Breaking News

Monthly Archives: ಜುಲೈ 2022

2022ರ ವಿಧಾನಸಭೆ ಚುನಾವಣೆ ಮಾಜಿ ಸಿಎಂ ಸಿದ್ದರಾಮಯ್ಯ ಸವದತ್ತಿ ಯಿಂದ ಸ್ಪರ್ಧೆ ?

ಬೆಳಗಾವಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೆಚ್ಚಿರುವ ವಿಧಾನಸಭೆ ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ನ ಕೆಲವು ಪ್ರಮುಖ ನಾಯಕರು ಕಣ್ಣಿಟ್ಟಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ತಾವು ಈಗ ಶಾಸಕರಾಗಿರುವ ಕ್ಷೇತ್ರವನ್ನು ಮುಂದಿನ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಮರ್ಥರಿದ್ದರೂ ಕೂಡ ಕ್ಷೇತ್ರ ಬದಲಾಯಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯ ಆನಂದ್ ಮಾಮ್ನಿ ಗೆದ್ದಿರುವ ಪಕ್ಷದ ಮತಗಳ …

Read More »

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ.. ಹೈದರಾಬಾದ್​ಗೆ ಸಿಎಂ

ಬೆಂಗಳೂರು: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇಂದಿನಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದ್ದು, ಚುನಾವಣೆ, ಪಕ್ಷ ವಿಸ್ತರಣೆ ಮತ್ತು ಮೋದಿ ಆಡಳಿತವನ್ನು ಜನಸಾಮಾನ್ಯರಿಗೆ ಕೊಂಡೊಯ್ಯುವ ಪ್ರಮುಖ ವಿಷಯಗಳು ಚರ್ಚೆಯಾಗಲಿವೆ. ಹೈದರಾಬಾದ್​ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿರುವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.ಎರಡು ದಿನ ಕಾರ್ಯಕಾರಣಿ ಸಭೆಯಲ್ಲಿ …

Read More »

ಪಕ್ಷ ಸಂಘಟನೆಗೆ ಸಾಮಾಜಿಕ ಜಾಲತಾಣ ಸದ್ಬಳಕೆ ಅಗತ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

    ಘಟಫ್ರಭ: ಸಾಮಾಜಿಕ ಜಾಲತಾಣ ಸದ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ಆದ್ಯತೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.   ಪಟ್ಟಣದ ಡಾ. ಎನ್.ಎಸ್.‌ ಹರ್ಡೇಕರ್‌ ತರಬೇತಿ ಕೇಂದ್ರದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ದೇಶ-ವಿದೇಶಗಳಲ್ಲಿನ ಬೆಳೆವಣಿಗೆಗಳನ್ನು ಸೆಂಕೆಂಡ್‌ಗಳಲ್ಲಿ ಜನಸಾಮಾನ್ಯರಿಗೆ ತಲುಪಿಸಿ ಅವರ ನಡುವೆ ಸಂವಹನ ಸಾಮರ್ಥ್ಯ‌ವನ್ನು …

Read More »

ಖಾಸಗಿ ಆಸ್ಪತ್ರೆಯಲ್ಲಿ ಶವವಿಟ್ಟು ವೈದ್ಯರ ವಿರುದ್ಧ ಪ್ರತಿಭಟನೆ

ದಾವಣಗೆರೆ: ತಪ್ಪು ಚಿಕಿತ್ಸೆ ನೀಡಿ ಸಾವಿಗೆ ಕಾರಣವಾಗಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮೃತರ ಸಂಬಂಧಿಕರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗುರುವಾರ ಕೆ.ಆರ್. ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು. ದಾವಣಗೆರೆಯ ಜಯನಗರ ನಿವಾಸಿ ಅನ್ನಪೂರ್ಣಮ್ಮ(65) ಎಂಬುವರ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವೃದ್ಧೆಯ ಸಂಬಂಧಿಕರು ಶವವಿಟ್ಟು ಪ್ರತಿಭಟನೆ ನಡೆಸಿದರು. ವೈದ್ಯರ ಬಂಧನ, ಆಸ್ಪತ್ರೆ ಬಂದ್ ಮಾಡುವಂತೆ ಒತ್ತಾಯಿಸಿದರು. ಜೂ. 8 …

Read More »

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್‌ಗೆ ಶೋಕಾಸ್ ನೋಟಿಸ್

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಶಿಸ್ತುಪಾಲನಾ ಸಮಿತಿಯಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಏಳು ದಿನಗಳೊಳಗೆ ಉತ್ತರಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ನಾಯಕತ್ವ ವಹಿಸಿಕೊಳ್ಳಲು ನಾಲಾಯಕ್ ನಾಯಕರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಗ್ಗೆ ಲಕ್ಷ್ಮಿ ನಾರಾಯಣ್ ಲಘುವಾಗಿ …

Read More »

ಮನೆ ಕೆಲಸದವನಿಂದ ಜೋಡಿ ಕೊಲೆ: ಒಟ್ಟಿಗೆ ಊಟ ಮಾಡಿ ಮಲಗಿದ್ದ ಮಾಲೀಕರನ್ನು ಹೊಡೆದು ಹತ್ಯೆ

ಗದಗ: ಮನೆಗೆಲಸದ ವ್ಯಕ್ತಿಯೊಬ್ಬ ಮಾಲೀಕರನ್ನು ಹತ್ಯೆಗೈದ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಗ್ರಾಮದ ಫಕೀರೇಶ ಮಾಚೇನಹಳ್ಳಿ (17) ಮಹಾಂತೇಶ್ ಮಾಚೇನಹಳ್ಳಿ (28) ಕೊಲೆಗೀಡಾದ ದುರ್ದೈವಿಗಳು. ಅಲಗಿಲವಾಡ ಗ್ರಾಮದ ನಿವಾಸಿ ಮಂಜುನಾಥ್ (40) ಕೊಲೆ ಮಾಡಿದ ಆರೋಪಿ. ಗುರುವಾರ ರಾತ್ರಿ ಮಾಲೀಕರ ಜೊತೆ ಬಾಡೂಟ ಸವಿದ ಮಂಜುನಾಥ ಮನೆಯ ಮಹಡಿಯಲ್ಲಿ ಮಾಲೀಕರ ಪಕ್ಕದಲ್ಲಿಯೇ ಮಲಗಿದ್ದರು. ಬೆಳಗಿನ ಜಾವ ಕೋಲಿನಿಂದ ಮುಖ ಹಾಗೂ ತಲೆಗೆ …

Read More »

ಶರದ್ ಪವಾರ್ ಗೆ ಬಂತು ಲವ್ ಲೆಟರ್…!

ಮುಂಬೈ: ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಿದ ದಿನದಂದು, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು 2004, 2009, 2014 2020 ರ ಚುನಾವಣೆ ಅವಧಿಯಲ್ಲಿ ಸಲ್ಲಿಸಿದ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯಿಂದ ನೋಟಿಸ್ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಈ ನೋಟಿಸ್ ಗಳನ್ನು ಅವರು ಪ್ರೇಮ ಪತ್ರಗಳು ಎಂದು ವ್ಯಂಗವಾಡಿದ್ದಾರೆ. ಈ ಕುರಿತಾಗಿ ಮರಾಠಿಯಲ್ಲಿ ಟ್ವೀಟ್ ಮಾಡಿರುವ ಅವರು “ಇಂದಿನ ದಿನಗಳಲ್ಲಿ …

Read More »

ಮಕ್ಕಳಿಗೆ ಬರೆದ ಆಸ್ತಿ ತಂದೆ ಹೆಸರಿಗೆ ವಾಪಸ್! ವೃದ್ಧ ದಂಪತಿಗೆ ಆಸರೆಯಾಗದ ಮಕ್ಕಳಿಗೆ ಪಾಠ ಕಲಿಸಿದ ಉಪವಿಭಾಗಾಧಿಕಾರಿ!

ಬಾಗಲಕೋಟೆ: ತಂದೆಯೊಬ್ಬರು ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಇಬ್ಬರು ಮಕ್ಕಳ ಹೆಸರಿಗೆ ಬಿಟ್ಟುಕೊಟ್ಟಿದ್ದರು. ಆದರೆ, ಆ ಮಕ್ಕಳು ತಂದೆಯ ಜೀವನಕ್ಕೆ ಆರ್ಥಿಕವಾಗಿ ಅಥವಾ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿರಲಿಲ್ಲ. ತನ್ನ ಕೊನೇಗಾಲದಲ್ಲಿ ಮಕ್ಕಳು ಆಸರೆ ನೀಡುತ್ತಿಲ್ಲ ಎಂದು ನೊಂದ ತಂದೆ, ನನ್ನ ಸಾವಿನ ನಂತರ ಮಡದಿಯ ಜೀವನಕ್ಕೂ ಮಕ್ಕಳು ಸಹಾಯ ಕೊಡುತ್ತಾರೆ ಎಂಬ ಭರವಸೆ ಇಲ್ಲ. ನಾನೇನು ಮಾಡಲಿ? ಇರೋ ಆಸ್ತಿಯನ್ನೂ ಮಕ್ಕಳಿಗೆ ಕೊಟ್ಟಿರುವೆ ಎಂದು ಕಣ್ಣೀರು ಹಾಕುತ್ತಿದ್ದರು. ಇವರ ಕಷ್ಟಕ್ಕೆ ಮರುಗಿದ …

Read More »

ಮಗನಿಗೆ MBBS ಸೀಟು ಕೊಡಿಸಲು ವೈದ್ಯ ತಂದೆಯ ಪರದಾಟ; ವಂಚಕರು ಪೀಕಿದ್ದು ₹1.16 ಕೋಟಿ!

ಬೆಂಗಳೂರು: ಖಾಸಗಿ ಕಾಲೇಜಿನಲ್ಲಿ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ವೈದ್ಯನನ್ನು ನಂಬಿಸಿ 1.16 ಕೋಟಿ ರೂ ಪಡೆದು ವಂಚಿಸಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 24 ಲಕ್ಷ ರೂ. ನಗದು, 25 ಗ್ರಾಂ ಚಿನ್ನಾಭರಣ ಹಾಗೂ ನಕಲಿ ವಾಕಿಟಾಕಿಗಳನ್ನು ಜಪ್ತಿ ಮಾಡಲಾಗಿದೆ. ಕಲಬುರಗಿಯ ಆಳಂದ ಮೂಲದ ವೈದ್ಯ ಶಂಕರ್ ಬಾಬುರಾವ್ ನೀಡಿದ ದೂರಿನ ಮೇರೆಗೆ ವಂಚಕರಾದ ನಾಗರಾಜ್, ಮಲ್ಲಿಕಾರ್ಜುನ್, ಮಧು, ಬಸವರಾಜ್ ಹಾಗೂ ಹಮೀದ್​ ಎಂಬುವವರು ಪೊಲೀಸರ …

Read More »

ರಸ್ತೆ ಅಪಘಾತದಲ್ಲಿ ಲಾರಿಯ ಮುಂಭಾಗದ ಚಕ್ರದಿಂದ ಯುವತಿ ಜಸ್ಟ್ ಮಿಸ್ ಆ

ಬೆಳಗಾವಿ: ರಸ್ತೆ ಅಪಘಾತದಲ್ಲಿ ಲಾರಿಯ ಮುಂಭಾಗದ ಚಕ್ರದಿಂದ ಯುವತಿ ಜಸ್ಟ್ ಮಿಸ್ ಆಗಿರುವ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕ್ಷಣಾರ್ಧದಲ್ಲಿ ಯುವತಿಯ ಪ್ರಾಣ ಉಳಿದಿರುವ ಘಟನೆ ತಾಲೂಕಿನ ಗಣೇಶಪುರದಲ್ಲಿ ನಡೆದಿದೆ. ಗಣೇಶಪುರ ರಸ್ತೆಯಲ್ಲಿ ಸ್ಕೂಟಿ ಮೇಲೆ ತೆರಳುತ್ತಿರುವಾಗ ಯುವತಿಗೆ ನಾಯಿ ಅಡ್ಡ ಬಂದಿದೆ. ಈ ವೇಳೆ ವೇಗ ನಿಯಂತ್ರಣಕ್ಕೆ ಬಾರದೇ ಸ್ಕೂಟಿ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ‌. ಇತ್ತ ಹಿಂಬದಿಯಿಂದ ಬರುತ್ತಿದ್ದ ಲಾರಿ ಚಾಲಕ, ತಕ್ಷಣ ಬ್ರೇಕ್ ಹಾಕಿ …

Read More »