Breaking News

Daily Archives: ಜೂನ್ 12, 2023

ಶಕ್ತಿ ಯೋಜನೆ ಎಫೆಕ್ಟ್… ಖಾಸಗಿ ಬಸ್​ಗಳ ‘ಖಾಲಿ’ ಓಡಾಟ.

ಚಾಮರಾಜನಗರ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಮಹಿಳೆಯರಲ್ಲಿ ಸಂತಸ ಮೂಡಿಸಿದ್ದರೇ, ಖಾಸಗಿ ಬಸ್​ ಮಾಲೀಕರಿಗೆ ಸಂಕಷ್ಟ ತಂದಿಟ್ಟಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಸುಮಾರು 70ರಿಂದ 80 ಖಾಸಗಿ ಬಸ್​ಗಳು ದಿನನಿತ್ಯ ಸಂಚರಿಸುತ್ತಿವೆ. ಉಚಿತ ಪ್ರಯಾಣದಿಂದ ಮಹಿಳೆಯರು ಸರ್ಕಾರಿ ಬಸ್​ಗಳ ಕಡೆ ಮುಖ ಮಾಡಿದ್ದಾರೆ. ಖಾಸಗಿ ಬಸ್​ಗಳಲ್ಲಿ ಪ್ರಯಾಣಿಕರು ಬಾರದಿದ್ದರಿಂದ ಖಾಸಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡುಬಂದವು. ಟಂಟಂ, ಖಾಸಗಿ ಬಸ್​ಗಳನ್ನು ಆಶ್ರಯಿಸಿದ್ದ ಪ್ರಯಾಣಿಕರು ಈಗ ಕೆಎಸ್​ಆರ್​ಟಿಸಿ ಬಸ್​ಗಳತ್ತ …

Read More »

ಬೆಂಗಳೂರು – ಮೈಸೂರು ಹೆದ್ದಾರಿ ಟೋಲ್ ಸುಂಕ ಹೆಚ್ಚಳ: ಸಂಚಾರ ಮತ್ತಷ್ಟು ದುಬಾರಿ

ರಾಮನಗರ : ಬೆಂಗಳೂರು ಮತ್ತು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮತ್ತಷ್ಟು ದುಬಾರಿಯಾಗಿದ್ದು, ಟೋಲ್ ದರ ಹೆಚ್ಚಳ ಮಾಡಲಾಗಿದೆ. ಸದ್ದಿಲ್ಲದೆ ಏರಿಕೆ ಆಗಿರುವ ಟೋಲ್ ದರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರ ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿದ್ದು, ಜೂನ್ 1ರಿಂದ ಪರಿಷ್ಕೃತ ಮೊತ್ತದ ಟೋಲ್ ವಸೂಲಿ ಮಾಡಲಾಗುತ್ತಿದೆ. ಬಹುತೇಕ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಇರುವ ಕಾರಣ ಹೆಚ್ಚಿನ ಮೊತ್ತ ಕಡಿತವಾಗಿರುವುದು ವಾಹನ ಸವಾರರ ಗಮನಕ್ಕೆ ಬಂದಿಲ್ಲ …

Read More »

250 ಇಂದಿರಾ ಕ್ಯಾಂಟೀನ್ ಪ್ರಾರಂಭ: C.M. ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರಿನ ಪ್ರತಿ ವಾರ್ಡಿಗೆ ಒಂದರಂತೆ ಕನಿಷ್ಠ 250 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದ್ದು, ಇಲ್ಲಿವರೆಗೂ ಇಂದಿರಾ ಕ್ಯಾಂಟಿನ್ ಗೆ ಬಿಬಿಎಂಪಿ ವತಿಯಿಂದ 70%, ಹಾಗೂ ಸರ್ಕಾರದಿಂದ ಶೇ.30 ರಷ್ಟು ವೆಚ್ಚ ಭರಿಸಲಾಗುತ್ತಿತ್ತು. ಆದರೆ ಈಗ ಬಿಬಿಎಂಪಿಯು ಶೇ. 50 ರಷ್ಟು …

Read More »

ಮಹಿಳೆಯರ ‘ಉಚಿತ ಪ್ರಯಾಣ’ಕ್ಕೆ ಇನ್ಮುಂದೆ ‘ಒರಿಜಿನಲ್ ಐಡಿ’ ಬೇಕಿಲ್ಲ -KSRTC ಆದೇಶ

ಬೆಂಗಳೂರು: ಶಕ್ತಿ ಯೋಜನೆಯ ( Shakti Scheme ) ಅಡಿಯಲ್ಲಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಲು ಒರಿಜಿನಲ್ ಐಡಿ ಕಾರ್ಡ್ ( Original ID ) ಏನೂ ಬೇಕಿಲ್ಲ. ನಕಲು ಪ್ರತಿ ಇದ್ದರೂ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂಬುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾರ್ಪಾಡು ಆದೇಶದಲ್ಲಿ ತಿಳಿಸಿದೆ.   ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( Karnataka State …

Read More »

DCM ಡಿಕೆ ಶಿವಕುಮಾರ್’ಗೆ ತಾತ್ಕಾಲಿಕ ರಿಲೀಫ್: ಏಕಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ವಿಚಾರ ಸಂಬಂಧ, ಇಂದು ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ, ತಾತ್ಕಾಲಿಕ ರಿಲೀಫ್ ಅನ್ನು ಡಿಕೆಶಿಗೆ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಿಬಿಐ ತನಿಖೆಗೆ ತಡೆ ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠಕ್ಕೆ ಏಕ ಸದಸ್ಯ ಪೀಠ ವಜಾಗೊಳಿಸಿತ್ತು. ಈ ಸಂಬಂಧ ಹೈಕೋರ್ಟ್ ಮತ್ತೊಂದು ನ್ಯಾಯಪೀಠಕ್ಕೆ …

Read More »

ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಚಾಲನೆ: ಸಚಿವ ಮಂಕಾಳು ವೈದ್ಯ

ಬೆಂಗಳೂರು : ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಕಾರವಾರದಲ್ಲಿ ಮೆಡಿಕಲ್​ ಕಾಲೇಜು ನಿರ್ಮಾಣ ಮಾಡಲಾಗಿದೆ. ಅಲ್ಲಿಯೇ 350 ಬೆಡ್​ ವ್ಯವಸ್ಥೆ ಇದ್ದು, ಸದ್ಯಕ್ಕೆ ತುರ್ತಾಗಿ ಮಲ್ಟಿ ಸ್ಪೆಷಾಲಿಟಿ ಅಗತ್ಯ ಇರುವುದರಿಂದ ಅಲ್ಲಿಯೇ ಇನ್ನೂ 100 ಬೆಡ್​ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಆಗಬೇಕಾದ ಅಗತ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಮೆಡಿಕಲ್​ ಕಾಲೇಜಿನಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಚಾಲನೆ ನೀಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. …

Read More »

ಮುರುಡೇಶ್ವರದಲ್ಲಿ ಸಮುದ್ರಕ್ಕೆ ಇಳಿದ ಪ್ರವಾಸಿಗರು: ಓರ್ವ ನಾಪತ್ತೆ, ಇಬ್ಬರ ರಕ್ಷಣೆ

ಭಟ್ಕಳ(ಉತ್ತರ ಕನ್ನಡ): ಮುರುಡೇಶ್ವರದಲ್ಲಿ ಸಮುದ್ರ ಅಲೆಗೆ ಸಿಕ್ಕಿ ಪ್ರವಾಸಿಗನೊಬ್ಬ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕೊಚ್ಚಿ ಹೋಗುತ್ತಿದ್ದ ಮತ್ತಿಬ್ಬರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಪ್ರವಾಸಿಗರಾದ ಹಸನ್ ಮುಜ್ಜಿಗಿ ಗೌಡ (21) ಸಂಜೀವ ಹೆಬ್ಬಳ್ಳಿ(20) ರಕ್ಷಣೆಯಾಗಿದ್ದು, ಇವರ ಜೊತೆಯಲ್ಲಿ ಬಂದಿದ್ದ ಸಂತೋಷ ಹುಲಿಗುಂಡ (19)ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಲಘಟಗಿಯಿಂದ 22 ಮಂದಿ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಬಿಪೊರ್​ ಜಾಯ್​ ಸೈಕ್ಲೋನ್ …

Read More »

NCP ನಾಯಕ ಶರದ್ ಪವಾರ್​ಗೆ ಜೀವ ಬೆದರಿಕೆ: ಐಟಿ ಉದ್ಯೋಗಿಯ ಬಂಧನ

ಮುಂಬೈ (ಮಹಾರಾಷ್ಟ್ರ): ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮುಂಬೈ ಕ್ರೈಂ ಬ್ರಾಂಚ್ ಪುಣೆಯ ವ್ಯಕ್ತಿಯನ್ನು ಬಂಧಿಸಿದೆ. ಆರೋಪಿಯನ್ನು ಸಾಗರ್ ಬರ್ವೆ(34 ) ಎಂದು ಗುರುತಿಸಲಾಗಿದೆ. ಆತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜೂ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು …

Read More »

ಕೆಂಪು ಸಮುದ್ರದಲ್ಲಿ ಶಾರ್ಕ್​ ದಾಳಿ ಬಳಿಕ ಮತ್ತೊಂದು ದುರಂತ.. ದೋಣಿಗೆ ಬೆಂಕಿ, ಬ್ರಿಟಿಷ್ ಪ್ರವಾಸಿಗರು ನಾಪತ್ತೆ!

ಕೈರೋ: ಭಾನುವಾರ ಈಜಿಪ್ಟ್‌ನ ಕೆಂಪು ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಬೆಂಕಿ ಹೊತ್ತಿಕೊಂಡಿದೆ. ದೋಣಿಯಲ್ಲಿ ಹಲವಾರು ಬ್ರಿಟಿಷ್ ಪ್ರವಾಸಿಗರು ಪ್ರಯಾಣಿಸುತ್ತಿದ್ದು, ಅವರಲ್ಲಿ ಮೂವರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸಮುದ್ರದಲ್ಲಿ ಮೂವರು ನಾಪತ್ತೆ: ಈಜಿಪ್ಟಿನ ಕೆಂಪು ಸಮುದ್ರದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಬ್ರಿಟಿಷ್ ಪ್ರವಾಸಿಗರು ನಾಪತ್ತೆಯಾಗಿದ್ದಾರೆ (British tourists missing). ಸುದ್ದಿ ತಿಳಿದಾಕ್ಷಣ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕಾಣೆಯಾದ ಮೂವರು ಪ್ರವಾಸಿಗರಿಗಾಗಿ ಶೋಧ ಕಾರ್ಯಾಚರಣೆ …

Read More »

ವಿದೇಶಿ ಯೂಟ್ಯೂಬರ್​ಗೆ ಬೆಂಗಳೂರಿನಲ್ಲಿ ಕಿರುಕುಳ ಆರೋಪ; ಆರೋಪಿ ಬಂಧನ

ಬೆಂಗಳೂರು: ಅತಿಥಿ ದೇವೋಭವ ಎಂಬ ಪರಿಕಲ್ಪನೆಯನ್ನ ಅತ್ಯಂತ ಗೌರವದಿಂದ ಆಚರಿಸುವ ದೇಶ ಭಾರತ. ಭಾರತದ ಯೂಟ್ಯೂಬರ್​ಗಳು ಗಡಿ ದಾಟಿ ವಿಶ್ವದ ಮೂಲೆ ಮೂಲೆ ಪರಿಚಯಿಸುತ್ತಿರುವ ಈ ದಿನಗಳಲ್ಲಿ ಭಾರತೀಯರನ್ನ ಅಲ್ಲಿನ ಜನ ಬರಮಾಡಿಕೊಳ್ಳುವ ರೀತಿಯೂ ಸಹ ಅತಿಥಿ ದೇವೋಭವದ ಪರಿಕಲ್ಪನೆಯನ್ನ ಮತ್ತೊಮ್ಮೆ ನೆನಪಿಸುತ್ತಿದೆ. ಆದರೆ, ಅತಿಥಿ ಸತ್ಕಾರದಲ್ಲಿ ಸದಾ ಮುಂದು ಎನಿಸುವ ನಮ್ಮದೇ ರಾಜ್ಯದ, ರಾಜಧಾನಿ ಬೆಂಗಳೂರಿನಲ್ಲಿ ಇದಕ್ಕೆ ತದ್ವಿರುದ್ಧ ಎನಿಸುವ ಘಟನೆಯೊಂದು ನಡೆದಿದೆ ಎಂದು ಆರೋಪಿಸಲಾಗಿದೆ. ಬೆಂಗಳೂರನ್ನ ಸುತ್ತಾಡಲು ಬಂದಿದ್ದ …

Read More »