Breaking News

ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ಸರ್ಕಾರಕ್ಕೆ ಸಲಹೆವೊಂದನ್ನು ನೀಡಿದ್ದಾರೆ.

Spread the love

ಬೆಂಗಳೂರು: ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ಸರ್ಕಾರಕ್ಕೆ ಸಲಹೆವೊಂದನ್ನು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಿಯಲ್ ಸ್ಟಾರ್, ಸರ್ಕಾರವು ಬಿಪಿಎಲ್, ರಸ್ತೆ ಬದಿಯ ವ್ಯಾಪಾರಸ್ಥರು, ಕಟ್ಟಡ-ವಲಸೆ ಕೂಲಿ ಕಾರ್ಮಿಕರು, ವಿಕಲಾಂಗಚೇತನರು, ವಯೋವೃದ್ಧರು, ಆಟೋ-ಕ್ಯಾಬ್ ಚಾಲಕರು ಇತರೆ ಎಲ್ಲ ವರ್ಗದ ಜನರ ಸಂಪೂರ್ಣ ಮಾಹಿತಿಗಳನ್ನು ಪಾರದರ್ಶಕವಾಗಿ ಸಂಗ್ರಹಿಸಬೇಕು. ಈ ಮೂಲಕ ಅಗತ್ಯವಸ್ತುಗಳು ತಲುಪ ಬೇಕಾದವರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕೀಯ ಪಕ್ಷಗಳ ವಿರುದ್ಧ ಉಪೇಂದ್ರ ಫುಲ್ ಗರಂ ಆಗಿದ್ದಾರೆ. “ಎಲ್ಲಾ ರೀತಿಯ ಜನಸಾಮಾನ್ಯರ ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಇದರಿಂದಾಗಿ ಇಷ್ಟು ವರ್ಷ ಅದನ್ನು ಮಾಡಿದ್ವಿ, ಇದನ್ನ ಮಾಡಿದ್ವಿ ಎನ್ನುವ ರಾಜಕೀಯ ಪಕ್ಷಗಳ ಮಾತು ಸತ್ಯವೋ? ಸುಳ್ಳೋ? ಅನ್ನೊದು ತಿಳಿಯುತ್ತದೆ” ಎಂದು ಸವಾಲು ಹಾಕಿದ್ದಾರೆ.

ಅಷ್ಟೇ ಅಲ್ಲದೆ ಸರಿ ಸುಮಾರು ಶೇ.40ರಷ್ಟು ಜನರ ತೆರಿಗೆ ಹಣದಲ್ಲಿ ಸಂಬಳ, ಭತ್ಯೆಗಳನ್ನೆಲ್ಲಾ ಪಡೆಯುವ ದೊಡ್ಡ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರಕ್ಕೆ ಇದು ಅಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ರಾಜಕೀಯ ಬೆಂಬಲಿಗರು ಇದಕ್ಕೆ ಉತ್ತರಿಸಬೇಕು ಎಂದು ಕೇಳಿಕೊಂಡಿದ್ದಾರೆ.

https://youtu.be/icAGnbjiJo0

Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ