ಮೈಸೂರು: ವಾರಾಂತ್ಯದ ಕರ್ಫ್ಯೂ ನಿಯಮ ಉಲ್ಲಂಘಿಸಿ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಬಳಿ ಕಾರಿನಲ್ಲಿ ತೆರಳುತ್ತಿದ್ದ ಪ್ರಸಿದ್ಧ ನಟ ಮಂಡ್ಯ ರಮೇಶ್ಗೆ ಎಸ್ಐ ಪುಟ್ಟರಾಜು ಕರ್ಫ್ಯೂ ನಿಯಮ ಉಲ್ಲಂಘಿಸದಂತೆ ಬುದ್ಧಿವಾದ ಹೇಳಿದ್ದಾರೆ. ಅಲ್ಲದೇ ಮೈಸೂರಿನ ಗ್ರಾಮೀಣ ಪ್ರದೇಶಗಳಲ್ಲೂ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಜನರಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಕುಂಟು ನೆಪ ಹೇಳಿ ತಿರುಗಾಡುವವರನ್ನು ಖಾಕಿ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆಯಲ್ಲಿ ಸಬ್ ಇನ್ಸಪೆಕ್ಟರ್ ಪುಟ್ಟರಾಜು ಮತ್ತು ಇತರ …
Read More »Yearly Archives: 2021
ಮುಸ್ಲಿಂ ಯುವಕರ ತಂಡದಿಂದ ಕೊವಿಡ್ಗೆ ಬಲಿಯಾದವರ ಉಚಿತ ಅಂತ್ಯಸಂಸ್ಕಾರ; ತುಮಕೂರಿನಲ್ಲೊಂದು ಮಾನವೀಯ ಕಾರ್ಯ
ತುಮಕೂರು: ಕೊವಿಡ್ ಸೋಂಕು ಎಲ್ಲರನ್ನೂ ಭಾವನಾತ್ಮಕವಾಗಿ, ಮಾನಸಿಕವಾಗಿ ಒಗ್ಗೂಡಿಸುತ್ತಿದೆ. ಮನುಷ್ಯರೆಲ್ಲರೂ ಒಂದೇ ಎಂಬ ಭಾವವನ್ನು ಎಲ್ಲರ ಮನಸ್ಸಿನಲ್ಲಿಯೂ ಮೂಡಿಸುತ್ತಿದೆ. ಕೊವಿಡ್ನಿಂದ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಮುಸ್ಲಿಂ ಯುವಕರ ತಂಡವೊಂದು ನಡೆಸುತ್ತಿರುವ ಮಾನವೀಯ ಕಾರ್ಯಕ್ಕೆ ತುಮಕೂರು ಸಾಕ್ಷಿಯಾಗುತ್ತಿದೆ. ನಿನ್ನೆಯಿಂದ ಜಿಲ್ಲೆಯ ಮಧುಗಿರಿಯ ಎಂಟು ಮುಸ್ಲಿಂ ಯುವಕರ ತಂಡವೊಂದು ಸ್ವಯಂ ಪ್ರೇರಿತರಾಗಿ ತಾಲ್ಲೂಕು ಆಸ್ಪತ್ರೆ, ವಿವಿಧ ಖಾಸಗಿ ಆಸ್ಪತ್ರೆ ಗಳಲ್ಲಿ ಕೊವಿಡ್ನಿಂದ ಮೃತಪಟ್ಟ ಶರೀರವನ್ನು ಆಯಾ ಗ್ರಾಮಗಳಲ್ಲಿ ಅವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿಕೊಡುತ್ತಿದೆ. …
Read More »ತೊದಲು ನುಡಿಯಲ್ಲೇ ಲೋಕಜ್ಞಾನ ತೆರೆದಿಡುವ ಮಗು; ಎರಡೂವರೆ ವರ್ಷದ ಬಾಲಕಿ ಜ್ಞಾಪಕ ಶಕ್ತಿಗೆ ಬೆರಗಾದ ಬಾಗಲಕೋಟೆ ಮಂದಿ
ಬಾಗಲಕೋಟೆ: ಮಕ್ಕಳಿರಲವ್ವ ಮನೆ ತುಂಬ, ಕೂಸು ಕಂದಯ್ಯ ಒಳ ಹೊರಗಾ ಆಡಿದರ ಬೀಸಣಿಕೆ ಗಾಳಿ ಸುಳಿದಾವ ಎಂಬ ಮಾತು ಇದೆ. ಮಕ್ಕಳಿದ್ದ ಮನೆಯಲ್ಲಿ ಪ್ರತಿದಿನವೂ ಸಂಭ್ರಮ, ಅವುಗಳ ತೊದಲು ನುಡಿ ತುಂಟಾಟ ನೋಡುವುದೇ ಅಂದ ಎಂಬುವುದು ಇದರ ಅರ್ಥ. ಇದಕ್ಕೆ ಪುಷ್ಠಿ ನೀಡುವಂತೆ ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಓರ್ವ ಅಸಾಮಾನ್ಯ ಬಾಲಕಿ ಇದ್ದು, ಆಕೆಯ ಹೆಸರು ಸಮನ್ವಿತಾ ಕರಕಟ್ಟಿ. ವಯಸ್ಸು ಕೇವಲ ಎರಡುವರೆ ವರ್ಷ,ಆದರೆ ಈಕೆಯ ಸಾಧನೆ ಮಾತ್ರ …
Read More »ಬಯಲಾಯ್ತು ಖಾಸಗಿ ಆಸ್ಪತ್ರೆಗಳ ಬೆಡ್ ರಹಸ್ಯ: ಅಗತ್ಯವಿಲ್ಲದಿದ್ರೂ ರೋಗಿಗಳ ಹೆಸರಲ್ಲಿ ಹಾಸಿಗೆ ಭರ್ತಿ
ನವದೆಹಲಿ: ನೋಯ್ಡಾದ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದವರೂ ರೋಗಿಗಳ ಹೆಸರಲ್ಲಿ ಆಸ್ಪತ್ರೆಯ ಬೆಡ್ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿರುವ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದ ಅನೇಕ ಜನ ಹಾಸಿಗೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಗೌತಮಬುದ್ಧ ನಗರ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನೋಯ್ಡಾ ಜಿಲ್ಲೆಯ ಅನೇಕ ಆಸ್ಪತ್ರೆಗಳಲ್ಲಿ 200 ಕ್ಕೂ ಹೆಚ್ಚು ಮಂದಿಯನ್ನು ಜಾಗ ಖಾಲಿ ಮಾಡಿಸಲಾಗಿದೆ. …
Read More »ಮುಂಗಡ ಹಣ ವಾಪಸ್ ನೀಡಲು ಕಲ್ಯಾಣ ಮಂಟಪ ಮಾಲೀಕರಿಂದ ನಕಾರ
ಚಿಕ್ಕಮಗಳೂರು: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ಕಠಿಣ ನಿಯಮವನ್ನು ಹೇರಲಾಗಿದೆ. ಸಾವಿರಾರು ಜನರನ್ನ ಸೇರಿಸಿ ಮದುವೆ ಮಾಡಬೇಕು ಎಂದು ಆಸೆಪಟ್ಟವರು ಇದೀಗ 50 ಮಂದಿಯನ್ನ ಸೇರಿಸಿ ಮದುವೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ದೊಡ್ದ ದೊಡ್ಡ ಹಾಲ್ಗಳಲ್ಲಿ ಬುಕ್ ಮಾಡಿದ ಮದುವೆಗಳೇಲ್ಲ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಮಾಡಲು ನಿರ್ಧರಿಸಲಾಗಿದೆ. ಆದರೆ ಕನ್ಷೆಷನ್ ಹಾಲ್ಗಳಿಗೆ ಮುಂಗಡವಾಗಿ ಕಟ್ಟಿದ ಹಣವನ್ನ ಮಾತ್ರ ಕೇಳಬೇಡಿ ಎಂದು ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ ಕುಟುಂಬಸ್ಥರಲ್ಲಿ …
Read More »ಮಂಗಳೂರಿನಲ್ಲಿ ಬೆಂಕಿ ಅವಘಡ, ಲಾಕ್ ಡೌನ್ ಹಿನ್ನಲೆ ತಪಿತಿ ಬಹುದೊಡ್ಡ ಅನಾಹುತ
ಮಂಗಳೂರು: ಕ್ಯಾಟಸೆಂತ್ ಕೆಮಿಕಲ್ ಫ್ಯಾಕ್ಟರಿ ಯಲ್ಲಿ ಬೆಂಕಿ ಅವಘಡವಾಗಿರುವ ಘಟನೆ ಕಂಡುಬಂದಿದೆ. ಮಂಗಳೂರ ನಗರ ಹೊರವಲಯದ ಸುರತ್ಕಲ್ ಸಮೀಪದ ಕಳವಾರ ನಲ್ಲಿರುವ ಕ್ಯಾಟಸೆಂತ್ ಫ್ಯಾಕ್ಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕ್ಯಾಟಸೆಂತ್ ಫ್ಯಾಕ್ಟರಿಯ ಎರಡನೇ ಮಹಡಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಸುರತ್ಕಲ್,MRPL ಅಗ್ನಿಶಾಮಕ ದಳದಿಂದ ತಂಡ ಕಾರ್ಯಚರಣೆ ನಡೆಸುತ್ತಿದೆ. ಪ್ರಸ್ತುತದ ಲಾಕ್ ಡೌನ್ ಹಿನ್ನಲೆ ಕಾರ್ಮಿಕರೆಲ್ಲ ಇರದ ಕಾರಣ ಬಹುದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ.
Read More »ರಾಜ್ಯದ ಕೋವಿಡ್ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿಲ್ಲ: ಬಿ.ಎಸ್ . ಯಡಿಯೂರಪ್ಪ
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯದಲ್ಲಿ ಬೆಡ್ , ಐಸಿಯು , ವೆಂಟಿಲೇಟರ್ ಬೆಡ್’ಗಳ ಕೊರತೆ ಕಂಡುಬಂದಿದ್ದು , ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಹೇಳಿದ್ದಾರೆ . ಸಾವಿನ ಸಂಖ್ಯೆ ಹಾಗೂ ಸೋಂಕಿತ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹೆನ್ನೇಳೆ ಆರೋಗ್ಯ ಅಧಿಕಾರಿಗಳೊಂದಿಗೆ ಸಭೇನೆಡೆಸಿದ ಬಿಎಸ್’ವೈ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ, ಬೆಂಗಳೂರಿನಲ್ಲಿ ವೆಂಟಿಲೇಟರ್ ಹಾಸಿಗೆಗಳನ್ನು 10 ಪಟ್ಟು ಹೆಚ್ಚಳ ಮಾಡುವಂತೆ ಆದೇಶಿಸಿದ್ದಾರೆ …
Read More »‘ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ ಪ್ಲೀಸ್’: ಶಿರಸಿ ವೈದ್ಯೆಯ ಜಾಗೃತಿ ಅಭಿಯಾನ
ಶಿರಸಿ: ಕೇಂದ್ರ ಸರಕಾರ ಕೋವಿಡ್ 19ರ ನಿಯಂತ್ರಣದ ಹಿನ್ನೆಲೆಯಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ನಿರೋಧಕ ಲಸಿಕೆ ಪಡೆದುಕೊಳ್ಳಲು ಮುಕ್ತ ಅವಕಾಶ ಪ್ರಕಟಿಸಿದೆ. ಸರಕಾರಗಳಿಂದ ಕೋವಿಡ್ ನಿಯಂತ್ರಣಕ್ಕೆ ಇದು ಅತ್ಯಂತ ಮಹತ್ವದ ನಡಯಾಗಿದೆ. ಈ ನಡೆಯ ಬೆನ್ನಲ್ಲೇ ಶಿರಸಿಯ ವೈದ್ಯೆಯೊಬ್ಬರು ಲಸಿಕೆ ಹಾಕಿಸಿಕೊಳ್ಳುವ ಮೊದಲು ಅರ್ಹ ದಾನಿಗಳು ‘ರಕ್ತದಾನ ಮಾಡಿ ಪ್ಲೀಸ್’ ಎಂಬ ವಿನೂತನ ಜಾಗೃತಿ ಅಭಿಯಾನವನ್ನೂ ಆರಂಭಿಸಿದ್ದಾರೆ. ಏನಿದು ಅಡಚಣೆ? ಕೋವಿಡ್ ನಿರೋಧಕ ಲಸಿಕೆ …
Read More »ಬೆಳಗಾವಿ ಆಕ್ಸಿಜನ್ ಪ್ಲಾಂಟ್’ ಗೆ ಭೇಟಿ ನೀಡಿದ ಸತೀಶ್ ಜಾರಕಿಹೊಳಿ
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಕಾಕತಿಯಲ್ಲಿರುವ ಬೆಳಗಾವಿ ಆಕ್ಸಿಜನ್ ಪ್ಲಾಂಟ್’ ಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪ್ಲಾಂಟ್ ನಲ್ಲಿನ ಆಕ್ಸಿಜನ್ ಸಿಲಿಂಡರ್ ಗಳ ಸಂಗ್ರಹಣೆ ಹಾಗೂ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿ ಪ್ಲಾಂಟ್ ಗೆ ಆಕ್ಸಿಜನ್ ಸರಬರಾಜು ಮಾಡುವ ಮೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಹಾಯಕ ಔಷಧ ನಿಯಂತ್ರಕ ರಘುರಾಮ್ ಅವರೊಂದಿಗೆ ಚರ್ಚೆ ನಡೆಸಿದ ಅವರು ಕಾರ್ಖಾನೆಯಲ್ಲಿ ಅಗತ್ಯ ಪ್ರಮಾಣದ …
Read More »ಕರ್ಫ್ಯೂ ಹೊತ್ತಲ್ಲಿ ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಕಾರ್ಯಕರ್ತರು
ಶಿವಮೊಗ್ಗ: ವೀಕೆಂಡ್ ಕರ್ಫ್ಯೂ ನಿಂದಾಗಿ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಅನ್ನ ಮತ್ತು ನೀರಿಗಾಗಿ ನಿರ್ಗತಿಕರು, ಭಿಕ್ಷುಕರು ಪರದಾಟ ನಡೆಸಿದ್ದು, ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ. ವೀಕೆಂಡ್ ಕರ್ಫ್ಯೂ ಇರುವುದರಿಂದ ನಗರದಲ್ಲಿ ಎಲ್ಲಾ ಹೋಟೆಲ್ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದು ಇಂತಹ ಸಂದರ್ಭದಲ್ಲಿ ನಿರ್ಗತಿಕರಿಗೆ ತೊಂದರೆಯಾಗುವುದನ್ನು ಮನಗಂಡ ಯುವ ಕಾಂಗ್ರೆಸ್ ಕಾರ್ಯಕರ್ತರು ಊಟದ ಪ್ಯಾಕೆಟ್ ಮತ್ತು ನೀರಿನ ಬಾಟಲಿಯನ್ನು …
Read More »