Breaking News

Yearly Archives: 2022

ಬೆಳಗಾವಿ ಇಂದಿನ ಕೊರೋನಾ

ಬೆಳಗಾವಿ- ಇಂದು ಜಿಲ್ಲೆಯಲ್ಲಿ 418 ಪ್ರಕರಣಗಳು ಕಂಡು ಬಂದಿವೆ. ಅಥಣಿ 33, ಚಿಕ್ಕೋಡಿ 29, ಸವದತ್ತಿ 33 ಪ್ರಕರಣಗಳು ಕಂಡು ಬಂದಿವೆ.

Read More »

ಸುಭಾಷ್ ಚಂದ್ರ ಭೋಸ್ ಜನ್ಮ ದಿನ ಆಚರಣೆ ಸಿಎಂ ಬಸವರಾಜ ಬೊಮ್ಮಾಯಿ ವರ್ಚವಲ್ ಸಭೆ

ಜನೇವರಿ ೨೩ರಂದು ಜರುಗಲಿರುವ ಸುಭಾಷ್ ಚಂದ್ರ ಭೋಸ್ ಅವರ ಜನ್ಮ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಗಳವಾರ ತಮ್ಮ ನಿವಾಸದಿಂದ ವೆಬ್ ನೆರ್ ಮೂಲಕ ಹಿರಿಯ ಅಧಿಕಾರ ಸಭೆ ಜರುಗಿಸಿದರು.ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ, ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ. ನಿರ್ದೇಶನಾಲಯದ ಅಧಿಕಾರಿ ಎ.ಆರ್ ಕಮಾಂಡರ ಬಿ.ಎಸ್. ಕನ್ವರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಗೋಯೆಲ್, ಜಿ.ಕುಮಾರ ನಾಯ್ಕ್, …

Read More »

ಮಹದಾಯಿ ಹೋರಾಟ ಪಕ್ಷದ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪಾಲಿಕೆಯಲ್ಲಿ ಅಭಯ ಪಾಟೀಲ ಮೇಯರ್, ಅನೀಲ ಬೆನಕೆ ಡೆಪ್ಯುಟಿ ಮೇಯರ್ ಸತೀಶ್ ಜಾರಕಿಹೊಳಿ ಲೇವಡಿ….   ಬೆಳಗಾವಿ: ಕೋವಿಡ್‌ ಕಡಿಮೆಯಾದ ಮೇಲೆ ಮುಂದಿನ ದಿನಗಳಲ್ಲಿ ಮೇಕೆದಾಟು ಹೋರಾಟದ ಮಾದರಿಯಲ್ಲಿಯೇ ಮಹದಾಯಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ಹೋರಾಟ ಎಲ್ಲಿಂದ ಆರಂಭ ಮಾಡಬೇಕೆಂಬುವುದನ್ನು ನಮ್ಮ ಪಕ್ಷದ ನಾಯಕರೊಂದಿಗೆ ಚರ್ಚಿಸಿ, ರೂಪರೇಷೆ ತಯಾರಿಸಿ ನಂತರ ನಿರ್ಧಾರ …

Read More »

ಗೋವಾದ ಕಾರಂಜೋಲ್‌ ಬಳಿ ವಾಸ್ಕೋ-ಡಿ-ಗಾಮಾ ಹೌರಾ ಅಮರಾವತಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿರುವ ಘಟನೆ ನಡೆದಿದೆ.

ಕಾರಂಜೋಲ್‌(ಗೋವಾ): ವಾಸ್ಕೋ-ಡಿ-ಗಾಮಾ ಹೌರಾ ಅಮರಾವತಿ ಎಕ್ಸ್‌ಪ್ರೆಸ್ ರೈಲು ದೂಧ್‌ಸಾಗರ್ ಮತ್ತು ಕಾರಂಜೋಲ್ ನಡುವೆ (ಗೋವಾ) ಹಳಿತಪ್ಪಿರುವ ಘಟನೆ ನಡೆದಿದೆ. ಇಂದು ಬೆಳಗ್ಗೆ 8.56 ಕ್ಕೆ ಸುಮಾರು ಈ ಘಟನೆ ನಡೆದಿದ್ದು, ರೈಲಿನ ಇಂಜಿನ್‌ನ ಮುಂಭಾಗದ ಜೋಡಿ ಚಕ್ರಗಳು ಹಳಿತಪ್ಪಿವೆ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಗಲಾಟೆ ಮಾಡಿ ಕರ್ನಾಟಕ ಪ್ರವೇಶ ಮಾಡುತ್ತಿರುವ ಪ್ರಯಾಣಿಕರು

ಕಲಬುರಗಿ: : ಕೊರೊನಾ ಹೆಚ್ಚಳವಾದ ಹಿನ್ನೆಲೆ ಮಹಾರಾಷ್ಟ್ರ- ಕರ್ನಾಟಕ ಗಡಿಗಳಲ್ಲಿ ಜಿಲ್ಲಾಡಳಿತ ಬಿಗಿ ಭದ್ರತೆ ಕೈಗೊಂಡಿದ್ದು, ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಕರ್ನಾಟಕ ಪ್ರವೇಶ ನೀಡುವಂತೆ ಚೆಕ್ ಪೋಸ್ಟ್​ಗಳಲ್ಲಿ ಗಲಾಟೆ ಮಾಡುತ್ತಿದ್ದಾರೆ‌. ಕಲಬುರಗಿ ಜಿಲ್ಲೆಯ ಗಡಿಗಳಲ್ಲಿ ಜಿಲ್ಲಾಡಳಿತ ಬಿಗಿ ಭದ್ರತೆ ಕೈಗೊಂಡಿದೆ. ಅಫಜಲಪೂರ ತಾಲೂಕಿನ ಬಳ್ಳೂರಗಿ ಚೆಕ್ ಪೋಸ್ಟ್​ನಲ್ಲಿ ಮಹಾರಾಷ್ಟ್ರದ ಪ್ರಯಾಣಿಕರು ಗಲಾಟೆ ಮಾಡುತ್ತಿದ್ದಾರೆ ಎಂದು ಪೊಲೀಸ್​ ಸಿಬ್ಬಂದಿ ಆರೋಪಿಸುತ್ತಿದ್ದಾರೆ. ಆರ್​ಟಿಪಿಸಿಆರ್ ವರದಿ ಇಲ್ಲದಿದ್ರು ಜಿಲ್ಲೆಗೆ ಪ್ರವೇಶ ನೀಡುವಂತೆ ಪೊಲೀಸರು ಹಾಗೂ …

Read More »

ವರಿಷ್ಠರು ಜವಾಬ್ದಾರಿ ನೀಡಿದರೆ ನಿಭಾಯಿಸುವೆ : ಮಹೇಶ್ ಕುಮಠಳ್ಳಿ

ಪಕ್ಷದ ವರಿಷ್ಟರು ನನಗೆ ಯಾವುದೇ ಜವಾಬ್ದಾರಿಯನ್ನು ವಹಿಸಿದರೂ ನಾನು ನಿಭಯಿಸಲು ಸಿದ್ಧನಿದ್ದೇನೆ ಎಂದು ಶಾಸಕ ಮಹೇಶ್ ಕುಮಠಳ್ಳಿ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ತಮ್ಮ ಮನದ ಆಶಯವನ್ನು ಬಿಚ್ಚಿಟ್ಟಿದ್ದಾರೆ. ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಮಹೇಶ್ ಕುಮಠಳ್ಳಿ, ಪಕ್ಷದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಯಾವುದೇ ಜವಾಬ್ದಾರಿಯನ್ನು ನೀಡಿದರೂ ನಾನು ನಿಭಾಯಿಸಲು ಸಿದ್ಧನಿದ್ದೇನೆ. ಹಾಗಂತ ನಾನೇನೂ ಒತ್ತಾಯ ಮಾಡುವುದಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ, …

Read More »

ಚಪ್ಪಲಿ ಹಾಕಿ ಪೂಜೆ ಮಾಡಿದ ಅರಣ್ಯ ಸಚಿವ ಉಮೇಶ್ ಕತ್ತಿ

ಕರ್ನಾಟಕದಲ್ಲಿ ಹಿಂದುತ್ವದ ಹೆಸರಿನ ಮೇಲೆ ಬಿಜೆಪಿ ಸರಕಾರ ಬಂದಿದೆ. ಆದರೆ ಅದೆ ಸರಕಾರದಲ್ಲಿ ಸಚಿವ ಸ್ಥಾನ ಪಡೆದವರಿಗೆ ಹಿಂದುತ್ವದ ಅರಿವೆ ಇಲ್ಲವೋ ಅಥವಾ ಸಚಿವರಾದ ಮೇಲೆ ಪೂಜೆ ಮಾಡುವಾಗ ತಾವು ಹಾಕಿಕೊಂಡ ಚಪ್ಪಲಿ ತೆಗೆಯಬಾರದೆಂಬ ನಿಯಮ ಇದೆಯೋ ಗೊತ್ತಿಲ್ಲ, ಗೋಕಾಕದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆಗೆ ಆಗಮಿಸಿದ ಅರಣ್ಯ ಸಚಿವ ಉಮೇಶ ಕತ್ತಿಯವರಿಗೆ ಯಾವುದಾದರೂ ಪೂಜೆ ಮಾಡಬೇಕಾದರೆ ಮಾನವಿಯತೆ ದೃಷ್ಯಿಯಿಂದಾದರೂ ತಾವು ಧರಿಸಿದ ಚಪ್ಪಲಿ …

Read More »

ರೈಲು ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟ ಭೋಜ ಗ್ರಾಮದ ಯೋಧ

ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ಯೋಧರೊಬ್ಬರು ಪಂಜಾಬ್‍ನ ಪಠಾಣ್‍ಕೋಟ್ ರೈಲು ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ವಿನಯ  ಬಾಬಾಸಾಹೇಬ ಭೋಜೆ (37) ಎನ್ನುವ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಯೋಧನ ಸಾವಿನ ಸುದ್ದಿ ಕೇಳಿ ಭೋಜ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ವಿನಯ್ ಭೋಜೆ ಹದಿನೇಳು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಕಳೆದ ಹತ್ತು ವರ್ಷಗಳಿಂದ ಅವರು ಮಹಾರಾಷ್ಟ್ರದ ಹಾತಕಣಗಲೆ ತಾಲೂಕಿನ ತಿಲವಾಣಿ ಗ್ರಾಮದಲ್ಲಿ ನೆಲೆಸಿದ್ದರು. ಕಳೆದ …

Read More »

ರಾಜ್ಯದಲ್ಲಿ ಲಾಕ್​​​​ಡೌನ್ ಮಾಡುವ ಅವಶ್ಯಕತೆ ಇಲ್ಲ: ಸಚಿವ ಉಮೇಶ್​ ಕತ್ತಿ

ಹುಕ್ಕೇರಿ : ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿ ವಾಹನಗಳಿಗೆ ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಚಾಲನೆ ನೀಡಿದರು. ರಾಜ್ಯದಲ್ಲಿ ಲಾಕ್ಡೌ​ನ್ ಮಾಡುವ ಅವಶ್ಯಕತೆ ಇಲ್ಲ ಎಂದ ಸಚಿವ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, 54 ಪಂಚಾಯಿತಿಗಳಿಗೆ ಕಸ ವಿಲೇಮಾರಿ ವಾಹನ ನೀಡಲಾಗುತ್ತಿದೆ. ಇದನ್ನ ಹುಕ್ಕೇರಿ ತಾಲೂಕಿನ ಜನ ಸದುಪಯೋಗ ಪಡಿಸಿಕೊಳ್ಳಬೇಕು. ಹುಕ್ಕೇರಿ ತಾಲೂಕು ಸ್ವಚ್ಛ ತಾಲೂಕು ಮಾಡಲು ಸಾರ್ವಜನಿಕರು ಸಹಕರಿಸಿದರೆ ಹುಕ್ಕೇರಿ …

Read More »

ಉತ್ತರಾಖಂಡದಲ್ಲಿ ಬಿಜೆಪಿ ನಾಯಕ ‘ಕೈ’ ಹಿಡಿಯುವ ಸಾಧ್ಯತೆ: ಗೋವಾದಲ್ಲಿ ಟಿಎಂಸಿಯೊಂದಿಗೆ ಮೈತ್ರಿ ಇಲ್ಲ ಎಂದ ದಿನೇಶ್ ಗುಂಡೂರಾವ್

ನವದೆಹಲಿ: ಪಂಚರಾಜ್ಯಗಳ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇದೆ. ಚುನಾವಣಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷಗಳು ಕಸರತ್ತು ನಡೆಸುತ್ತಿವೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಮೊದಲ ಹಂತದ ಅಭ್ಯರ್ಥಿಗಳನ್ನು ಕೆಲವು ಪಕ್ಷಗಳು ಬಿಡುಗಡೆ ಮಾಡಿವೆ. ಉತ್ತರಾಖಂಡದಲ್ಲಿಯೂ ಚುನಾವಣಾ ಕಣ ರಂಗೇರಿದೆ. ಮಾಜಿ ಸಚಿವ ಹರಕ್ ಸಿಂಗ್ ರಾವತ್ ಬಿಜೆಪಿಯಿಂದ ಹೊರನಡೆದು, ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮಾತುಕತೆಗಳೂ ತೀವ್ರಗೊಂಡಿವೆ ಎನ್ನಲಾಗುತ್ತಿದೆ. ಈವರೆಗೆ ಹರಕ್​ಸಿಂಗ್ ರಾವತ್ ಅವರು ಕಾಂಗ್ರೆಸ್ ಸೇರ್ಪಡೆಯಾಗುವ …

Read More »