Breaking News

Monthly Archives: ಜೂನ್ 2023

ಲಿಂಗಾಯತ ಒಳಪಂಗಡಗಳು ಒಟ್ಟಾಗಿ ಹೋದ್ರೆ ಮಾತ್ರ ಭವಿಷ್ಯ: ಶಾಸಕ ಲಕ್ಷ್ಮಣ ಸವದಿ

ಬೆಳಗಾವಿ: ಲಿಂಗಾಯತ ಒಳಪಂಗಡಗಳನ್ನು ಇಟ್ಟುಕೊಂಡು ನಾವು ಮುಂದುವರಿದರೆ ಮುಂದಿನ ದಿನಗಳಲ್ಲಿ ನಮಗೆಲ್ಲಾ ಒಳ್ಳೆಯ ದಿನಗಳಿವೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ನಗರದ ವೀರಶೈವ ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯ ಆವರಣದಲ್ಲಿ ಶನಿವಾರ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕ ಆಯೋಜಿಸಿದ್ದ ವಿಧಾನಸಭೆಗೆ ಆಯ್ಕೆಯಾದ ಶಾಸಕ, ಸಚಿವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ವೇದಿಕೆ‌ ಮೇಲೆ ಇದ್ದಾಗ ಮಾತ್ರ ನಾವೆಲ್ಲಾ ಒಂದು ಎನ್ನುವ ಚಿಂತನೆ …

Read More »

ನಿಯಮ ಪಾಲಿಸದೆ ಮನೆಯ ವಿದ್ಯುತ್​ ಸಂಪರ್ಕ ಕಡಿತ : ಬೆಸ್ಕಾಂಗೆ 25 ಸಾವಿರ ರೂ. ದಂಡ

ದಾವಣಗೆರೆ: ನಿಯಮ ಪಾಲಿಸದೇ ಮನೆಯ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ ಪ್ರಕರಣ ಸಂಬಂಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಬೆಸ್ಕಾಂಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್​ನ ಮನೆಯೊಂದರಲ್ಲಿ ಅಧಿಕಾರಿಗಳು ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ ಕುರಿತಂತೆ ಗ್ರಾಹಕರೊಬ್ಬರು ಗ್ರಾಹಕರ ಪರಿಹಾರ ವೇದಿಕೆಯ ಮೊರೆ ಹೋಗಿದ್ದರು. ಪವನ್ ರೇವಣಕರ್​ ಎಂಬುವರಿಗೆ 2022ರ ಆಗಸ್ಟ್ ತಿಂಗಳಲ್ಲಿ 1,454 ರೂಪಾಯಿ ವಿದ್ಯುತ್​ ಬಿಲ್ ಬಂದಿತ್ತು. ಆದರೆ ಕಾರಣಾಂತರಗಳಿಂದ ಪವನ್ ವಿದ್ಯುತ್ …

Read More »

KSRTC’, ‘BMTC’ ಬಸ್ ಗಳಿಗೆ ಮುಗಿಬಿದ್ದ ಮಹಿಳೆಯರು : ವೋಲ್ವೋ ಬಸ್ ಗಳಿಗೆ ‘ಶಕ್ತಿ’ ತುಂಬಿದ ಪುರುಷರು

ಬೆಂಗಳೂರು : ಉಚಿತ ಬಸ್ ಪ್ರಯಾಣದ ಹಿನ್ನೆಲೆ ‘KSRTC’, ‘BMTC’ ಬಸ್ ಹತ್ತಲು ಮಹಿಳೆಯರು ಮುಗಿಬಿದ್ದಿದ್ದಾರೆ. ಈ ಹಿನ್ನೆಲೆ ಸರ್ಕಾರಿ ಬಸ್ ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ಇದರಿಂದ ಬೇಸತ್ತ ಪುರುಷುರು ಬೆಂಗಳೂರಿನಲ್ಲಿ ವೋಲ್ವೋ ಬಸ್ ಗಳಿಗೆ ‘ಶಕ್ತಿ’ ತುಂಬಿದ್ದಾರೆ. ಹೌದು, ‘KSRTC’, ‘BMTC’ ಬಸ್ ಗಳು ರಶ್ ಇರುವ ಕಾರಣ ಪುರುಷರು ವೋಲ್ವೋ ಬಸ್ ಗೆ ಮುಗಿಬಿದ್ದಿದ್ದಾರೆ. ಕಳೆದ ಒಂದು ವಾರದಲ್ಲಿ ವೋಲ್ವೋ ಮತ್ತು ವಜ್ರ ಬಸ್ಗಳಲ್ಲಿ ಪ್ರಯಾಣಿಕರ …

Read More »

ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದಿದೆ: ಬಿ ಎಸ್ ಯಡಿಯೂರಪ್ಪ ಆರೋಪ

ತುಮಕೂರು: ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಕೊಟ್ಟು, ಜನರಿಗೆ ಟೋಪಿ ಹಾಕಿ, ದ್ರೋಹ ಮಾಡಿ ಅಧಿಕಾರಕ್ಕೆ ಬಂದಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿ ಈಗ ಹಲವು ಷರತ್ತು ಹಾಕಿ ಮೋಸ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ. ಶುಕ್ರವಾರ ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ದ್ರೋಹ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ. ಸರ್ಕಾರದ ಮೋಸದ ವಿರುದ್ಧ ಸದನದ ಹೊರಗೆ ಒಳಗೆ ನಾವು ಹೋರಾಟ ಮಾಡುತ್ತೇವೆ ಎಂದರು. …

Read More »

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಮನವಿ: ಪ್ರಮೋದ್ ಮುತಾಲಿಕ್

ಹಾಸನ: ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಒತ್ತಾಯ ಮಾಡುವ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.   ಶ್ರೀರಾಮಸೇನೆಯ ರಾಜ್ಯಕಾರಣಿ ಸಭೆಯ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ”ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಕೆಲ ವಿಷಯಗಳನ್ನು ವಾಪಸ್ ಪಡೆಯುತ್ತೇವೆ ಅಂದಿದ್ದಾರೆ. ಭಗತ್ ಸಿಂಗ್, ಸಾವರ್ಕರ್ ಸೇರಿದಂತೆ ಮೂರು ಪಾಠ ವಾಪಾಸ್ ತೆಗೆದುಕೊಳ್ಳುತ್ತೇವೆ ಅಂದ್ದಿದ್ದಾರೆ. ಸಾವರ್ಕರ್, ಭಗತ್ …

Read More »

ಮಣಿಪುರದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ರಕ್ಷಣಾ ಪಡೆಗಳ ಹರಸಾಹಸ

ನವದೆಹಲಿ: ಮಣಿಪುರದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿವೆ. ಈ ನಡುವೆ ಅಲ್ಲಿನ ಹಿಂಸಾಚಾರ ಕೊನೆಗೊಳಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮುಂದುವರೆಸಿದೆ. ಮಣಿಪುರದ ಪರಿಸ್ಥಿತಿಯನ್ನು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಷ್ಟ್ರರಾಜಧಾನಿಯಲ್ಲಿ ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟಗೆ ಸಭೆ ಆರಂಭವಾಗಲಿದೆ. ಮೇ 3 ರಿಂದ ಮಣಿಪುರದಲ್ಲಿ ಹಿಂಸಾಚಾರ ಘಟನೆಗಳು ನಡೆಯುತ್ತಿರುವುದರಿಂದ, ಶಾಂತಿ ಭಂಗ ತಡೆಯುವ ಪ್ರಯತ್ನದಲ್ಲಿ …

Read More »

ಗೋಕಾಕ ತಾಲೂಕಿನ ತವಗ ಗ್ರಾಮದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ತವಗ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ …

Read More »

ಗಗನಕ್ಕೇರಿದ ಕೋಳಿ ಮಾಂಸ ಬೆಲೆ, ಕೊಳ್ಳಲು ಹಿಂದೇಟು ಹಾಕ್ತಿದ್ದಾರೆ ಗ್ರಾಹಕರು, ಕಾರಣ..?

ದಾವಣಗೆರೆ: ದಾವಣಗೆರೆಯಲ್ಲಿ ಮಾಂಸ ಪ್ರಿಯರೇ ಹೆಚ್ಚು, ಅದರಲ್ಲೂ ಕೋಳಿ ಮಾಂಸವನ್ನು ಸೇವಿಸುವವರ ಸಂಖ್ಯೆ ಗಣನೀಯಾವಾಗಿದೆ. ಆದರೆ ಕೋಳಿ ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದಾವಣಗೆರೆಯ 180ಕ್ಕೂ ಹೆಚ್ಚು ಚಿಕನ್ ಅಂಗಡಿಗಳಲ್ಲಿ ಬೆಲೆ ಏರಿಕೆ ಮಾಡಲಾಗಿದ್ದು, ಗ್ರಾಹಕರು ಕೋಳಿ ಮಾಂಸ ಕೊಳ್ಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಬಿಸಿಲಿನ ತಾಪ ಹೆಚ್ಚಿದ್ದರಿಂದ ಕೋಳಿ ಸಾಕಣೆಗೆ ರೈತರಿಗೆ ಸವಾಲು ಎದುರಾಗಿದ್ದರಿಂದ ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೋಳಿಗಳ ಸಂಖ್ಯೆ ಇಳಿಮುಖವಾಗಿದೆ. ಇದರಿಂದ …

Read More »

ಬರಡು ಭೂಮಿಯಲ್ಲಿ ಹಸಿರುಮಯ ಸುಂದರ ಉದ್ಯಾನವನ

ಚಿಕ್ಕೋಡಿ: ಹಸಿರೇ ದೇಶದ ಉಸಿರು ಅಂತೀವಿ. ಆದರೆ, ಈ ಮಾತಿನಂತೆ ಮುನ್ನಡೆಯುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಇಲ್ಲೊಬ್ಬ ಅರಣ್ಯ ಇಲಾಖೆ ಅಧಿಕಾರಿ ಪರಿಸರ ಪ್ರೀತಿ ಮೆರೆದಿದ್ದಾರೆ. ಬಂಜರು ಭೂಮಿಯನ್ನು ಹಸಿರುಮಯವಾಗಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಯ ಪರಿಶ್ರಮದ ಫಲವಾಗಿ ಬರಡು ಭೂಮಿಯಲ್ಲಿ ಸಾವಿರಾರು ಮರಗಳು ಬೆಳೆದು ನಿಂತಿವೆ. ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಪಾಳು ಬಿದ್ದಿರುವ ಜಮೀನಿನ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ್ ಗಾಣಿಗೇರ ವಿಶೇಷ ಕಾಳಜಿ ವಹಿಸಿದ್ದರು. ಹೀಗಾಗಿ …

Read More »

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾವಲು‌ ನಾಯಿಯಾಗಿ ಕೆಲಸ ಮಾಡುತ್ತದೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಬೆಳಗಾವಿ: ನಾವು ಕರ್ನಾಟಕದ ಪರ ಕೇಂದ್ರದಿಂದ ಏನೇನು ಕೇಳಬೇಕಾಗಿದೆಯೋ ಅದನ್ನು ಕೇಳುತ್ತೇವೆ. ನೀವು ಬೇಕಾಬಿಟ್ಟಿ, ಪ್ಲಾನ್ ಇಲ್ಲದೇ ಘೋಷಣೆ ಮಾಡಿದ್ದೀರಲ್ಲ, ಅದಕ್ಕೆ ನೀವೇ ಹೊಣೆಗಾರರು. ಜವಾಬ್ದಾರಿ ಹೊತ್ತಿರುವ ನೀವು ಅದನ್ನು ನಿಭಾಯಿಸಬೇಕೆಂದು ರಾಜ್ಯ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು. ಬೆಳಗಾವಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರಕ್ಕೆ ಕರ್ನಾಟಕ ಮುಖ್ಯವಲ್ಲ ಎಂಬ ನಳೀನ್ ಕುಮಾರ್​ ಕಟೀಲ್ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ …

Read More »