Breaking News

Monthly Archives: ಜೂನ್ 2021

ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆ ಜಾರಿಗೊಳಿಸಲು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ : ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ‘ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್’ (ಒಎನ್ ಒಆರ್ ಸಿ) ಯೋಜನೆಯನ್ನು ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ. ಪಶ್ಚಿಮ ಬಂಗಾಳ, ಛತ್ತೀಸ್ ಗಢ ಮತ್ತು ಅಸ್ಸಾಂ ಇನ್ನೂ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸುತ್ತಿದ್ದಂತೆ ಈ ಅಭಿಪ್ರಾಯ ಬಂದಿದೆ. ಈ ಯೋಜನೆಯು ವಲಸೆ ಕಾರ್ಮಿಕರಿಗೆ ಇತರ ರಾಜ್ಯಗಳಲ್ಲಿ ಅವರ ಕೆಲಸದ ಸ್ಥಳದಲ್ಲಿ ಮತ್ತು ಅವರ …

Read More »

ಫೋನ್ ಮಾಡಿದ ಸೈಬರ್ ಖದೀಮರು, 102,ಬಾರಿ ಓಟಿಪಿ ಶೇರ್, ಬರೊಬ್ಬರಿ ಹತ್ತು ಲಕ್ಷ ರೂ ಗುಳುಂ

ಬೆಳಗಾವಿ- ಅಜ್ಞಾತರು ಫೋನ್ ಮಾಡಿ ಓಟಿಪಿ ಕೇಳಿದ್ರೆ ಕೊಡಬೇಡಿ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಜನ ಜಾಗೃತರಾಗುತ್ತಿಲ್ಲ,ಒಂದೆರಡು ಬಾರಿ ಅಲ್ಲ,ಬರೊಬ್ಬರಿ 102,ಬಾರಿ ಓಟಿಪಿ ಶೇರ್ ಮಾಡಿದವನ ಖಾತೆಯಿಂದ ಬರೊಬ್ಬರಿ ಹತ್ತು ಲಕ್ಷ ರೂ ಗುಳುಂ ಆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಈ ರೀತಿ ವಂಚನೆಗೊಳಗಾದ ವ್ಯೆಕ್ತಿ ಅಜ್ಞಾನಿಯೂ ಅಲ್ಲ,ಅನಕ್ಷರಸ್ಥನೂ ಅಲ್ಲ,102 ಬಾರಿ ಓಟಿಪಿ ಶೇರ್ ಮಾಡಿ ವಂಚನೆಗೊಳಗಾದ ವ್ಯೆಕ್ತಿ ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಅನ್ನೋದು ವಿಶೇಷ. ಇತ್ತೀಚಿಗೆ ಸೈಬರ್ ಕ್ರೈಂ …

Read More »

ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ದೆಹಲಿಯ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ?

ಬೆಂಗಳೂರು: ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾನು ದೆಹಲಿಗೆ ಭೇಟಿ ನೀಡಿದ್ದು, ನನ್ನ ದೆಹಲಿಯ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ಮಧ್ಯೆ ಶಾಸಕ ಅರವಿಂದ ಬೆಲ್ಲದ್ ದೆಹಲಿ ಭೇಟಿಯು ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಹಿನ್ನೆಲೆಯಲ್ಲಿ ಶಾಸಕ ಬೆಲ್ಲದ್ ಸ್ಪಷ್ಟನೆ ನೀಡಿದ್ದಾರೆ. ನಾನು ರಾಷ್ಟ್ರೀಯ ನಾಯಕರ ಭೇಟಿಗಾಗಲಿ, ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು …

Read More »

ಸೋನು ಸೂದ್ ​ರನ್ನ ಭೇಟಿಯಾಗಲು 700 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿ ಬಂದ ಅಭಿಮಾನಿ..!

ಬಾಲಿವುಡ್​ ನಟ ಸೋನು ಸೂದ್​ ನಟನೆಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಬಡ ಜನರ ಪರವಾಗಿ ನಿಂತಿರುವ ಸೂನ್​ ಸೂದ್​ರನ್ನ ಭೇಟಿಯಾಗಬೇಕು ಅಂತಾ ವೆಂಕಟೇಶ್​ ಎಂಬಾತ ಹೈದರಾಬಾದ್​ನಿಂದ ಮುಂಬೈವರೆಗೆ ಕಾಲ್ನಡಿಗೆಯಲ್ಲೇ ಸಾಗಿ ಬಂದಿದ್ದಾನೆ. ಟ್ವಿಟರ್​ನಲ್ಲಿ ಅಭಿಮಾನಿಯನ್ನ ಭೇಟಿಯಾದ ಫೋಟೋ ಶೇರ್​ ಮಾಡಿರುವ ಸೋನು ಸೂದ್,​ ಅಭಿಮಾನಿಗಳ ಬಳಿ ನನ್ನ ಭೇಟಿಯಾಗಲು ಈ ರೀತಿಯ ಕಷ್ಟವನ್ನ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. …

Read More »

3 ಆಯಂಬುಲೆನ್ಸ್ ಕೊಡುಗೆ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್

ಬೆಳಗಾವಿ: ಇತ್ತೀಚೆಗೆ ಶಾಸಕ ಎಂಪಿ ರೇಣುಕಾಚಾರ್ಯ ತಾವಾಗಿಯೇ ಆಯಂಬುಲೆನ್ಸ್ ಡ್ರೈವ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಶಾಸಕಿ ಅಂಜಲಿ ನಿಂಬಾಳ್ಕರ್ ತಾವೇ ಌಂಬುಲೆನ್ಸ್​ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಖಾನಾಪೂರದಲ್ಲಿ ತಾಯಿ ಫೌಂಡೇಶನ್​ ವತಿಯಿಂದ ಸಾರ್ವಜನಿಕರಿಗೆ ನೀಡಲಾದ ಅಂಬ್ಯುಲೆನ್ಸ್​ನ್ನು ತಾವೇ ಚಲಾಯಿಸುವ ಮೂಲಕ ಉದ್ಘಾಟಿಸಿದ್ದಾರೆ. ಅಂಜಲಿ ನಿಂಬಾಳ್ಕರ್ ಫೌಂಡೇಶನ್ ವತಿಯಿಂದ ತನ್ನ ಕ್ಷೇತ್ರದ ಜನರಿಗೆ ಮೂರು ಅಂಬ್ಯುಲೆನ್ಸ್ ಕೊಡುಗೆ ನೀಡಿದ್ದಾರೆ. ಈ ವೇಳೆ ತಾವೇ ಌಂಬುಲೆನ್ಸ್​ ಚಲಾಯಿಸಿದ್ದನ್ನ ಕಂಡು …

Read More »

ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ  ಚಿರತೆಯನ್ನು ಬೈಲಹೊಂಗಲದ ಬಿಜೆಪಿ ಯುವ ಮುಖಂಡ ಗುರು ಮೆಟಗುಡ್ಡ ದತ್ತು ಸ್ವೀಕರಿಸಿದರು.

ಬೆಳಗಾವಿ – ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ  ಚಿರತೆಯನ್ನು ಬೈಲಹೊಂಗಲದ ಬಿಜೆಪಿ ಯುವ ಮುಖಂಡ ಗುರು ಮೆಟಗುಡ್ಡ ದತ್ತು ಸ್ವೀಕರಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಮ್ ವಿ ಅಮರನಾಥ, ವಲಯ ಅರಣ್ಯ ಅಧಿಕಾರಿ  ಡಿ. ಶಿವಕುಮಾರ್, ರಾಕೇಶ್ ಅರ್ಜುನವಾಡ, ಪರಿಸರ ಪ್ರೇಮಿ ದಯಾನಂದ ಪರಾಳಶೆಟ್ಟರ್ ಉಪಸ್ಥಿತಿಯಲ್ಲಿ ಗುರು ಮೆಟಗುಡ್ ದತ್ತು ಸ್ವೀಕಾರ ಪ್ರಮಾಣ ಪತ್ರ ಪಡೆದರು. ಮುಂದಿನ ಒಂದು ವರ್ಷಗಳ ಅವಧಿಗೆ ಚಿರತೆಯನ್ನು ಅವರು ದತ್ತು ಸ್ವೀಕರಿಸಿದ್ದಾರೆ.

Read More »

ದುಬಾರಿ’ ಸಿನಿಮಾದಿಂದ ನಂದ ಕಿಶೋರ್ ಔಟ್: ನಿರ್ಮಾಪಕ ಸ್ಪಷ್ಟನೆ

ಧ್ರುವ ಸರ್ಜಾ ನಟನೆಯ ‘ದುಬಾರಿ’ ಸಿನಿಮಾದಿಂದ ನಿರ್ದೇಶಕ ನಂದ ಕಿಶೋರ್ ಅವರನ್ನು ಹೊರಗಿಡಲಾಗಿದೆ ಎಂಬ ಬಗ್ಗೆ ಸಿನಿಮಾದ ನಿರ್ಮಾಪಕ ಉದಯ್ ಕೆ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ. ‘ನಂದ ಕಿಶೋರ್ ಅವರನ್ನು ಹೊರಗಿಡಲಾಗಿಲ್ಲ. ಬದಲಿಗೆ ‘ದುಬಾರಿ’ ಸಿನಿಮಾದ ಚಿತ್ರೀಕರಣವನ್ನು ತುಸು ತಡವಾಗಿ ಮಾಡಲಾಗುತ್ತದೆ. ಸಿನಿಮಾವನ್ನು ತುಸು ಹೋಲ್ಡ್ ಮಾಡಿದ್ದೇವೆ ಅಷ್ಟೆ’ ಎಂದಿದ್ದಾರೆ ಉದಯ್ ಕೆ ಮೆಹ್ತಾ. ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ‘ದುಬಾರಿ’ ಸಿನಿಮಾದ ಅರ್ಧದಷ್ಟು ಚಿತ್ರೀಕರಣ ವಿದೇಶದಲ್ಲಿಯೇ ನಡೆಯಬೇಕಿದೆ. ಹಾಗಾಗಿ …

Read More »

ಧಾರಾವಾಹಿಯಲ್ಲಿ ‘ಅತ್ತಿಗೆ-ಮೈದುನ’ ನಿಜಜೀವನದಲ್ಲಿ ಪತಿ-ಪತ್ನಿ: ಧಾರಾವಾಹಿ ಬ್ಯಾನ್ ಮಾಡಲು ಒತ್ತಾಯ

ಧಾರಾವಾಹಿಯಲ್ಲಿ ಅಕ್ಕ-ತಮ್ಮನಾಗಿ ನಟಿಸಿದವರು ಮದುವೆ ಆಗಿರುವ ಉದಾಹರಣೆಗಳು ಇವೆ. ಇದೀಗ ಹಿಂದಿ ಧಾರಾವಾಹಿಯೊಂದರಲ್ಲಿ ಅತ್ತಿಗೆ-ಮೈದುನ ಪಾತ್ರ ಮಾಡುತ್ತಿರುವವರು ನಿಜ ಜೀವನದಲ್ಲಿ ಮದುವೆ ಆಗುತ್ತಿದ್ದಾರೆ. ಆದರೆ ಈ ಧಾರಾವಾಹಿಯನ್ನು ಬ್ಯಾನ್ ಮಾಡಬೇಕು ಎಂದು ವೀಕ್ಷಕರು ಒತ್ತಾಯಿಸಿದ್ದಾರೆ. ‘ಗುಮ್ ಹೈ ಕಿಸೀಕೆ ಪ್ಯಾರ್‌ ಮೆ’ ಹೆಸರಿನ ಧಾರಾವಾಹಿಯಲ್ಲಿ ಅತ್ತಿಗೆ ಪಾತ್ರಧಾರಿ ಐಶ್ವರ್ಯ ಶರ್ಮಾ ಹಾಗೂ ಮೈದುನ ಪಾತ್ರಧಾರಿ ಹಾಗೂ ಧಾರಾವಾಹಿ ನಾಯಕ ನೀಲ್ ಭಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೆಲವೇ ದಿನಗಳಲ್ಲಿ ಮದುವೆ ಆಗಲಿದ್ದಾರೆ. …

Read More »

ಸಾಲ ಕೊಡಿಸ್ತೀವಿ, ಫೀಸ್ ಕಟ್ಟಿ ಎಂದ ಖಾಸಗಿ ಶಾಲೆ

ಬೆಂಗಳೂರು: ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಯೊಂದು ಸಾಲ ದಂಧೆ ಶುರು ಮಾಡಿಕೊಂಡಿದೆ. ಸಾಲ ಕೊಡಿಸ್ತೀವಿ, ನಮಗೆ ಫೀಸ್ ಕಟ್ಟಿ ಎಂದು ಲಗ್ಗೆರೆಯ ಖಾಸಗಿ ಶಾಲೆಯೊಂದು ಪೋಷಕರಿಗೆ ದುಂಬಾಲು ಬಿದ್ದಿದೆ. ಲಗ್ಗೆರೆಯ ಈ ಖಾಸಗಿ ಶಾಲೆ, ಫೈನಾನ್ಸ್ ಪೀರ್ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿದ್ಯಾರ್ಥಿಯ ಟಿಸಿಯನ್ನು ಅಡಮಾನ ಇಟ್ಟುಕೊಂಡು ಪೊಷಕರಿಗೆ ಸಾಲ ವಿತರಣೆಗೆ ಈ ಫೈನಾನ್ಸ್ ಕಂಪನಿ ಮುಂದಾಗಿದೆ. ಸಾಲ ತೆಗೆದುಕೊಂಡ 6 ತಿಂಗಳವರೆಗೆ ಯಾವುದೇ ರೀತಿಯ …

Read More »

ಹೋಮ, ಹವನ ಮಾಡಿದ್ದಕ್ಕೆ ಪ್ರಕರಣ ; ತಹಸೀಲ್ದಾರ್ ವಿರುದ್ಧ ಜನರ ಆಕ್ರೋಶ

ದಾವಣಗೆರೆ: ಅರಬಗಟ್ಟೆಯ ಕೋವಿಡ್ ಆರೈಕೆ ಸೆಂಟರ್​​ನಲ್ಲಿ ಶಾಸಕ ರೇಣುಕಾಚಾರ್ಯ ಹೋಮ, ಹವನ ಮಾಡಿದ್ದಕ್ಕೆ ಶಾಸಕರ ವಿರುದ್ದ ಪ್ರಕರಣ ದಾಖಲಿಸಲು ತಹಸೀಲ್ದಾರ್​​ ಮುಂದಾದ ಬೆನ್ನಲ್ಲೇ ತಾಲೂಕು ಆಡಳಿತದ ವಿರುದ್ಧ ಸೋಂಕಿತರು ಆಕ್ರೋಶ ಹೊರಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್​​ನಲ್ಲಿ ಸೋಂಕಿತರಿಂದ ವಿರೋಧ ವ್ಯಕ್ತವಾಗಿದೆ. ಸೋಂಕಿತರು ತಹಸೀಲ್ದಾರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಶಾಸಕರ ಶಾಂತನಗೌಡರ ಕುಮ್ಮಕ್ಕಿನಿಂದ ತಹಸೀಲ್ದಾರ್ ಅವರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ …

Read More »