Breaking News

Daily Archives: ಜೂನ್ 5, 2023

ಭೂಮಿ ಮತ್ತು ಮನುಕುಲವನ್ನು ರಕ್ಷಿಸಲು ಪರಿಸರವನ್ನು ರಕ್ಷಿಸುವುದು ಅತ್ಯಂತ ಅವಶ್ಯಕ.

ಮಾನವರ ಜೀವನ ಮತ್ತು ಪರಿಸರದ ಮಧ್ಯೆ ಆಳವಾದ ಸಂಬಂಧವಿದೆ. ಪ್ರಕೃತಿಯಿಲ್ಲದೇ ಜೀವನವು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಎಲ್ಲ ಮಾನವರಿಗೆ ಅವಶ್ಯಕವಾಗಿದೆ. ಆದರೆ, ತಂತ್ರಜ್ಞಾನದ ಆಮೂಲಾಗ್ರ ಬೆಳವಣಿಗೆ ಮತ್ತು ಆಧುನಿಕ ಜೀವನಶೈಲಿಯ ಹೆಚ್ಚಳದಿಂದ ಪರಿಸರಕ್ಕೆ ಸರಿಪಡಿಸಲಾಗದ ಅಪಾಯವಾಗುತ್ತಿದೆ ಎನ್ನುವುದು ಕೂಡ ಸತ್ಯ. ಇದಕ್ಕಾಗಿಯೇ ಪರಿಸರ ರಕ್ಷಣೆಯ ಬಗ್ಗೆ ಮತ್ತು ಪರಿಸರದ ಸ್ವಚ್ಛತೆಗಾಗಿ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ …

Read More »

ಬಸ್​ ಕಾರು ಮುಖಾಮುಖಿ ಡಿಕ್ಕಿ: ಐವರ ದುರ್ಮರಣ

ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಭಾನುವಾರ ಪ್ರಯಾಣಿಕ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 115 ಕಿಮೀ ದೂರದಲ್ಲಿರುವ ನಾಗ್ಭಿಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪಾ ಗ್ರಾಮದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ. “ನಾಗ್ಪುರದಿಂದ ನಾಗಭೀಡ್‌ಗೆ ಕಾರಿನಲ್ಲಿ ಆರು ಜನರು ಪ್ರಯಾಣಿಸುತ್ತಿದ್ದಾಗ, ಈ ಕಾರು ವಿರುದ್ಧ …

Read More »

ಬಳ್ಳಾರಿ ಮೂಲದ ಮೆಡಿಕಲ್ ವಿದ್ಯಾರ್ಥಿನಿ ಕ್ವಾರೆಯಲ್ಲಿನ ನೀರಲ್ಲಿ ಜಿಗಿದು ಆತ್ಮಹತ್ಯೆ

ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದಲ್ಲಿ ಕ್ವಾರೆಯಲ್ಲಿನ ನೀರಲ್ಲಿ ಜಿಗಿದು ಎಂಬಿಬಿಎಸ್​ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ‌. ಬಳ್ಳಾರಿ ಮೂಲದ ಮೆಡಿಕಲ್ ವಿದ್ಯಾರ್ಥಿನಿ ದರ್ಶಿನಿ(24) ಮೃತದೇಹ ಪತ್ತೆಯಾಗಿದೆ. ದರ್ಶಿನಿ ಹೊಸಕೋಟೆ ತಾಲೂಕಿನ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಸ್ನೇಹಿತರಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಳು ಎನ್ನಲಾಗಿದೆ. ದರ್ಶಿನಿಯ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಸ್ಥಳಕ್ಕಾಗಮಿಸಿದ ಪೊಲೀಸರು ಭೇಟಿ …

Read More »

ಆಸ್ತಿ ವಿಚಾರವಾಗಿ ಸಹೋದರರ ಮಧ್ಯೆ ನಡೆದ ಜಗಳ ಓರ್ವನ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಸಹೋದರರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಭಾನುವಾರ ನಡೆದಿದೆ. ಹತ್ಯೆಯಾದ ವ್ಯಕ್ತಿ ತಿಗಡಿ ಗ್ರಾಮದ ನಿವಾಸಿ ಸುರೇಶ್ ಖಣಗಾಂವಿಯಾಗಿದ್ದು, ಶಂಕರ್ ಖಣಗಾಂವಿ ಕೊಲೆ ಮಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ. ಹತ್ಯೆಗೀಡಾದ ಸುರೇಶ್ ಮಾಜಿ ಸೈನಿಕನಾಗಿದ್ದು, ಸದ್ಯ ಜಮೀನಿನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಆಸ್ತಿ ವಿಚಾರವಾಗಿ ಆರೋಪಿ ಶಂಕರ್ ಖಣಗಾಂವಿ ಹಾಗೂ ಹತ್ಯೆಗೀಡಾದ …

Read More »