Breaking News

ಮಹಿಳೆ ಸೃಷ್ಠಿಯ ಮೂಲ: ಡಾ. ಲತಾ

Spread the love

ಬಾಗಲಕೋಟೆ : ದೃಡ ಮನಸ್ಸು ಮತ್ತು ಪರಿಶ್ರಮವಿದ್ದರೆ ಏನನ್ನೂ ಬೇಕಾದರೂ ಸಾದಿಸಬಹುದು. ಛಲ ಇಟ್ಟಕೊಂಡರೆ ಎಲ್ಲವೂ ಸಾಧ್ಯ ಸಾಧಕ ಮಹಿಳೆಯರೆಲ್ಲರೂ ಒಬ್ಬಂಟಿ ಹೋರಾಟದ ಮೂಲಕವೇ ಸೋತು ಗೆದ್ದಿದ್ದು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ ಅವರನ್ನು ಪ್ರೇರಣೆಯನ್ನಾಗಿಸಿಕೊಂಡು ಗುರಿಯತ್ತ ಹೆಜ್ಜೆ ಹಾಕಿ ಎಂದು ಬಾಗಲಕೋಟೆ ವಿವಿಯ ರೆಜಿಸ್ಟರ್ ಡಾ.ಕೆ.ಪಿ ಲತಾ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲಿಕರಣ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾನ ವೇತನಕ್ಕೆ ಆಗ್ರಹಿಸಿ ಜಗತ್ತಿನಾದ್ಯಂತ ಪ್ರಾರಂಭವಾದ ಪ್ರತಿಭಟನೆಯ ಸಂಕೇತವಾಗಿ ಪ್ರಾರಂಭವಾದ ಮಹಿಳಾ ದಿನಾಚರಣೆಯನ್ನು ವಿಶ್ವಸಂಸ್ಥೆಯಿAದ ಮಾರ್ಚ್ ೮ರಂದು ಅಧಿಕೃತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಹಕ್ಕುಗಳು, ನ್ಯಾಯ ಮತ್ತು ಕ್ರಿಯೆ ಎಂಬ ಘೋಷವಾಕ್ಯದಡಿ ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸಹಕಾರ ನೀಡಿದರೆ ಅದು ನಮ್ಮ ಸಮಾಜಕ್ಕೆ ಲಾಭ ಎಂಬ ಪರಿಕಲ್ಪನೆಯಲ್ಲಿ ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಎಲ್ಲ ಕಷ್ಟಗಳನ್ನು ಎದುರಿಸಿ ಸಮಾಜಕ್ಕಾಗಿ ಮತ್ತು ಕುಟುಂಬಕ್ಕಾಗಿ ದುಡಿಯುವ ಮಹಿಳೆಗೆ ವರ್ಷಪೂರ್ತಿ ಗೌರವಿಸಿ ಪ್ರತಿದಿನ ಆಚರಣೆ ಮಾಡಬೇಕು. ಇಂದು ಮಹಿಳೆ ಅಬಲೆಯಾಗಿರದೆ ಸಬಲೆಯಾಗಿದ್ದು ಎಲ್ಲದಕ್ಕೂ ಸಶಕ್ತಳಾಗಿದ್ದಾಳೆ ಎಂದರು.


ಪದ್ಮಶ್ರೀ ಪಡೆದ ಅರುಣಿಮಾ ಸಿನ್ಹಾ, ದೇಶದ ಮೊದಲ ಗುಪ್ತಚಾರಿ ನೀರಾ ಆರ್ಯ, ಸಾಲು ಮರದ ತಿಮ್ಮಕ್ಕರಂತಹ ಸಾಧಕರ ಬದುಕನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ನೀರಿಕ್ಷೆ ಇಟ್ಟುಕೊಳ್ಳದೆ ಕೆಲಸ ಮಾಡಿದರೆ ಗೆಲವು ನಿಶ್ಚಿತ. ಕೆಲಸದಲ್ಲಿ ಪರಿಶ್ರಮ ಮತ್ತು ಇತಿಮಿತಿಯ ಸರಳ ಬದುಕನ್ನು ರೂಡಿಸಿಕೊಳ್ಳಿ, ಅಪಹಾಸ್ಯ ಮತ್ತು ಕಾಲು ಎಳೆಯುವವರತ್ತ ಗಮನಕೊಡದೆ ಮುನ್ನಡೆಯಿರಿ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಇರುವಷ್ಟು ಅವಕಾಶಗಳು ಇತರ ವಿಭಾಗಗಳಿಗೆ ಇಲ್ಲ. ಶಿಸ್ತುಬದ್ದ ಓದಿನಿಂದ ಉನ್ನತ ಹುದ್ದೆಗಳನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು ಎಂದರು.


ಪ್ರಾಚಾರ್ಯರಾದ ಎಸ್.ಆರ್ ಮೂಗನೂರಮಠ ಅವರು ಮಾತನಾಡಿ ತಾಯಿಯಾಗಿ ಬರುವ ಮಹಿಳೆ ಎಲ್ಲ ಸಂಬAಧಗಳ ಜ್ಞಾನ, ಬದುಕಿನ ಪಾಠ ಕಲಿಸಿ ಮೊದಲ ಗುರುವಾಗುತ್ತಾಳೆ. ಮಹಿಳೆ ಜಗತ್ತಿನ ವಿಶೇಷ ಸೃಷ್ಟಿಯಲ್ಲಿ ಒಬ್ಬಳಾಗಿದ್ದು ಸೃಷ್ಟಿಯ ಕಿರೀಟವಾಗಿ ಹೊಸ ಜೀವಕ್ಕೆ ಜನ್ಮ ನೀಡುವ ಶಕ್ತಿ, ಸಲಹೆ ನೀಡುವ ಜ್ಞಾನ, ಮುಂದಾಳತ್ವ ವಹಿಸುವ ನಾಯಕಿಯಾಗಿ, ಎಲ್ಲ ಪರಿಸ್ಥಿತಿಗಳಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಸ್ತ್ರೀಯರಲ್ಲಿದೆ. ಇಂದಿನ ಜಗತ್ತಿಗೆ ಬೇಕಾದ ಸಾಮಾಜಿಕವಾಗಿ, ಭಾವನಾತ್ಮಕವಾಗಿ ಸಣ್ಣ ಬದಲಾವಣೆಯನ್ನೂ ಸುಲಭವಾಗಿ ಗುರಿತಿಸುವ ಮತ್ತು ಏಕಕಾಲಕ್ಕೆ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುವ ವಿಶೇಷ ಗುಣ ಹೊಂದಿದ್ದಾರೆ ಇದೇ ಕಾರಣಕ್ಕೆ ಮಹಿಳೆಯನ್ನು ಶಕ್ತಿ ಸ್ವರೂಪಿನಿ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಹೋಮ್ ಡೆಲಿವರಿ ಊಟದ ಪರಿಕಲ್ಪನೆಯಿಂದ ಮನೆಯಲ್ಲಿ ಅಡುಗೆ ಮಾಡುವ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದ್ದು ಇದರಿಂದ ಕುಟುಂಬದಲ್ಲಿ ಬಿರುಕು ಮೂಡುತ್ತಿವೆ. ಇದರಿಂದ ಹೊರಬಂದು ಸುಂದರ ಕುಟುಂಬದ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ. ಮಹಿಳಾ ದಿನಾಚರಣೆಯ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿನಿಯರಲ್ಲಿ ಸ್ವಾವಲಂಬಿ ಜೀವನ ಕೌಶಲ್ಯಗಳನ್ನು ಬೆಳೆಸುವಲ್ಲಿ ಮಹಿಳಾ ಸಬಲಿಕರಣ ಘಟಕದ ಪಾತ್ರ ಅಮೂಲಾಗ್ರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಸಬಲಿಕರಣ ಘಟಕದ ಸಂಯೋಜಕಿ ಡಾ.ಲಲಿತಾ ಚವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಂಜುಳಾ ಚವ್ಹಾನ್ ಮಹಿಳಾ ಸಮಾನತೆ ಕವನ ವಾಚನ ಮಾಡಿದರು, ಐಕ್ಯೂಎಸಿ ಘಟಕದ ಸಂಯೋಜಕರಾದ ಡಾ.ಎ.ಯು ರಾಠೋಡ ಉಪಸ್ಥಿತರಿದ್ದರು.


ಮಹಿಳಾ ಸಾಧಕರ ವೇಷಭೂಷಣದಲ್ಲಿ ವಿದ್ಯಾರ್ಥಿನಿಯರು: ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಮಾಡಿದ ದೇಶಕಂಡ ಸಾಧಕ ಮಹಿಳೆಯರ ವೇಷಭೂಷಣ ಆಕರ್ಷಕವಾಗಿತ್ತು.ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಕಾರ್ಯನಿರ್ವಹಿಸಲು ಮಹಿಳೆಯರು ಸಮರ್ಥರು ಎಂದು ವೇಷಭೂಷಣಗಳ ಮೂಲಕ ಸಂದೇಶ ಸಾರಿದ ವಿದ್ಯಾರ್ಥಿನಿಯರು ಮಹಿಳಾ ವರದಿಗಾರ, ಸಾಲುಮರದ ತಿಮ್ಮಕ್ಕ, ಸುಧಾಮೂರ್ತಿ, ಸಾವಿತ್ರಿಬಾಯಿ ಪುಲೆ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವಳ ವೇಷಗಳು ಜನಮನ ಸೆಳೆದವು.

ಬಣ್ಣ ಬಣ್ಣದ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿನಿಯರು : ಮಹಿಳಾ ದಿನಾಚರಣೆಯ ನಿಮಿತ್ಯ ವಾರ ಪೂರ್ತಿ ಮಹಾವಿದ್ಯಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿನಿಯರು ಮತ್ತು ಮಹಿಳಾ ಪ್ರಾಧ್ಯಾಪಕಿಯರು ದಿನಕ್ಕೊಂದು ಮಾದರಿಯ ಬಣ್ಣಬಣ್ಣದ ಉಡುಗೆ ತೊಟ್ಟು ಸಂಭ್ರಮಿಸಿದರು. ರೆಟ್ರೋ ದಿನದಂದು ಹಳೆ ಕಾಲದ ಪ್ಯಾಶನ್ ಬಟ್ಟೆ ತೊಟ್ಟು ಬಂದರೆ, ಟ್ವಿನ್ಸ್ ಡೇ ದಿನದಂದು ಇಬ್ಬರು ಆತ್ಮೀಯ ಗೆಳತಿಯರು ಒಂದೇ ರೀತಿಯ ಉಡುಗೆಯಲ್ಲಿ ಬಂದು ಸಹೋದರಿಯರಂತೆ ಸಂಭ್ರಮಿಸಿದರು. ಇನ್ನು ಪಿಂಕ್ ಡೇ ದಿನ ಮಹಾವಿದ್ಯಾಲಯವೆಲ್ಲವೂ ಗುಲಾಬಿ ಬಣ್ಣಮಯವಾಗುವಂತೆ ವಿಶೇಷ ಬಟ್ಟೆಯಲ್ಲಿ ಪೋಸ್ ಕೊಟ್ಟರು. ಸಾಂಪ್ರದಾಯಿಕ ಉಡುಗೆಯ ದಿನದಂದು ಪ್ರಾಚೀನ ಭಾರತೀಯ ನಾರಿಯರ ಸಾಂಪ್ರಾದಾಯದAತೆ ಲಂಗಾದಾವಣಿ ಉಡುಗೆಯಲ್ಲಿ ಬಂದ ವಿದ್ಯಾರ್ಥಿನಿಯರು ಸಂಸ್ಕೃತಿಯ ಪ್ರತೀಕವಾಗಿದ್ದರು. ಇನ್ನ ಗೌನ್ ಡೇ ಮತ್ತು ಪಾರ್ಟಿ ಡೇ ಗಳಂದು ಕಣ್ಣು ಕುಕ್ಕುವ ಉಡುಗೆ ತೊಟ್ಟು ಮಿಂಚಿದರು.


ಗಮನ ಸೆಳೆದ ಗ್ರಾಮೀಣ ಕ್ರೀಡೆಗಳು : ಮಹಿಳಾ ದಿನಾಚರಣೆಯ ಅಂಗವಾಗಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಹಲವು ಹಳ್ಳಿಯ ಕ್ರಿಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಗ್ಗ ಜಗ್ಗಾಟದಲ್ಲಿ ಗೆಲುವಿಗಾಗಿ ಸಾಮರ್ಥ್ಯವನ್ನು ಮೀರಿ ಪ್ರಯತ್ನ ಪಟ್ಟರೆ ಲಗೋರಿಯಲ್ಲಿ ಚಂಡಿನ ಏಟಿನಿಂದ ತಪ್ಪಿಸಿಕೊಳ್ಳುತ್ತಾ ಎದುರಾಳಿ ತಂಡವನ್ನು ಸೋಲಿಸಿ ಖುಷಿ ಪಟ್ಟರು ಇನ್ನುಳಿದಂತೆ ಹಸು-ಹುಲಿ ಆಟ, ಲೆಮನ್ ಸ್ಪೂನ್, ಮ್ಯೂಜಿಕಲ್ ಚೇರ್, ಬಲೂನ್ ಬ್ಯಾಲೆನ್ಸ್ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳನ್ನಾಡಿ ಕಾಲೇಜಿನಲ್ಲಿ ಹಳ್ಳಿಯ ಸೊಬಗನ್ನು ಮರುಸೃಷ್ಠಿಸಿದ್ದು ವಿಷೇಶವಾಗಿತ್ತು.


ಬಾಯಲ್ಲಿ ನೀರೂರಿಸಿದ ಆಹಾರ ಮೇಳ : ಮಹಿಳಾ ದಿನದ ಸಂಭ್ರಮಾಚರಣೆ ನಿಮಿತ್ಯ ವಿದ್ಯಾರ್ಥಿನಿಯರು ತಾವೇ ಬಗೆ ಬಗೆಯ ಆಹಾರಗಳನ್ನು ತಯಾರಿಸಿ ಮಹಾವಿದ್ಯಾಲಯದ ಆವರಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಹಾಕಿ ಮಾರಾಟ ಮಾಡುವ ದೃಶ್ಯ ಮನಸೂರೆಗೊಳಿಸುವಂತಿತ್ತು. ಮೇಳದಲ್ಲಿ ದೇಸಿಯ ಪಾನೀಯಗಳಗಳಾದ ಮಜ್ಜಿಗೆ, ಪಾನಕ, ರಾಗಿ ಅಂಬಲಿ, ಯುವಜನತೆಗೆ ಪ್ರಿಯವಾದ ಪಾನಿಪೂರಿ, ಚುರುಮರಿ ಚಾರ್ಟ, ವಿವಿಧ ಹಣ್ಣುಗಳ ಪ್ರೂಟ್ ಸಲಾಡ್ , ಮನೆಯಲ್ಲಿಯೆ ತಯಾರಿಸಿದ ರುಚಿಕರ ಊಟ, ಆರೋಗ್ಯಕರವಾದ ಕಾಳುಗಳ ಸಲಾಡ್, ಪಾಯಸ ಬಾಯಲ್ಲಿ ನೀರೂರುವಂತೆ ಮಾಡಿದವು.

 

 

 


Spread the love

About Laxminews 24x7

Check Also

ಅಕ್ಕೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸ

Spread the loveಬೋರಗಾಂವ: ದೇಶಕ್ಕೆ ಅನ್ನ ನೀಡುವ ರೈತ ಹಾಗೂ ಗಡಿ ಕಾಯುವ ಸೈನಿಕರನ್ನು ಎಲ್ಲರೂ ಗೌರವಿಸಬೇಕು ಎಂದು ಮಾಜಿ ಸಂಸದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ