ಬೆಳಗಾವಿ ಜಿಲ್ಲೆಯ ಇನ್ನಿತರ ಸಕ್ಕರೆ ಕಾರ್ಖಾನೆಗಳನ್ನು ಹೋಲಿಸಿದರೆ ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಚಿನ್ನದಂತೆ ಕಾರ್ಖಾನೆ ಇದೆ. ಈ ಸಕ್ಕರೆ ಕಾರ್ಖಾನೆ ಮಾರಾಟ ಮಾಡಲಿದ್ದಾರೆ ಎಂಬ ಊಹಾಪೋಹ ನಮ್ಮ ಏಳಿಗೆ ಸಹಿಸದೇ ಇರುವರು ಹೇಳುತ್ತಿದ್ದಾರೆ. ಯಾವ ಕಾಲಕ್ಕೆ ಸಕ್ಕರೆ ಕಾರ್ಖಾನೆ ಮಾರಾಟ ಮಾಡುವುದಿಲ್ಲ. 13 ವರ್ಷಗಳಲ್ಲಿ ರೈತರು, ಕಾರ್ಮಿಕರು ಸಾತ ನೀಡಿದ್ದು ಈ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಸಹಕರಿಸಿರಿ. ಎಂದು ಉದ್ಯಮಿ ಹಾಗೂ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರಾದ ಡಾಕ್ಟರ್ ರಮೇಶ್ ದೊಡ್ಡನವರ್ ಕಾಗವಾಡದಲ್ಲಿ ಹೇಳಿದರು.
ರವಿವಾರ ರಂದು ಸಕ್ಕರೆ ಕಾರ್ಖಾನೆಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾಹಿತಿ ನೀಡಿದರು.
ರಾಜ್ಯದ ಗಡಿ ಕಾಗವಾಡದಲ್ಲಿ ಒಳ್ಳೆಯ ಲೊಕೇಶನ್ದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ್ದು ಕಳೆದ 13 ಹಂಗಾಮಿನಲ್ಲಿ ಸಕಾಲದಲ್ಲಿ ರೈತರಿಗೆ ಕಬ್ಬಿನ ಬೆಲೆ ನೀಡಿದ್ದೇವೆ. ಈ ವರ್ಷ 12 ಲಕ್ಷ ಟನ ಕಬ್ಬುನುರಿಸುವ ಗುರಿ ಹೊಂದಿದ್ದು ರೈತರು ಕಾರ್ಮಿಕರು ಸಹಕರಿಸಿರಿ ಎಂದು ಹೇಳಿದರು
ಕೇವಲ ಕಬ್ಬುನೂರುಸಿ ಸಕ್ಕರೆ ನಿರ್ಮಿಸಿದರೆ ಮಾತ್ರ ಸಾಧ್ಯವಿಲ್ಲ ಉಪ ಘಟಕಗಳಾದ ಇದೇನಾಲ್ ಉತ್ಪಾದನೆಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡ ಬೇಕಾಗಿದೆ. ಆದರೆ ಈಗ ಕೆಲ ನಿಯಮಗಳಿಂದ ಬಿ ಶುಗರ್ ದಿಂದ ಇತೇನಲ್ ನಿರ್ಮಿಸಲು ಸೂಚನೆ ನೀಡಿದ್ದು. ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟದಲ್ಲಿ ಸಿಲ್ಕ್ ಲಿವೆ ರಾಜ್ಯದಲ್ಲಿಯ ಸಕ್ಕರೆ ಕಾರ್ಖಾನೆಯ ಅರ್ಧದಷ್ಟು ಮಾಲೀಕರು ರಾಜಕೀಯ ಮುಖಂಡರಿದ್ದಾರೆ ಇವರು ಮುಂಡಾಳತೆ ವಹಿಸಿ ಸರ್ಕಾರಕ್ಕೆ ಮನವಿ ಮಾಡಿಕೊಂಡು ಇದೇನಾಲ್ ಮತ್ತು ಡಿಸ್ಟಲರಿ, ಕೋ ಜನರೇಶನ್ ವಿದ್ಯುತ್ ಘಟಕ ಇದರ ಬಗ್ಗೆ ಚರ್ಚಿಸಿ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳಿಗೆ ಸ್ಪಂದಿಸಿರಿ ಎಂದು ಡಾಕ್ಟರ್ ರಮೇಶ್ ದೊಡ್ಡನವರ್ ಹೇಳಿದರು.
ಬೈಟ್
ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಮಾಜಿ ಶಾಸಕರಾದ ಕೆ ಪಿ ಮಗನವರ್ ಮಾತನಾಡಿ ಸಕ್ಕರೆ ಕಾರ್ಖಾನೆ ಕಟ್ಟಿಸಲು ಬಹಳಷ್ಟು ಕಷ್ಟವಾಗಿವೆ. ಸದ್ಯಕ್ಕೆ ರಾಜ್ಯದಲ್ಲಿ ಒಳ್ಳೆಯ ಸಕ್ಕರೆ ಕಾರ್ಖಾನೆಯಾಗಿದ್ದು ಅನೇಕ ಕಾರ್ಮಿಕರಿಗೆ, ರೈತರಿಗೆ ಆಧಾರ ಸ್ತಂಭವಾಗಿದೆ, ಕೆಲವರು ನಮ್ಮ ಒಳ್ಳೇದನ್ನು ಸಹಿಸದೆ ಸಕ್ಕರೆ ಕಾರ್ಖಾನೆ ಮಾರಾಟ ಮಾಡಲಿದ್ದಾರೆ. ಎಂದು ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ ಇದು ಸಂಪೂರ್ಣ ಸುಳ್ಳ, ರೈತರು ಇದನ್ನು ಗಮನದಲ್ಲಿ ತೆಗೆದುಕೊಳ್ಳದೆ ಕಬ್ಬು ಪೂರೈಕೆ ಮಾಡಿರಿ. ಸಕಾಲದಲ್ಲಿ ಒಳ್ಳೆಯದರ ನೀಡುತ್ತೇವೆ ಎಂದರು. ಈ ವರ್ಷದ ಕಬ್ಬಿಗೆ ನೀಡುವ ಬಿಲ್ ಎಫ್ ಆರ್ ಪಿ ಪ್ರಕಾರ ಯೋಗ್ಯವಾದ ಧರ ಬರುವ ಎರಡು ದಿನಗಳಲ್ಲಿ ತಿಳಿಸುತ್ತೇವೆ ಎಂದರು.
ಬೈಟ್
ಸಕ್ಕರೆ ಕಾರ್ಖಾನೆಯ ಆಡಳಿತ ಅಧಿಕಾರಿ ಅರುಣ್ ಪಾರಂಡೆ ಮಾತನಾಡಿ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಶೇಕಡಾ 90 ರಷ್ಟು ಕಬ್ಬು ಬೆಳೆಗಾರ ರೈತರಿದ್ದಾರೆ ಅವರು ಕಬ್ಬು ಬೆಳೆಸಲು ಸಮರ್ಪಕವಾಗಿ ಕಬ್ಬಿಗೆ ಬೆಲೆ ನೀಡಬೇಕಾಗಿದೆ. ಈ ಕಾರಣ ಮಾರುಕಟ್ಟೆಯಲ್ಲಿ ಸಕ್ಕರೆ 42 ರೂಪಾಯಿ ಪ್ರತಿ ಕೆಜಿ ಮಾರಾಟ ಆಗಬೇಕಾಗಿದೆ. ಇಥೆನಾಲ್ 70 ರೂಪಾಯಿ ಲೀಟರ್, ಹಾಗೂ ಕೋ ಜನರೇಷನ್ ಘಟಕದಿಂದ ಉತ್ಪಾದಿಸುವ ಕರೆಂಟ್ ಬಿಲ್ ಪ್ರತಿ ಯೂನಿಟ್ ಎಂಟು ರೂಪಾಯಿ ಮಾರಾಟವಾಗಬೇಕಾಗಿದೆ ವಿದ್ಯುತ್ ನಿರ್ಮಿಸಲು ಒಂದು ಯೂನಿಟಿಗೆ 5 ರೂಪಾಯಿ 50 ಪೈಸೆ ವೆಚ್ಚವಾಗುತ್ತಿದೆ. ಆರು ರೂಪಾಯಿ ಯುನಿಟ್ ಮಾರಾಟವಾದರೂ 50 ಪೈಸೆ ಕಾರ್ಖಾನೆ ಮಾಲೀಕರಿಗೆ ದೊರೆಯಲಿದೆ. ಅಂದರೆ ಮಾತ್ರ ಸಕ್ಕರೆ ಕಾರ್ಖಾನೆಗಳು ಉಳಿಯಲು ಸಾಧ ಇದೆ. ಎಂದು ಹೇಳಿದರು. ಈ ವರ್ಷ 12 ಲಕ್ಷ ಟನ್ ಕಬ್ಬುನರಿಸುವ ಗುರಿ ಹೊಂದಿದ್ದೇವೆ ಎಂದರು.
ಬೈಟ್
ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಪೃಥ್ವಿ ದೊಡ್ಡನವರ್, ಅಧಿಕಾರಿ ರವೀಂದ್ರ ಜಾಡರ್,
ಕೆನ ಮ್ಯಾನೇಜರ್ ಮಹಾವೀರ ಬಿರ್ನಾಳೆ, ಕೌತುಕ ಮಗನವರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ರೈತರು ಪಾಲ್ಗೊಂಡಿದ್ದರು.