ಅನಾರೋಗ್ಯದ ಕಾರಣದಿಂದ ಮಹಿಳೆಯೊಬ್ಬಳು ಮನನೊಂದು ಕೆರೆಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯಲ್ಲಿ ನಡೆದಿದೆ. ಬಸವ್ವ ಚಿಕ್ಕನೇರ್ತಿ ಎಂಬುವ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ನೆರೆಗಲ್ಲನಿಂದ ತವರು ಮನೆಯಾಗಿರುವ ಶಿರಗುಪ್ಪಿಗೆ ಬಂದಿದ್ದ ಬಸವ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸ್ ತನಿಖೆಯ ನಂತರವೇ ಆತ್ಮಹತ್ಯೆಗೆ …
Read More »Monthly Archives: ಜೂನ್ 2023
ವಿಧಾನಸೌಧದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಯೋಗ ಕಾರ್ಯಕ್ರಮ
ಬೆಂಗಳೂರು : 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯುಷ್ಯ ಇಲಾಖೆಯಿಂದ ಇಂದು ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಯೋಗ-ವಸುದೈವ ಕುಟುಂಬಕ್ಕಾಗಿ” ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತನಾಡಿದ ರಾಜ್ಯಪಾಲರು ಯೋಗದ ಮಹತ್ವವನ್ನ ತಿಳಿಸಿದರು. ” ನಮ್ಮ ಸಂಸ್ಕೃತಿಯಲ್ಲಿ ಯೋಗಕ್ಕೆ ತನ್ನದೇ ಆದ ಹೆಸರಿದೆ. ಯೋಗದ ಮಹತ್ವ ಕುರಿತು ನಮ್ಮ ಹಳೆ ಗ್ರಂಥಗಳಲ್ಲಿ ಉಲ್ಲೇಖವಿದೆ. ಯೋಗಭ್ಯಾಸದಿಂದ ಭೌತಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆ ಆಗುತ್ತದೆ. …
Read More »ಪಿಎಸ್‌ಐ ನೇಮಕಾತಿ ಅಕ್ರಮದ 52 ಆರೋಪಿ ಅಭ್ಯರ್ಥಿಗಳು ಡಿಬಾರ್ : ಉಳಿದ ಅಭ್ಯರ್ಥಿಗಳಿಗೆ ಹೊಸ ಭರವಸೆ
ಬೆಂಗಳೂರು: ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಹಗರಣದ 52 ಜನ ಆರೋಪಿತ ಅಭ್ಯರ್ಥಿಗಳನ್ನು ಪರೀಕ್ಷೆಯಿಂದ ಶಾಶ್ವತವಾಗಿ ಡಿಬಾರ್ ಮಾಡಿ ಪೊಲೀಸ್ ನೇಮಕಾತಿ ವಿಭಾಗ ಮಂಗಳವಾರ ಆದೇಶ ಪ್ರಕಟಿಸಿದೆ. ಆದ್ದರಿಂದ ಉಳಿದ ಅಭ್ಯರ್ಥಿಗಳಿಗೆ ನೌಕರಿ ಸಿಗುವ ವಿಶ್ವಾಸ ಮೂಡಿದ್ದು, ಪ್ರಕರಣದ ತೀರ್ಪಿನ ಮೇಲೆ ಅವಲಂಬನೆಯಾಗಲಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು 52 …
Read More »ಬೈಕ್ ಪಕ್ಕಕ್ಕೆ ಸರಿಸು ಎಂದಿದ್ದಕ್ಕೆ ಹಲ್ಲೆ ಮಾಡಿದ್ದ ನಾಲ್ವರ ಬಂಧನ
ಬೆಂಗಳೂರು: ಬೈಕ್ಅನ್ನು ಪಕ್ಕಕ್ಕೆ ಸರಿಸಲು ಹೇಳಿದ್ದಕ್ಕೆ ಚಾಕುವಿಂದ ಹಲ್ಲೆ ಮಾಡಿದ್ದ ರೌಡಿಶೀಟರ್ ಸಹಿತ ನಾಲ್ವರು ಆರೋಪಿಗಳನ್ನ ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ರೌಡಿ ಶೀಟರ್ ಸಂದೀಪ್ ಮತ್ತು ಶಶಾಂಕ್, ಕಿರಣ್, ಶ್ರೀಧರ್ ಬಂಧಿತ ಆರೋಪಿಗಳು. ಇದೇ ತಿಂಗಳ 18ರಂದು ರಾತ್ರಿ ಪದ್ಮನಾಭ ನಗರದ ರಾಘವೇಂದ್ರ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು. ಪ್ರದೀಪ್ ಎಂಬಾತನ ಮೇಲೆ ಆರೋಪಿಗಳ ಸಹಿತ ಏಳು ಜನರ ತಂಡ ಹಲ್ಲೆ ಮಾಡಿರುವುದಾಗಿ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫ್ಲೆಕ್ಸ್ಗಳನ್ನ …
Read More »ಆಸ್ಪತ್ರೆಯಲ್ಲಿರುವ ಪತ್ನಿ ಆರೋಗ್ಯ ವಿಚಾರಿಸಿ, ದಿಲ್ಲಿಗೆ ಪ್ರಯಾಣ ಬೆಳೆಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಪತ್ನಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಹಿನ್ನೆಲೆ ಅವರ ಆರೋಗ್ಯ ವಿಚಾರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರ ಭೇಟಿಗಾಗಿ ಸಿದ್ದರಾಮಯ್ಯ ನಿನ್ನೆಯೇ ತೆರಳಬೇಕಿತ್ತು. ಆದರೆ ನಿನ್ನೆ ವಿವಿಧ ಕಾರ್ಯಕ್ರಮ ಎದುರಾದ ಹಿನ್ನೆಲೆ ಇಂದಿಗೆ ಮುಂದೂಡಿದ್ದರು. ಬೆಳಗ್ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ತೀವ್ರ ಜ್ವರದ ಕಾರಣ ನಿನ್ನೆ ರಾತ್ರಿ ಸಿಎಂ ಪತ್ನಿ ಪಾರ್ವತಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾರ್ವತಿ ಸಿದ್ದರಾಮಯ್ಯ …
Read More »ಯೋಗದಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಈ ಯೋಗಪಟು ಪಕ್ಕಾ ಹಳ್ಳಿ ಹೈದ.
ಬೆಳಗಾವಿ: ಇಂದು ವಿಶ್ವ ಯೋಗ ದಿನ. ಈ ದಿನ ಓರ್ವ ಅಪರೂಪದ ಯೋಗ ಸಾಧಕಈ ಯೋಗಪಟು ಪಕ್ಕಾ ಹಳ್ಳಿ ಹೈದ. ಇವರು 85ಕ್ಕೂ ಅಧಿಕ ಆಸನಗಳನ್ನು ಹಾಕುವ ಮೂಲಕ ಯೋಗದಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಯೋಗಕ್ಕೆ ಯಾವುದೇ ಜಾತಿ – ಧರ್ಮದ ಬಂಧನವಿಲ್ಲ. ಸತತ ಪರಿಶ್ರ ಮ, ತಾಳ್ಮೆ, ಆಸಕ್ತಿ ಮತ್ತು ಶ್ರದ್ಧೆಯಿದ್ದರೆ ಸಾಕು. ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಬುಡನ್ ಮಲ್ಲಿಕ್ ಹೊಸಮನಿ (31) ಅವರು ಯಾವುದೇ ಗುರುವಿನ ಸಹಾಯ ಇಲ್ಲದೇ …
Read More »ಕಾಂಗ್ರೆಸ್ನವರು ಹತ್ತಲ್ಲ 15 ಕೆ.ಜಿ ಅಕ್ಕಿ ಕೊಡಬೇಕು: ಶಶಿಕಲಾ ಜೊಲ್ಲೆ
ಚಿಕ್ಕೋಡಿ (ಬೆಳಗಾವಿ): ಕಾಂಗ್ರೆಸ್ ನಾಯಕರು ಚುನಾವಣೆಯ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ದಾರರ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದೆಂದು ಗ್ಯಾರಂಟಿ ಕಾರ್ಡ್ಗಳನ್ನು ನೀಡಿದ್ದಾರೆ. ಆದರೆ ಆ ಭರವಸೆಗಳನ್ನು ಅವರಿಗೆ ಈಡೇರಿಸಲು ಆಗುತ್ತಿಲ್ಲ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಆರೋಪ ಹಾಕಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಪ್ರತಿಭಟನೆ ಖಂಡಿಸುತ್ತೇವೆ ಎಂದು ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ಬೆಳಗಾವಿ ಜಿಲ್ಲೆಯ …
Read More »ಹೆಂಡತಿಗೆ ಫ್ರೀ ಕೊಟ್ಟು ಗಂಡನ ಕಿಸೆಯಿಂದ ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ:ಈರಣ್ಣ ಕಡಾಡಿ
ಬೆಳಗಾವಿ : ಚುನಾವಣೆ ಕಾರಣದಿಂದ ನೀವು ಏನೇನು ಘೋಷಣೆ ಮಾಡಿದ್ದೀರೋ ಅವುಗಳನ್ನು ಜಾರಿಗೆ ತರುವುದು ನಿಮ್ಮ ಜವಾಬ್ದಾರಿ. ನೀವು ಕೂಡ ಅಕ್ಕಿ ಖರೀದಿ ಮಾಡಲು ಮುಕ್ತ ಮಾರುಕಟ್ಟೆಯಲ್ಲಿ ಅವಕಾಶವಿದೆ. ಉಪಯೋಗ ಮಾಡಿಕೊಳ್ಳಬೇಕೆ ಹೊರತು, ಕೇಂದ್ರದ ಮೇಲೆ ಆರೋಪ ಮಾಡಬಾರದು. ದೇಶದ ಎಲ್ಲಾ ರಾಜ್ಯಗಳನ್ನು ಕೇಂದ್ರ ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಪೂರ್ವ ತಯಾರಿ …
Read More »ಬೈಕನಲ್ಲಿ ಇಟ್ಟಿದ 2 ಲಕ್ಷ ರೂ. ಕಳ್ಳತನಮಾಡಿ ಫರಾರಿ
ಬೈಕನಲ್ಲಿ ಇಟ್ಟಿದ 2 ಲಕ್ಷ ರೂ. ಕಳ್ಳತನಮಾಡಿ ಫರಾರಿ ಗೋಕಾಕದಲ್ಲಿ ಘಟನೆ ಗೋಕಾಕ: ಬೈಕನಲ್ಲಿ ಇಟ್ಟಿದ ಹಣ ಕಳ್ಳವು ಮಾಡಿ ಫರಾರಿಯಾದ ಘಟನೆ ನಗರದ ಬ್ಯಾಳಿ ಕಾಟ ಹತ್ತಿರ ನಡೆದಿದೆ. ಇಂದು ಮಧ್ಯಾಹ್ನ ಭೀಮಪ್ಪ ಗೋಸಬಾಳ ಎಂಬುವವರ ಕೋರ್ಟ್ ಸರ್ಕಲ್ ನಲ್ಲಿ ಇರುವ ಕೆನರಾ ಬ್ಯಾಂಕ್ ನಿಂದ್ 2 ಲಕ್ಷ ಹಣವನ್ನು ತೆಗೆದುಕೊಂಡು ಬೈಕ್ ವಾಹನದ ಮೇಲೆ ಇಟ್ಟಿದ್ದ ನಂತರ ನೀರು ಕುಡಿಯುವ ವೇಳೆ 2 ಲಕ್ಷ ನಗದು ಬ್ಯಾಳಿ …
Read More »ಪ್ರಧಾನಿ ಮೋದಿ ಇಂದು ವಿಶ್ವಸಂಸ್ಥೆ ಕಚೇರಿಯಲ್ಲಿ ವಿಶ್ವಯೋಗ ದಿನವನ್ನು ಆಚರಣೆ
ನವದೆಹಲಿ: ಪ್ರಧಾನಿ ಮೋದಿ ಇಂದು ವಿಶ್ವಸಂಸ್ಥೆ ಕಚೇರಿಯಲ್ಲಿ ವಿಶ್ವಯೋಗ ದಿನವನ್ನು ಆಚರಣೆ ಮಾಡಲಿದ್ದಾರೆ. ಪ್ರಾಚೀನ ಭಾರತೀಯ ಆಚರಣೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಯುಎನ್ ಕೇಂದ್ರ ಕಚೇರಿ ಸೇರಿದಂತೆ ವಿಶ್ವಾದ್ಯಂತ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ INS ವಿಕ್ರಾಂತ್‌ನಲ್ಲಿ ಯೋಗ ಪ್ರದರ್ಶನ ನೀಡಲಿದ್ದಾರೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್, ನೌಕಾ ಕಲ್ಯಾಣ ಮತ್ತು …
Read More »