Breaking News

Monthly Archives: ಜುಲೈ 2021

ಬಾಂಗ್ಲಾ ಯುವತಿ ಅತ್ಯಾಚಾರ ಆರೋಪಿಗಳಿಂದ ವಿದೇಶಗಳಿಗೆ ಮಹಿಳೆಯರ ಸಾಗಾಟ

ಬೆಂಗಳೂರು: ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಯುವತಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯಲ್ಲಿ ಪೋಲೀಸರಿಗೆ ಇವರು ಇತರ ದೆಶಗಳಿಗೆ ಮಹಿಳೆಯರ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದು ಬಂದಿದೆ. ಬಾಂಗ್ಲಾದೇಶ ದಿಂದ ಸಮುದ್ರದ ಮೂಲಕ ಚೆನ್ನೈ ತಲುಪಿಸಿ, ಅಲ್ಲಿಂದ ಕರ್ನಾಟಕ, ಕೇರಳ, ತಮಿಳು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಇಲ್ಲಿನ ಯುವಕ – ಯುವತಿಯನ್ನು ಬಳಸಿಕೊಳ್ಳುವುದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಇದೇ ಯುವತಿಯನ್ನು ಕೆಲ ಕಿಂಗ್ ಪಿನ್ …

Read More »

ನಾಳೆಯಿಂದ ಆ.15ರವರೆಗೆ ಕೆಂಪುಕೋಟೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

ನವದೆಹಲಿ: ಭಾರತದ ಪುರಾತತ್ವ ಸಮೀಕ್ಷೆಯ ಆದೇಶದ ಪ್ರಕಾರ ಜುಲೈ 21 ರಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಮುಗಿಯುವವರೆಗೆ ಕೆಂಪು ಕೋಟೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಾಮಾನ್ಯವಾಗಿ, ಸ್ವಾತಂತ್ರ್ಯ ದಿನಾಚರಣೆಗೂ ಒಂದು ವಾರ ಮೊದಲೇ ಕೋಟೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘2021ರ ಜುಲೈ 21ರ ಬೆಳಿಗ್ಗೆಯಿಂದ 2021ರ ಆಗಸ್ಟ್ 15 ರಿಂದ ಸ್ವಾತಂತ್ರ್ಯ ದಿನಾಚರಣೆ ಮುಗಿಯುವವರೆಗೆ ಕೆಂಪು ಕೋಟೆಯೊಳಗೆ ಯಾವುದೇ ಪ್ರವೇಶವಿರಬಾರದು’ ಎಂದು ಭಾರತದ …

Read More »

ಮಹಿಳೆಗೆ ಅಶ್ಲೀಲ ಉತ್ತರ ಕೊಟ್ಟ ಮೈಸೂರು ಮಹಾನಗರ ಪಾಲಿಕೆ ಜೋನಲ್​ ಅಧಿಕಾರಿಗೆ ಕಚೇರಿಯಲ್ಲೇ ಧರ್ಮದೇಟು: ವಿಡಿಯೋ ವೈರಲ್

ಮೈಸೂರು: ಆಶ್ರಯ ಮನೆಗಾಗಿ ವಾಸ ದೃಢೀಕರಣ ಪತ್ರ ಕೇಳಿದ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ (Mysuru City Corporation) ಜೋನಲ್ ಅಧಿಕಾರಿಗೆ ಮಹಿಳೆಯರು ಧರ್ಮದೇಟು ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೋನಲ್ ಅಧಿಕಾರಿ ವಿಷಕಂಠೇಗೌಡ ಎನ್ನುವವರು ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ ಆರೋಪ ಎದುರಿಸುತ್ತಿದ್ದು, ಅವರ ವರ್ತನೆಯಿಂದ (Misbehave) ಕುಪಿತರಾದ ಮಹಿಳೆಯರು ಶಾರದಾದೇವಿ ನಗರದ ವಲಯ ಕಚೇರಿಗೆ ನುಗ್ಗಿ ಥಳಿಸಿದ ವಿಡಿಯೋ ಇದೀಗ ವೈರಲ್ (Viral Video) …

Read More »

ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಮನೆ: ಗಂಡ ಸಜೀವ ದಹನ, ಪತ್ನಿ ಸ್ಥಿತಿ ಗಂಭೀರ

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮನೆಯೊಂದು ಹೊತ್ತಿ ಉರಿದಿದ್ದು, ಮಲಗಿದ್ದಲ್ಲೇ ವ್ಯಕ್ತಿಯೊಬ್ಬ ಸಜೀವ ದಹನ ಆಗಿದ್ದಾರೆ. ಪ್ರಕಾಶ್ (55) ಮೃತ ದುರ್ದೈವಿ. ಇವರ ಪತ್ನಿ ಗಂಭೀರ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕಾಶ್​ ಮನೆಯಲ್ಲೇ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಬೆಳಗಿನ ಜಾವ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ನಿದ್ರೆ ಮಾಡುತ್ತಿದ್ದ ಪ್ರಕಾಶ್​ ಅಲ್ಲೇ ಸುಟ್ಟುಕರಕಲಾಗಿದ್ದಾರೆ. ಕಿರಾಣಿ ಅಂಗಡಿಯಲ್ಲಿದ್ದ ಸಾಮಗ್ರಿ ಸಂಪೂರ್ಣ ಸುಟ್ಟು ಬೂದಿಯಾಗಿದೆ. …

Read More »

ಮಳೆಗೆ ಮನೆಯ ಗೋಡೆ ಕುಸಿದು ಅಣ್ಣ, ತಂಗಿ ದಾರುಣ ಸಾವು

ಬೆಂಗಳೂರು: ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಅಣ್ಣ, ತಂಗಿ ಮೃತಪಟ್ಟ ಘಟನೆ ನಡೆದಿದೆ. ತುಮಕೂರು ಮೂಲದ ಕಾವ್ಯ (19) ಹಾಗೂ ವೇಣುಗೋಪಾಲ್ (22) ಮೃತರು. ಬಿನ್ನಮಂಗಲದ ಕೃಷ್ಣಪ್ಪ ಎಂಬ ವ್ಯಕ್ತಿಗೆ ಸೇರಿದ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡ್ ಗೋಡೆ ಪಕ್ಕದಲ್ಲಿದ್ದ ಮನೆ ಮೇಲೆ ಕುಸಿದಿದ್ದು, ಘಟನೆಯಲ್ಲಿ ಸಂಪ್ರಥ್ (22) ಎಂಬ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ನೆಲಮಂಗಲ ಟೌನ್ ಇನ್ಸ್ ಪೆಕ್ಟರ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿ …

Read More »

ಬುಧವಾರ ಬೆಳಿಗ್ಗೆ ದೇಶದ ಹಲವೆಡೆ ಲಘು ಭೂಕಂಪ

ನವದೆಹಲಿ: ಬುಧವಾರ ಬೆಳಗಿನ ಜಾವ ದೇಶದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ರಾಜಸ್ಥಾನದ ಬಿಕಾನೆರ್‌ನಲ್ಲಿ 5.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿರುವುದು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ. ರಾಷ್ಟ್ರೀಯ ಭೂಕಂಪನ ವೀಕ್ಷಣಾ ಕೇಂದ್ರದ (ಎನ್‌ಸಿಎಸ್‌) ಪ್ರಕಾರ, ಬಿಕಾನೆರ್‌ನಲ್ಲಿ ಬೆಳಗಿನ ಜಾವ 5:24ಕ್ಕೆ ಭೂಕಂಪ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಸಾವು-ನೋವು ಅಥವಾ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ. ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್‌ ಮತ್ತು ಲಡಾಖ್‌ ಪ್ರದೇಶಗಳಲ್ಲಿ ಕ್ರಮವಾಗಿ ಬೆಳಗಿನ ಜಾವ 2:10 ಮತ್ತು …

Read More »

ರಾಜ್ಯದ 27 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು – ರಾಜ್ಯದ 27 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಜುಲೈ 22ರ ವರೆಗೆ ವರ್ಗಾವಣೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ವಲಯಾರಣ್ಯಾಧಿಕಾರಿಗಳ ವರ್ಗಾವಣೆ ವಿವರ ಇಲ್ಲಿದೆ –

Read More »

ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಬೆಳಗಾವಿ: ಶಿಶು ಅಭಿವೃದ್ಧಿ ಇಲಾಖೆಯ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಖಾಲಿ ಇರುವ ನಗರ ಪ್ರದೇಶಗಳಲ್ಲಿ ಅದೇ ವಾರ್ಡಿನ ಇಚ್ಛೆಯುಳ್ಳ ಅಭ್ಯರ್ಥಿಗಳು ವೆಬ್‍ಸೈಟ್ ವಿಳಾಸ: anganwadiruit.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಜು.14 ರಿಂದ ಅಗಸ್ಟ್ 14 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಜಿಲ್ಲಾ ಬಾಲ ಭವನ ಕಟ್ಟಡ, …

Read More »

ರಾಜಾಹುಲಿ ಯನ್ನಾ ಸಿ ಎಂ ಸ್ಥಾನದಿಂದ ಇಳಿಸಿ ಬೆಳಗಾವಿ ಯವರೆ ಆಗ್ತಾರಾ ಮುಂದಿನ ಸಿ ಎಂ..?

ಈಗ ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ‌.ಜುಲೈ 26 ಕ್ಕೆ ಸಿಎಂ ಬದಲಾವಣೆ ಖಚಿತ ಎಂದು ಬಿಜೆಪಿಯ ಕೆಲವು ನಾಯಕರು ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ.ಹಾಗಾದ್ರೆ ಮುಂದಿನ ಮುಖ್ಯಮಂತ್ರಿ ಯಾರು ? ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ.ಈ ಕುರಿತು ದೃಶ್ಯಮಾದ್ಯಮಗಳಲ್ಲಿ ಕ್ಷಣಕ್ಕೊಂದು ಬ್ರೇಕಿಂಗ್ ಸುದ್ಧಿ ಪ್ರಕಟವಾಗುತ್ತಿದೆ. ಸಿಎಂ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ‌.ಆದ್ರೆ ಅವರ ಅಧಿಕಾರದ ಅವಧಿ ಜುಲೈ 26 ರರವೆಗೆ ಮಾತ್ರ ಎನ್ನುವ ಸುದ್ಧಿ ರಾಜ್ಯದ …

Read More »

‘ನೀವು ಬಂದು ಲೈವ್​ ನೋಡಬೇಕು’; ಅಂಜಿಕ್ಯಾ ರಹಾನೆಗೆ ರಾಜ್​ ಕುಂದ್ರಾ ಹೀಗೆ ಹೇಳಿದ್ರು

ನೀಲಿಚಿತ್ರ ನಿರ್ಮಾಣ ಮಾಡುತ್ತಿದ್ದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಅವರ ಬಂಧನದ ನಂತರದಲ್ಲಿ ಸಾಕಷ್ಟು ಹಳೆಯ ಟ್ವೀಟ್​ಗಳು ವೈರಲ್​ ಆಗಿವೆ. ಅಲ್ಲದೆ, ಈ ಬಗ್ಗೆ ಮೀಮ್​ಗಳು ಕೂಡ ಹರಿದಾಡಿದೆ. ಟೀಂ ಇಂಡಿಯಾ ಟೆಸ್ಟ್​ ತಂಡದ ಉಪನಾಯಕ ಹಾಗೂ ರಾಜ್​ ಕುಂದ್ರಾ 2012ರಲ್ಲಿ ಟ್ವೀಟ್​ ಮೂಲಕ ಸಂಭಾಷಣೆ ನಡೆಸಿದ್ದರು. ರಾಜ್​ ಬಗ್ಗೆ ರಹಾನೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈ ಟ್ವೀಟ್​ ಈಗ ಸಾಕಷ್ಟು ವೈರಲ್​ …

Read More »