Breaking News

Daily Archives: ಜೂನ್ 28, 2023

BJP IT CELL ಉಸ್ತುವಾರಿ ಅಮಿತ್ ಮಾಳವೀಯ ವಿರುದ್ಧ ಎಫ್​ಐಆರ್​ ದಾಖಲು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಪೋಸ್ಟ್ ಹಾಗೂ ವಿಡಿಯೊ ಬಿತ್ತರಿಸುವ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತೇಜೋವಧೆ ಮಾಡಿರುವುದಾಗಿ ಆರೋಪಿಸಿ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಕೆಪಿಸಿಸಿ ಸಂವಹನ ವಿಭಾಗದ ಸಹ ಅಧ್ಯಕ್ಷ ರಮೇಶ್ ಬಾಬು ನೀಡಿದ ದೂರಿನ‌ ಮೇರೆಗೆ ಅಮಿತ್ ಮಾಳವಿಯ ವಿರುದ್ಧ ಐಪಿಸಿ 153 ಬಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ, 120ಬಿ ಒಳಸಂಚು, …

Read More »

ಇ-ಸಮೀಕ್ಷೆ ಕೆಲಸದಿಂದ ವಿನಾಯಿತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ಬೆಳಗಾವಿ: ಆರೋಗ್ಯ ಇಲಾಖೆಯ ಇ-ಸಮೀಕ್ಷೆ ಕೆಲಸದಿಂದ ವಿನಾಯಿತಿ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನಾಲ್ಕು ವರ್ಷದ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ್ದ ಮೊಬೈಲ್‌ಗಳು ಕಳಪೆಯದ್ದಾಗಿದ್ದು, ಅದರಲ್ಲಿ ಮಾಹಿತಿ ಸಂಗ್ರಹ ಸೇರಿ ಇತರೆ ಕೆಲಸ ಮಾಡುವುದು ಕಷ್ಟಸಾಧ್ಯ. ಕೂಡಲೇೆ ಇದರ …

Read More »

ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ: ಮದ್ಯಪಾನ ವ್ಯಸನಿಯಾಗಿದ್ದ ಪತಿರಾಯನೊಬ್ಬ ತನ್ನ ಪತ್ನಿ ಲೈಂಗಿಕ ಕ್ರಿಯೆಗೆ ಸಹಕಾರ ಮಾಡಿಲ್ಲ ಎಂದು ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.   19/02/20ರಂದು ದಾವಣಗೆರೆ ಜಿಲ್ಲೆಯ ಅಮರಾವತಿ ಗ್ರಾಮದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಈ ಘಟನೆ ನಡೆದಿತ್ತು. ಮರಿಯಪ್ಪ(54) ಶಿಕ್ಷೆಗೊಳಗಾದ ಆರೋಪಿ. ಸೌಭಾಗ್ಯಮ್ಮ ಕೊಲೆಯಾದ ಪತ್ನಿ. ಆರೋಪಿ ಮರಿಯಪ್ಪ ಕುಡಿದು ಬಂದು ಮನೆಯಲ್ಲಿ ಹೆಂಡತಿ ಸೌಭಾಗ್ಯಮ್ಮ ಜೊತೆ ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊದಲಿಗೆ ಕ್ಯಾತೆ …

Read More »

ಲೋಕಾಯುಕ್ತ ದಾಳಿ ಸಮಯದಲ್ಲಿ ಎರಡು ನಕ್ಷತ್ರ ಆಮೆ ಅಧಿಕಾರಿಗಳ ಮನೆಯಲ್ಲಿ ಪತ್ತೆ

ಬಾಗಲಕೋಟೆ: ಲೋಕಾಯುಕ್ತ ದಾಳಿ ಸಮಯದಲ್ಲಿ ಎರಡು ನಕ್ಷತ್ರ ಆಮೆ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾಗಿವೆ. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆಗಿರುವ ಚೇತನಾ ಪಾಟೀಲ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿತ್ತು. ದಾಖಲೆ ಹಾಗೂ ನಗದು ಹಣ ಪರಿಶೀಲನೆ ಮಾಡುವ ವೇಳೆ ಎರಡು ಆಮೆ ಪತ್ತೆಯಾಗಿವೆ. ಮನೆಯಲ್ಲಿ ಹಲವು ದಿನಗಳಿಂದ ಆಮೆ ಸಾಕಿದ್ದರು ಎನ್ನಲಾಗಿದೆ. ಅರಣ್ಯ ಕಾಯ್ದೆ ಅಡಿ ಪ್ರಾಣಿಗಳು ಸಾಕುವುದು ನಿಷೇಧ ಇದ್ದರೂ ಸಹ, ಸರ್ಕಾರಿ ಅಧಿಕಾರಿಯಾಗಿ ಕಾನೂನು ಉಲ್ಲಂಘನೆ …

Read More »

ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳ.

ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ, ಆದಾಯ ಮೀರಿ ಆಸ್ತಿಗಳಿಕೆ ಆರೋಪಗಳಡಿ ದಾಳಿ ನಡೆಸಲಾಗಿದೆ. ಇನ್ನು ಅಕ್ರಮ ಆಸ್ತಿಗಳಿಕೆ ಆರೋಪದಡಿ ಕೆ.ಆರ್.​ಪುರ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಹಶೀಲ್ದಾರ್ ಅಜೀತ್ ರಾಜ್ ರೈ ಎಂಬುವವರ ವಿರುದ್ಧ ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿ ಬಂದಿದ್ದು, ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಏಕಾಏಕಿ ಅವರ ಮನೆ, ಕಚೇರಿ …

Read More »

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ: ಅಕ್ಕಿ ಬದಲು ಹಣ ಪಾವತಿಸಲು ಸರ್ಕಾರ ನಿರ್ಧಾರ

ಬೆಂಗಳೂರು: ಅನ್ನಭಾಗ್ಯದಡಿ ಅಕ್ಕಿ ಸಿಗದ ಕಾರಣ ಅಕ್ಕಿ ಬದಲಿಗೆ ಬಿಪಿಎಲ್ ಕಾರ್ಡುದಾರಿಗೆ ಹಣ ನೀಡಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಎಫ್​ಸಿಐ ದರ ಪ್ರತಿ ಕೆಜಿಗೆ 34 ರೂಪಾಯಿಯಂತೆ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ ಹಣ ಪಾವತಿ ಮಾಡಲು ತೀರ್ಮಾನಿಸಲಾಗಿದೆ. ಮನೆಯ ಯಜಮಾನನ ಖಾತೆಗೆ ಕುಟುಂಬ ಸದಸ್ಯರ ಹಣವನ್ನೂ ಪಾವತಿ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. …

Read More »

ಮೈಸೂರು- ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತಗಳು ಸಂಭವಿಸಲು ಚಾಲಕರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಕಾರಣ ಎಂದ ಪ್ರತಾಪ್ ಸಿಂಹ

ಮೈಸೂರು- ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತಗಳು ಸಂಭವಿಸಲು ಚಾಲಕರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರು: ದಶಪಥ ಮೈಸೂರು- ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌ ವೇ ಅವೈಜ್ಞಾನಿಕವಾಗಿದ್ದು, ಇದು ಸಾವಿನ ಹೆದ್ದಾರಿಯಾಗಿದೆ ಎಂಬ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ರೇಸಿಂಗ್ ಟ್ರ್ಯಾಕ್ ಅಲ್ಲ, ಬೆಂಗಳೂರು- ಮೈಸೂರು ನಡುವೆ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುವ ಎಕ್ಸ್ಪ್ರೆಸ್ ಹೈವೇ. ಇದು …

Read More »

ನಂದಿನಿ ಹಾಲು ಮಾರಾಟಕ್ಕೆ ಕೇರಳದಲ್ಲಿ ವಿರೋಧ; ಮಳಿಗೆ ವಿಸ್ತರಿಸದಿರಲು ಕೆಎಂಎಫ್ ನಿರ್ಧಾರ

ಬೆಂಗಳೂರು : ನೆರೆಯ ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ವಿಸ್ತರಿಸದಿರಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಿರ್ಧರಿಸಿದೆ ಎಂದು ಮೂಲಗಳು ಬುಧವಾರ ಖಚಿತಪಡಿಸಿವೆ. ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಕೆಎಂಎಫ್ ಈ ನಿರ್ಧಾರ ತಳೆದಿದೆ. ಕೇರಳದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವ ಜೆ. ಚಿಂಚು ರಾಣಿ ಮತ್ತು ಕೆಎಂಎಫ್ ಸಿಇಒ ನಡುವೆ ನಡೆದ ಮಾತುಕತೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ನಂದಿನಿ ಹಾಲು ಮತ್ತು ಹಾಲು …

Read More »

ಅಕ್ರಮ ಅಕ್ಕಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ : 48 ಕ್ವಿಂಟಲ್ 90 ಕೆಜಿ ಅಕ್ಕಿ ವಶ”

ಪೊಲೀಸ್ ಮತ್ತು ಆಹಾರ ನಾಗಲಿಕ ಸರಬರಾಜು ಇಲಾಖೆಯಿಂದ ಜಂಟಿ ಕಾರ್ಯಾಚರಣೆ ಅಕ್ರಮ ಅಕ್ಕಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ : 48 ಕ್ವಿಂಟಲ್ 90 ಕೆಜಿ ಅಕ್ಕಿ ವಶ” ದಿನಾಂಕಃ 27/06/2023 ರಂದು ಬೆಳಗಾವಿ ಬ್ರಹ್ಮನಗರದ ಮಾರುತಿ ಮಂದಿರ ಹತ್ತಿರ ದೇವರಾಜ ಬಾಳಪ್ಪ ಬಾಳೆಕುಂದ್ರಿ (23) ಸಾಃಬೆನನಮರಡಿ ತಾಃಬೈಲಹೊಂಗಲ ಜಿ:ಬೆಳಗಾವಿ ಎಂಬುವವನು ತನ್ನ ಸ್ವಂತ ಪಾಯ್ದೆಗೋಸ್ಕರ ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆ ವತಿಯಿಂದ ಪಡಿತರ ಚೀಟಿದಾರರಿಗೆ ವಿತರಣೆ …

Read More »

ಶಾಲೆಯಿಂದ ಹೊರಬಂದಿದ್ದ ಮಗುವಿನ ಮೇಲೆ ಮಂಗದಾಳಿ

ಶಾಲೆಯಿಂದ ಹೊರಬಂದಿದ್ದ ಮಗುವಿನ ಮೇಲೆ ಮಂಗವೊಂದು ದಾಳಿ ಮಾಡಿ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ಇಂದು ನಡೆದಿದ್ದು, ಮಂಗ ದಾಳಿಯ ಭಯಾನಕ ದೃಶ್ಯ ಸ್ಥಳೀಯ ಸಿಸಿಟಿಯಲ್ಲಿ ಸೆರೆಯಾಗಿದೆ. ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ನಿವಾಸಿ ಇಕರಾ ಗಡಕಾರಿ (8) ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯಲ್ಲಿ 2ನೇ ತರಗತಿ ಒದುತ್ತಿದ್ದು, ಶಾಲೆ ಆಟದ ಸಮಯದಲ್ಲಿ ವಿದ್ಯಾರ್ಥಿನಿ ಶಾಲೆಯಿಂದ ಆಚ್ಚೆ ಬಂದು …

Read More »