Breaking News

Yearly Archives: 2021

ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲು ಆದೇಶ: B.S.Y.

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ ಅವರು ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ತಕ್ಷಣ ಹಿಂದಿನ ಬಾಕಿಯೂ ಸೇರಿ ಶೇ.11 ತುಟ್ಟಿ ಭತ್ಯೆಯನ್ನು ಜುಲೈ 1ರಿಂದ ಅನ್ವಯವಾಗುವಂತೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ರಾಜ್ಯ ಸರ್ಕಾರದ ಈ ಆದೇಶದಿಂದ 6 ಲಕ್ಷ …

Read More »

ವಿಶೇಷ ಜಿಲ್ಲಾಧಿಕಾರಿ: ಐಎಎಸ್‌ ಅಧಿಕಾರಿ ನೇಮಕಕ್ಕೆ ಸೂಚನೆ

 ಕೆಎಎಸ್ ಅಧಿಕಾರಿಗಳಾದ ಎಂ. ಕೆ.ಜಗದೀಶ್ ಮತ್ತು ಬಸವರಾಜ್ ಅವರನ್ನು ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.   ನಗರದ ವಕೀಲ ವಾಸುದೇವ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ, ‘ಐಎಎಸ್ ಅಧಿಕಾರಿಗಳನ್ನೇ ಈ ಹುದ್ದೆಗಳಿಗೆ ನೇಮಕ ಮಾಡಬೇಕು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿದೆ. ‘ಕರ್ನಾಟಕ ಭೂಕಂದಾಯ …

Read More »

ಕೊಡವ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ: ಅಧ್ಯಯನದ ಮಾನದಂಡ ಪರಿಶೀಲಿಸಲು ಹೈಕೋರ್ಟ್‌ ಸೂಚನೆ

ಬೆಂಗಳೂರು: ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಡಗದ ಸ್ಥಾನಮಾನ ಕಲ್ಪಿಸುವ ವಿಚಾರವಾಗಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಲ್ಲಿಸಿರುವ ಅಧ್ಯಯನ ವರದಿಯನ್ನು ಪರಿಗಣಿಸುವ ಮೊದಲು ಸೂಕ್ತ ಮಾನದಂಡಗಳನ್ನು ಅನುಸರಿಸಿ ಅಧ್ಯಯನ ನಡೆಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಅಧ್ಯಯನದ ಸಂದರ್ಭದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನೀಡಿರುವ ಪ್ರಶ್ನಾವಳಿ ಮತ್ತು ಅರ್ಜಿ ನಮೂನೆಯನ್ನು ರದ್ದಪಡಿಸುವಂತೆ ಕೋರಿ ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ …

Read More »

ನಟಿ ಶಿಲ್ಪಾ ಶೆಟ್ಟಿ ಪತಿ, ರಾಜ್ ಕುಂದ್ರ ಪೋರ್ನ್ ಜಗತ್ತಿನ ಮಾಸ್ಟರ್ ಮೈಂಡ್; ಪೂನಂ

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಬಂಧನದ ಬಳಿಕ ಅಡಲ್ಟ್ ಸ್ಟಾರ್ ಪೂನಂ ಪಾಂಡೆ ಹೇಳಿಕೆ ವೈರಲ್ ಆಗುತ್ತಿದೆ. 2019ರಲ್ಲಿ ರಾಜ್ ಕುಂದ್ರ ವಿರುದ್ಧ ದೂರು ದಾಖಲಿಸಿದ್ದ ಪೂನಂ, ರಾಜ್ ಕುಂದ್ರರನ್ನು ‘ಬ್ಲೂ ಫಿಲ್ಮ್ ದಂಧೆಯ ಮಾಸ್ಟರ್ ಮೈಂಡ್’ ಎಂದು ಆರೋಪಿಸಿದ್ದರು ಎನ್ನುವ ಸುದ್ದಿ ಈಗ ಬಾಲಿವುಡ್ ನಲ್ಲಿ ವೈರಲ್ ಆಗುತ್ತಿದೆ. ಕಳೆದ ಒಂದು ವರ್ಷದಿಂದ ಬ್ಲೂ ಫಿಲ್ಮ್ ದಂಧೆಯ ಹಿಂದೆ ಬಿದ್ದಿದ್ದ ಮುಂಬೈ …

Read More »

‘ಮರಳಿ ಬಂದಿದೆ ಸುವರ್ಣ ಯುಗ’: ಮಣಿರತ್ನಂ ಚಿತ್ರದ ಬಗ್ಗೆ ಐಶ್ವರ್ಯ ರೈ ಸಂತಸ

ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಪೊನ್ನಿಯನ್ ಸೆಲ್ವನ್’ ಸಿನಿಮಾದ ಪೋಸ್ಟರ್‌ನ್ನು ಮೊದಲ ಬಾರಿಗೆ ನಟಿ ಐಶ್ವರ್ಯ ರೈ ಬಚ್ಚನ್ ತಮ್ಮ ಇನ್ಸ್ಟಾಗ್ರಾಂ ಹಂಚಿಕೊಂಡಿದ್ದಾರೆ. ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯ ನಟಿಸುತ್ತಿದ್ದಾರೆ ಎಂದು ತಿಳಿದಿತ್ತು. ಆದರೆ, ಇದುವರೆಗೂ ಸಿನಿಮಾಗೆ ಸಂಬಂಧಪಟ್ಟ ಯಾವ ಪೋಸ್ಟರ್ ಸಹ ನಟಿ ಶೇರ್ ಮಾಡಿರಲಿಲ್ಲ. ಇದೀಗ, ಮೊದಲ ಪೋಸ್ಟರ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ”ಜೀವನದಲ್ಲಿ ಸುವರ್ಣ ಯುಗ ಬರುತ್ತದೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ. ಕೊರೊನಾ ಲಾಕ್‌ಡೌನ್ ಕಾರಣದಿಂದ ಬ್ರೇಕ್ …

Read More »

ಬೆತ್ತಲೆಯಾಗಿ ಆಡಿಷನ್ ನೀಡಲು ಕೇಳಿದ್ದ: ರಾಜ್ ಕುಂದ್ರಾ ವಿರುದ್ಧ ಬಾಂಬ್ ಸಿಡಿಸಿದ ನಟಿ

ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಪ್ರದರ್ಶನ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನವಾಗಿದ್ದು, ಪ್ರಕರಣ ಸಂಬಂಧ ಹಲವು ಕುತೂಹಲಕಾರಿ ಅಂಶಗಳು ಹೊರಗೆ ಬರುತ್ತಿವೆ. ನಟಿ ಸಾಗರಿಕಾ ಸುಮನ್ ಮಾತನಾಡಿ, ”ರಾಜ್ ಕುಂದ್ರಾ, ಬೆತ್ತಲೆಯಾಗಿ ಆಡಿಷನ್ ನೀಡುವಂತೆ ಕೇಳಿದ್ದ” ಎಂದಿದ್ದಾರೆ. ”2020ರ ಆಗಸ್ಟ್‌ನಲ್ಲಿ ನನಗೆ ವೆಬ್ ಸರಣಿಯೊಂದರಲ್ಲಿ ನಟಿಸಲು ಅವಕಾಶ ಬಂತು. ರಾಜ್ ಕುಂದ್ರಾ ಸಂಸ್ಥೆಯ ವ್ಯವಸ್ಥಾಪಕ ಉಮೇಶ್ ಕಾಮತ್ ನನಗೆ ಕರೆ ಮಾಡಿದರು. ನನಗೆ ವಿಡಿಯೋ ಕಾಲ್‌ನಲ್ಲಿ …

Read More »

ಐವರು ನಿರ್ದೇಶಕರ ಒಂದು ಸಿನಿಮಾ ‘ಆದ್ದರಿಂದ’

ಒಟಿಟಿ ಸಮಯದಲ್ಲಿ ಅಂಥಾಲಜಿ ಸಿನಿಮಾಗಳು ಜನಪ್ರಿಯಗೊಳ್ಳುತ್ತಿವೆ. ಯಾವುದಾದರೂ ಒಂದು ವಿಷಯ ಆಧರಿಸಿ ಕೆಲವು ನಿರ್ದೇಶಕರು ಸೇರಿ ಅರ್ಧ ಗಂಟೆಯ ಸಿನಿಮಾ ಮಾಡುತ್ತಾರೆ. ಅದನ್ನು ಒಂದರಹಿಂದೊಂದರಂತೆ ಜೋಡಿಸಿ 2 ಅಥವಾ ಮೂರು ಗಂಟೆಯ ಸಿನಿಮಾ ರೀತಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕನ್ನಡದಲ್ಲಿಯೂ ಈ ರೀತಿಯ ಪ್ರಯತ್ನಗಳು ಈಗಾಗಲೇ ಆಗಿವೆ. ಇದೀಗ ಇಂಥಹುದೇ ಮತ್ತೊಂದು ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಅದುವೇ ‘ಆದ್ದರಿಂದ’. ಐದು ಜನ ಕನ್ನಡದ ಪ್ರತಿಭಾವಂತ ಸಿನಿಮಾ ನಿರ್ದೇಶಕರು ಒಟ್ಟಾಗಿ ಸಿನಿಮಾ ನಿರ್ದೇಶಕನ …

Read More »

ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ ‘ಭಜರಂಗಿ-2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ ‘ಭಜರಂಗಿ-2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2ನೇ ಲಾಕ್ ಡೌನ್ ಬಳಿಕ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಮೊದಲ ಸಿನಿಮಾ ತಂಡ ಇದಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಇದೀಗ ಹ್ಯಾಟ್ರಿಕ್ ಹೀರೋ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದ್ದು, ಶಿವಣ್ಣ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ-2’ ಸಿನಿಮಾ ‘ಸೆಪ್ಟಂಬರ್ 10’ರಂದು ಬಿಡುಗಡೆಯಾಗಲಿದೆ …

Read More »

ಪೆಟ್ರೋಲ್ ಬೆಲೆ ಏರಿಕೆ; ಸಂಸತ್​​ಗೆ ಸೈಕಲ್​​​ ತುಳಿದು ಬಂದು ಡಿ.ಕೆ ಸುರೇಶ್​​ ಪ್ರತಿಭಟನೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಇಡೀ ದೇಶಾದ್ಯಂತ ಸೈಕಲ್ ಜಾಥಾ ನಡೆಸುತ್ತಿದೆ. ಇದರ ಭಾಗವಾಗಿ ಇಂದು ಮುಂಗಾರು ಅಧಿವೇಶನ ಸಲುವಾಗಿ ದೆಹಲಿಗೆ ತೆರಳಿರುವ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್​​ ಸೈಕಲ್ ಜಾಥಾ ನಡೆಸಿದರು. ಕಾವೇರಿ ಅಪಾರ್ಟ್​ಮೆಂಟ್​​ನಲ್ಲಿರುವ ನಿವಾಸದಿಂದ ಸಂಸತ್​​ ಭವನದವರೆಗೂ ಸಂಸದ ಡಿ.ಕೆ ಸುರೇಶ್​​​ ನಡೆಸಿದ ಸೈಕಲ್​​​ ಜಾಥದಲ್ಲಿ ಹಲವು ಕಾಂಗ್ರೆಸ್​ ಮುಖಂಡರು ಭಾಗಿಯಾಗಿದ್ದರು. ಈ ಸೈಕಲ್​​​ ಜಾಥದಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ …

Read More »

ಧುಮುಕುತ್ತಿರುವ ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಯುವಕರ ಹುಚ್ಚು ಸಾಹಸ

ಕಲಬುರಗಿ: ಮುಂಗಾರಿನ ಅಬ್ಬರ ಮಳೆಯಿಂದ ಭೋರ್ಗರೆಯುತ್ತಿದ್ದ ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಣೆ ಮಾಡಿರುವ ಘಟನೆ ಚಿಂಚೋಳಿ ತಾಲೂಕಿನ ಎತ್ತಿಪೋತ ಜಲಪಾತ ಬಳಿ ನಡೆದಿದೆ. ಸತತವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭರ್ಜರಿ ಮಳೆಗೆ ಎತ್ತಿಪೋತ ಜಲಪಾತ ಧುಮುಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿದೆ. ಹೀಗೆ ಮೈದುಂಬಿ ಹರಿಯುತ್ತಿರುವ ಜಲಪಾತ ನೋಡಲು ತೆರಳಿದ್ದ ಯುವಕರಿಬ್ಬರು ಸೆಲ್ಫಿ ತೆಗೆಯುವ ದುಸ್ಸಾಹಸಕ್ಕೆ ಮುಂದಾಗಿ ನೀರಿಗಿಳಿದಿದ್ದರು. ಆದರೆ ಜಲಪಾತದ ರಭಸಕ್ಕೆ …

Read More »