Breaking News

Monthly Archives: ಜೂನ್ 2021

ಗೋವಾದಲ್ಲಿ ಜೂನ್ 14 ರವರೆಗೆ ವಿ ಲಾಕ್ ಡೌನ್ ವಿಸ್ತರಿಸಲಾಗಿದೆ

ಗೋವಾ : ಕೊರೋನಾ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಗೋವಾದಲ್ಲಿ ವಿಧಿಸಿದ್ದ ಕರ್ಥ್ಯವನ್ನು ಜೂನ್ 14 ರವರೆಗೆ ವಿಸ್ತರಿಸಲಾಗಿದೆ. ಈ ಮೊದಲಿನ ನಿರ್ಧಾರದಂತೆ ಜೂ .7 ಕ್ಕೆ ಕರ್ಪ್ಯೂ ಕೊನೆಗೊಳ್ಳಬೇಕಿತ್ತು . ಗೋವಾ ಮುಖ್ಯಮಂತ್ರಿ ಡಾ . ಪ್ರಮೋದ್ ಸಾವಂತ್ ಈ ಮಾಹಿತಿ ನೀಡಿದ್ದಾರೆ . ಜೂನ್ 14 ರ ಬೆಳಗ್ಗೆ 7 ಗಂಟೆಯವರೆಗೆ ಕರ್ಪ್ಯೂ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ . ಇನ್ನು ಅಗತ್ಯವಸ್ತುಗಳ ಖರೀದಿಗೆ ಪ್ರತಿದಿನ ಬೆಳಗ್ಗೆ 7 ರಿಂದ …

Read More »

ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂಬ ಸಿಎಂ ಹೇಳಿಕೆ ಅಚ್ಚರಿ ಮೂಡಿಸಿದೆ.

ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂಬ ಸಿಎಂ ಹೇಳಿಕೆ ಅಚ್ಚರಿ ಮೂಡಿಸಿದೆ. ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟಿದೆ. ಎಲ್ಲಿಯವರೆಗೆ ಅಧಿಕಾರದಲ್ಲಿರಲು ಹೇಳುತ್ತಾರೋ ಅಲ್ಲಿಯವರೆಗೂ ನಾನು ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ನಾನು ಯಾವುದೇ ಗೊಂದಲದಲ್ಲಿ …

Read More »

ದೆಹಲಿ ಮೂರು ತಿಂಗಳಲ್ಲಿ ಅತ್ಯಂತ ಕಡಿಮೆ 414 ಕೊರೋನಾ ಪ್ರಕರಣ ದಾಖಲು

ನವದೆಹಲಿ : ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 414 ಹೊಸ ಸೋಂಕುಗಳು ವರದಿಯಾದ ಕಾರಣ ದೆಹಲಿಯಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳು ಶನಿವಾರ 500 ರ ಗಡಿಗಿಂತ ಕಡಿಮೆಯಾಗಿದೆ. ಇದು ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 6731ಕ್ಕೆ ಇಳಿಸಿತು. ಧನಾತ್ಮಕತೆಯ ಪ್ರಮಾಣವು ಶೇಕಡಾ 0.53ಕ್ಕೆ ಇಳಿದರೆ, 368ಪ್ರಕರಣಗಳು ವರದಿಯಾದ ಮಾರ್ಚ್ 15ರ ನಂತರ ಶನಿವಾರ ಸೋಂಕಿನ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಮಾರ್ಚ್ 10ರಂದು ಕೊನೆಯದಾಗಿ ವರದಿಯಾದ ಅತ್ಯಂತ ಕಡಿಮೆ ಸೋಂಕಿನ ಪ್ರಮಾಣವು …

Read More »

ಶಾಲಾ ಮಕ್ಕಳಿಗೆ ಪತ್ರ ಬರೆದು ಕುಶಲೋಪರಿ ವಿಚಾರಿಸಿದ ಶಿಕ್ಷಕಿ

ಚಿಕ್ಕಮಗಳೂರು, ; ಕೊರೊನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಬಾಗಿಲು ಹಾಕಿ ವರ್ಷಗಳೇ ಕಳೆಯುತ್ತಿದೆ. ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳು ತೆರೆಯದೇ ಎರಡು ವರ್ಷಗಳು ತುಂಬುತ್ತಾ ಬರುತ್ತಿದೆ. ಮಕ್ಕಳು ಶಾಲೆ ಕಡೆ ಮುಖ ಮಾಡಿಲ್ಲ ಇದು ಮಕ್ಕಳ ಮತ್ತು ಶಿಕ್ಷಕರ ಬಾಂಧವ್ಯದ ಬೆಸುಗೆ ಕಳಚುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಶಿಕ್ಷಕಿಯೊಬ್ಬರು ಮಕ್ಕಳಿಗೆಲ್ಲ ಪತ್ರ ಬರೆಯುವ ಮೂಲಕ ತಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.   ಚಿಕ್ಕಮಗಳೂರು ತಾಲೂಕಿನ …

Read More »

ಸಿಎಂ ಬದಲಾವಣೆ : ದೆಹಲಿಯಲ್ಲಾದ ಚರ್ಚೆ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು?

ನವದೆಹಲಿ : ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆದಿಲ್ಲ, ಕರೊನಾ ಮತ್ತು ಐದು ರಾಜ್ಯಗಳ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಯಡಿಯೂರಪ್ಪ ಅವರನ್ನು ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆ ಮಾಡಿದ್ದೇವೆ. ಆದರೆ ಆಗಾಗ ಸಿಎಂ ಬದಲಾವಣೆ ರೀತಿಯ ಹೇಳಿಕೆಗಳು ಬರುತ್ತಿವೆ. ಹೇಳಿಕೆ ನೀಡಿದವರ …

Read More »

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಬಗ್ಗೆ ಡಿವಿಎಸ್ ಸ್ಪಷ್ಟನೆ

ಬೆಂಗಳೂರು : ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದು ಹಂತದಲ್ಲಿ ರಾಜಕೀಯ ಚಟುವಟಿಕೆ ನಡೆಯುತ್ತಿದೆ ಅನ್ನೋದು ಸಹಜ. ಇದಕ್ಕೆ ಇತಿಶ್ರೀ ಹಾಕಲು ಯತ್ನ ಮಾಡಲಾಗ್ತಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಲವರಿಂದ ಕೆಲವು ಕಡೆ ಹೇಳಿಕೆ ಕೊಡಲಾಗ್ತಿದೆ. …

Read More »

ಬಿಜೆಪಿಯಲ್ಲಿ ನಿಲ್ಲದ ಚಟುವಟಿಕೆ: ವಿಜಯೇಂದ್ರ ಬಳಿಕ ದೆಹಲಿಗೆ ಸಿ.ಟಿ.ರವಿ, ಮುರುಗೇಶ್ ನಿರಾಣಿ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಸದ್ಯಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ನಾಯಕರ ದೆಹಲಿ ಭೇಟಿ ನಿಂತಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ನಡ್ಡಾ ಅವರ ಭೇಟಿಯ ನಂತರ ತಮ್ಮ ಹುಮ್ಮಸ್ಸು ಹೆಚ್ಚಾಗಿದೆ ಎಂದು ಟ್ವೀಟ್‌ ಮಾಡಿದ್ದರು. ಅಲ್ಲದೇ ತಮ್ಮ ದೆಹಲಿ ಭೇಟಿ ಯಶಸ್ವಿಯಾಗಿದೆ ಎಂದು ಆಪ್ತರ ಬಳಿ …

Read More »

ಕಡಹೆಮ್ಮಿಗೆ: ಶಿಥಿಲಗೊಂಡ ನೀರಿನ ಟ್ಯಾಂಕ್‌; ಆತಂಕದಲ್ಲಿ ಜನರು

ಕಿಕ್ಕೇರಿ: ಹೋಬಳಿಯ ಕಡಹೆಮ್ಮಿಗೆ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಕುಸಿಯುವ ಹಂತ ತಲುಪಿದೆ. ಹೋಬಳಿಯ ಗಡಿಯಂಚಿನ ಗ್ರಾಮವಾದ ಆನೆಗೊಳ ಗ್ರಾ.ಪಂ ವ್ಯಾಪ್ತಿಗೆ ಈ ಗ್ರಾಮ ಸೇರಿದೆ. ಗ್ರಾಮದ ಜೊತೆಗೆ ಕಡಹೆಮ್ಮಿಗೆ ಕೊಪ್ಪಲು ಗ್ರಾಮ ಹೊಂದಿಕೊಂಡಿದೆ. ಸುಮಾರು 1,480 ಜನಸಂಖ್ಯೆ ಇದೆ. ಎರಡು ಗ್ರಾಮಗಳಿಗೆ ಈ ಟ್ಯಾಂಕಿನಿಂದ ನೀರು ಸರಬರಾಜು ಆಗುತ್ತಿದೆ. ಆದರೆ, ಶುಚಿತ್ವವೂ ಇಲ್ಲ. ಟ್ಯಾಂಕ್‌ನ ಪ್ಲಾಸ್ಟರಿಂಗ್‌ ಕಳಚಿ ಬೀಳುತ್ತಿದೆ. ಕಬ್ಬಿಣಗಳು ಹೊರಗೆ ಕಾಣಿಸುತ್ತಿದ್ದು, ತುಕ್ಕು ಹಿಡಿಯುತ್ತಿವೆ. ಕೆಲವೆಡೆ …

Read More »

ಸರ್ಕಾರದ ಹಣ ನುಂಗಬೇಡಿ ಎಂದು ಸ್ಟೇಟಸ್​ ಹಾಕಿದ್ದಕ್ಕೆ ಕೊಂದೇ ಬಿಟ್ರಾ?; ಗ್ರಾಮ ಪಂಚಾಯತ್​ ಅಧ್ಯಕ್ಷನ ವಿರುದ್ಧ ಕೊಲೆ ಶಂಕೆ

ಉಡುಪಿ: ಸರ್ಕಾರದ ಹಣ ನುಂಗಬೇಡಿ ಎಂದು ಗ್ರಾಮಪಂಚಾಯತ್ ಅಧ್ಯಕ್ಷರೊಬ್ಬರ ವಿರುದ್ಧ ಸ್ಟೇಟಸ್​ ಹಾಕಿದ್ದಕ್ಕೆ ಗ್ರಾಮಸ್ಥನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಸ್ಥರೊಬ್ಬರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದು, ಗ್ರಾಮಪಂಚಾಯತ್ ಅಧ್ಯಕ್ಷರು ಕೊಲೆ ಮಾಡಿರಬಹುದು ಎಂಬ ಅನುಮಾನವೂ ಮೂಡಿದೆ. ಕುಂದಾಪುರ ತಾಲೂಕು ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ವಿರುದ್ಧ ಕೊಲೆ ಶಂಕೆ ವ್ಯಕ್ತವಾಗಿದೆ. ಇವರು ಯಡಮೊಗೆ ಗ್ರಾಮದ ಉದಯ ಗಾಣಿಗ ಅವರನ್ನು ಕೊಲೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಗ್ರಾಮ ಪಂಚಾಯತ್ ಲಾಕ್​ಡೌನ್​ …

Read More »

ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳನ್ನೂ ಎತ್ತಂಗಡಿ ಮಾಡಿದ ರಾಜ್ಯ ಸರಕಾರ

ಬೆಂಗಳೂರು – ಕಳೆದ ಕೆಲವು ದಿನಗಳಿಂದ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳನ್ನೂ ರಾಜ್ಯ ಸರಕಾರ ಎತ್ತಂಗಡಿ ಮಾಡಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇಬ್ಬರನ್ನು ಶನಿವಾರ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ರೋಹಿಣಿ ಸಿಂಧೂರಿ ಅವರನ್ನು ಧರ್ಮದತ್ತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದ್ದು ಅವರ ಜಾಗಕ್ಕೆ ಗೌತಮ್ ಬಗಾದಿ ಅವರನ್ನು ಹಾಕಲಾಗಿದೆ. ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು …

Read More »