Breaking News

Yearly Archives: 2021

ಕುರಿ ಸಾಕಾಣಿಕೆ ಆರಂಭಿಸಿದ ಮಾಜಿ ಸಿಎಂ ಹೆಚ್​ಡಿಕೆ

ರಾಮನಗರ: ಜಿಲ್ಲೆಯ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಕೃಷಿ ಭೂಮಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ತಮ್ಮ ಜಮೀನಿನಲ್ಲಿ ಇಸ್ರೇಲ್ ಮಾದರಿ ಕುರಿ ಸಾಕಾಣಿಕೆ ಆರಂಭ ಮಾಡಿದ್ದು, ಆ ಮೂಲಕ ಪ್ರಗತಿ ಪರ ರೈನತನಾಗಿ ಇತರರಿಗೂ ಮಾದರಿಯಾಗುವ ಕಾರ್ಯವನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಕೃಷಿ ಚಟುವಟಿಕೆಗಳಿಗಾಗಿ ಹೊಸ ಟ್ರ್ಯಾಕ್ಟರ್​ ಖರೀದಿಸಿದ್ದ ಕುಮಾರಸ್ವಾಮಿ ಅವರು, ಸದ್ಯ ಬಿಡದಿಯ ತೋಟದಲ್ಲಿ ಕುರಿ ಸಾಕಾಣಿಕೆಗೆ ಅತ್ಯಾಧುನಿಕವಾಗಿ ಇಸ್ರೇಲ್​ ಮಾದರಿಯಲ್ಲಿ ಕುರಿ ಸಾಕಾಣಿಕೆ ಆರಂಭಿಸಿದ್ದಾರೆ. ಈ ಕುರಿತ …

Read More »

“ಸಿದ್ದರಾಮಯ್ಯ ಬಿಜೆಪಿಗೆ ಬೇಕಾದರೆ ಬರಲಿ” -ಸಚಿವ ಜೆ.ಸಿ ಮಾಧುಸ್ವಾಮಿ

ತುಮಕೂರು: ‘ಮಾಜಿ ಸಿಎಂ ಸಿದ್ದರಾಮಯ್ಯನವರೇ ಬೇಕಾದರೆ ಬಿಜೆಪಿಗೆ ಬರಲಿ’ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ ಮಾಧುಸ್ವಾಮಿ ಆಹ್ವಾನ ನೀಡಿದ್ದಾರೆ. ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​​ ಯಾರು ಬೇಕಾದರೂ ಕಾಂಗ್ರೆಸ್​​ಗೆ ಬರಬಹುದು, ಬಿಜೆಪಿಗೆ ಹೋದ 17 ಮಂದಿಗೂ ಸ್ವಾಗತ ಎಂದಿದ್ದರು. ಈಗ ಡಿ.ಕೆ ಶಿವಕುಮಾರ್​​ ಹೇಳಿಕೆಗೆ ಹಲವು ಬಿಜೆಪಿ ನಾಯಕರು ಪ್ರತಿಕ್ರಿಯಿಸುತ್ತಿದ್ದಾರೆ. ಸದ್ಯ ಸಚಿವ ಜೆ.ಸಿ ಮಾಧುಸ್ವಾಮಿ ಕೂಡ ಡಿಕೆಶಿಗೆ ಟಾಂಗ್​​ ನೀಡಿದ್ದಾರೆ. ಈ ಸಂಬಂಧ ನಗರದಲ್ಲಿ …

Read More »

ನನಗೂ ಸಿಎಂ ಆಗಬೇಕೆಂಬ ಆಸೆ ಇದೆ – ಸಚಿವ ಉಮೇಶ್ ಕತ್ತಿ

ಬಾಗಲಕೋಟೆ: ನಾನು ಸಿಎಂ ಸ್ಥಾನದ ಆಕಾಂಕ್ಷಿಯಾಗಿರೋದು ನಿಜ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಸಚಿವ ಉಮೇಶ್ ಕತ್ತಿ, ನಾನು ಆರು ಬಾರಿ ಶಾಸಕನಾಗಿದ್ದೇನೆ. ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ಸಿಎಂ ಆಗಲು ಬೇಕಾದ ಅರ್ಹತೆ ಎಲ್ಲವೂ ನನಗಿದೆ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆಯಿಲ್ಲದ ಕಾರಣ ಸಿಎಂ ಬದಲಾವಣೆ ಆದಾಗ ನೋಡೋಣ ಎಂದರು. ರಾಜ್ಯ ಸಿಎಂ ಬದಲಾವಣೆಯಾಗಲೀ, ಮುಂದಿನ ಚುನಾವಣೆ ಬರಲಿ. …

Read More »

ಸಂಕಷ್ಟದಲ್ಲಿ ಅಮಿತಾಬ್ ಪ್ರೀತಿಯ ಬಂಗಲೆ: ನೆಲಸಮ ಮಾಡಲು ಮುಂದಾದ ಮುಂಬೈ ಮಹಾನಗರ ಪಾಲಿಕೆ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪ್ರೀತಿಯ ಪ್ರತೀಕ್ಷ ಬಂಗಲೆಯ ಒಂದು ಭಾಗವನ್ನು ಕೆಡವಲು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ನಿರ್ಧರಿಸಿದೆ ಎಂದು ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಮಿತಾಬ್ ಮೊದಲು ಖರೀದಿಸಿದ ಬಂಗಲೆ ಇದಾಗಿದ್ದು, ಮುಂಬೈನ ಜುಹು ಪ್ರದೇಶದಲ್ಲಿದೆ. ರಸ್ತೆ ಅಗಲೀಕರಣಕ್ಕಾಗಿ ಅಮಿತಾಬ್ ಬಚ್ಚನ್ ಬಂಗಲೆಯ ಒಂದು ಭಾಗ ನೆಲಸಮವಾಗಲಿದೆ. ಸಂತಸ ಜ್ಞಾನೇಶ್ವರ ಮಾರ್ಗ್ ರಸ್ತೆಯಲ್ಲಿ ಅಮಿತಾಬ್ ಮನೆ ಇದೆ. ಈ ರಸ್ತೆಯನ್ನು ಅಗಲೀಕರಣ ಮಾಡಲು ಮುಂಬೈ …

Read More »

ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ: ಯತ್ನಾಳ್ ಟೀಕೆ

ಮೈಸೂರು: ಲವ್ ಜಿಹಾದ್‌ ತಡೆಯಲು ಮಠಾಧೀಶರು ಮುಂದಾಗಬೇಕು. ಕೆಟ್ಟವರಿಗೆ ಬುದ್ದಿ ಹೇಳುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಬೀದಿಗೆ ಬರುತ್ತೇವೆ ಎನ್ನುವುದು ಸರಿಯಲ್ಲ. ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮಾಡಿದರು. ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ‌ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. …

Read More »

ಡೀಲ್ ನಡೆಯುವುದು ಕಾವೇರಿ ನಿವಾಸದ ಹಿಂಭಾಗದಲ್ಲಿ: ವಿಜಯೇಂದ್ರ ವಿರುದ್ದ ಗುಡುಗಿದ ಯತ್ನಾಳ್

ಮೈಸೂರು: ಬಿ.ವೈ.ವಿಜಯೇಂದ್ರರ ಎಲ್ಲಾ ಡೀಲ್‌ಗಳು ನಡೆಯುದು ಸಿಎಂ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್‌ ಗೌಸ್‌ ನಲ್ಲಿ. ಸಿಸಿಬಿ ಪೊಲೀಸರು ಅಲ್ಲೂ ದಾಳಿ ನಡೆಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಪುತ್ರ ವಿಜಯೇಂದ್ರ ವಿರುದ್ದ‌ ಮತ್ತೆ ವಾಗ್ದಾಳಿ ನಡೆಸಿದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಯತ್ನಾಳ್‌ಗೆ ಮಾಹಿತಿ ನೀಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೂ ಪ್ರತಿಕ್ರಿಯೆ ನೀಡಿದರು. ಒಂದು ವೇಳೆ ಇದು …

Read More »

ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಮುಕ್ತಾಯ; ಅಂತಿಮ ತನಿಖಾ ವರದಿ ಸಿದ್ಧ

ಬೆಂಗಳೂರು: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ತನಿಖೆ ಮುಕ್ತಾಯವಾಗಿದ್ದು, ಅಂತಿಮ ತನಿಖಾ ವರದಿ ಸಿದ್ಧವಿದೆ ಎಂದು ಹೈಕೋರ್ಟ್​ಗೆ ಎಜಿ ಪ್ರಭುಲಿಂಗ್ ನಾವದಗಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿಯಿಂದ ಹೈಕೋರ್ಟ್​ಗೆ ಮೆಮೋ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಜುಲೈ 14ರವರೆಗೆ ಅಂತಿಮ ವರದಿ ಸಲ್ಲಿಸದಂತೆ ಎಸ್‌ಐಟಿ ಪೊಲೀಸರಿಗೆ ಸೂಚನೆ ನೀಡಿದೆ. ಯುವತಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ದಾಖಲೆಗಳ ಇಂಗ್ಲಿಷ್ ಅನುವಾದ …

Read More »

ವಿಧಾನಸಭೆ ಸ್ಪೀಕರ್​​ಗೆ ನಿಂದನೆ: ಮಹಾರಾಷ್ಟ್ರದ 12 ಬಿಜೆಪಿ ಶಾಸಕರು ಅಮಾನತು

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಕಲಾಪದ ವೇಳೆ ಸ್ಪೀಕರ್​​ನ್ನು ನಿಂದನೆ ಮಾಡಿದ ಆರೋಪದಲ್ಲಿ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದವರೆಗೆ ಸದನವು ಅಮಾನತುಗೊಳಿಸಿದೆ. ವಿಧಾನಸಭಾ ಕಲಾಪದ ವೇಳೆ ಹಾಜರಿದ್ದ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್, ಇದು “ಸುಳ್ಳು ಆರೋಪಗಳು” ಎಂದು ಹೇಳಿದ್ದಾರೆ. “ಇವು ಸುಳ್ಳು ಆರೋಪಗಳು. ಇದು ಕಟ್ಟು ಕತೆ. ಬಿಜೆಪಿಯಿಂದ ಯಾರೂ ಅವಹೇಳನ ಮಾಡಿಲ್ಲ” ಎಂದು ಫಡ್ನವೀಸ್ ಮಾಧ್ಯಮಕ್ಕೆ ತಿಳಿಸಿದರು. “ಒಬಿಸಿ (ಇತರ ಹಿಂದುಳಿದ ಜಾತಿ) ಮೀಸಲಾತಿಗಾಗಿ, …

Read More »

ಹೆಣ್ಣು ಮಕ್ಕಳನ್ನು ಅಪಮಾನಿಸಿ ಮಾತನಾಡುವುದೇ ಅವರ ಸಂಸ್ಕೃತಿ – ಸಂಸ್ಕಾರ : ಎಚ್ ಡಿಕೆ ಟಾಂಗ್ ನೀಡಿದ ಸಂಸದೆ ಸುಮಲತಾ

ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಅದು ಅವರ ಸಂಸ್ಕೃತಿ – ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ. ಮಾಜಿ ಸಿಎಂ ಆಗಿ, ಇಂತಹ ಮಾತುಗಳನ್ನು ಆಡುವುದು ಶೋಭೆತರಲ್ಲ ಎಂದು ಕುಮಾರಸ್ವಾಮಿ ಗೆ ಸಂಸದೆ ಸುಮಲತಾ ಟಾಂಗ್ ನೀಡಿದರು.‌ ವಿಧಾನ‌ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ಕುಮಾರಸ್ವಾಮಿ ಸಂಸ್ಕೃತಿ, ವ್ಯಕ್ತಿತ್ವನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ. ಕೆ.ಆರ್.ಎಸ್. ಜಲಾಶಯ ರಕ್ಷಣೆ ನನ್ನ ಉದ್ದೇಶ. ನನ್ನ ಮಾಹಿತಿಯಂತೆ ಜಲಾಶಯ …

Read More »

ವಿದ್ಯುತ್ ಮಗ್ಗ ನೇಕಾರರಿಗೆ 3 ಸಾವಿರ ಲಾಕ್ ಡೌನ್ ವಿಶೇಷ ದನ ಸಹಾಯಕ್ಕಾಗಿ ಅರ್ಜಿ ಅಹ್ವಾನ

ಬಾಗಲಕೋಟೆ : ಕೋವಿಡ್-19 ರ 2ನೇ ಅಲೆಯಿಂದ ಲಾಕ್‍ಡೌನ್ ಘೋಷಣೆ ಮಾಡಿದ್ದು, ಇದರಿಂದ ಬಾದಿತವಾದ ವಿದ್ಯುತ್ ಮಗ್ಗ ಘಟಕಗಳಲ್ಲಿನ ನೇಕಾರರು ಹಾಗೂ ಮಗ್ಗಪೂರ್ವ ಚಟುವಟಿಕೆಗಳಾದ ಟ್ವಿಸ್ಟಿಂಗ್, ವೈಂಡಿಂಗ್, ಯಾರ್ನಡೈಯಿಂಗ್, ವಾರ್ಪಿಂಗ್, ಝರಿ ವೈಂಡಿಂಗ್ & ವಾರ್ಪಿಂಗ್, ವಾರ್ಪ ನಾಟಿಂಗ್ ಹಾಗೂ ಸೈಜಿಂಗ್ ಕೆಲಸಗಾರರಿಗೆ ತಲಾ 3 ಸಾವಿರ ರೂ.ಗಳಂತೆ ಪರಿಹಾರಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ‘SSLC ವಿದ್ಯಾರ್ಥಿ’ಗಳೇ ಗಮನಿಸಿ : ಶಿಕ್ಷಣ ಇಲಾಖೆಯ ‘ಈ ಆಪ್’ ಹಾಕೊಳ್ಳಿ, ನಿಮ್ಮ ‘ಪರೀಕ್ಷಾ ಸಿದ್ಧತೆ’ಗೆ …

Read More »