ಬೆಳಗಾವಿ : ಮಾಜಿ ಸಚಿವ ದಿ. ಅಂಬರೀಷ್ ಅವರ ಅಂತಿಮ ಸಂಸ್ಕಾರದ ಸಲುವಾಗಿ ವೆಚ್ಚ ಮಾಡಿರುವ ಹಣ ಎಷ್ಟು ಎಂಬುದು ಸರ್ಕಾರದ ಬಳಿ ಮಾಹಿತಿ ಇಲ್ಲ. ಈ ಮಾಹಿತಿ ಯಾರ ಬಳಿ ಇದೆ ಎಂಬುದೂ ಮುಖ್ಯ ಕಾರ್ಯದರ್ಶಿಯವರ ಕಚೇರಿಯವರಿಗೆ ಗೊತ್ತಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ. ಅಂಬರೀಷ್ ಅವರ ವೈದ್ಯಕೀಯ ಉಪಚಾರಕ್ಕಾಗಿ ಸರ್ಕಾರದಿಂದ ವೆಚ್ಚ ಮಾಡಿದ ಹಣ, ಹಾಗೂ ಅಂತಿಮ ಸಂಸ್ಕಾರಕ್ಕೆ ವೆಚ್ಚ ಮಾಡಿರುವುದು ಹಾಗೂ …
Read More »Monthly Archives: ಜುಲೈ 2021
ಕನ್ನಡದಲ್ಲಿ ಬ್ಯಾಂಕ್ ಪರೀಕ್ಷೆ : ಕೇಂದ್ರದಿಂದ ಸಮಿತಿ ರಚನೆ
ಬೆಂಗಳೂರು : ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಕ್ಲರ್ಕ್ ನೇಮಕ ಪರೀಕ್ಷೆಯನ್ನು ಸದ್ಯಕ್ಕೆ ಕೈಬಿಟ್ಟಿರುವ ಕೇಂದ್ರ ಸರ್ಕಾರ ಕನ್ನಡಿಗರ ಹೋರಾಟಕ್ಕೆ ಮಣಿದಿದ್ದು, ಗ್ರಾಮೀಣ ಬ್ಯಾಂಕುಗಳಲ್ಲಿನ ಹುದ್ದೆಗಳ ನೇಮಕಕ್ಕೆ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪರೀಕ್ಷೆಗೆ ತಡೆ ನೀಡಲಾಗಿದೆ. 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕೇವಲ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ …
Read More »ನಟ ವಿಜಯ್ ಗೆ 1 ಲಕ್ಷ ರೂ. ದಂಡ!
ಐಷಾರಾಮಿ ರೋಲ್ಸ್ ರಾಯ್ಸ್ ಗೋಸ್ಟ್ ಕಾರಿಗೆ 6.95ರಿಂದ 7.95 ಕೋಟಿ ರೂ.ಗೆ ವಿಧಿಸಿರುವ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು ಎಂದು ಕೋರಿದ್ದ ತಮಿಳು ನಟ ವಿಜಯ್ ಗೆ ಮದ್ರಾಸ್ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಮೂರ್ತಿ ಎಸ್.ಎಂ. ಸುಬ್ರಹ್ಮಣ್ಯಮ್ ನೇತೃತ್ವದ ಪೀಠ, 2012ರಲ್ಲಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದೂ ಅಲ್ಲದೇ 1 ಲಕ್ಷ ರೂ. ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಸೂಚಿಸಿದೆ. ಇತ್ತೀಚೆಗಷ್ಟೇ …
Read More »ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ
ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ ತಿಂದಿದ್ದಾನೆ. ಚಿಕ್ಕೋಡಿ ಗ್ರೇಡ್ 2 ತಹಸಿಲ್ದಾರ ಜಮಾದಾರ ಎನ್ನುವಾತ ಮಾನಗೇಡಿ ಕೃತ್ಯ ಮಾಡಿದಾತ. ತಾಲೂಕಿನ ಮಹಿಳೆಯೊಬ್ಬಳ ಪತಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಹಾಗಾಗಿ ತನಗೆ ವಿಧವಾ ಮಾಸಾಶನ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದಾಳೆ. ಆಕೆಯ ಪುತ್ರ ಈ ಸಂಬಂಧ ಹಲವು ಬಾರಿ ತಹಸಿಲ್ದಾರ ಕಚೇರಿಗೆ ಬಂದಿದ್ದಾನೆ. ಆದರೆ ಕೆಲಸ ಮಾಡಿಕಕೊಡದ ಜಮಾದಾರ, ತಾಯಿಯನ್ನು ಕಚೇರಿಗೆ …
Read More »ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ : ಈ ತಿಂಗಳ ಅಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!
ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಮಾಸಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸ್ಥಿರತೆ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಮಾಸಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದ್ದು, ಈ ತಿಂಗಳ ಅಂತ್ಯಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಪ್ರತಿ ಬ್ಯಾರೆಲ್ …
Read More »ಭಾರತದ ಮೊದಲ ಕೋವಿಡ್ ರೋಗಿಯಲ್ಲಿ ಮತ್ತೊಮ್ಮೆ ಸೋಂಕು ದೃಢ
(ಕೇರಳ): ‘ಭಾರತದ ಮೊದಲ ಕೋವಿಡ್ ರೋಗಿ, ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೊಮ್ಮೆ ಸೋಂಕು ತಗುಲಿದೆ’ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು. ‘ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಆಯಂಟಿಜನ್ ಪರೀಕ್ಷೆಯ ಫಲಿತಾಂಶವು ನೆಗೆಟಿವ್ ಬಂದಿತ್ತು’ ಎಂದು ತ್ರಿಶೂರ್‌ನ ಡಿಎಂಆರ್ ಡಾ.ಕೆ.ಜೆ ರೀನಾ ಅವರು ಮಾಹಿತಿ ನೀಡಿದರು. ‘ವಿದ್ಯಾಭ್ಯಾಸಕ್ಕೆಂದು ನವದೆಹಲಿಗೆ ತೆರಳಲು ಅವರು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಅವರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈ ವೇಳೆ ಅವರಿಗೆ ಸೋಂಕು …
Read More »ವಿಷಪೂರಿತ ಆಹಾರ ಸೇವಿಸಿ ಮೂವರ ದುರ್ಮರಣ; ಇಬ್ಬರು ಗಂಭೀರ
ಚಿತ್ರದುರ್ಗ: ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಮತ್ತಿಬ್ಬರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ. ತಿಪ್ಪಾನಾಯ್ಕ್ (46), ಪತ್ನಿ ಸುಧಾಬಾಯಿ(43), ವೃದ್ಧೆ ಗುಂಡಿಬಾಯಿ (75) ಸಾವನ್ನಪ್ಪಿದವರು. ನಿನ್ನೆ ರಾತ್ರಿ ಮುದ್ದೆ ಸಾರು ಸೇವನೆ ಬಳಿಕ ಕುಟುಂಬಸ್ಥರು ಅಸ್ವಸ್ಥರಾಗಿದ್ದು ತಕ್ಷಣವೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು ಘಟನೆ ಕುರಿತು …
Read More »ಒಬ್ಬ ಹೆಣ್ಣಾದ ನನ್ನನ್ನು ಈ ಪ್ರಕರಣಕ್ಕೆ ಬಳಸಿಕೊಂಡರು -ಉಮಾಪತಿ ವಿರುದ್ಧ ಅರುಣಾಕುಮಾರಿ ಕಿಡಿ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ₹ 25 ಕೋಟಿ ವಂಚನೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅರುಣಾಕುಮಾರಿ ಮಾಧ್ಯಮಗಳಿಗೆ ವಿಡಿಯೋ ಒಂದನ್ನ ಹರಿಬಿಟ್ಟಿದ್ದಾರೆ. ನನ್ನ ಪಾಡಿಗೆ ನನಗೆ ಬದುಕಲು ಬಿಡಿ ಈ ಪ್ರಕರಣದಿಂದ ನನಗೆ, ಕುಟುಂಬಕ್ಕೆ ನೋವಾಗಿದೆ. ದಯವಿಟ್ಟು ನನ್ನ ಪಾಡಿಗೆ ನಾನು ಬದುಕಲು ಬಿಡಿ. ಇವೆಲ್ಲಾ ಬೆಳವಣಿಗೆಯಿಂದ ಸಾಯಬೇಕು ಎನಿಸುತ್ತಿದೆ. ನಾನು ಬಹಳ ನೋವಿನಿಂದ ಮಾತನಾಡುತ್ತಿದ್ದೇನೆ. ಮಾರ್ಚ್ 30ರಿಂದ ನನಗೂ ಅವರಿಗೂ ಸಂಪರ್ಕವಿಲ್ಲ. ಪೊಲೀಸರು ತನಿಖೆ …
Read More »ಸೌಭಾಗ್ಯ ಲಕ್ಷ್ಮೀ ಶುಗರ್ಸ ನಿಂದ ಸಕ್ಕರೆ ವಿತರಣೆ ಕಾರ್ಯಕ್ರಮ
ಗೋಕಾಕ: ಸೌಭಾಗ್ಯ ಲಕ್ಷ್ಮೀ ಶುಗರ್ಸ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ನಾವು ರೈತ ಬಾಂಧವರಿಗೆ ತಿಳಿಸುವುದು ಏನೆಂದರೆ ಈ ವರ್ಷ ನಾವು ನಮ್ಮ ಕಾರ್ಖಾನೆಗೆ ಕಬ್ಬು ಕಳುಹಿಸಿದ ಎಲ್ಲಾ ರೈತ ಬಾಂಧವರಿಗೆ ಪ್ರತಿ ಟನ್ ಗೆ ಅರ್ಧ ಕೇಜಿಯಂತೆ ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನಾ ಯರಗಟ್ಟಿ, ಗೋಕಾಕ, ಹಾಗೂ ಮಮದಾಪೂರ ಈ ರೀತಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಮೂರು ಝೋನ್ ಗಳಲ್ಲಿ ಸಕ್ಕರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. …
Read More »ನಮ್ಮ ನೀರು ನಾವು ಬಳಸಿಕೊಳ್ಳಲು ತಮಿಳುನಾಡು ಹಸ್ತಕ್ಷೇಪ ಸರಿಯಲ್ಲ: ಎಂ.ಬಿ.ಪಾಟೀಲ
ವಿಜಯಪುರ: ಮೇಕೆದಾಟು ಯೋಜನೆಯಡಿ ನಮ್ಮ ನೀರನ್ನು ನಾವು ಬಳಸಿಕೊಳ್ಳುವುದಕ್ಕೆ ತಮಿಳುನಾಡು ಸರ್ಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಮಾಜಿ ನೀರಾವರಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆ ಸಹಾಯವಾಗಲಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು ಅಭಿಪ್ರಾಯ ಪಡೆದು ನಂತರ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು. ನಮ್ಮ ನೀರನ್ನು ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ತಮಿಳುನಾಡು …
Read More »