ವಿಜಯಪುರ: ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಪ್ರತಿಭಟನೆಗಿಳಿದಿರುವ ವೀರಶೈವ-ಲಿಂಗಾಯತ ಮಠಗಳ ಸ್ವಾಮೀಜಿಗಳ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಠದ ಮುಖ್ಯಸ್ಥರ ನೇಮಕ ವಿಚಾರದಲ್ಲಿ ರಾಜಕೀಯ ಮಧ್ಯೆ ಪ್ರವೇಶ ಮಾಡುವುದಿಲ್ಲ. ಹಾಗೆಯೇ ಸ್ವಾಮೀಜಿಗಳೂ ಕೂಡ ರಾಜಕೀಯ ನೇಮಕಾತಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಹೇಳಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯದ ಮಠಾಧೀಶರು ಒಬ್ಬ ನಿರ್ದಿಷ್ಟ ನಾಯಕನಿಗಾಗಿ ಲಾಬಿ ಮಾಡುತ್ತಿದ್ದರೆ, ಇದು ಇತರ …
Read More »Monthly Archives: ಜುಲೈ 2021
ಬೆಂಗಳೂರಿನಲ್ಲಿ ಮಠಾಧೀಶರ ಸಮಾವೇಶ: ಪ್ರಹ್ಲಾದ್ ಜೋಷಿ, ಬಿ.ಎಲ್.ಸಂತೋಷ್ ವಿರುದ್ಧ ಘೋಷಣೆ
ಬೆಂಗಳೂರು,ಜು.25: ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಮಠಾಧೀಶರ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿ.ಎಸ್.ಯಡಿಯೂರಪ್ಪರ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸುವಂತಿಲ್ಲ ಎಂದು ಕೆಲವು ಮಠಾಧೀಶರು, ಬಿಜೆಪಿ ನಾಯಕರು ಘೋಷಣೆ ಕೂಗಿ, ಒತ್ತಾಯಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಮಧ್ಯಪ್ರವೇಶ …
Read More »ಮುಚ್ಚಿಹೋದ ಕೆರೆಗೆ ಮರು ಜೀವ ನೀಡಿದ ಮನರೇಗಾ ಯೋಜನೆ
ಬಸವಕಲ್ಯಾಣ: ತಾಲೂಕಿನ ಘೋಟಾಳ ಗ್ರಾಮದ ಮುಚ್ಚಿಹೋದ ಕೆರೆಯನ್ನು ಮನರೇಗಾ ಯೋಜನೆಯಡಿ ಪುನ: ನಿರ್ಮಿಸುವ ಮೂಲಕ ಗ್ರಾಮಸ್ಥರ ಹಾಗೂ ರೈತರ ಮೊಗದಲ್ಲಿ ಮಂದಹಾಸ ಮುಡುವಂತೆ ಮಾಡಿದೆ. ಗಡಿಭಾಗವಾದ ಈ ಗ್ರಾಮದಲ್ಲಿದ್ದ ಒಂದೇ ಒಂದು ಕೆರೆ ಸಂಪೂರ್ಣವಾಗಿ ಹೂಳು ಬಿದ್ದು ಮುಚ್ಚಿಹೋಗಿತ್ತು, ಇದರಿಂದ ಮಳೆ ನೀರು ಕೆರೆಯಲ್ಲಿ ನಿಲ್ಲದೆ ಯಾರಿಗೂ ಉಪಯೋಗಕ್ಕೆ ಬಾರದಂತೆ ಹರಿದು ಹೋಗುತ್ತಿದ್ದವು. ಇದನ್ನು ಕಂಡ ತಾ.ಪಂ.ಅಧಿಕಾರಿಗಳು ಮತ್ತು ಗ್ರಾ.ಪಂ.ಸದಸ್ಯರು ಮನರೇಗಾ ಯೋಜನೆಯಡಿ ಎರಡು ಹಂತದಲ್ಲಿ ಸುಮಾರು 10 ಲಕ್ಷ …
Read More »ಪ್ರವಾಹದಲ್ಲಿ ಸಿಲುಕಿದ ವಾನರ ಸೈನ್ಯ ಆಹಾರಕ್ಕಾಗಿ ಮೊರೆಯಿಡುತ್ತಾ ಮರದಲ್ಲೇ ಕೂತು ಚೀರಾಡುತ್ತಿರುವ ಘಟನೆ
ಹಾವೇರಿ: ಜಿಲ್ಲೆಯಲ್ಲಿ ಅತಿವೃಷ್ಟಿಯ ಪರಿಣಾಮ ಜನಸಾಮಾನ್ಯರ ಮೇಲೆ ಮಾತ್ರವಲ್ಲದೇ ಪ್ರಾಣಿಗಳ ಮೇಲೂ ಬೀರಿದೆ. ಪ್ರವಾಹದಲ್ಲಿ ಸಿಲುಕಿದ ವಾನರ ಸೈನ್ಯ ಆಹಾರಕ್ಕಾಗಿ ಮೊರೆಯಿಡುತ್ತಾ ಮರದಲ್ಲೇ ಕೂತು ಚೀರಾಡುತ್ತಿರುವ ಘಟನೆ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ. ಸುಮಾರು 20 ಕ್ಕೂ ಹೆಚ್ಚು ಮಂಗಗಳು ಪ್ರವಾಹದಲ್ಲಿ ಸಿಲುಕಿದ್ದು ಮಾವಿನ ಮರದಲ್ಲಿ ಕುಳಿತು ಆಹಾರವಿಲ್ಲದೇ ಪರದಾಡುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮರದಲ್ಲೇ ಕೂತು ಆಹಾರಕ್ಕಾಗಿ ಪರದಾಡುತ್ತಿರುವ ವಾನರ ಸೇನೆಯ ರೋದನೆಯನ್ನ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ …
Read More »ಗರ್ಭಿಣಿ ನಿಧನದ ನೋವಲ್ಲೇ ಅಂತ್ಯ ಸಂಸ್ಕಾರ ಮುಗಿಸಿ ಬಂದವರಿಗೆ ಪ್ರವಾಹಕ್ಕೆ ಬಲಿಯಾಗಿತ್ತು ಮನೆ..!
ಬಾಗಲಕೋಟೆ: ಇಷ್ಟು ದಿನ ಕೊರೊನಾ ತನ್ನ ಅಟ್ಟಹಾಸ ಮೆರೆದಿತ್ತು. ಸಾಕಷ್ಟು ಸಾವು ಸಂಭವಿಸಿ ಅದೆಷ್ಟೋ ಜನರ ಬದುಕಲ್ಲಿ ನೋವನ್ನೇ ಉಳಿಸಿ ಹೋಗಿದೆ. ಇದೀಗ ಆರಂಭದ ಮಳೆಯೇ ಪ್ರವಾಹ ಸೃಷ್ಟಿಸಿ ಮತ್ತೆ ಸಾವನ್ನ ಹೆಚ್ಚು ಮಾಡಿದೆ. ಹೌದು ಜಿಲ್ಲೆಯ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಿರ್ಜಿ ಗ್ರಾಮದ ಲಕ್ಷ್ಮೀ ಎಂಬಾಕೆ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಜೋರು ಮಳೆಯ ನಡುವೆಯೇ ಹೇಗೋ ಕಷ್ಟಪಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಆ ಬಳಿಕ …
Read More »ಅತ್ಯಾಚಾರ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಿ : ಉಪ್ಪಾರ ನೌಕರರ ಸಂಘದ ಒತ್ತಾಯ
ಚಿತ್ರದುರ್ಗ : ತಾಲೂಕಿನ ಭರಮಸಾಗರ ವ್ಯಾಪ್ತಿಯ ಇಸಾಮುದ್ರಾ ಗ್ರಾಮದ ನಮ್ಮ ಉಪ್ಪಾರ ಸಮುದಾಯದ ೧೩ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಉಪ್ಪಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಪ್ಪ ಒತ್ತಾಯಿಸಿದರು. ಭಾನುವಾರ ಚಿತ್ರದುರ್ಗ ತಾಲೂಕಿನ ಭರಮಸಾಗರ ವ್ಯಾಪ್ತಿಯ ಇಸಾಮುದ್ರಾ ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯನ್ನು ಕಳೆದಕೊಂಡ ಪೋಷಕರಿಗೆ ವೈಯಕ್ತಿಕ ಧನಸಹಾಯ ನೀಡಿ ಸಾಂತ್ವನ ಹೇಳಿ ಮಾತನಾಡಿದ ಅವರು ನಮ್ಮ …
Read More »ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆಗೆ ಯತ್ನ?
ನವದೆಹಲಿ: ಫರಿದಾಬಾದ್ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯೋರ್ವಳನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಕೆಲಸದ ಒತ್ತಡದಿಂದ ತೀವ್ರ ಕೋಪಗೊಂಡ ಯುವತಿ ಸೆಕ್ಟರ್ 28ರ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಕೂಡಲೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವತಿ ಜೀವ ಉಳಿಸಿದ್ದಾರೆ. ಇನ್ನು, ಪೊಲೀಸರು ಯುವತಿ ಜೀವವನ್ನು ಉಳಿಸುತ್ತಿರುವ ವಿಡಿಯೋ ಮೊಬೈಲಿನಲ್ಲಿ ಸೆರೆಯಾಗಿದೆ. ಯುವತಿ ರಕ್ಷಣೆ ವೇಳೆ ಮೆಟ್ರೋ ನಿಲ್ದಾಣದ ಬಳಿ ಅಪಾರ ಪ್ರಮಾಣದಲ್ಲಿ …
Read More »ಮತಕ್ಕಾಗಿ ಲಂಚ: ಟಿಆರ್‌ಎಸ್ ಸಂಸದೆಗೆ 6 ತಿಂಗಳು ಜೈಲು
ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ ನಾಯಕಿ ಮತ್ತು ಮೆಹಬೂಬಾಬಾದ್ ಕ್ಷೇತ್ರದ ಸಂಸದೆ ಕವಿತಾ ಮಾಲೋತ್ ಅವರಿಗೆ 2019ರ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ಆರೋಪದ ಹಿನ್ನೆಲೆಯಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಹಾಲಿ ಲೋಕಸಭೆಯಲ್ಲಿ ಶಿಕ್ಷೆಗೆ ಗುರಿಯಾದ ಮೊದಲ ಸಂಸದೆ ಎಂಬ ಅಪಖ್ಯಾತಿಗೂ ಅವರು ಪಾತ್ರರಾಗಿದ್ದಾರೆ. ಚುನಾವಣ ಪ್ರಚಾ ರದ ವೇಳೆ ಅವರು ಮತದಾರರಿಗೆ ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿತ್ತು. ಶನಿವಾರ ವಿಶೇಷ ಕೋರ್ಟ್ ವಿಚಾರಣೆ ನಡೆಸಿ ಸಂಸದೆ …
Read More »ಪಿ.ವಿ. ಸಿಂಧು ಟೋಕಿಯೊದಲ್ಲಿ ಶುಭಾರಂಭ
ಟೋಕಿಯೊ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೊದಲ್ಲಿ ಶುಭಾರಂಭ ಮಾಡಿದ್ದಾರೆ. ರವಿವಾರ ನಡೆದ “ಜೆ’ ಗ್ರೂಪ್ ಪಂದ್ಯದಲ್ಲಿ ಇಸ್ರೇಲ್‌ನ ಕ್ಸೆನಿಯಾ ಪೊಲಿಕಾರ್ಪೋವಾ ಅವರನ್ನು 21-7, 21-10 ನೇರ ಗೇಮ್‌ಗಳಿಂದ ಸುಲಭದಲ್ಲಿ ಮಣಿಸಿದರು. ವಿಶ್ವದ 7ನೇ ರ್‍ಯಾಂಕಿಂಗ್ ಆಟಗಾರ್ತಿಯಾಗಿರುವ ಸಿಂಧು ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ಚೆಯುಂಗ್ ಎನ್‌ಗಾಯ್ ಯೀ ಅವರನ್ನು ಎದುರಿಸಲಿದ್ದಾರೆ. ಯೀ ವಿಶ್ವ ರ್‍ಯಾಂಕಿಂಗ್‌ನಲ್ಲಿ ಸಿಂಧುಗಿಂತ ಬಹಳ ಕೆಳ ರ್‍ಯಾಂಕಿಂಗ್‌ನಲ್ಲಿರುವುದರಿಂದ (34) …
Read More »ಬೆಳ್ಳಿ ಗೆದ್ದ ಮಿರಾಗೆ ಡೊಮಿನೋಸ್ ನಿಂದ ಜೀವಮಾನದುದ್ದಕ್ಕೂ ಉಚಿತ ಪಿಜಾ ಆಫರ್
ಟೋಕಿಯೊ: “ನನಗೆ ಪಿಜಾ, ಐಸ್‌ಕ್ರೀಮ್ ತಿನ್ನಬೇಕೆಂದು ಬಹಳ ಆಸೆಯಾಗುತ್ತಿದೆ. ಕಳೆದೊಂದು ತಿಂಗಳಿಂದ ನಾನಿದನ್ನು ತಿಂದಿಲ್ಲ…’ ಹೀಗೆಂದು ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಬಳಿಕ ಮೀರಾಬಾಯಿ ಚಾನು ತಮ್ಮ ಅಭಿಲಾಷೆಯನ್ನು ತೋಡಿಕೊಂಡಿದ್ದರು. ಅವರ ಈ ಮಾತನ್ನು ಆಲಿಸಿದ “ಡೊಮಿನೋಸ್ ಇಂಡಿಯಾ’ ದೊಡ್ಡದೊಂದು ಆಫರ್ ನೀಡಿದೆ. ಚಾನು ಅವರಿಗೆ ಜೀವಮಾನದುದ್ದಕ್ಕೂ ಉಚಿತವಾಗಿ ಪಿಜಾ ನೀಡುವುದಾಗಿ ಘೋಷಿಸಿದೆ. “ದೇಶಕ್ಕಾಗಿ ಪದಕ ಗೆದ್ದ ನಿಮಗೆ ಅಭಿನಂದನೆಗಳು. ಭಾರತದ ಕೋಟ್ಯಂತರ ಮಂದಿಯ ಕನಸನ್ನು ನೀವು ನನಸು ಮಾಡಿದ್ದೀರಿ. ನಿಮಗೆ …
Read More »