ಕಲಬುರಗಿ: ಇದೇ ಮೊದಲ ಬಾರಿಗೆ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ರಾಜೇಶ ಹಾಗರಗಿಗೆ ಜಾಮೀನು ಮಂಜೂರಾಗಿದೆ. ಕಲಬುರಗಿ ಹೈ ಕೋರ್ಟ್ ನಿಂದ ರಾಜೇಶ್ ಹಾಗರಗಿಗೆ ಜಾಮೀನು ಮಂಜೂರಾಗಿದೆ. ರಾಜೇಶ್ ಹಾಗರಗಿ ಅವರು ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯ ಪತಿ ಮತ್ತು ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಅಧ್ಯಕ್ಷರಾಗಿದ್ದಾರೆ. ಕಳೆದ ಐದೂವರೆ ತಿಂಗಳಿನಿಂದ ಜೈಲಿನಲ್ಲಿದ್ದ ರಾಜೇಶ್ ಹಾಗರಗಿಗೆ ಜಾಮೀನು ದೊರೆತಿದೆ.
Read More »Daily Archives: ಸೆಪ್ಟೆಂಬರ್ 27, 2022
ತನ್ನ ಸ್ವಂತ ಕ್ಷೇತ್ರದ ಕಾರ್ಯಕ್ರಮದಲ್ಲೇ ಜಾಗ ಸಿಗದೆ ಅನಾಥರಾದ ಶೆಟ್ಟರ್ ಅವರ ಸ್ಥಿತಿ ಯಾರಿಗೂ ಬರಬಾರದು: ಕಾಂಗ್ರೆಸ್
ಬೆಂಗಳೂರು : ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ ಹೆಸರು ಕೈಬಿಟ್ಟಿದ್ದರು ಎನ್ನಲಾದ ವಿಚಾರ ಮತ್ತು ಬಿಡಿಎ ಭ್ರಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತಿತರರ ವಿರುದ್ಧದ ಎಫ್‌ಐಆರ್ ಕುರಿತಂತೆ ವಿಜಯೇಂದ್ರ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ತುಳಿಯುವ ಯತ್ನ ನಡೆದಿದೆ ಎಂದು ಆರೋಪಿಸಿ ಸರಣಿ ಟ್ವೀಟ್ ಮಾಡಿದೆ. ಸಿಎಂ ಹುದ್ದೆಯೂ ಕೊಡಲಿಲ್ಲ, ಸಚಿವ ಸ್ಥಾನವೂ ಸಿಗಲಿಲ್ಲ. ಈಗ ರಾಷ್ಟ್ರಪತಿ ಕಾರ್ಯಕ್ರಮದಲ್ಲೂ ಹೆಸರಿಲ್ಲ. ಬಿಎಸ್‌ವೈ ನಂತರ ಮತ್ತೊಬ್ಬ ಲಿಂಗಾಯತ ನಾಯಕನನ್ನು …
Read More »ನವ ದುರ್ಗೆಯ ಅವತಾರಿಣಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮ
ಸವದತ್ತಿ: ನವ ದುರ್ಗೆಯ ಅವತಾರಿಣಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮ ಮನೆ ಮಾಡಿದೆ. ಮೊದಲ ದಿನವಾದ ಸೋಮವಾರದಿಂದಲೇ ಭಕ್ತರು ಸಾಗರೋಪಾದಿಯಲ್ಲಿ ಹರಿದುಬಂದರು. ಘಟಸ್ಥಾಪನೆಯ ಮೂಲಕ ನವವೈಭವಕ್ಕೆ ವಿಧ್ಯುಕ್ತ ಚಾಲನೆಯೂ ದೊರೆಯಿತು. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ಅವಮಾಸ್ಯೆ ನಂತರದ ಮೊದಲ ದಿನ ಸೋಮವಾರ ಸಂಜೆ 4.30 ರಿಂದ 6.30 ಒಳಗಾಗಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮೂಲಕ ಘಟಸ್ಥಾಪನೆ ಜರುಗಿತು. …
Read More »ಗುಂಪು ಘರ್ಷಣೆ; ಬಾಲಕನಿಗೆ ಚೂರಿ ಇರಿತ
ಬೆಳಗಾವಿ: ಇಲ್ಲಿನ ಅನಂತಶಯನ ಗಲ್ಲಿಯಲ್ಲಿ ಸೋಮವಾರ ರಾತ್ರಿ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಚೂರಿ ಇರಿತದಿಂದ ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕ್ಯಾಂಪ್ ಪ್ರದೇಶದ ನಿವಾಸಿ ಫರಾನ್ ಧಾರವಾಡಕರ (15) ಚೂರಿ ಇರಿತಕ್ಕೆ ಒಳಗಾದವ. ಈತ ಇಸ್ಲಾಮಿಯಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಗಾಯಗೊಂಡ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಫರಾನ್ ಹಾಗೂ ಇಬ್ಬರು ಸ್ನೇಹಿತರು ಬೈಕ್ ಮೇಲೆ ಹೊರಟಿದ್ದರು. ನಗರದ ಅಂಬಾ ಭವಾನಿ ಮಂದಿರದ ಹತ್ತಿರ 10 ಯುವಕರ …
Read More »ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ 12 ವಾರ ಗಡುವು
ಬೆಂಗಳೂರು: ರಾಜ್ಯದ 31 ಜಿಲ್ಲಾ ಪಂಚಾಯಿತಿ ಹಾಗೂ 239 ತಾಲ್ಲೂಕು ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ರೀತಿಯ ಮೀಸಲಾತಿಯನ್ನು 12 ವಾರದೊಳಗೆ ಮರು ನಿಗದಿಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕರ್ನಾಟಕ ಪಂಚಾಯತ್ ರಾಜ್ ಹಾಗೂ ಗ್ರಾಮ ಸ್ವರಾಜ್ (ತಿದ್ದುಪಡಿ) ಕಾಯ್ದೆ- 2021ರ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ಗೆಜೆಟ್ ಅಧಿಸೂಚನೆ ಪ್ರಶ್ನಿಸಿ ರಾಜ್ಯ …
Read More »ಇಂದಿನಿಂದ ತಿರುಪತಿಯಲ್ಲಿ ಬ್ರಹ್ಮೋತ್ಸವ ಶುರು
ತಿರುಪತಿ:ದೇಶಾದ್ಯಂತ ಸಂಭ್ರಮದ ನವರಾತ್ರಿ ಹಬ್ಬ ಕಳೆಕಟ್ಟುತ್ತಿರುವಂತೆಯೇ ಜಗತ್ತಿನ ಶ್ರೀಮಂತ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಮಂಗಳವಾರದಿಂದ 9 ದಿನಗಳ ಕಾಲ ಬ್ರಹ್ಮೋತ್ಸವ ನಡೆಯಲಿದೆ. ಸಂಪ್ರದಾಯ ಪ್ರಕಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರು ಹೊಸ ವಸ್ತ್ರಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಬ್ರಹ್ಮೋತ್ಸವ ಅದ್ಧೂರಿಯಾಗಿ ಆಚರಿಸಲು ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಅದ್ಧೂರಿಯಾಗಿ ಬ್ರಹ್ಮೋತ್ಸವ ಆಚರಿಸಲಾಗುತ್ತದೆ. ಹೀಗಾಗಿ, ದೇಶದ …
Read More »ನಾಡಹಬ್ಬ ಉತ್ಸವಕ್ಕೆ ಬೆಳಗಾವಿಯಲ್ಲಿ ಅದ್ಧೂರಿ ಚಾಲನೆ
ಬೆಳಗಾವಿಯಲ್ಲಿ 95ನೇ ನಾಡಹಬ್ಬ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದ್ದು. ಇಂದಿನಿಂದ ಐದು ದಿನಗಳ ಕಾಲ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಎಂ.ಎಸ್.ಮುಗಳಿ ವೇದಿಕೆಯಲ್ಲಿ ಹಮ್ಮಿಕೊಂಡಿರುವ 95ನೇ ನಾಡಹಬ್ಬ ಉತ್ಸವ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮಕ್ಕೆ ನಾಗನೂರು ರುದ್ರಾಕ್ಷಿ ಮಠದ ಪರಮಪೂಜ್ಯ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ನಂತರ ಧಾರವಾಡದ ಖ್ಯಾತ ಸಾಹಿತಿ ಡಾ.ಬಾಳಣ್ಣ ಶೀಗಿಹಳ್ಳಿ ಅವರು …
Read More »ಟಿಕ್‍ಟಾಕ್, ಯೂಟೂಬ್ ಸ್ಟಾರ್ ರುಕ್ಮವ್ವ ಅಜ್ಜಿ ಇನ್ನಿಲ್ಲ
ತಮ್ಮ ಅಮೋಘ ಅಭಿನಯದ ಮೂಲಕ ಟಿಕ್‍ಟಾಕ್ ಮತ್ತು ಯೂಟೂಬ್ ಸ್ಟಾರ್ ಆಗಿ ಮನೆ ಮಾತಾಗಿದ್ದ ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಅಜ್ಜಿ ರುಕ್ಮವ್ವ ಗೋವಿಂದಪ್ಪ ಲೋಕರಿ ವಯೋಸಹಜ ಕಾಯಿಲೆಯಿಂದ ಸೋಮವಾರ ಬೆಳಿಗ್ಗೆ ಮೃತರಾಗಿದ್ದಾರೆ. ಹೌದು ಟಿಕ್‍ಟಾಕ್‍ನಲ್ಲಿ ತಮ್ಮ ವಿಭಿನ್ನ ಕಾಮಿಡಿ ವಿಡಿಯೋ ಮೂಲಕ ಈ ರುಕ್ಮವ್ವ ಅಜ್ಜಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅಲ್ಲದೇ ಹಲವು ವಾಹಿನಿಗಳ ಕಾಮಿಡಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಇಳಿ ವಯಸ್ಸಿಲ್ಲಿಯೂ ತಮ್ಮಲ್ಲಿನ ಕಲೆಯನ್ನು …
Read More »
Laxmi News 24×7