Breaking News

Yearly Archives: 2021

ಕರ್ನಾಟಕದ ಹೊಸ ಮುಖ್ಯಮಂತ್ರಿ ಹೆಸರು ಘೋಷಿಸಲಿರುವ ಪ್ರಧಾನಿ ಮೋದಿ!

ಬೆಂಗಳೂರು, ಮೇ. 26: ವಯೋ ಸಹಜ ಕಾರಣದಿಂದ ಬಿ.ಎಸ್.ಯಡಿಯೂರಪ್ಪ ಅವರ ಸಿಎಂ ಪಟ್ಟದಿಂದ ಕೆಳಗೆ ಇಳಿಯಲಿದ್ದಾರೆ. ಅಂದುಕೊಂಡಂತೆ ಆದಲ್ಲಿ ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ‘ಯಂಗ್ ಸಿಎಂ’ ಹೆಸರನ್ನು ಪ್ರಧಾನಿ ಮೋದಿ ಅವರೇ ಘೊಷಣೆ ಮಾಡಲಿದ್ದಾರೆ. ಆ ಅಚ್ಚರಿಯ ಹೊಸ ಸಿಎಂ ಯಾರು ಅಂತ ಈವರೆಗೂ ಯಾರಿಗೂ ಗುಟ್ಟು ಬಿಟ್ಟು ಕೊಟ್ಟಿಲ್ಲ!     ಹೌದು. ಬಿಜೆಪಿ ವಲಯದಲ್ಲಿ ಬಹು ಚರ್ಚೆಗೆ ಕಾರಣವಾಗಿರುವ ವಿಚಾರವಿದು. ಬಿಜೆಪಿ ಪಕ್ಷದ ನೀತಿ ಸಂಹಿತೆ …

Read More »

ಯಡಿಯೂರಪ್ಪ ಸಿಎಂ ಪಟ್ಟ ಬಿಟ್ಟರೆ ಈ ಸಚಿವರೂ ಬದಲಾಗುತ್ತಾರೆ

ಬೆಂಗಳೂರು, ಮೇ. 26: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬದಲು ಮಾಡುವ ಜತೆಗೆ ರಾಜ್ಯದಲ್ಲಿ ಸಚಿವರ ಖಾತೆಗಳು ಬದಲಾಗಲಿವೆ. ಕೆಲವರಿಗೆ ಸಚಿವ ಸಂಪುಟ ಭಾಗ್ಯ ಸಿಕ್ಕಿದರೆ, ಇನ್ನೂ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳುವುದು ಗ್ಯಾರೆಂಟಿ ಎಂಬ ಮಹತ್ವದ ಸಂಗತಿಯೊಂದು ಬಿಜೆಪಿ ಪಾಳಯದಿಂದಲೇ ಹೊರಗೆ ಬಿದ್ದಿದೆ. ಆಪರೇಷನ್ ಕಮಲ ಮಾಡಿ ಪಕ್ಷಾಂತರಿಗಳಿಗೆ ಮಣೆ ಹಾಕಿ ಯಡಿಯೂರಪ್ಪ ಅವರು ಸಚಿವ ಸಂಪುಟ ರಚನೆ ಮಾಡಿದ್ದರು. ಮಹತ್ವದ ಖಾತೆಗಳನ್ನು ವಲಸೆ ನಾಯಕರಿಗೆ ಕೊಟ್ಟು ಮೂಲ …

Read More »

ನಾಯಕತ್ವ ಬದಲಾವಣೆ ವಿಚಾರ; ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ನಿರಾಣಿ; ಊಹಾಪೋಹ ಎಂದ ಬೊಮ್ಮಾಯಿ

ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಒಬ್ಬೊಬ್ಬರು ಸಚಿವರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಪ್ರತ್ಯೇಕ ಸಭೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚಟುವಟಿಕೆ ನಡೆಯುತ್ತಿರುವುದು ಶೇಕಡಾ ನೂರರಷ್ಟು ನಿಜ. ಕೆಲ ಸಚಿವರೇ ಪ್ರತ್ಯೇಕ ಸಭೆಯನ್ನೂ ನಡೆಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೊಸ ಬಾಂಬ್ …

Read More »

ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ಮಾರಾಟ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ

ಬೆಂಗಳೂರು: ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ಮಾರಾಟ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಜಿಂದಾಲ್ ಗೆ ಜಮೀನು ನೀಡಿದ ವಿಚಾರ ದೆಹಲಿವರೆಗೆ ತಲುಪಿದೆ. ಸಚಿವ ಆನಂದ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಜಿಂದಾಲ್ ಗೆ ಜಮೀನು ನೀಡಿದ ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸುವ ಸಾಧ್ಯತೆ ಇದೆ. ಇದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹಲವು ಶಾಸಕರು ಹೇಳಿದ್ದು, ಹೈಕಮಾಂಡ್ ಗೂ ದೂರು …

Read More »

ಐಸಿಎಐ ಸಿಎ ಪರೀಕ್ಷೆ ಮುಂದೂಡಿಕೆ

‌ನವದೆಹಲಿ: ಮೇ 21 ಮತ್ತು 22ರಂದು ನಡೆಯಬೇಕಿದ್ದ ಐಸಿಎಐ ಸಿಎ ಮಧ್ಯಂತರ ಮತ್ತು ಅಂತಿಮ ಪರೀಕ್ಷೆಗಳು ಜೂನ್‌ 5 ರಿಂದ ನಡೆಯಲಿವೆ ಎಂದು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ತಿಳಿಸಿದೆ. ಆದ್ರೆ, ಪರೀಕ್ಷೆಗಳ ಸಮಯ ಸೇರಿದಂತೆ ವಿವರವಾದ ಅಧಿಸೂಚನೆಯನ್ನು ಇನ್ನೂ ಘೋಷಿಸಲಾಗಿಲ್ಲ. ‘ಕೋವಿಡ್-19 ಸಾಂಕ್ರಾಮಿಕ ರೋಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಅವರ ಕಷ್ಟಗಳನ್ನು ತಗ್ಗಿಸಲು, ಅಂತಿಮ ಮತ್ತು ಮಧ್ಯಂತರ ಚಾರ್ಟರ್ಡ್ ಅಕೌಂಟೆಂಟ್‌ಸ್ ಪರೀಕ್ಷೆಗಳನ್ನ ಮುಂದೂಡಲು …

Read More »

ಮುಖ್ಯಮಂತ್ರಿ ಬದಲಾವಣೆ ವಿಚಾರ ಶೇ.100 ರಷ್ಟು ನಿಜ,: ಆರ್ ಅಶೋಕ್

ಬೆಂಗಳೂರು: ಕೊರೋನಾ ಅಬ್ಬರದ ನಡುವೆಯೇ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೆರಡು ವರ್ಷದ ಅಧಿಕಾರವದಿ ಪೂರೈಸಬೇಕಾಗಿದೆ. ಆದ್ರೆ, ಅವಧಿಗೂ ಮುನ್ನ ಅವರನ್ನ ಬದಲಿಸಿ ಬೇರೆಯವರಿಗೆ ಸಿಎಂ ಪಟ್ಟಕಟ್ಟುವ ಕಸರತ್ತು ನಡೆದಿವೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಶಾಸಕರು, ಸಚಿವರುಗಳು ದೆಹಲಿಗೆ ತೆರಳಿ ಹೈಕಮಾಂಡ್‌ ಜೊತೆ ಮಾತುಕತೆ ನಡೆಸಿದ್ದಾರೆ. ಇವೆಲ್ಲಾ ಬೆಳಗವಣಿಗೆಗಳು ನಡೆಯುತ್ತಿರುವುದು ನಿಜ ಎಂದು ಸ್ವತಃ ಕಂದಾಯ ಸಚಿವ ಆರ್. ಅಶೋಕ್ ಖಚಿತಪಡಿಸಿದ್ದಾರೆ. ಇದರೊಂದಿಗೆ …

Read More »

ಇಬ್ಬರು ಸಹೋದರರು ಸೇರಿಂತೆ ಬೆಳಗಾವಿ ಜಿಲ್ಲೆಯಲ್ಲಿ ಮೂವರು ಶಿಕ್ಷಕರು ಕೋವಿಡ್​ಗೆ ಪ್ರಾಣ ಕಳೆದುಕೊಂಡಿದ್ದಾರೆ.

ಚಿಕ್ಕೋಡಿ: ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಹೋದರರಿಬ್ಬರು ಮಹಾಮಾರಿ ಕೊರೊನಾಗೆ ಬಲಿಯಾಗಿರುವ ಘಟನೆ ತೋಪಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಗರ್ಲಜುಂಜಿಯ ಗ್ರಾಮದ ಪಿ.ಕೆ ಕುಂಬಾರ ಹಾಗೂ ಅವರ ತಮ್ಮ ನಾರಾಯಣ್ ಕೆ.ಕುಂಬಾರ ಮೃತರು. ಈ ಇಬ್ಬರು ಸಹೋದರರು ತೋಪಿನಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಲವು ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ತಮ್ಮನಾದ ನಾರಾಯಣ್ ಕೆ.ಕುಂಬಾರಗೆ ಕಳೆದ ಹತ್ತು ದಿನಗಳ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ‌ ಆತನಿಂದ …

Read More »

ನಾಯಕತ್ವ ಬದಲಾವಣೆ ವಿಚಾರ; ಆಪ್ತ ಸಚಿವರ ಬಳಿ ಬೇಸರ ವ್ಯಕ್ತಪಡಿಸಿದ ಸಿಎಂ ಬಿ ಎಸ್ ವೈ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ನಡುವೆಯೇ ಮತ್ತೆ ನಾಯಕತ್ವ ಬದಲಾವಣೆ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಪ್ತ ಸಚಿವರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.   ಈ ಹಿಂದೆ ಹಲವುಬಾರಿ ನಾಯಕತ್ವ ಬದಲಾವಣೆ ಬಗ್ಗೆ ಮಾತು ಕೇಳಿಬಂದರೂ ಅದಾವುದಕ್ಕೂ ಕಿವಿಗೊಡದ ಸಿಎಂ, ಈ ಬಾರಿ ಸ್ವತಃ ಬೇಸರ ವ್ಯಕ್ತಪಡಿಸಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸ್ಥಾನಕ್ಕೆ ಕೆಲ ನಾಯಕರ ಹೆಸರು ಕೇಳಿಬರುತ್ತಿದೆ. ಪ್ರತಿನಿತ್ಯ ನನ್ನ ಬಳಿ …

Read More »

ಗುಡ್ ನ್ಯೂಸ್: ಮಕ್ಕಳ ಶಾಲಾ ಶುಲ್ಕದಲ್ಲಿ ಶೇಕಡ 25 ರಷ್ಟು ವಿನಾಯಿತಿ

ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಕ್ಕಳ ಶಾಲಾ ಶುಲ್ಕ ಇಳಿಕೆ ಮಾಡಲು ಅನೇಕ ಶಾಲೆಗಳ ಆಡಳಿತ ಮಂಡಳಿಗಳು ತೀರ್ಮಾನ ಕೈಗೊಂಡಿವೆ. ಕಳೆದ ಬಾರಿ ರಾಜ್ಯ ಸರ್ಕಾರ ಸೂಚನೆ ನೀಡಿದ ನಂತರವೂ ಅನೇಕ ಶಾಲೆಗಳು ಶುಲ್ಕದಲ್ಲಿ ವಿನಾಯಿತಿ ನೀಡಿರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಶುಲ್ಕ ಪಾವತಿಸಿದ ಪೋಷಕರಿಗೆ ಶೇಕಡ 30 ರಷ್ಟು ವಿನಾಯಿತಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೀಡುವುದಾಗಿ ಹೇಳಲಾಗಿತ್ತು. ಆದರೆ, ಈಗ ವಿನಾಯಿತಿಯನ್ನು ನೀಡುತ್ತಿಲ್ಲ. ಈ ವರ್ಷ ಅನೇಕ ಶಾಲೆಗಳು ಪೋಷಕರು ಮತ್ತು …

Read More »

ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು ಸಾವು? ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಪಾಲಕರ ಆಕ್ರಂದನ

ದಾವಣಗೆರೆ: ಹೆರಿಗೆ ವೇಳೆ ದಾದಿಯ ಕೈಜಾರಿ ಬಿದ್ದು ನವಜಾತ ಶಿಶು‌ ಮೃತಪಟ್ಟಿದೆ ಎಂದು ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಮೃತ ಮಗುವಿನ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೇವರಹಳ್ಳಿ ನಿವಾಸಿ ಲಕ್ಷ್ಮೀ ಮತ್ತು ತಿಮ್ಮೇಶ್ ದಂಪತಿ ಮಗು ಮೃತಪಟ್ಟಿದೆ. ಲಕ್ಷ್ಮೀಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ವೈದರು ಇರಲಿಲ್ಲ. ದಾದಿ ಸಾಕಮ್ಮ ಎಂಬುವರೇ ಹೆರಿಗೆ ಮಾಡಿಸಿದ್ದರು. ಆದರೆ ಮಗು ಬದುಕಿಲ್ಲ. ಹೆರಿಗೆ ಮಾಡಿಸುವಾಗ ದಾದಿ ಕೈಯಿಂದ …

Read More »