Breaking News

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗಕ್ಕೆ ಪ್ರಧಾನಿ ಚಾಲನೆ

Spread the love

ಶಿಮ್ಲಾ: ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಅಟಲ್ ಸುರಂಗ ಮನಾಲಿ-ಲೇಹ್‌ ಸಂಪರ್ಕಕ್ಕಾಗಿ 9 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ಹೊಂದಿದೆ. ಇದು ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಮಾರ್ಗ. ಈ ಸುರಂಗದಿಂದ 4-5 ಗಂಟೆ ಪ್ರಯಾಣದ ಅವಧಿ ಕಡಿತವಾಗುತ್ತೆ. ಮನಾಲಿಯಲ್ಲಿ ಭಾರಿ ಹಿಮಪಾತ ಸಂಭವಿಸುತ್ತೆ. ಹೀಗಾಗಿ ಹಿಮಪಾತ ಸಂಭವಿಸಿದ ಸಂದರ್ಭದಲ್ಲಿ ರಸ್ತೆ ಮುಚ್ಚಲಾಗುತ್ತಿತ್ತು.

ಆರು ತಿಂಗಳು ಮಾತ್ರ ಸಂಚಾರವಿರುತ್ತಿತ್ತು. ಆದರೆ ಈಗ ಅಟಲ್ ಸುರಂಗ ಮಾರ್ಗದಿಂದಾಗಿ ವರ್ಷದ 365 ದಿನವೂ ಈ ಮಾರ್ಗದಲ್ಲಿ ಸಂಚಾರ ಸಾಧ್ಯವಾಗಿದೆ.

ಪ್ರತಿ 60 ಮೀಟರ್​ಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯಂತೆ. ಹಾಗೂ ಸುರಂಗದ ಒಳಗೆ ಪ್ರತಿ 500 ಮೀಟರ್​ನಲ್ಲಿ ತುರ್ತು ನಿರ್ಗಮನ ಸುರಂಗವನ್ನು ನಿರ್ಮಿಸಲಾಗಿದೆ. ಇನ್ನು ಈ ಸುರಂಗ ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದಲ್ಲಿದೆ. 6 ವರ್ಷದ ಟಾರ್ಗೆಟ್ ಇದಾಗಿದ್ದು, ಮುಗಿದಿದ್ದು 10 ವರ್ಷಗಳ ನಂತರ.


Spread the love

About Laxminews 24x7

Check Also

ಶಾಲೆ ಮೇಲೆ ಅದೇನ ಪ್ರೀತಿ..ಅದೇನ ಅಭಿಮಾನ.

Spread the loveದಿನ ಬೆಳಗಾದರೆ ಶತಮಾನೋತ್ಸವ ಆಚರಿಸಿಕೊಳ್ಳಲು ಸನ್ನದ್ಧವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿ… ಊರಿನ ಹಿರಿಯರು..ಹಳೆಯ ವಿದ್ಯಾರ್ಥಿಗಳು.. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ