ನವದೆಹಲಿ; ಹೊಸ ವರ್ಷದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಸ್ಸಾಂ ನ ಗುವಾಹಟಿಯ ನೀಲಾಚಲ ಬೆಟ್ಟದ ಶಕ್ತಿಪೀಠ ಕಾಮಾಕ್ಯ ದೇವಾಲಯಕ್ಕೆ ಭೇಟಿ ನಿಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್, ಶಾಸಕ ಮಹೇಶ್ ಕುಮಟಳ್ಳಿ ಸಾಥ್ ನೀಡಿದ್ದಾರೆ. ಕಾಮಾಕ್ಯ ದೇವಾಲಯದಲ್ಲಿ ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಹಾಗೂ ತಾರ ದೇವಿ ರೂಪದಲ್ಲಿ ಜಗನ್ಮಾತೆಯನ್ನು ಆರಾಧಿಸಲಾಗುತ್ತಿದ್ದು, ಮಹಾಮಾರಿ ಕೊರೊನಾ ಸೋಂಕು …
Read More »Yearly Archives: 2021
ಬಜೆಟ್‍ಗೆ ತಯಾರಿ, ಅಧಿಕಾರಿಗಳ ಜೊತೆ ಸಿಎಂ ಚರ್ಚೆ
ಬೆಂಗಳೂರು,ಜ.1- ಕಳೆದ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳ ಅನುಷ್ಠಾನ, ಮುಂಬರುವ ಬಜೆಟ್‍ನಲ್ಲಿ ಹೊಸ ಯೋಜನೆಗಳ ಘೋಷಣೆ, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ಮತ್ತಿತರ ವಿಷಯಗಳ ಕುರಿತು ಸಿಎಂ ಯಡಿಯೂರಪ್ಪ ಅವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಗರದ ಹೊರವಲಯದ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು. ಈ …
Read More »ಹೊಸ ವರ್ಷಾಚರಣೆ ಕಿಕ್, ಅಬಕಾರಿ ಇಲಾಖೆಗೆ ಭರ್ಜರಿ ಕಲೆಕ್ಷನ್..!
ಬೆಂಗಳೂರು,ಜ.1-ಕೋವಿಡ್-19, ಬ್ರಿಟನ್‍ನ ರೂಪಾಂತರಿ ವೈರಸ್, ಹಾಗೂ ಪೊಲೀಸರ ಕಟ್ಟುನಿಟ್ಟಿನ ಕ್ರಮದ ನಡುವೆಯೂ ನಿನ್ನೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಬಕಾರಿ ಇಲಾಖೆಗೆ ಭರ್ಜರಿ ಕಿಕ್ ಹೊಡೆದಿದೆ. ನಿನ್ನೆ ಒಂದೇ ದಿನ ಅಬಕಾರಿ ಇಲಾಖೆಗೆ ಸುಮಾರು 151 ಕೋಟಿಗೂ ಅಧಿಕ ವಹಿವಾಟು ನಡೆದಿದ್ದು, ಇತ್ತೀಚಿನ ದಿನಗಳಲ್ಲಿ ಇದು ದಾಖಲೆ ಪ್ರಮಾಣದ ವಹಿವಾಟು ಎನ್ನಲಾಗಿದೆ. ನಿನ್ನೆ ಬೆಳಗ್ಗೆಯಿಂದ ರಾತ್ರಿಗೆ ಮುಕ್ತಾಯಗೊಂಡ ವಹಿವಾಟಿನಲ್ಲಿ ಸುಮಾರು 2.23 ಲಕ್ಷ ಕಾಟನ್‍ಬಾಕ್ಸ್ ಭಾರತೀಯ ಮದ್ಯ(120 ಕೋಟಿ 21 ಲಕ್ಷ) …
Read More »ದೇಶದ ಎಲ್ಲಾ ರಾಜ್ಯಗಳಲ್ಲೂ ನಾಳೆಯಿಂದ ಕೊರೊನಾ ಲಸಿಕೆ ಡ್ರೈ ರನ್ ಆರಂಭ
ಬೆಂಗಳೂರು: ದೇಶದ ಎಲ್ಲಾ ರಾಜ್ಯಗಳಲ್ಲೂ ನಾಳೆಯಿಂದ ಕೊರೊನಾ ಲಸಿಕೆ ಡ್ರೈ ರನ್ ಆರಂಭವಾಗಲಿದ್ದು, ಬೆಳಗಾವಿ ಸೇರಿದಂತೆ ರಾಜ್ಯದ 5 ಜಿಲ್ಲೆಗಳಲ್ಲಿ ಲಸಿಕೆ ತಾಲೀನು ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಬೆಳಗಾವಿ, ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಕಲಬುರ್ಗಿಯಲ್ಲಿ ನಾಳೆಯಿಂದ ಕೊರೊನಾ ಲಸಿಗೆ ಡ್ರೈ ರನ್ ಆರಂಭವಾಗಲಿದೆ. ಬೆಂಗಳೂರಿನಲ್ಲಿ ವೀದ್ಯಾಪೀಠ, ಕಾಮಾಕ್ಷಿಪಾಳ್ಯ, ಆನೇಕಲ್ ನಲ್ಲಿ ಡ್ರೈ ರನ್ ಆರಂಭವಾಗಲಿದೆ ಎಂದರು. ಈ ನಡುವೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವಧನ್ ಕೂಡ …
Read More »Bus Pass – ಹಿಂದಿನ ವರ್ಷದ ಬಸ್ ಪಾಸ್ನಲ್ಲೇ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ
ಬೆಂಗಳೂರು(ಜ. 01): ಇಂದಿನಿಂದ ಎಸ್ಸೆಸ್ಸೆಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ತರಗತಿಗಳು ಆರಂಭವಾಗುತ್ತಿವೆ. ಬಹಳಷ್ಟು ವಿದ್ಯಾರ್ಥಿಗಳು ಬಸ್ಸುಗಳನ್ನೇ ಅವಲಂಬಿಸಿದ್ದು ಹೊಸ ವರ್ಷದಲ್ಲಿ ಮಕ್ಕಳಿಗೆ ಪಾಸ್ ಗೊಂದಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮೂಲಕವೇ ಸದ್ಯ ಓಡಾಡಲು ಅವಕಾಶ ಮಾಡಿಕೊಟ್ಟಿದೆ. 2019-20ನೇ ಸಾಲಿನಲ್ಲಿ ವಿತರಿಸಲಾಗಿದ್ದ ಸ್ವಾರ್ಟ್ಕಾರ್ಡ್ ಬಸ್ ಪಾಸ್ನಲ್ಲೇ ಈ ಎರಡು ತರಗತಿಯ ಮಕ್ಕಳು ಉಚಿತವಾಗಿ ಬಿಎಂಟಿಸಿ ಬಸ್ನಲ್ಲಿ …
Read More »ಕೊಪ್ಪಳದ ಶಾಲೆಯಲ್ಲಿ ಹೂಮಳೆ ಸುರಿಸಿ ವಿದ್ಯಾರ್ಥಿಗಳಿಗೆ ಸ್ವಾಗತ
ಕೊಪ್ಪಳ: ಕೊರೊನಾ ಮಹಾಮಾರಿ ಶಾಲಾ ಮಕ್ಕಳಿಗೆ ಶಾಲೆಯ ಮುಖ ನೋಡದಂತೆ ಮಾಡಿತ್ತು. ಇದೀಗ ವೈರಸ್‌ನ ಅಬ್ಬರ ಕಡಿಮೆಯಾಗಿದ್ದು ಮಕ್ಕಳು ಸಂತಸದಿಂದ ಶಾಲೆಗೆ ಮರಳಿದ್ದಾರೆ. ಆದರೂ ಕೊರೊನಾ ಗುಮ್ಮ ಇನ್ನೂ ಇರುವುದರಿಂದ ಎಲ್ಲ ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಳೆದ 10 ತಿಂಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಹೊಸ ವರ್ಷಕ್ಕೆ ಆರಂಭವಾದ ಹಿನ್ನೆಲೆಯಲ್ಲಿ ಒಂದಡೆ ಶಾಲೆಗಳಿಗೆ ತಳಿರು ತೋರಣಗಳಿಂದ ಶೃಂಗಾರಗೊಳಿಸುವ ಮೂಲಕ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್ ಸೇರಿ ಕೋವಿಡ್ …
Read More »ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ ಈ ಮಾರ್ಗದ ರೈಲು ಸಂಚಾರ ಸ್ಥಗಿತ
ಶಿವಮೊಗ್ಗ: ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ. ಹೊಸನಗರ ತಾಲೂಕಿನ ಅರಸಾಳು ಸಮೀಪ ರೈಲು ಹಳಿ ತಪ್ಪಿದೆ. ತಿರುವಿನಲ್ಲಿ ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಸಂಭವನೀಯ ಅನಾಹುತ ತಪ್ಪಿದೆ. ಡ್ರಿಲ್ ಮೆಲ್ಟ್ ಕಟ್ ಆಗಿದ್ದೇ ಘಟನೆಗೆ ಕಾರಣವಾಗಿದ್ದು, ರೈಲ್ವೆ ಇಂಜಿನ್ ಗಾಲಿ ಹಳಿಯಿಂದ ಜಾರಿದೆ. ಪ್ರಯಾಣಿಕರಿಗೆ ರೈಲ್ವೆ ಇಲಕಹೆ ಪರ್ಯಾಯ ವ್ಯವಸ್ಥೆ ಮಾಡಿದೆ.
Read More »ಸಾಮಾಜಿಕ ಜಾಲತಾಣದಲ್ಲಿ ನಾಡಧ್ವಜ ಅಭಿಯಾನಕ್ಕೆ ಭರ್ಜರಿ ಬೆಂಬಲ.!
ಬೆಳಗಾವಿ(ಡಿಸೆಂಬರ್. ಮಹಾನಗರ ಪಾಲಿಕೆ ಮುಂದೆ ಕನ್ನಡ ಬಾವುಟ ಹಾರಾಟ ವಿಚಾರ ಈಗ ದೇಶ್ಯಾದ್ಯಂತ ಚರ್ಚೆ ಗೆ ಕಾರಣವಾಗಿದೆ. ಕನ್ನಡದ ಕಟ್ಟಾಳುಗಳು ದಶಕಗಳ ಕನ್ನಡಿಗರ ಕನಸನ್ನು ಸಾಕಾರಗೊಳಿಸಿದ್ದಾರೆ. ಹೀಗಿರುವಾಗ ನಾಡದ್ರೋಹಿಗಳು ಬೆಳಗಾವಿ ಪಾಲಿಕೆ ಮುಂದಿನ ಹಳದಿ ಕೆಂಪು ಧ್ವಜ ತೆರವು ಗೊಳಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು. ಎಂಇಎಸ್ ಪುಂಡರು ಒನ್ ನೇಷನ್ಸ್ ಒನ್ ಫ್ಲ್ಯಾಗ್ ಅಭಿಯಾನಕ್ಕೆ ಟ್ವಿಟರ್ ಅಭಿಯಾನಕ್ಕೆ ಈಗ ಕನ್ನಡಿಗರು ಗುದ್ದು ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಅಭಿಯಾನಕ್ಕೆ …
Read More »ಶಾಲಾ- ಕಾಲೇಜುಗಳ ಪುನರಾರಂಭ ಭರ್ಜರಿ ತಯಾರಿ
ಧಾರವಾಡ (ಜನವರಿ 1); ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಹಾಗೂ 6 ರಿಂದ 9 ನೇಯ ತರಗತಿ ಮಕ್ಕಳಿಗೆ ವಿದ್ಯಾಗಮ 2 ರ ಪ್ರಾರಂಭಕ್ಕೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ,ಕಾಲೇಜುಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ಶಹರ ಹಾಗೂ ಗ್ರಾಮೀಣ ಪ್ರದೇಶದ ಅನೇಕ ಶಾಲೆ,ಕಾಲೇಜುಗಳಿಗೆ ಭೇಟಿ ನೀಡಿ ಕೋವಿಡ್ 19 ರ ತಡೆಗೆ …
Read More »ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹೊಸ ವರ್ಷದ ಶುಭಕೋರಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹೊಸ ವರ್ಷದ ಶುಭಕೋರಿದ್ದಾರೆ. ರಾಷ್ಟ್ರಪತಿ ಕೋವಿಂದ್, ‘ಎಲ್ಲರಿಗೂ ಹೊಸವರ್ಷದ ಶುಭಾಶಯಗಳು. ಹೊಸ ಆರಂಭ ಮಾಡಲು, ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿಗೆ ನೆರವಾಗಲು ಹೊಸವರ್ಷವು ಅವಕಾಶ ಮಾಡಿಕೊಡುತ್ತದೆ. ಕೋವಿಡ್-19 ಸನ್ನಿವೇಶದಲ್ಲಿ ಎದುರಾದ ಸವಾಲುಗಳು, ಒಗ್ಗಟ್ಟಿನೊಂದಿಗೆ ಮುನ್ನಡೆಯುವ ನಮ್ಮ ಸಂಕಲ್ಪವನ್ನು ಬಲಪಡಿಸಿವೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ‘ನಿಮಗೆ 2021ರ ಶುಭಾಶಯಗಳು! ಈ ವರ್ಷ ಉತ್ತಮ ಆರೋಗ್ಯ, ಸಂತಸ ಮತ್ತು ಸಮೃದ್ಧಿ …
Read More »