ಹುಬ್ಬಳ್ಳಿ: ನಿವೇಶನಕ್ಕಾಗಿ ಧಾರವಾಡ ಸಮೀಪದ ಸತ್ತೂರಿನಲ್ಲಿ 227 ಎಕರೆ ಜಾಗ ಭೂಸ್ವಾಧೀನ ಮಾಡಿಕೊಳ್ಳುವ ಯೋಜನೆಗೆ ರೈತರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರಿಂದ ಹುಬ್ಬಳ್ಳಿ-ಧಾರವಾಡ ಪ್ರಾಧಿಕಾರ ಈ ಯೋಜನೆ ಕೈಬಿಟ್ಟಿದೆ. ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಸಿಕ ಸಭೆಯಲ್ಲಿ ಸರ್ವಸಮ್ಮತದಿಂದ ಈ ತೀರ್ಮಾನಕ್ಕೆ ಬರಲಾಯಿತು. ಸತ್ತೂರಿನಲ್ಲಿ ಭೂಮಿ ವಶಪಡಿಸಿಕೊಳ್ಳಲು ಹುಡಾ 2016ರಿಂದಲೇ ರೈತರ ಜೊತೆ ನಿರಂತರ ಮಾತುಕತೆಯಲ್ಲಿ ತೊಡಗಿತ್ತು. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಾಗ …
Read More »Daily Archives: ಅಕ್ಟೋಬರ್ 14, 2021
ಐಪಿಎಲ್ 2021: ಕೋಲ್ಕತ್ತಾ- ಚೆನ್ನೈ ನಡುವೆ ಫೈನಲ್ ಫೈಟ್
ದುಬೈ: ಶುಕ್ರವಾರ ಕೊಲ್ಕತ್ತಾ ಹಾಗೂ ಚೆನ್ನೈ ನಡುವೆ ಐಪಿಎಲ್ 14ನೇ ಆವೃತ್ತಿಯ ಫೈನಲ್ ಕಾದಾಟ ನಡೆಯಲಿದೆ. ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಫೈನಲ್ ನಲ್ಲಿ ಸೆಣಸಾಡಲಿದೆ. ಇದು ಚೆನ್ನೈಯ 9 ನೇ ಫೈನಲ್ ಆಗಿದ್ದು, ಕೋಲ್ಕತಾ ತಂಡವು ಮೂರನೇ ಬಾರಿಗೆ ಫೈನಲ್ ಆಡಲಿದೆ. ಎರಡೂ …
Read More »ಸ್ವಚ್ಛ ನಗರಿಯಾಗುವತ್ತ ಹುಬ್ಬಳ್ಳಿ…
ಹುಬ್ಬಳ್ಳಿ: ‘ಕಸದ ವಿಷ್ಯದಲ್ಲಿ ಈಗ ಬಾಳನೇ ಸುಧಾರಣೆ ಕಂಡುಬಂದೈತ್ರಿ. ಮೊದಲು ಎರಡು ಮೂರು ದಿವಸ ಮನೆಯಲ್ಲೇ ಕಸ ಇಟ್ಕೊಂಡು ಕುಂದ್ರಬೇಕಾಗ್ತಿತ್ತು. ಮನೆಯಿಡೀ ದುರ್ನಾತ ಬರ್ತಿತ್ತು. ವಿಧಿ ಇಲ್ದೆ ರಾತ್ರೊರಾತ್ರಿ ತಗೊಂಡು ಹೋಗಿ ಗಿಡದ ಕಂಟಿಗೊ, ರಸ್ತೆ ಬದಿಗೊ ಚೆಲ್ಲಿ ಬರ್ತಿದ್ವಿ. ಈಗ ಅಂತಹ ಸ್ಥಿತಿ ಇಲ್ರಿ. ಪೌರ ಕಾರ್ಮಿಕರು ಆಟೊ ಟಿಪ್ಪರ್ ಜೊತೆ ಮನೆ ಬಾಗಿಲಿಗೆ ಬಂದು ಕಸ ತಗೊಂಡು ಹೋಗ್ತಾರ್ರಿ…’ ವಾಣಿಜ್ಯ ನಗರಿ ಹುಬ್ಬಳ್ಳಿಯ …
Read More »ಹುಬ್ಬಳ್ಳಿ: ನವರಾತ್ರಿ ಸಡಗರ, ಭಕ್ತರ ಸಂಭ್ರಮ
ಹುಬ್ಬಳ್ಳಿ: ನವರಾತ್ರಿಯ ಮೊದಲ ದಿನವಾದ ಗುರುವಾರ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ದೇವಿಯರ ದರ್ಶನ ಪಡೆದರು. ಹೊಸೂರಿನ ದುರ್ಗಾದೇವಿ ದೇವಸ್ಥಾನ, ದಾಜೀಬಾನಪೇಟೆಯ ತುಳಜಾಭವಾನಿ ದೇವಸ್ಥಾನ, ಬನಶಂಕರಿ ಬಡಾವಣೆಯ ಬನಶಂಕರಿದೇವಿ ದೇವಸ್ಥಾನ ಸೇರಿದಂತೆ ಹಲವೆಡೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉಣಕಲ್ ಕೆರೆ ದಂಡೆಯ ಸಮೀಪ ಇರುವ ವೀರಭದ್ರೇಶ್ವರ ಕಾಲೊನಿಯ ಶಾಕ್ತ ಪೀಠದ ತುಳಜಾ ಭವಾನಿ, ಭವಾನಿಶಂಕರ ದೇವಸ್ಥಾನದಲ್ಲಿ ಗುರುವಾರ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ …
Read More »ನಾರಾಯಣಗುರುಗಳ ಹೋರಾಟದಿಂದ ಸಮಾಜ ತಲೆ ಎತ್ತಿದೆ
ಧಾರವಾಡ: ‘ಬ್ರಹ್ಮಶ್ರೀ ನಾರಾಯಣಗುರುಗಳು ಅಂದು ದೇವಾಲಯ ಪ್ರವೇಶಕ್ಕಾಗಿ ಹೋರಾಟ ಮಾಡದಿದ್ದರೆ ಇಂದು ಈಡಿಗ ಸಮುದಾಯದ ಜನರು ಇಸ್ಲಾಂ, ಇಲ್ಲವೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಬೇಕಾಗಿತ್ತು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು. ಇಲ್ಲಿನ ಸತ್ತೂರಿನಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘ ಹಾಗೂ ಧಾರವಾಡ ಜಿಲ್ಲಾ ಆರ್ಯ ಈಡಿಗ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಈಡಿಗ ಭವನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಅಂದು ಸಾಮಾಜಿಕ ಹೋರಾಟ ಮಾಡಿದ್ದರ …
Read More »ಸ್ಟಾರ್ಗಳ ಮಕ್ಕಳು ಮಾತ್ರ ಡ್ರಗ್ಸ್ ಸೇವಿಸುವವರಲ್ಲ.. ನಶೆವ್ಯೂಹಕ್ಕೆ ಸಿಲುಕಿದ್ದಾರೆ ಲಕ್ಷಾಂತರ ಮಕ್ಕಳು
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.. ಈ ಮಾತನ್ನ ಇತ್ತೀಚಿನ ಪೀಳಿಗೆಯ ಮಕ್ಕಳಿಗೆ ಒತ್ತಿ ಹೇಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾಕೆ ಗೊತ್ತಾ ? ಹದಿಹರೆಯದ ವಯಸ್ಸಿನಲ್ಲಿ, ಮುಂದಿನ ಜವಾಬ್ದಾರಿಗಳನ್ನು ಮರೆತು, ನಶೆಯ ಜೀವನಕ್ಕೆ ಮಾರು ಹೋಗ್ತಾ ಇದ್ದಾರೆ ಯುವ ಚೇತನಗಳು. ಕಳೆದ ದಶಕವನ್ನು ಹೋಲಿಸಿ, ಮಾದಕ ಲೋಕದ ಜಾಲಕ್ಕೆ ಸಿಲುಕಿರುವ ಮಕ್ಕಳ ಬಗೆಗಿನ ಈ ಸಮೀಕ್ಷೆ ನೋಡಿದರೆ, ದೇಶದ ಮುಂದಿನ ಭವಿಷ್ಯದ ಬಗ್ಗೆ ಭಯ ಹುಟ್ಟುತ್ತದೆ. ಆ ಸರ್ವೆ ಕುರಿತ ರಿಪೋರ್ಟ್ …
Read More »ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಿ
ಬೆಳಗಾವಿ: ಅತಿಥಿ ಉಪನ್ಯಾಸಕರ ಸೇವಾಭದ್ರತೆಗೆ ಸಂಬಂಧಿಸಿದಂತೆ ಮಾನವೀಯತೆಯಆಧಾರದ ಮೇಲೆ ತ್ವರಿತವಾಗಿ ಸೂಕ್ತ ತೀರ್ಮಾನತೆಗೆದುಕೊಳ್ಳುವ ಮೂಲಕ ಅವರ ಕುಟುಂಬದ ಹಿತಕಾಯಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕ ರಹಿತ ರಕ್ಷಣಾ ಸಮಿತಿ ಜಿಲ್ಲಾ ಘಟಕದ ಸದಸ್ಯರು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿದರು. ಬೆಳಗಾವಿಯಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ ಸದಸ್ಯರು, 2021-22ನೇ ಶೈಕ್ಷಣಿಕ ಸಾಲಿಗೆ ಹಾಲಿಕರ್ತವ್ಯನಿರ್ವಹಿಸುತ್ತಿರುವಅತಿಥಿಉಪನ್ಯಾಸಕರನ್ನುಸೇವೆಯಲ್ಲಿ ಮುಂದುವರೆಸಬೇಕು. ಮಾಸಿಕಸಂಚಿತ ಗೌರವಧನ ನಿಗದಿಪಡಿಸಬೇಕು …
Read More »‘ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿ ಹಾಸಿಗೆ ಹಿಡಿದಿದೆ’ ದಿನೇಶ್ ಗುಂಡೂರಾವ್ ಆಕ್ರೋಶ
ಬೆಂಗಳೂರು: ಆರೋಗ್ಯ ಸಿಬ್ಬಂದಿಯ ವೇದನೆ ಕೇಳದೆ ರಾಜ್ಯದ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿ ಹಾಸಿಗೆ ಹಿಡಿದಿದೆ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ವೇತನ ಸಮಸ್ಯೆ ಕುರಿತಂತೆ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ ಅವರು ‘ಇಲಾಖೆಯ ಸಿಬ್ಬಂದಿಗೆ ಕಳೆದ 3 ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ. ಆರೋಗ್ಯ ಸಿಬ್ಬಂದಿ ಕೊರೋನಾ ಫ್ರಂಟ್‌ಲೈನ್ ವರ್ಕರ್‌ಗಳಾಗಿ ಕಾರ್ಯನಿರ್ವಹಿಸಿದ್ದಾರೆ.ಆದರೂ ಕೊರೊನಾ ಭತ್ಯೆ ಸಿಕ್ಕಿಲ್ಲ. ತಮ್ಮ ಇಲಾಖೆಯ ಸಿಬ್ಬಂದಿಗಳ …
Read More »ಡಿಕೆಎಸ್ ಕಮೀಷನ್ ಗಿರಾಕಿ’ ಹೇಳಿಕೆ: ‘ಇದು ನಿಶ್ಚಿತವಾಗಿಯೂ ಷಡ್ಯಂತ್ರ’ ಎಂದ ಸೋಮಶೇಖರ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸ್ವಪಕ್ಷಿಯರ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಎಸ್ಟಿ ಸೋಮಶೇಖರ್ ಪ್ರತಿಕ್ರಿಯಿಸಿ.. ಇದು ನಿಶ್ಚಿತವಾಗಿಯೂ ಒಂದು ಷಡ್ಯಂತ್ರ. ಮೊದಲಿನಿಂದಲೂ ನಾನು ಈ ಬಗ್ಗೆ ಹೇಳುತ್ತಿದ್ದೇನೆ ಎಂದರು. ಕಾಂಗ್ರೆಸ್ನಲ್ಲಿ ಮೊದಲಿನಿಂದಲೂ ಡಿ.ಕೆ.ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ನಡೆಯುತ್ತಿದೆ. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಷಡ್ಯಂತರ ನಡೆಸುತ್ತಿದ್ದಾರೆ. ಇದು ಈಗ ಮುಂದುವರಿದಿದೆ. ನನಗೆ ಪರ್ಸೆಂಟೆಜ್ ವ್ಯವಹಾರದ ಬಗ್ಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಬರೀ ಶಾಸಕನಾಗಿದ್ದೆ ಅಷ್ಟೇ …
Read More »ತೈವಾನ್‍ನಲ್ಲಿ ಬೆಂಕಿ ಅವಗಡ, 14 ಮಂದಿ ಸಾವು..!
ಥೈಪೆ, ಅ.14- ತೈವಾನ್‍ನ ದಕ್ಷಿಣ ವಲಯದಲ್ಲಿ ನಡೆದಿರುವ ಬೆಂಕಿ ಅವಗಡದಿಂದ ಸುಮಾರು 14 ಮಂದಿ ಮೃತಪಟ್ಟು, 51ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇಂದು ಮುಂಜಾನೆ 3 ಗಂಟೆ ಸುಮಾರಿನಲ್ಲಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಆದರೆ ತಳಮಹಡಿಯಿಂದ ಆರಂಭವಾದ ಬೆಂಕಿ ಇಡೀ ಕಟ್ಟಡವನ್ನು ಆಕ್ರಮಿಸಿದೆ. ದುರ್ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಕೆಲವರು ಸ್ಥಳದಲ್ಲೇ ಸಜೀವ ದಹನವಾದರೆ ಇನ್ನೂ ಕೆಲವರು …
Read More »