತಿರುವ ಭತ್ತದ ಸಸಿ: ಸಂಕಷ್ಟದಲ್ಲಿ ಬೆಳಗಾವಿ ಅನ್ನದಾತರು

ಬೆಳಗಾವಿ: ಈ ಬಾರಿ ಮಳೆರಾಯ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಜೂನ್‌ ಮೂರನೇ ವಾರ ಬಂದರೂ ಮಳೆಯಾಗದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆದ ರೈತರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಹೌದು. ಬೆಳಗಾವಿ ಸುತ್ತಮುತ್ತಲಿನ ರೈತರು ಅಧಿಕವಾಗಿ ಭತ್ತವನ್ನೆ ಬೆಳೆಯುತ್ತಾರೆ. ಉತ್ತಮ ಮುಂಗಾರು ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಇಲ್ಲಿನ ವಡಗಾವಿ, ಅನಗೋಳ ಮತ್ತು ತಾಲೂಕಿನ ಯಳ್ಳೂರು ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರು ಮೇ ತಿಂಗಳ 3 ಮತ್ತು 4ನೇ ವಾರದಲ್ಲೇ ಭತ್ತದ ಒಣ …

Read More »

ಮಗುವಿನ ಮೃತದೇಹ ಕೈಚೀಲದಲ್ಲಿ ಇಟ್ಟುಕೊಂಡು ಬಸ್​ನಲ್ಲಿ ಪ್ರಯಾಣಿಸಿದ ತಂದೆ…!

ಮಧ್ಯ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಆರೋಗ್ಯ ಮೂಲ ಸೌಕರ್ಯವಿಲ್ಲದ ಕಠೋರ ಸ್ಥಿತಿ ಬಿಂಬಿಸುವ ಘಟನೆ ಬಹಿರಂಗವಾಗಿದೆ. ಹೌದು, ಮಧ್ಯಪ್ರದೇಶದ ಜಬಲ್‌ಪುರದ ದಿಂಡೋರಿಯ ಬಡ ವ್ಯಕ್ತಿಯೊಬ್ಬರು, ಜಬಲ್‌ಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ಗೆ ಪಾವತಿಸಲು ಸಾಧ್ಯವಾಗದ ಕಾರಣ, ತನ್ನ ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಇಟ್ಟುಕೊಂಡು ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ದಿಂಡೋರಿಯ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿಯ ಪತ್ನಿ ಜಮಾನಿ ಬಾಯಿ ಹೆರಿಗೆ ನೋವಿನ ಹಿನ್ನೆಲೆಯಲ್ಲಿ ದಿಂಡೋರಿ ಜಿಲ್ಲಾ ಆಸ್ಪತ್ರೆಗೆ …

Read More »

ನಿಜಲಿಂಗಪ್ಪ ‌ಸಕ್ಕರೆ ಸಂಸ್ಥೆಗೆ ಬೀಗ ಜಡಿದ ರೈತ ಹೋರಾಟಗಾರರು

ರೈತರಿಗೆ ವಿಚಾರಣೆಗೆ ಬನ್ನಿ ಎಂದು ನೋಟಿಸ್ ನೀಡಿ ತಾವೇ ಬರದ ಸಕ್ಕರೆ ಆಯುಕ್ತರ ನಡೆ ಖಂಡಿಸಿ ಸಕ್ಕರೆ ಸಂಸ್ಥೆಯ ಕಚೇರಿಗೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು. ಬೆಳಗಾವಿಯ ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಚೇರಿಗೆ ಬೀಗ ಜಡಿದ ರೈತರು, ಸಿಬ್ಬಂದಿ ಹೊರದಬ್ಬಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬೀಗ ಜಡಿದ ರೈತ ಹೋರಾಟಗಾರರು. ಬೆಳಗಾವಿಯ ಗಣೇಶಪುರ ರಸ್ತೆಯಲ್ಲಿರುವ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬೀಗ ಜಡಿದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬಿನ …

Read More »

ಸಾರಿಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಎರಡೂ ಲಕ್ಷ

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆ ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಬರೋಬರಿ ಎರಡೂ ಲಕ್ಷ ಜನ ಮಹಿಳೆಯರು ಲಾಭ ಪಡೆದುಕೊಂಡಿದ್ದಾರೆ‌. ಶಕ್ತಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿಂತೆ ಉಚಿತ ಪ್ರಯಾಣಕ್ಕಾಗಿ ಮಹಿಳಾ ಪ್ರಯಾಣಿಕರು ಗುರುತಿನ ಚೀಟಿಯನ್ನು (ನಕಲು/ ಮೂಲ/ಡಿಜಿಲಾಕರ್) ತೋರಿಸಿ ಪ್ರಯಾಣಿಸಲು ಅವಕಾಶ ನೀಡುವಂತೆ ಸಂಸ್ಥೆಯ ನಿರ್ವಾಹಕರಿಗೆ ಶಕ್ತಿ ಯೋಜನೆಯ ಅನುಷ್ಠಾನಕ್ಕಿಂತ ಮುಂಚಿತವಾಗಿಯೇ ತಿಳುವಳಿಕೆ ನೀಡುತ್ತಾ ಬರಲಾಗಿದೆ. ಅದರಂತೆ, ವಾಯವ್ಯ ಕರ್ನಾಟಕ …

Read More »

ಕೆ – ಸಿಇಟಿ ಇಂಜಿನಿಯರಿಂಗ್ ‌ನಲ್ಲಿ ರಾಜ್ಯಕ್ಕೆ 3 ನೇ ರ್ಯಾಂಕ್ , 1 ಲಕ್ಷ ರೂ. ಚೆಕ್ ನೀಡಿಸನ್ಮಾನ .

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸತತ 14ನೇ ಬಾರಿಗೆ ಧಾರವಾಡ ಜಿಲ್ಲೆಗೆ ನಂಬರ್ ಒನ್ ಸ್ಥಾನವನ್ನು ಪಡೆದಿರುವ ಹುಬ್ಬಳ್ಳಿ ಭೈರಿದೇವರಕೊಪ್ಪದ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಸಮೃದ್ಧ ಶೆಟ್ಟಿ 2023ರ ಸಿಇಟಿಯಲ್ಲೂ ಕಮಾಲ್ ಮಾಡಿದ್ದಾನೆ. ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಇಂಜಿನಿಯರಿಂಗ್ ವಿಭಾಗದಲ್ಲಿ ಸಮೃದ್ಧ ಶೆಟ್ಟಿ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದು ಹಿರಿಮೆ ನೆರೆದಿದ್ದಾನೆ. ಐಐಟಿ ಮೇನ್ಸ್‌ನಲ್ಲೂ ದೇಶಕ್ಕೆ ಈತ 31ನೇ ರ್‍ಯಾಂಕ್ ಪಡೆದು ಸಾಧನೆ …

Read More »

ಹೊಸ ಲುಕ್​ನಲ್ಲಿ ಯೋಗರಾಜ್ ಭಟ್

ಯೋಗರಾಜ್​ ಭಟ್ ಕರಟಕ ದಮನಕ ಸಿನಿಮಾದಲ್ಲಿ ಅಜ್ಜಯ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಲುಕ್​ನಲ್ಲಿ ಯೋಗರಾಜ್ ಭಟ್ ಮಧುರವಾದ ಪ್ರೇಮಕಥೆ ಜೊತೆಗೆ ಫಿಲಾಸಫಿ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಕಟಕವಿ ಎಂದೇ ಜನಪ್ರಿಯರಾಗಿರುವ ನಿರ್ದೇಶಕ ಯೋಗರಾಜ್ ಭಟ್. ಸದ್ಯ ಗರಡಿ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಗರಡಿ ಚಿತ್ರದ ಮೊದಲ ಹಾಡನ್ನು ಭಟ್ರು ಅನಾವರಣಗೊಳಿಸಿದ್ದಾರೆ. ತಮಟೆ ಬಾರಿಸುವ ಮೂಲಕ ತಮ್ಮ ಗರಡಿ ಚಿತ್ರದ ಪ್ರಚಾರ ಮಾಡಿದ ಭಟ್ರ ಹೊಸ ಅವತಾರಕ್ಕೆ ಸಿನಿ …

Read More »

ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿತ: ವಿದ್ಯಾರ್ಥಿ ಸಾವು, ಇನ್ನೊಬ್ಬ ಬಾಲಕನ ಸ್ಥಿತಿ ಗಂಭೀರ

ಹುಬ್ಬಳ್ಳಿ: ನಿರ್ಮಾಣ ಹಂತದ ಗೋಡೆ ಕುಸಿದು ಬಿದ್ದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಿರೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಆವರಣದಲ್ಲಿ ನಡೆದಿದೆ. ವಿಶೃತ್ ಬೆಳಗಲಿ (9) ಮೃತ ವಿದ್ಯಾರ್ಥಿಯಾಗಿದ್ದು, ಪ್ರಭು ನಾಗಾವಿ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ವಿಶೃತ್ ನಿರ್ಮಾಣ ಹಂತದ ಕಟ್ಟಡದ ಕೆಳಭಾಗ ಆಟವಾಡುತ್ತಿದ್ದ. ಆಟವಾಡುವ ಸಂದರ್ಭದಲ್ಲಿ ಏಕಾಏಕಿ ನಿರ್ಮಾಣ ಹಂತದ ಗೋಡೆ ಕುಸಿದು ಬಿದ್ದಿದೆ. ಘಟನೆಗೆ ಕಳಪೆ …

Read More »

ಸಿದ್ದರಾಮಯ್ಯನವರನ್ನು ಕುಟುಕಿದ ಪ್ರತಾಪ್ ಸಿಂಹ,

ಮೈಸೂರು: ಡಿಕೆ ಶಿವಕುಮಾರ್ ಒಬ್ಬ ಫೈಟರ್. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅವರ ಹೋರಾಟವೇ ಪ್ರಮುಖ ಕಾರಣ ಎಂದು ಸಂಸದ ಪ್ರತಾಪ್ ಸಿಂಹ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸೈನ್‌ ಬಾಕ್ಸ್ ಏಜೆನ್ಸಿ ಮೂಲಕ ಗ್ಯಾರಂಟಿ ಯೋಜನೆ ರೂಪಿಸಿದವರು ಡಿಕೆ ಶಿವಕುಮಾರ್. ಅವರು ನಮ್ಮ ಎದುರಾಳಿ ಇರಬಹುದು. ನಾನು ರಾಜಕೀಯ ಕಾರಣಕ್ಕೆ ಈ ರೀತಿ ಹೇಳುತ್ತಿಲ್ಲ. …

Read More »