Breaking News

Daily Archives: ಫೆಬ್ರವರಿ 5, 2022

ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆ ಹೈಕೋರ್ಟ್ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧಗಳು ಸಡಿಲ

ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಸೋಮವಾರದಿಂದ ಜಾರಿಗೆ ಬರುವಂತೆ ಹೊಸ ಎಸ್‌ಒಪಿ ಹೊರಡಿಸಲಾಗಿದೆ. ಹೈಕೋರ್ಟ್ ಕಲಾಪಗಳಿಗೆ ಸಂಬಂಧಿಸಿದಂತೆ ನೂತನ ಎಸ್‌ಒಪಿ ಪ್ರಕಟಿಸಿ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ಹೊರಡಿಸಿದ್ದು, ಬೆಂಗಳೂರು ಪ್ರಧಾನ ಪೀಠದಲ್ಲಿ ಭೌತಿಕ ಕಲಾಪಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಅನ್ವಯವಾಗುವಂತೆ ಹೊರಡಿಸಲಾಗಿರುವ ನೂತನ ಮಾರ್ಗಸೂಚಿಗಳು ಫೆ.7ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿವೆ ಎಂದು …

Read More »

ರೈತರಿಗೆ ಹದ್ದುಬಸ್ತು ಶುಲ್ಕದ ಹೊರೆ; ಪೋಡಿ ಫೀಸ್ ಹೆಚ್ಚಳ ಬೆನ್ನಲ್ಲೇ ಫೆ.1ರಿಂದ ಹೊಸ ನಿಯಮ ಜಾರಿ

ಕೃಷಿ ಭೂಮಿ ಪೋಡಿ ಶುಲ್ಕ ಹೆಚ್ಚಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಹದ್ದುಬಸ್ತು ಶುಲ್ಕವನ್ನೂ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಫೆ.1ರಿಂದಲೇ ಹೊಸ ಶುಲ್ಕ ಜಾರಿಗೆ ಬಂದಿದೆ. ಆದರೆ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಈಗಾಗಲೇ ಅಳತೆಗಾಗಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.   ಶುಲ್ಕ ಎಷ್ಟು ಹೆಚ್ಚಳ: ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೆ ಪ್ರತಿ ಸರ್ವೆ ನಂಬರ್​ಗೆ ಈ ಹಿಂದೆ 35 ರೂ.ಇದ್ದ …

Read More »

ನ್ಯಾಯಾಲಯಗಳಲ್ಲಿ ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ನಿರ್ಣಯ

ಬೆಂಗಳೂರು: ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ ಹಾಗೂ ನ.26ರ ಸಂವಿಧಾನ ದಿನದಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇರಿಸಲು ತೀರ್ಮಾನ ಮಾಡಲಾಗಿದೆ.   ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣಪೀಠ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಸುತ್ತೋಲೆ ಹೊರಡಿಸಿ ಆಯಾ …

Read More »

ಮದ್ಯದ ಬೆಲೆ ಏರಿಸಲು ತಯಾರಿ: ಅಬಕಾರಿ ಇಲಾಖೆಗೆ 27 ಸಾವಿರ ಕೋಟಿ ರೂ. ಟಾರ್ಗೆಟ್;

ಬೆಂಗಳೂರು :ಕರೊನಾದಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಮುಂಬರುವ ಬಜೆಟ್​ನಲ್ಲಿ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ. ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ ಬಿಯರ್ ಮೇಲೆ ಶೇ.5ರಿಂದ 10ರವರೆಗೆ ಅಬಕಾರಿ ಸುಂಕ ವಿಧಿಸಲು ಆಲೋಚಿಸಿದ್ದು, ಫೆ.25ಕ್ಕೆ ನಡೆಯುವ ಸಭೆಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ರ್ಚಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.   2019-20ರಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.150ರಿಂದ ಶೇ.175ಕ್ಕೆ ಹೆಚ್ಚಿಸಲಾಗಿತ್ತು. ಡ್ರಾಟ್ …

Read More »

ಅನ್​​ ಮ್ಯಾರೀಡ್​ ಹುಡುಗಿಯರ ಟಾರ್ಗೆಟ್ ಮಾಡುತ್ತೆ ಈ ಟೀಂ..! ಡೇಟಿಂಗ್​ಗೆ ಹೋದ್ರೆ ಖಾಸಗಿ ಫೋಟೋ ತೆಗೆದು

ಇದು ಬ್ಯಾಚುಲರ್​ ಬೆಡಗಿಯರೇ ಎಚ್ಚರ, ನಾನು ಬ್ಯಾಚುಲರ್​ ಅಂತಾ ಎಲ್ಲೂ ಶೇರ್​ ಮಾಡ್ಲೇ ಬೇಡಿ.ಸೋಷಿಯಲ್​​​ ಪ್ಲಾಟ್​ಫಾರಂನಲ್ಲಿ ಚಾಟ್ ಮಾಡ ಬೇಡಿ, ಅನ್​​ ಮ್ಯಾರೀಡ್​ ಹುಡುಗಿಯರ ಟಾರ್ಗೆಟ್ ಮಾಡೋ ಟೀಂ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ನಿಮ್ಮನ್ನು ಪರಿಚಯ ಮಾಡಿಕೊಂಡು ಡೇಟಿಂಗ್​​ ಕರಿಯುತ್ತಾರೆ, ಡೇಟಿಂಗ್​ಗೆ ಹೋದ್ರೆ ಖಾಸಗಿ ಫೋಟೋ ತೆಗೆದು ವೈರಲ್​ ಮಾಡ್ತಾರೆ. ಟಿಂಡರ್​ ಆಯಪ್​​ನಲ್ಲಿ ವಂಚನೆ ಗೋಲ್​​ಮಾಲ್​​​ ನಡೆಯುತ್ತಿದ್ದು, ಕೋಡಿಗೆಹಳ್ಳಿ ಪೊಲೀಸರ ಕೈಗೆ ವಂಚನೆ ಗ್ಯಾಂಗ್ ಸಿಕ್ಕಿಬಿದ್ದಿದ್ದು, ​​​ಅಭಿಷೇಕ್​​​ @ ಸುಶಾಂತ್ …

Read More »