ಚಿತ್ರದುರ್ಗ: ಮನೆಗಳ್ಳತನ ಮಾಡಿದ ಖದೀಮರು ಪೊಲೀಸರ ಮನೆ ಎಂದು ತಿಳಿದು ಕದ್ದ ವಸ್ತುಗಳನ್ನು ವಾಪಾಸ್ ಬಿಟ್ಟು ಹೋಗಿರುವ ಘಟನೆ ಚಿತ್ರದುರ್ಗದ ಬಸವೇಶ್ವರ ನಗರದಲ್ಲಿ ನಡೆದಿದೆ. ಮಾರ್ಚ್ 13ರ ರಾತ್ರಿ ಎಸ್ಪಿ ಕಚೇರಿಯ ಸಿಪಿಐ ಮೃತ್ಯುಂಜಯ ಅವರ ಮನೆಗೆ ಕನ್ನ ಹಾಕಿದ ಕಳ್ಳರು ಮನೆಯಲ್ಲಿದ್ದ ₹88 ಸಾವಿರ ಮೌಲ್ಯದ ಪಿಸ್ತೂಲ್, ₹7 ಲಕ್ಷ ಮೌಲ್ಯದ 266 ಗ್ರಾಂ ಬಂಗಾರ, ₹1.27 ಲಕ್ಷ ಮೌಲ್ಯದ 2 ಕೆಜಿ 450 ಗ್ರಾಂ ತೂಕದ ಬೆಳ್ಳಿ, …
Read More »Yearly Archives: 2021
ಶಂಕಿತ ಆರೋಪಿಯ ವಾಯ್ಸ್ ಸ್ಯಾಂಪಲ್ ಪಡೆದು ಎಫ್ ಎಸ್ ಎಲ್ ಗೆ ರವಾನೆ :ಇಂದು ವರದಿ ಸಾಧ್ಯತೆ
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ವ್ಯಕ್ತಿಯ ವಾಯ್ಸ್ ಸ್ಯಾಂಪಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ಇಂದು ವರದಿ ಹೊರ ಬೀಳುವ ನಿರೀಕ್ಷೆಯಿದೆ. ಒಂದು ವೇಳೆ ಸಿಡಿಯಲ್ಲಿರುವ ಧ್ವನಿಗೂ ಮತ್ತು ನೀಡಿರುವ ಧ್ವನಿಗೂ ಹೊಲಿಕೆ ಕಂಡು ಬಂದರೆ ಎಸ್‌ಐಟಿ ಬಂಧಿಸುವ ಸಾಧ್ಯತೆಯಿದೆ. ವಿಡಿಯೋದಲ್ಲಿನ ಹಿನ್ನೆಲೆ ಧ್ವನಿ ಚಿಕ್ಕಮಗಳೂರಿನ ವ್ಯಕ್ತಿಯದ್ದು ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೆ ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಬಳಿಕ ಆತನ …
Read More »CD ಪ್ರಕರಣ; ನೆರೆಯ 3 ರಾಜ್ಯಗಳಲ್ಲಿ ಆರೋಪಿಗಳ ಓಡಾಟ ಪತ್ತೆ ಹಚ್ಚಿದ SIT
ಬೆಂಗಳೂರು: ಮಾಜಿ ಸಚಿವರ CD ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ಗಳಿಗಾಗಿ ಎಸ್‌ಐಟಿ ಅಧಿಕಾರಿಗಳು ಶೋಧಕಾರ್ಯ ಆರಂಭಿಸಿದ್ದಾರೆ. ಸದ್ಯ ಆರೋಪಿಗಳು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇಬ್ಬರು ಕಿಂಗ್ಪಿನ್ಗಳು ಒಟ್ಟಿಗೆ ಇರುವ ಬಗ್ಗೆ ಅಧಿಕಾರಿಗಳ ತನಿಖೆ ವೇಳೆ ಗೊತ್ತಾಗಿದೆ. ಸಿಡಿ ಲೀಕ್ ಮಾಡಿದ ಪ್ರಮುಖ ಕಿಂಗ್ಪಿನ್ ಹಾಗೂ ರಷ್ಯಾ ವೆಬ್ ಸೈಟ್ ಮೂಲಕ ವಿಡಿಯೋ ಅಪ್ಲೋಡ್ ಮಾಡಿದ್ದ ಹ್ಯಾಕರ್ ಇಬ್ಬರು, ಸಿಡಿ ರಿಲೀಸ್ ಆದ ಬೆನ್ನಲ್ಲೇ ಮೊಬೈಲ್ ಸ್ವಿಚ್ಆಫ್ …
Read More »ಸಿಡಿ ಪ್ರಕರಣ ತನಿಖೆಯಾದರೆ ಪ್ರೊಡ್ಯೂಸರ್, ಡೈರೆಕ್ಟರ್ ಯಾರೆಂದು ಗೊತ್ತಾಗುತ್ತದೆ: ಸಿಟಿ ರವಿ
ಚಿಕ್ಕಮಗಳೂರು: ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಯಾಕೆ ತಳುಕು ಹಾಕಲಾಗಿದೆ ಎನ್ನುವುದು ನನಗೆ ತಿಳಿದಿಲ್ಲ. ಪ್ರಕರಣದ ತನಿಖೆಯಾದರೆ ಪ್ರೊಡ್ಯೂಸರ್, ಡೈರೆಕ್ಟರ್ ಯಾರೆಂದು ಗೊತ್ತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಟಿ ರವಿ “ಹಿಂದೆಲ್ಲಾ ಮೌಲ್ಯಾಧಾರಿತ ರಾಜಕೀಯದ ಚರ್ಚೆಯಾಗುತ್ತಿತ್ತು. ಈಗ ಸಿಡಿ ಆಧಾರಿತ ರಾಜಕೀಯದ ಚರ್ಚೆ ಆಗುತ್ತಿದೆ.” ಎಂದರು. “ಮೌಲ್ಯಾಧಾರಿತ ರಾಜಕೀಯವೋ, ಸಿಡಿ ಆಧಾರಿತ ರಾಜಕೀಯವೋ …
Read More »ಸಚಿವರಿಗೆ ಬಿಸಿಮುಟ್ಟಿಸಿದ ಸಿಎಂB.S.Y.
ಬೆಂಗಳೂರು: ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಚಿವರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವದ ಅನೌಪಚಾರಿಕ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ಚರ್ಚಿಸುವ ಹೊರತಾಗಿ ಇತರ ಪ್ರಾಮುಖ್ಯ ವಿಚಾರಗಳನ್ನು ತುರ್ತಾಗಿ ಚರ್ಚಿಸುವ ಉದ್ದೇಶದಿಂದ ಸಭೆ ಕರೆದಿದ್ದರು ಎಂದು ಮೂಲಗಳು ತಿಳಿಸಿದೆ. ಈವರೆಗೂ ಸರ್ಕಾರದ ಕಡೆಯಿಂದ ಸಭೆಯ ಅಧಿಕೃತ ಮಾಹಿತಿ ಹೊರಬಂದಿಲ್ಲ. ಸದನದಲ್ಲಿ ಸಚಿವರ ನಡವಳಿಕೆಗಳ ಕುರಿತು ಸಿಎಂ ಬುದ್ಧಿವಾದ ಹೇಳಿದರೆ ಎಂದು ತಿಳಿದುಬಂದಿದೆ. ಕಲಾಪದಲ್ಲಿ ಪ್ರತಿಪಕ್ಷದಿಂದ ದಾಳಿ ನಡೆಯುವಾಗ ಸದನದಲ್ಲಿ ಒಂದಿಬ್ಬರು …
Read More »ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ, ಸದ್ಯ ರಾಜಕೀಯದಲ್ಲಿ ಹಿನ್ನಡೆ ಅನುಭವಿಸುತ್ತಿರಲು ಕಾರಣ ಏನು?
ರಾಜಕೀಯದಲ್ಲಿ ಒಬ್ಬರ ವಿರುದ್ದ ಇನ್ನೊಬ್ಬರು ಕತ್ತಿ ಮಸೆಯುವುದು ನೋಡಿದ್ದೇವೆ, ತಂತ್ರ ಷಡ್ಯಂತ್ರ ರೂಪಿಸುವುದು ಇದ್ದಿದ್ದೇ. ಇದಕ್ಕೆ ರಾಜ್ಯದ ಯಾವ ಪಕ್ಷವೂ ಹೊರತಾಗಿಲ್ಲ. ಜಾರಕಿಹೊಳಿ ಸಿಡಿ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಸರಕಾರ ವಿಶೇಷ ತನಿಖಾ ದಳವನ್ನು ರಚಿಸಿದೆ. ತನಿಖೆ ವೇಗವನ್ನು ಪಡೆದುಕೊಳ್ಳುತ್ತಿದ್ದು ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವುದರಿಂದ, ಬಿಜೆಪಿ ಮತ್ತು ಕಾಂಗ್ರೆಸ್ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿವೆ. ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ …
Read More »ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಿವರಾಜ್ ಕುಮಾರ್
ಬೆಂಗಳೂರು: ಸ್ಯಾಂಡಲ್ ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಡಿ ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಇಂದು ಬೆಳಗ್ಗೆ ಶಿವರಾಜ್ ಕುಮಾರ್ ಭೇಟಿಯಾದರು. ಜೆಡಿಎಸ್ ನಲ್ಲಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅವರ ಸಹೋದರಿ, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಗಳ ನಡುವೆ …
Read More »ಶೇಂಗಾ ಹೋಳಿಗೆ ತಿಂದು ಮೀಸಲಾತಿ ಹೋರಾಟ ನಿಲ್ಲಿಸಿದ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀ
ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕಳೆದ 64 ದಿನಗಳಿಂದ ನಡೆಸಲಾಗುತ್ತಿದ್ದ ಹೋರಾಟವನ್ನು ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀ ಅವರು ಶೇಂಗಾ ಹೋಳಿಗೆ ತಿನ್ನಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಅಂತ್ಯಗೊಳಿಸಿದ್ದಾರೆ. ಇಂದು ಬೆಳಗ್ಗೆ ಸದನದಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಮುದಾಯದ ಸ್ವಾಮೀಜಿಗಳು ಆರು ತಿಂಗಳ ಕಾಲ ಹೋರಾಟವನ್ನು ಸ್ಥಗಿತಗೊಳಿಸಬೇಕೆಂದು ಮನವಿ ಮಾಡಿದ್ದರು. ಅದಾದ ಕೆಲವೇ …
Read More »ಪಂಚಮಸಾಲಿ ಮೀಸಲಾತಿ ಹೋರಾಟ ತಾತ್ಕಾಲಿಕ ಮೊಟಕುಗೊಳಿಸಿ; ಸ್ವಾಮೀಜಿಗೆ ಶಾಸಕ ಯತ್ನಾಳ್ ಮನವಿ
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಮುಂದುವರೆದಿದೆ. ಈ ನಡುವೆ ಹೋರಾಟ ಕೈಬಿಡುವಂತೆ ಸ್ವತಃ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಶಾಸಕ ಯತ್ನಾಳ್, ಪಂಚಮಸಾಲಿ ಮೀಸಲಾತಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಎದ್ದು ನಿಂತ ಸಿಎಂ ಬಿ.ಎಸ್. ಯಡಿಯೂರಪ್ಪ ಮೀಸಲಾತಿಗೆ ಸಂಬಂಧಿಸಿದಂತೆ ಇನ್ನು 6 ತಿಂಗಳಲ್ಲಿ ಹಿಂದುಳಿದ ವರ್ಗದ ಆಯೋಗದ ವರದಿ, ಸಮಿತಿ ವರದಿ ತರಿಸಿಕೊಳ್ಳುತ್ತೇನೆ. ನಂತರ …
Read More »‘ಮಹಾನಾಯಕ’ ಎಂದಾಕ್ಷಣ ತನಗೇ ಹೇಳಿದ್ದು ಎಂದುಕೊಳ್ಳುವುದೇಕೆ?; ಡಿಕೆಶಿಗೆ ಹೆಚ್.ಡಿ.ಕೆ. ಟಾಂಗ್
ಮೈಸೂರು: ರಾಸಲೀಲೆ ಸಿಡಿ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಾನಾಯಕ ಎಂದಾಕ್ಷಣ ತಾನೇ ಎಂದುಕೊಂಡು ಡಿ.ಕೆ.ಶಿವಕುಮಾರ್ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರನ್ನು ಯಾರಾದರೂ ಹೇಳಿದ್ದಾರಾ? ರಮೇಶ್ ಜಾರಕಿಹೊಳಿ ಮಹಾನಾಯಕರೊಬ್ಬರ ಪಿತೂರಿ ಇದೆ ಎಂದಾಕ್ಷಣ ಇವರು ತನಗೇ ಹೇಳಿದ್ದು ಎಂದುಕೊಳ್ಳುವುದೇಕೇ? ಈ ರಾಜ್ಯದಲ್ಲಿ ಮಹಾನಾಯಕರು ಬಹಳ ಜನರಿದ್ದಾರೆ. ಆ ಮಹಾನಾಯಕ ಯಾರೆಂದು ಗೊತ್ತಿಲ್ಲ. …
Read More »