ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸೇನೆಯಿಂದ ನಿವೃತ್ತಿಯನ್ನು ಪಡೆದ ಯೋಧರಿಗೆ ತೆರೆದ ವಾಹನದಲ್ಲಿ ಪುಷ್ಪವೃಷ್ಠಿಯ ಮೂಲಕ ಅದ್ದೂರಿಯಾಗಿ ಸ್ವಾಗತವನ್ನು ಕೋರಲಾಯಿತು. ನಿವೃತ್ತ ಯೋಧರಾದ ರಾವಸಾಹೇಬ ಲಗಡೆ ಹಾಗೂ ಸಂತೋಷ ಪೂಜಾರಿಯವರನ್ನು ಮಾಂಜರಿ,ಮಾಂಜರಿವಾಡಿ ಗ್ರಾಮದ ನಿವೃತ್ತ ಯೋಧರು ಹಾಗೂ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತವನ್ನು ಕೋರಿದರು.ಮಾಂಜರಿ ಗ್ರಾಮದ ಹೊಸ ಬಸ್ ನಿಲ್ದಾಣದ ಮೂಲಕ ನಿವೃತ್ತ ಯೋಧರಿಗೆ ಹೂವು ಮಳೆಯನ್ನು ಸುರಿಸಿ,ಪಟಾಕಿ ಸಿಡಿಸಿ,ವಿವಿಧ ರೀತಿಯ ವಾದ್ಯದೊಂದಿಗೆ ತೆರೆದ ವಾಹನದಲ್ಲಿ ಸ್ವಾಗತಿಸಿಕೊಳ್ಳಲಾಯಿತು. ಇದೇ ಸಂಧರ್ಭದಲ್ಲಿ ಪ್ರಾಥಮಿಕ …
Read More »Daily Archives: ಜೂನ್ 7, 2023
ರಾಜ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಕರೆಂಟ್ ಬಿಲ್ ಕಟ್ಟಲು ಹಿಂದೇಟು
ಧಾರವಾಡ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಅಧಿಕಾರಕ್ಕೆ ಬರುವ ಮುನ್ನ ಜೂ.1 ನೇ ತಾರೀಖಿನಿಂದ ಯಾರೂ ಕರೆಂಟ್ ಬಿಲ್ ಕಟ್ಟೋಹಾಗಿಲ್ಲ ಎಂದು ಹೇಳಿದ್ದೇ ಹೇಳಿದ್ದು, ರಾಜ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ ಅಲ್ಲದೇ ಬಿಲ್ ಪಾವತಿಸಿಕೊಳ್ಳಲು ಬರುವ ಕೆಇಬಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲೂ ಗ್ರಾಮಸ್ಥರು ಲೈನ್‌ಮ್ಯಾನ್ ಒಬ್ಬರನ್ನು ತೀವ್ರ ತರಾಟೆಗೆ …
Read More »ರಂಗೋಲಿಯ ಮೂಲಕ “ಶಿವರಾಜ್ಯಾಭಿಷೇಕದ ಭವ್ಯವಾದ ಚಿತ್ರ”
ಶಿವರಾಜ್ಯಾಭಿಷೇಕ ಸಮಾರಂಭದ 350 ನೇ ವಾರ್ಷಿಕೋತ್ಸವದಲ್ಲಿ ರಂಗೋಲಿ ಕಲಾವಿದ ಅಜಿತ್ ಔರ್ವಾಡಕರ್ ಅವರು ರಂಗೋಲಿಯ ಮೂಲಕ “ಶಿವರಾಜ್ಯಾಭಿಷೇಕದ ಭವ್ಯವಾದ ಚಿತ್ರ” ವನ್ನು ಬಿಡಿಸಿದ್ದಾರೆ. ಈ ರಂಗೋಲಿಯು ವಡಗಾಂವದಲ್ಲಿ ಕಲಾರತ್ನ ಬಿಲ್ಡಿಂಗ್ ನಜರ್ ಕ್ಯಾಂಪ್ ಏಳೂರು ರಸ್ತೆಜ್ಯೋತಿ ಫೋಟೋ ಸ್ಟುಡಿಯೋ) ಬಳಿ ಇದೆ ಎಲ್ಲಾ ನಾಗರಿಕರು ಮತ್ತು ಶಿವಭಕ್ತರು ಇದನ್ನು ನೋಡಲು 12 ರಂದು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಲಭ್ಯವಿರುತ್ತದೆ
Read More »ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿಜೆಪಿಯವರು ತೆಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ
ಗೋಕಾಕ: ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿಜೆಪಿಯವರು ಚಿಂತಿಸುವ ಅವಶ್ಯಕತೆ ಇಲ್ಲ, ಸರ್ಕಾರದ ಆಡಳಿತ ಸರಿಯಾಗಿ ನಡೆಸದಿದ್ದರೆ ಅಷ್ಟೇ ಟೀಕಿಸಲಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಬಿಜೆಪಿಯವರಿಗೆ ಟಾಂಗ್ ನೀಡಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಆಂತರಿಕ ವಿಷಯಗಳ ಬಗ್ಗೆ ನಮ್ಮ ನಾಯಕರು ಸರಿಪಡಿಸುತ್ತಾರೆ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿಜೆಪಿಯವರು ತೆಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು. ಚಕ್ರವರ್ತಿ ಸೂಲಿಬೆಲೆ ಒಬ್ಬ …
Read More »ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಹೇಮಂತ ನಿಂಬಾಳ್ಕರ್ ನೇಮಕ
ಹೌದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಅವರಿಗೆ ಕಾಂಗ್ರೆಸ್ ಸರಕಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
Read More »