Breaking News

Yearly Archives: 2021

ತಾವೇ ಕಟ್ಟಿಸಿದ್ದ ಕೃಷಿಹೊಂಡಕ್ಕೆ ಹಾರಿ 4 ಮಕ್ಕಳೊಂದಿಗೆ ಪ್ರಾಣಬಿಟ್ಟ ದಂಪತಿ!

ಯಾದಗಿರಿ: ಜೂ.28ರ ಬೆಳಗ್ಗೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆ ನಡೆದು ಎರಡು ದಿನ ಕಳೆದರೂ ಆ ಗ್ರಾಮದ ಪ್ರತಿ ಮನೆಯಲ್ಲೂ ವಿಧಿಯೇ ನೀನೆಷ್ಟು ಕ್ರೂರಿ? ತಂದೆ-ತಾಯಿ ಜತೆ ಆ ನಾಲ್ವರು ಪುಟ್ಟ ಮಕ್ಕಳನ್ನೂ ಬಲಿ ಪಡೆದು ಬಿಟ್ಟೆಯಾ? ಎಂದು ಮಮ್ಮಲ ಮರುಗುತ್ತಿದ್ದಾರೆ. ಅಂದು, ಒಂದೇ ಕುಟುಂಬದ ಆರು ಜನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೀಮರಾಯ ಸುರಪುರ (45), ಇವರ …

Read More »

ವರದಕ್ಷಿಣೆಗೆ ಮತ್ತೊಂದು ಬಲಿ: ಆರು ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದ ಯುವತಿ ಗಂಡನ ಮನೆಯಲ್ಲೇ ದುರಂತ ಸಾವು!

ದಾವಣಗೆರೆ: ಎರಡೂವರೆ ವರ್ಷದ ಹಿಂದೆ ಕಲಬುರಗಿಯಲ್ಲಿ ಸಿವಿಲ್​ ಇಂಜಿನಿಯರ್​ ಜತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ 21 ವರ್ಷದ ಯುವತಿ ರಚಿತಾ ಇದೇ ಜೂನ್​ 8ರಂದು ನೇಣಿಗೆ ಶರಣಾಗಿದ್ದಳು. ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ಜತೆ ಮದುವೆ ಆಗಿದ್ದ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳಗೊಂಡ್ಲು ಗ್ರಾಮದ ಐಶ್ವರ್ಯ ತುಮಕೂರಿನ ಬಾಡಿಗೆ ಮನೆಯಲ್ಲಿ ಅದೇ ದಿನ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಇಬ್ಬರೂ ಬಲಿಯಾಗಿದ್ದು ವರದಕ್ಷಿಣೆ ದಾಹಕ್ಕೆ. ಈ ಸಾವಿನ ಸರಣಿ …

Read More »

ದೂರು ನೀಡಲು ಠಾಣೆಗೆ ಬಂದವರ ಮೇಲೆ ಪಿಎಸ್‌ಐ ಹಲ್ಲೆ; ಎಸ್​ಪಿ ಮೊರೆ ಹೋದ ಕುಟುಂಬಸ್ಥರು

ಬಾಗಲಕೋಟೆ: ದೂರು ನೀಡಲು ಪೊಲೀಸ್ ಠಾಣೆಗೆ ಬಂದವರ ಮೇಲೆ ಪಿಎಸ್‌ಐ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪಿಎಸ್‌ಐ ರವಿ ಪವಾರ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೊದಲ ಪತ್ನಿಗೆ ಗೊತ್ತಾಗದಂತೆ ತುಳಸಿಗೇರಿ ಗ್ರಾಮದ ನಿವಾಸಿ ರಂಗಪ್ಪ ಎಂಬುವವನು ಎರಡನೇ ಮದುವೆಯಾಗಿದ್ದ. ರಂಗಪ್ಪನ ಮೊದಲ ಪತ್ನಿ ಲಕ್ಷ್ಮೀ ಸಹೋದರ ಸಚಿನ್ ಗಿಡ್ಡಿ, ಲಕ್ಷ್ಮೀ ಭಾವ ಶ್ರೀಕಾಂತ್ ರಂಗಪ್ಪನ ವಿರುದ್ಧ ದೂರು ನೀಡಲು ಠಾಣೆಗೆ …

Read More »

ತಂದೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ

ಆನೇಕಲ್ : ತಂದೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಸತೀಶ್​ ರೆಡ್ಡಿ (45), ಮಕ್ಕಳಾದ ಕೀರ್ತಿ(19) , ಮೊನಿಷಾ(17) ಮೃತ ದುರ್ದೈವಿಗಳು. ಸತೀಶ್ ರೆಡ್ಡಿಯವರ ಪತ್ನಿ ಆಶಾ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಚಿಕಿತ್ಸೆಯ ಬಳಿಕವೂ ಅಷ್ಟಾಗಿ ಚೇತರಿಸಿಕೊಳ್ಳದ ಆಶಾ ಮೇ.6 ರಂದು ಸಾವನ್ನಪ್ಪುತ್ತಾರೆ. ಅಮ್ಮ ಚೇತರಿಸಿಕೊಂಡು ಮತ್ತೆ ಮನೆಗೆ ಬರುತ್ತಾರೆ ಎಂದುಕೊಂಡಿದ್ದ …

Read More »

ರಮೇಶ ಜಾರಕಿಹೊಳಿ ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ : ಭೈರತಿ ಬಸವರಾಜ್

ಹುಬ್ಬಳ್ಳಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ. ಬೇಸರ ಹಾಗೂ ಉದ್ವೇಗದಿಂದ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದರು. ಅವರ ಸಹೋದರರೆಲ್ಲಾ ಸಮಾಧಾನ ಮಾಡಿದ್ದಾರೆ. ಯಾವುದೋ ಒಂದು ಪ್ರಕರಣವಿದೆ. ಅದು ಇತ್ಯರ್ಥವಾದ ನಂತರ ಸಚಿವರಾಗುತ್ತಾರೆ. ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅವರ ಜೊತೆಗೆ ಇದ್ದೇವೆ. ಇಂದು ನಿನ್ನೆಯ ಸ್ನೇಹವಲ್ಲ. ಯುವ ಕಾಂಗ್ರೆಸ್ ಹಂತದಿಂದಲೇ …

Read More »

ಕರ್ನಾಟಕದ ರಾಜಕೀಯ ಹುಲಿ ಸಿದ್ದರಾಮಯ್ಯ : ಅಭಿಮಾನಿಗಳ ಘೋಷಣೆ

ಮೈಸೂರು : ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು..? ಅನ್ನೋ ಚರ್ಚೆ ಆರಂಭವಾಗಿದ್ದು, ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಈ ಮಧ್ಯೆ ಸಿಎಂ ರೇಸ್ ನಲ್ಲಿರುವ ನಾಯಕರುಗಳ ಅಭಿಮಾನಿಗಳು ತರಹೇವಾರಿ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಮೈಸೂರಿನಲ್ಲಿ ನಡೆದಿರುವ ಘಟನೆ. ಹೌದು..! ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ಎಂದು ಸಿದ್ದು ಅಭಿಮಾನಿಗಳು ಈಗಾಗಲೇ ಫಿಕ್ಸ್ ಆಗಿದ್ದು, ಎಲ್ಲೆಲ್ಲೂ ಅದನ್ನೇ ಹೇಳುತ್ತಿದ್ದಾರೆ. ಈ ಮಧ್ಯೆ ಇಂದು ಸಿದ್ದರಾಮಯ್ಯ …

Read More »

ಹಗೇದಾಳ ಗುಟಗುದ್ದಿ ರಾಮದ ಯುವಕರಿಂದ ರಾಹುಲ್ ಜಾರಕಿಹೊಳಿಗೆ ಸತ್ಕಾರ

ಹಗೇದಾಳ ಗ್ರಾಮದ ಯುವಕರಿಂದ ರಾಹುಲ್ ಜಾರಕಿಹೊಳಿಗೆ ಸತ್ಕಾರ ಹುಕ್ಕೇರಿ : ತಾಲ್ಲೂಕಿನ ಹಗೇದಾಳ ಗ್ರಾಮದ ಯುವಕರು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಬುಧವಾರ ಸತ್ಕರಿಸಿ ಗೌರವಿಸಿದರು. ಗುಟಗುದ್ದಿ ಗ್ರಾಮದಲ್ಲಿ ಇಂದು ನಡೆಯಲಿರುವ ರಾಹುಲ್ ಜಾರಕಿಹೊಳಿ ಯುವಕ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ದಾರಿ ಮಧ್ಯದಲ್ಲಿ ಹಗೇದಾಳ ಗ್ರಾಮದ ಯುವಕರು, ರಾಹುಲ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.   ಸನ್ಮಾನ ಸ್ವೀಕರಿಸಿ ಯುವ ನಾಯಕ ರಾಹುಲ್ ಜಾರಕಿಹೊಳಿ …

Read More »

ಆ ಲೆವಲ್ ಗೆ ಬಿಲ್ಡಪ್ ಕೊಡಲು ಅವರೇನು ಪ್ರಧಾನ ಮಂತ್ರಿನಾ.? ಅರುಣ್ ಸಿಂಗ್ ರಾಜ್ಯ ಭೇಟಿಗೆ ಯತ್ನಾಳ್ ವ್ಯಂಗ್ಯ

ಬೆಂಗಳೂರು: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದರ ಬಗ್ಗೆ ಲೇವಡಿ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರೇನು ಪ್ರಧಾನಮಂತ್ರಿನಾ? ಅಷ್ಟೊಂದು ಬಿಲ್ಡಪ್ ಕೊಡಲು? ಅವರು ಬರುವಾಗಲೇ ಗೊತ್ತಿತ್ತು ಏನ್ ಹೇಳ್ತಾರೆ ಎಂದು ಅದಕ್ಕೆ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಯತ್ನಾಳ್, ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುವಾಗಲೇ ಗೊತ್ತಿತ್ತು, ನಾಯಕತ್ವ ಬದಲಾವಣೆ ವಿಚಾರವಾಗಿ ಅವರು ಏನು ಹೇಳುತ್ತಾರೆ ಎಂದು. ಗೊತ್ತಿದ್ದೇ ಅವರನ್ನು ಭೇಟಿಯಾಗಿಲ್ಲ. …

Read More »

ಬಿಎಸ್ ವೈ ವಿರುದ್ದ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ : ಸಿ ಪಿ ಯೋಗೇಶ್ವರ್

ಕೊಪ್ಪಳ: ಸಿಎಂ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ನನ್ನನ್ನು ವಿಲನ್ ಮಾಡಬೇಡಿ, ಅವರ ವಿರುದ್ದ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಅವರು ಹೇಳಿದರು. ಕೊಪ್ಪಳದ ಅಂಜನಾದ್ರಿ ಬೆಟ್ಟದ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಬಿಎಸ್ ವೈ ಅವರು ನಮ್ಮ ನಾಯಕರು. ಅವರನ್ನು ನಾವು ಟಾರ್ಗೇಟ್ ಮಾಡಲ್ಲ. ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವ ಕೆಲಸವನ್ನೂ ನಾವು ಮಾಡುತ್ತಿಲ್ಲ. ನಮ್ಮ ದೆಹಲಿ ಭೇಟಿ …

Read More »

ನಟ ಸಂಚಾರಿ ವಿಜಯ್‌ಗೆ ಅಮೆರಿಕ ಫ್ರಾಂಕ್ಲಿನ್‌ ಥಿಯೇಟರ್‌ ನಿಂದ ವಿಭಿನ್ನ ಗೌರವ ಸಲ್ಲಿಕೆ

ವಾಷಿಂಗ್ಟನ್: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರಿಗೆ ಅಮೆರಿಕಾದ ಫ್ರಾಂಕ್ಲಿನ್ ಥಿಯೇಟರ್ ವತಿಯಿಂದ ವಿಭಿನ್ನವಾಗಿ ಗೌರವ ಸಲ್ಲಿಸಲಾಗಿದೆ. ನಾನು ಅವನಲ್ಲ ಅವಳು, ಹರಿವು, ನಾತಿಚರಾಮಿ ಖ್ಯಾತಿಯ ನಟ ಸಂಚಾರಿ ವಿಜಯ್ ಅವರು ಜೂನ್ 15ರಂದು ಕೊನೆಯುಸಿರೆಳೆದಿದ್ದರು. ಅವರಿಗೆ ಗೌರವ ಸಲ್ಲಿಸಲು ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ ವತಿಯಿಂದ ಒಂದು ಸಂದೇಶವನ್ನು ಬಿತ್ತರಿಸಲಾಗಿದೆ. ‘Always in our Heart, Sanchari Vijay, Gone Yet Not Forgotten’ ಇದು …

Read More »