Breaking News

Daily Archives: ಜೂನ್ 20, 2023

ಮುಂದಿನ ತಿಂಗಳಿನಿಂದ ವಿದ್ಯುತ್‌ ಬಿಲ್‌ ಬರಲ್ಲ, ಅರ್ಜಿ ಸಲ್ಲಿಕೆ ಮಾತ್ರ ಕಡ್ಡಾಯ: ಡಿಕೆಶಿ

ಬೆಂಗಳೂರು: ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಪೈಕಿ ಒಂದಾದ ‘ಗೃಹ ಜ್ಯೋತಿ’ಗೆ ಅರ್ಜಿ ಸಲ್ಲಿಸಲು ನಾಗರಿಕರು ಧಾವಂತಪಡಬೇಕಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸೋಮವಾರ ಸಲಹೆ ನೀಡಿದ್ದಾರೆ. ಗೃಹಬಳಕೆ ಗ್ರಾಹಕರಿಗೆ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಕೆಗೆ ಇಂಧನ ಇಲಾಖೆ ಆದೇಶ ಹೊರಡಿಸಿದೆ. ನಿಗದಿತ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ಭಾನುವಾರದಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನವೇ ಹಲವು ಜಿಲ್ಲೆಗಳಲ್ಲಿ ಸರ್ವರ್‌ ಸಮಸ್ಯೆಯಿಂದ ಅರ್ಜಿ ಸಲ್ಲಿಕೆಗೆ ತೊಡಕಾಗಿತ್ತು. …

Read More »

ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದ್ದು, ಉತ್ತರ ಒಳನಾಡಿನ ಹಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಎರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಕರಾವಳಿ ಭಾಗದ ಜಿಲ್ಲೆಗಳು ಹಾಗೂ …

Read More »

ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್; ಸಾರಿಗೆ ಸಚಿವರು ಕೊಟ್ಟ ಶಾಕ್ ಏನು?

ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಕೆಲವು ಗೊಂದಲಗಳು ಉಂಟಾಗಿದ್ದವು. ತಳ್ಳಾಟ, ನೂಕಾಟ ಸೇರದಂತೆ ಜಡೆ ಜಗಳ ಸಹ ನಡೆದಿದೆ. ಕೆಲವು ಭಾಗಗಳಲ್ಲಿ ತಳ್ಳಾಟ, ನೂಕಾಟದಿಂದ ಬಸ್ ಬಾಗಿಲು, ಕಿಟಕಿಯ ಸರಪಳಿ ಕಿತ್ತುಕೊಂಡು ಬಂದಿದೆ. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉಚಿತ ಪ್ರಯಾಣಕ್ಕೆ ಕೆಲವು ಮಾರ್ಗಸೂಚಿ ಪ್ರಕಟಿಸುವ ಸುಳಿವು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಈ ಉಚಿತ …

Read More »

ಚಿಕಿತ್ಸೆಗೆ ಲಂಡನ್ ಗೆ ಹಾರಿದ ನಟಿ ರಮ್ಯಾ: ಕಾರಣ ಏನು ಗೊತ್ತಾ?

ಕನ್ನಡ ಚಿತ್ರರಂಗಕ್ಕೆ ಮರುಪ್ರವೇಶಕ್ಕೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಮೋಹಕತಾರೆಹಾಗೂ ರಾಜಕಾರಣಿರಮ್ಯಾದಿಢೀರನೆ ಲಂಡನ್‌ಗೆಪ್ರಯಾಣ ಬೆಳೆಸಿದ್ದಾರೆ. ಚಿತ್ರರಂಗ-ರಾಜಕೀಯಎರಡುಕ್ಷೇತ್ರದಲ್ಲಿಮಿಂಚಿದ ರಮ್ಯಾ, ಚಿಕಿತ್ಸೆಗಾಗಿ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ. ಲಂಡನ್ ನಲ್ಲಿ ತಂಗಿದ್ದ ರಮ್ಯಾ ಇತ್ತೀಚೆಗೆ ಮರಳಿದ್ದರು. ಸದ್ಯದಲ್ಲೇ ‘ಉತ್ತರಕಾಂಡ’ (Uttarakanda) ಸಿನಿಮಾದಿಂದಬಣ್ಣಹಚ್ಚಲುತಯಾರಾಗಿದ್ದಾರೆ. ಅದಕ್ಕೂಮುನ್ನಲಂಡನ್‌ ಗೆಹಾರಿದ್ದಾರೆ. ಚಿತ್ರರಂಗಕ್ಕೆ ಮರಳಲು ಸಿದ್ಧತೆ ನಡೆಸಿರುವ ರಮ್ಯಾ, ನೈಸರ್ಗಿಕಚಿಕಿತ್ಸೆಮೂಲಕ ರಿಲ್ಯಾಕ್ಸ್ಆಗುವ ಜೊತೆಗೆ ಇನ್ನಷ್ಟುಸ್ಲಿಮ್ಆಗಿ ಚಿತ್ರರಂಗಕ್ಕೆ ಮತ್ತೆ ಬಳಕುವ ಬಳ್ಳಿಯಂತೆ ಕಾಣಿಸಿಕೊಳ್ಳುವುದು ಅವರ ಉದ್ದೇಶವಾಗಿದೆ. ಇದನ್ನುಖುದ್ದುರಮ್ಯಾಸೋಶಿಯಲ್ಮೀಡಿಯಾದಲ್ಲಿಹಂಚಿಕೊಂಡಿದ್ದಾರೆ. ಫ್ಯಾನ್ಸ್ಕೂಡಇದನ್ನುಕೇಳಿಖುಷಿಯಾಗಿದ್ದಾರೆ. ಬಣ್ಣದಲೋಕತೊರೆದುಹೋದಮೇಲೆಸುಮಾರು8ವರ್ಷರಮ್ಯಾಡಯಟ್ಬಗ್ಗೆತಲೆಕೆಡಿಸಿಕೊಂಡಿರಲಿಲ್ಲವೇನೊ? ಈಗನಾಯಕಿಯಾಗಿಸೆಕೆಂಡ್ಇನ್ನಿಂಗ್ಸ್ಆರಂಭಿಸಲಿದ್ದಾರೆ. ಗೋಲ್ಡನ್ಗರ್ಲ್ಆಹುರುಪಿನಲ್ಲಿದೇಹವನ್ನುಹುರಿಗೊಳಿಸುತ್ತಿದ್ದಾರೆ. …

Read More »

ರಾಜ್ಯ ಸರ್ಕಾರ’ದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 ಐಎಎಸ್ ಅಧಿಕಾರಿ’ಗಳ ವರ್ಗಾವಣೆ |

ಬೆಂಗಳೂರು : ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ( IAS Officer Transfer ) ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ.   ಈ ಕುರಿತಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಐಎಎಸ್ ಅಧಿಕಾರಿ ಜಾವೇದ್ ಅಖ್ತರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೆಡಿಕಲ್ …

Read More »

30ರ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಮೂತ್ರಪಿಂಡ ಕಸಿ: ಫೋರ್ಟಿಸ್‌ ಆಸ್ಪತ್ರೆ ವೈದ್ಯರಿಂದ ವಿಶ್ವದಲ್ಲೇ ಅಪರೂಪದ ಚಿಕಿತ್ಸೆ!

ಬೆಂಗಳೂರು: ಕೇವಲ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡವನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ “ರೋಬೋಟಿಕ್‌ ಎನ್‌- ಬ್ಲಾಕ್‌” ವಿಧಾನದ ಮೂಲಕ ಕಸಿ ಮಾಡಲಾಗಿದ್ದು, ಈ ಪ್ರಕರಣ ವಿಶ್ವದಲ್ಲಿಯೇ ಅತೀ ಅಪರೂಪದ್ದಾಗಿದೆ. ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಮೋಹನ್ ಕೇಶವಮೂರ್ತಿ, ಡಾ. ಶ್ರೀಹರ್ಷ ಹರಿನಾಥ ಅವರ ತಂಡವು ಅಪರೂಪದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಡಾ. ಕೇಶವಮೂರ್ತಿ, 30 ವರ್ಷದ …

Read More »

ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಕಾಂಗ್ರೆಸ್ ಸರ್ಕಾರದ ಹೊಸ ಬಜೆಟ್ ಮಂಡನೆಗೆ ಸಿದ್ಧತೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಕಾಂಗ್ರೆಸ್ ಸರ್ಕಾರದ ಹೊಸ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. 2023-24 ಸಾಲಿನ‌ ಹೊಸ ಬಜೆಟ್​​ಗೆ ಇಲಾಖಾವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡಿರುವ ಸಿದ್ದರಾಮಯ್ಯ ಈ ಬಾರಿ ಬಜೆಟ್​​ನಲ್ಲಿ ಹೆಚ್ಚಿನ ಗ್ಯಾರಂಟಿ ಆದಾಯ ಸಂಗ್ರಹಿಸುವತ್ತ ಚಿತ್ತ ನೆಟ್ಟಿದ್ದಾರೆ. ಅಷ್ಟಕ್ಕೂ ಕಳೆದ ಎರಡು ತಿಂಗಳಲ್ಲಿ ರಾಜ್ಯ ಬೊಕ್ಕಸ ಸೇರಿರುವ ಸ್ವಂತ ತೆರಿಗೆ ಏನಿದೆ ಎಂಬ ವರದಿ ಇಲ್ಲಿದೆ. ಬಿಜೆಪಿಯನ್ನು ಸೋಲಿಸಿ ಭರ್ಜರಿ ಜಯದೊಂದಿಗೆ ಕಾಂಗ್ರೆಸ್ ಸರ್ಕಾರ …

Read More »