Breaking News

Daily Archives: ಜೂನ್ 23, 2023

ಬ್ರ್ಯಾಂಡ್ ಬೆಂಗಳೂರು ಗುರಿ: ಬಸವರಾಜ ಬೊಮ್ಮಾಯಿ ಭೇಟಿಯಾಗಿ ಸಲಹೆ ಪಡೆದ ಡಿ.ಕೆ. ಶಿವಕುಮಾರ್

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ರಾಜ್ಯ ರಾಜಧಾನಿ ಅಭಿವೃದ್ಧಿಗೆ ಮುಂದಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರು ಅಭಿವೃದ್ಧಿ ಕುರಿತು ಏನೆಲ್ಲ ಯೋಜನೆ ಜಾರಿಗೆ ತರಬಹುದು ಎನ್ನುವ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಸಮಾಲೋಚನೆ ನಡೆಸಿದರು. ನಗರದ ಅಭಿವೃದ್ಧಿಗೆ ಪೂರಕವಾಗಿ ಅಗತ್ಯ ಸಲಹೆಗಳನ್ನು ಪಡೆದುಕೊಂಡರು. ಬೊಮ್ಮಾಯಿ ಅವರ ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ರೇಸ್‌ವ್ಯೂ ಕಾಟೇಜ್​ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. ತಮ್ಮ ನಿವಾಸಕ್ಕೆ ಬಂದ …

Read More »

ರಾಮನಗರ: ಕರ್ತವ್ಯ ವೇಳೆಯಲ್ಲೇ ‘ಗುಂಡು’ ಹಾಕಿದ ಎಎಸ್‌ಐ; ಮೂವರು ಸಸ್ಪೆಂಡ್‌!

ರಾಮನಗರ: ಕರ್ತವ್ಯದಲ್ಲಿದ್ದ ವೇಳೆಯಲ್ಲೇ ಪಾನಮತ್ತರಾಗಿ ಸಾರ್ವಜನಿಕರೊಂದಿಗೆ ಕಿರಿಕ್​ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಎಎಸ್​ಐ ಸೇರಿ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ ರೆಡ್ಡಿ ಶುಕ್ರವಾರ ಅಮಾನತು ಮಾಡಿದ್ದಾರೆ. ಮಾಗಡಿ ಪೊಲೀಸ್​ ಠಾಣೆಯ ಎಎಸ್​ಐ ಮಂಜುನಾಥ್​ ಕೆ.ಎನ್​., ಡಿಸಿಆರ್​ಬಿ ಘಟಕದ ಎಎಸ್​ಐ ಗೋವಿಂದಯ್ಯ ಜಿ.ಎಸ್​ ಮತ್ತು ಚನ್ನಪಟ್ಟಣ ಪುರ ಪೊಲೀಸ್​ ಠಾಣೆ ಹೆಡ್‌ ಕಾನ್​ಸ್ಟೆಬಲ್​ ನಾರಾಯಣ ಮೂರ್ತಿ ಅಮಾನತುಗೊಂಡಿದ್ದಾರೆ. ಮೈಮೇಲೆ ಪ್ರಜ್ಞೆ ಇಲ್ಲದೇ ಯೂನಿಫಾರ್ಮ್ ಕಳಚಿಟ್ಟಿದ್ದು, ನಂತರ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡು …

Read More »

ಮಗುವಿನಿಂದ ಮತ್ತೊಂದು ಮಗುವಿನ ಮೇಲೆ ಹಲ್ಲೆ: ಬೆಂಗಳೂರಿನ ಡೇ ಕೇರ್ ಸೆಂಟರ್​ಗೆ ಪೊಲೀಸ್, ಮಕ್ಕಳ ಹಕ್ಕುಗಳ ಆಯೋಗದಿಂದ ನೋಟೀಸ್

ಬೆಂಗಳೂರು: ಶಿಶುಪಾಲ‌ನಾ ಕೇಂದ್ರವೊಂದರಲ್ಲಿ ಮೂರು ವರ್ಷದ ಬಾಲಕ 2 ವರ್ಷದ ಬಾಲಕಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬೇಬಿ ಕೇರ್ ಸೆಂಟರ್​ಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸುಬ್ರಮಣ್ಯನಗರ ಪೊಲೀಸರು ನೋಟಿಸ್​ ನೀಡಿದ್ದಾರೆ‌. ಅಲ್ಲದೆ‌ ರಾಜ್ಯ ಮಕ್ಕಳ‌ ಹಕ್ಕುಗಳ ಆಯೋಗವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಎಷ್ಟು ವರ್ಷಗಳಿಂದ ಡೇ ಕೇರ್ ನಡೆಸುತ್ತಿದ್ದೀರಾ? ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದುಕೊಂಡಿದ್ದೀರಾ? ಮಕ್ಕಳ ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಂಡಿದ್ದೀರಾ? …

Read More »

ಮಳೆ ಇಲ್ಲದೇ ಕಂಗಾಲಾಗಿದ್ದಾನೆ.ರೈತ

ಧಾರವಾಡ: ಮೊದಲೇ ಮಳೆ ಇಲ್ಲದೇ ರೈತ ಕಂಗಾಲಾಗಿದ್ದಾನೆ. ಹೀಗಿರುವಾಗ ರೈತ ಅಷ್ಟೋ ಇಷ್ಟೋ ಬೆಳೆದ ಬೆಳೆ ದನಗಳ ಪಾಲಾಗುತ್ತಿದೆ. ಇದರಿಂದ ಮತ್ತಷ್ಟು ಕಂಗಾಲಾಗಿರುವ ರೈತ ತಾವು ಬೆಳೆದ ಬೆಳೆಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾನೆ. ದೃಶ್ಯಗಳಲ್ಲಿ ಕಾಣುತ್ತಿರುವ ಈ ರೈತರು ಧಾರವಾಡ ತಾಲೂಕಿನ ಯರಿಕೊಪ್ಪ ಹಾಗೂ ಮನಸೂರು ಗ್ರಾಮದವರು. ನೀರಾವರಿ ಮಾಡಿಕೊಂಡು ಅಷ್ಟೋ ಇಷ್ಟೋ ಬೆಳೆಯನ್ನು ರೈತರು ಬೆಳೆದಿದ್ದಾರೆ. ಆದರೆ, …

Read More »

ಗಾಂಜಾ, ಮದ್ಯಸೇವನೆ ಚಟ.. 8 ಜನರನ್ನು ಹತ್ಯೆ ಮಾಡಿದ್ದ ಸೈಕೋ ಕಿಲ್ಲರ್​ ಬಂಧನ : ನಿಟ್ಟುಸಿರು ಬಿಟ್ಟ ಜನ

ಹೈದರಾಬಾದ್​ (ತೆಲಂಗಾಣ): ಹಣಕ್ಕಾಗಿ ಒಂದೇ ವಾರದಲ್ಲಿ ಮೂವರನ್ನು ಕೊಲೆ ಮಾಡಿದ್ದ ಸೈಕೋ ಕಿಲ್ಲರ್​ನನ್ನು ಹೈದರಾಬಾದ್ ಉಪನಗರ ಮೈಲಾರ್‌ದೇವಪಲ್ಲಿ ಪೊಲೀಸರು ಬಂಧಿಸಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರದ ಮಾಣಿಕ್ಯಮ್ಮ ಕಾಲೋನಿಯ ಬಗರಿ ಪ್ರವೀಣ್ ಬಂಧಿತ ಆರೋಪಿ. ಗಾಂಜಾ ಮತ್ತು ಮದ್ಯದ ಚಟಕ್ಕೆ ದಾಸನಾಗಿದ್ದ ಈತ ಅವುಗಳನ್ನು ಕೊಳ್ಳಲು ಹಣಕ್ಕಾಗಿ ಜನರನ್ನು ಹತ್ಯೆ ಮಾಡುತ್ತಿದ್ದ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಡಿಸಿಪಿ ಜಗದೀಶ್ವರ್ ಮಾಹಿತಿ ನೀಡಿದ್ದು, ಈತ ಇತರ ಪ್ರಕರಣಗಳಲ್ಲಿ ಶಾಮೀಲಾಗಿರುವ ​ಹಳೆಯ …

Read More »

ಈಗಿನ ಸಚಿವ, ಶಾಸಕರು ಕಮಿಷನ್ ಕೇಳಿದರೆ ಅದನ್ನೂ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ

ಬೆಂಗಳೂರು: ನಮ್ಮ ಸರ್ಕಾರದ ಅವಧಿಯಲ್ಲಿ ಕಮಿಷನ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಾಕಿ ಇರುವ ಬಿಲ್ಲುಗಳ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕಮಿಷನ್ ಹಾವಳಿಗೆ ಕಡಿವಾಣ ಹಾಕಿ, ಸ್ಥಳೀಯ ಗುತ್ತಿಗೆದಾರರ ಹಿತಕ್ಕೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ …

Read More »

ಇಂದು ನಾದಬ್ರಹ್ಮ ಹಂಸಲೇಖ ಅವರ 72ನೇ ವರ್ಷದ ಜನ್ಮದಿನ

ಇಂದು ನಾದಬ್ರಹ್ಮ ಹಂಸಲೇಖ ಅವರ 72ನೇ ವರ್ಷದ ಜನ್ಮದಿನ. ಈ ವಿಶೇಷ ದಿನದಂದು ಸಂಗೀತ ಮಾಂತ್ರಿಕನ ಸಾಧನೆಯ ಕಿರು ಪರಿಚಯ ನಿಮಗಾಗಿ.. ಸಂಗೀತ ಲೋಕದ ದೇವರು, ನಾದಬ್ರಹ್ಮ ಹಂಸಲೇಖ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1951ರ ಜೂನ್​ 23ರಂದು ಜನಿಸಿದ ಇವರು 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹಂಸಲೇಖ ಎಂದಾಕ್ಷಣ ನಮ್ಮ ಮುಂದೆ ಸುಂದರ ಸಂಗೀತ ಲೋಕವೇ ಅನಾವರಣಗೊಳ್ಳುತ್ತದೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕದಲ್ಲಿ ಹಂಸಲೇಖ ಒಬ್ಬರು. ಇವರ ಸಂಗೀತಕ್ಕೆ ತಲೆದೂಗದವರಿಲ್ಲ. …

Read More »

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಕಾನೂನು ತಜ್ಞರೊಂದಿಗೆ ಸಭೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸು ಮಾಡುವ ಬಗ್ಗೆ ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗೆ ಸಭೆ ಕರೆದು ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.   ಹಿಂದಿನ ಸರ್ಕಾರ ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರಿದೆ ಎಂದ ಮುಖ್ಯಮಂತ್ರಿಗಳು, ಮೀಸಲಾತಿ ವಿಚಾರವಾಗಿ …

Read More »

ತೆಲಂಗಾಣದಲ್ಲೂ ಕರ್ನಾಟಕದ ಚುನಾವಣಾ ರಣತಂತ್ರ​: ‘ಕೈ’ ಹಿಡಿಯಲು BRS ನಾಯಕರು ಸಜ್ಜು

ನವದೆಹಲಿ: ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ​ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ನೆರೆ ರಾಜ್ಯ ಕರ್ನಾಟಕ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೈ ಪಡೆಯು ಕರ್ನಾಟಕದಲ್ಲಿ ಅಳವಡಿಸಿರುವ ಕಾರ್ಯತಂತ್ರವನ್ನೇ ತೆಲಂಗಾಣದಲ್ಲೂ ಅನುಸರಿಸಲು ಮುಂದಾಗಿದೆ. ಈ ಮೂಲಕ ಆಡಳಿತಾರೂಢ ಬಿಆರ್‌ಎಸ್‌ನ ಹಲವಾರು ನಾಯಕರನ್ನು ಸೆಳೆಯಲು ಯೋಜಿಸುತ್ತಿದೆ. ಕರ್ನಾಟಕದ ಗೆಲುವಿನ ಪ್ರಭಾವ ನೆರೆಯ ರಾಜ್ಯದಲ್ಲೂ ಬೀರಲಿದೆ ಎಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದಾರೆ. ಕರ್ನಾಟಕ ಚುನಾವಣೆಗೂ ಮುನ್ನ ಬಿಜೆಪಿ …

Read More »

ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ

ಹಾವೇರಿ: ರಾಜ್ಯದಲ್ಲಿ ರೈತರನ್ನು ಮದುವೆಯಾಗಲು ವಧುವೇ ಸಿಗುತ್ತಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೃಷಿಕರಾಗಿರುವ ಕಾರಣ ನಮಗೆ ಹೆಣ್ಣು ಕೊಡ್ತಿಲ್ಲ ಎಂದು ಅವಿವಾಹಿತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಚರ್ಚೆ ಚುನಾವಣೆ ಸಮಯದಲ್ಲೂ ಜೋರಾಗಿಯೇ ನಡೆದಿತ್ತು. ಈ ನಡುವೆ ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಜುನಾಥ ನಾಗನೂರು ಆತ್ಮಹತ್ಯೆಗೆ …

Read More »