ಬೆಳಗಾವಿಯಲ್ಲಿ ಬಿಜೆಪಿ ನಾಯಕಿ ನುಪೂರ್ ಶರ್ಮಾ, ರೋಹಿತ್ ಚಕ್ರತೀರ್ಥ ಅವರಿಗೆ ಶ್ರೀರಾಮಸೇನೆಯ ಬೆಂಬಲವಿದೆ. ನುಪೂರ್ ಶರ್ಮಾ ಸತ್ಯವನ್ನೇ ಹೇಳಿದ್ದಾರೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ರಾಮಸೇನೆ ಮುಖ್ಯಸ್ಥರಾದ ಪ್ರೆಮೋದ್ ಮುತಾಲಿಕ್, ಬಿಜೆಪಿ ನಾಯಕಿ ನುಪುರ್‍ಶರ್ಮಾ ಹಾಗೂ ರೋಹಿತ್ ಚಕ್ರೀರ್ಥರವರಿಗೆ ಬೆಂಬಲ ಸೂಚಿಸಿದರು. ಸತ್ಯವನ್ನು ಹೇಳಿದವರನ್ನು ಯಾರಿದೋ ಒತ್ತಡಕ್ಕೆ ಮಣಿದು ಉಚ್ಚಾಟನೆ ಮಾಡುವುದು ಸರಿಯಲ್ಲ. ಪ್ರಖರ ವಾಗ್ಮಿ, ವಕ್ತಾರರಿಗೆ ಯಾವುದೇ ಹೇಳಿಕೆ ಹಿನ್ನೆಲೆ …
Read More »Daily Archives: ಜೂನ್ 10, 2022
ಬೆಳಗಾವಿಯ ಫೋರ್ಟ್ ರಸ್ತೆಯಲ್ಲಿ ವಿದ್ಯುತ್ ತಂತಿಗೆ ನೂಪುರ್ ಶರ್ಮಾ ಪ್ರತಿಕೃತಿಯನ್ನು ಜೋತು ಹಾಕಿ ಆಕ್ರೋಶ
ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತಂತೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಬೆಳಗಾವಿ ನಗರದಲ್ಲಿ ತೀವೃ ಖಂಡನೆ ವ್ಯಕ್ತವಾಗಿದೆ. ನೂಪುರ್ ಶರ್ಮಾ ಪ್ರತಿಕೃತಿಯನ್ನು ವಿದ್ಯುತ್ ತಂತಿಗೆ ಜೋತು ಹಾಕುವ ಮೂಲಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕಿ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ ಪೈಗಂಬರರ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಬೆಳಗಾವಿಯ ಫೋರ್ಟ್ ರಸ್ತೆಯಲ್ಲಿ ವಿದ್ಯುತ್ ತಂತಿಗೆ ನೂಪುರ್ ಶರ್ಮಾ ಪ್ರತಿಕೃತಿಯನ್ನು ಜೋತು ಹಾಕಿ …
Read More »ಕಾಡು ಬೆಕ್ಕು ಬೇಟೆಯಾಡಿದ್ದ ಆರೋಪಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ..
ಕಾಡು ಬೆಕ್ಕನ್ನು ಬೇಟೆಯಾಡಿದ್ದ ಖದೀಮರನ್ನು ಅರಣ್ಯ ಇಲಾಖೆ ಸಿಬ್ಬಂದಿ ಹೆಡೆಮುರಿಕಟ್ಟಿದ ಘಟನೆ ಖಾನಾಪುರ ತಾಲೂಕಿನ ಖುದ್ದಾನಪೂರ್ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಕಿತ್ತೂರು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಾಡು ಬೆಕ್ಕು ಬೇಟೆಯಾಡಿದ್ದ ಆರೋಪಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ.. ಖುದ್ದಾನಪೂರ ವ್ಯಾಪ್ತಿಯಲ್ಲಿ ಬೇಟೆಯಾಡಿ ಬೆಳವಡಿಯ ಹರಿಜನಕೆರೆಯ ಮನೆಯಲ್ಲಿ ಇದನ್ನು ಇಟ್ಟಿದ್ದುರು. ಅಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬೇಟೆಯಾಡಿದ ಕಾಡು ಬೆಕ್ಕಿನ ಮಾಂಸ ಸೇರಿದಂತೆ ಬೇಟೆಗೆ ಬೆಳೆಸಿದ ದಾರದ ಬೆಲೆ, 3 …
Read More »ಪಹಣಿಯಲ್ಲಿ ಹೆಸರು ಕಡಿಮೆ ಮಾಡಲು 7 ಸಾವಿರ ಲಂಚಕ್ಕೆ ಬೇಡಿಕೆ:
ಪಹಣಿಯಲ್ಲಿ ಹೆಸರು ಕಡಿಮೆ ಮಾಡಲು ಖಾನಾಪೂರ ಹೋಬಳಿಯ ಕಂದಾಯ ನಿರೀಕ್ಷಕರು 7ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಖಾನಾಪೂರ ತಾಲೂಕಿನ ಹಿರೇ ಅಂಗ್ರೋಳ್ಳಿ ಗ್ರಾಮದ ರೈತ ಗೋಪಾಲ ಶಿವನಪ್ಪ ಗೋಲಿಹಳ್ಳಿ ಖಾನಾಪುರ ತಹಶೀಲ್ದಾರರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಖಾನಾಪೂರ ತಾಲೂಕಿನ ಹಿರೇ ಅಂಗ್ರೋಳ್ಳಿ ಗ್ರಾಮದ ರೈತ ಗೋಪಾಲ ಶಿವನಪ್ಪ ಗೋಲಿಹಳ್ಳಿ ಪಹಣಿಯಲ್ಲಿ ಹೆಸರು ಕಡಿಮೆ ಮಾಡಲು ಖಾನಾಪೂರ ಹೋಬಳಿಯ ಕಂದಾಯ ನಿರೀಕ್ಷಕರು ತಮಗೆ 7 ಸಾವಿರ ಹಣ ನೀಡುವಂತೆ ಬೇಡಿಕೆ …
Read More »ಕನ್ನಡ ನ್ಯೂಸ್ ಚಾನಲ್‌ಗಳ 22ನೇ ವಾರದ ಬಾರ್ಕ್ TRP ರೇಟಿಂಗ್
ಬೆಂಗಳೂರು, ಜೂನ್ 09 : ಕರ್ನಾಟಕದ ಸುದ್ದಿವಾಹಿನಿಗಳ 22ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ (Telivision Rating Point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್ ಅಲ್ಪಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ಕಳೆದ ಕೆಲವು ವಾರಗಳ ಟಿಆರ್‌ಪಿಯನ್ನು ಗಮನಿಸಿದಾಗ ಪವರ್ ಟಿವಿ ಬೆಳವಣಿಗೆ ರೇಟಿಂಗ್‌ನಲ್ಲಿ ಉತ್ತಮವಾಗುತ್ತ ಸಾಗುತ್ತಿದೆ. ಬಾರ್ಕ್ ನೀಡಿರುವ ರೇಟಿಂಗ್‌ನಲ್ಲಿ …
Read More »ಕರ್ನಾಟಕದಲ್ಲಿ ಇಂದಿನಿಂದ 3ದಿನ ವ್ಯಾಪಕ ಮಳೆ
ಬೆಂಗಳೂರು: ಕರ್ನಾಟಕದ ಬಯಲುಸೀಮೆಯನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲೂ ಇಂದಿನಿಂದ ಮಳೆಯ ಆರ್ಭಟ ಜೋರಾಗಲಿದೆ. ಇಂದಿನಿಂದ ಜೂನ್ 11ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಇಂದು ಬೆಂಗಳೂರು, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ 3 ದಿನ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ …
Read More »ಪೊಲೀಸರ ಜೊತೆ ವಾಗ್ವಾದ: ಲಿಂಬಾವಳಿ ಪುತ್ರಿಗೆ ₹ 10 ಸಾವಿರ ದಂಡ
ಬೆಂಗಳೂರು: ಅತಿ ವೇಗವಾಗಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಜೊತೆಗೇ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ವಾಗ್ವಾದಕ್ಕೆ ಇಳಿದಿದ್ದು, ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಂದ ₹ 10 ಸಾವಿರ ದಂಡ ವಸೂಲಿ ಮಾಡಲಾಗಿದೆ. ‘ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಕಡೆಯಿಂದ ರಾಜಭವನ ಕಡೆಗೆ ಗುರುವಾರ ಕಾರಿನಲ್ಲಿ ಹೊರಟಿದ್ದ ಲಿಂಬಾವಳಿ ಪುತ್ರಿ, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗೆ ₹ 1,000 ದಂಡ ಹಾಗೂ ಹಳೇ ಪ್ರಕರಣಗಳಿಗೆ …
Read More »SBI ಬ್ಯಾಂಕ್‌ನಿಂದ ಪತ್ನಿ-ತಾಯಿ ಖಾತೆಗೆ 1.60 ಕೋಟಿ ರೂ ವರ್ಗಾಯಿಸಿ ಸಿಕ್ಕಿಬಿದ್ದ ಕ್ಯಾಷಿಯರ್
ಬಾಗಲಕೋಟೆ, ಜೂನ್ 9: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಗೆ ಮಾತನಂತೆ, ದಿನಾಲು ಲಕ್ಷಾಂತರ ರೂಪಾಯಿಯನ್ನು ನೋಡುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುವ ಕ್ಯಾಷಿಯರ್, ತಾನೂ ಉದ್ಯೋಗ ಮಾಡುವ ಬ್ಯಾಂಕ್‌ನಲ್ಲಿಯೇ ಅಧಿಕಾರವನ್ನು ದುರಪಯೋಗಪಡಿಸಿಕೊಂಡು ಬರೋಬ್ಬರಿ 1 ಕೋಟಿ, 60 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ನವನಗರದ ಎಸ್ ಬಿಐ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಹುದ್ದೆಯಲ್ಲಿದ್ದು,ಲಕ್ಷಾಂತರ ಹಣವನ್ನು ಪ್ರತಿಧಿನ ನೋಡುತ್ತಿದ್ದ …
Read More »ಗರೀಬ್ ಕಲ್ಯಾಣ್ ಅನ್ನ ಯೋಜನೆ: ಬಿಪಿಎಲ್ ಸೇರಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್
ಧಾರವಾಡ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ 15 ಕೆಜಿ ಅಕ್ಕಿ, 20 ಕೆಜಿ ಜೋಳ, ಬಿಪಿಎಲ್ ಕಾರ್ಡಿನ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 3 ಕೆಜಿ ಅಕ್ಕಿ ಹಾಗೂ 2 ಕೆಜಿ ಜೋಳ ಉಚಿತವಾಗಿ ವಿತರಿಸಲಾಗುತ್ತದೆ. ಕಳೆದ ಏಪ್ರಿಲ್ ನಿಂದ ಗೋಧಿ ಹಂಚಿಕೆ ಸ್ಥಗಿತಗೊಳಿಸಲಾಗಿದೆ. ಕೆಲವೆಡೆ ಗೋಧಿ ದಾಸ್ತಾನು ಉಳಿದಿದ್ದು, ಆದ್ಯತೆಯ ಮೇಲೆ ಮೊದಲು …
Read More »ಬಿಜೆಪಿ ಸೇರಲು ಹೋಗಿದ್ದ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು- H.D.K.
ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು. ಈ ಹಿಂದೆ ಬಿಜೆಪಿ ಸೇರಲು ಹೋಗಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಿಜೆಪಿ ಸೇರಲು ಅಡ್ವಾಣಿ ಬಳಿ ಹೋಗಿದ್ದರು. ಒಂದು ಕಾಲದಲ್ಲಿ ಅಡ್ವಾಣಿ ಬಳಿ ಟವೆಲ್ ಹಾಕಿದ್ದರು. ಬೇಕಿದ್ದರೆ ಸಿದ್ದರಾಮಯ್ಯ ಜೊತೆ ಹೋಗಿದ್ದವರನ್ನು ಕೇಳಿ ಎಂದು ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆ ಪ್ರಯತ್ನದ ಬಗ್ಗೆ ಲೇವಡಿ ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯ …
Read More »
Laxmi News 24×7