Breaking News

ಪ್ರಧಾನಿ ಮೋದಿಗೆ ಒಂದೇ ವಾಕ್ಯದಲ್ಲಿ ವಿಶ್​​ ಮಾಡಿದ ರಾಹುಲ್​ ಗಾಂಧಿ; ಇದು ಅವಮಾನ ಎಂದ ನೆಟ್ಟಿಗರು

Spread the love

ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬವಾದ (PM Modi Birthday) ಇಂದು ಬಿಜೆಪಿ ದೇಶಾದ್ಯಂತ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದರೆ, ಅತ್ತ ಕಾಂಗ್ರೆಸ್​ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಈ ಮಧ್ಯೆ ರಾಹುಲ್​ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಗೆ ಒಂದೇ ಸಾಲಿನಲ್ಲಿ ಹುಟ್ಟುಹಬ್ಬದ ವಿಶ್​ ಮಾಡಿದ್ದಾರೆ. ಇಷ್ಟು ವರ್ಷ ಪ್ರಧಾನಿಗೆ ಜನ್ಮದಿನದ ಶುಭಾಶಯ ಕೋರುವಾಗ ನಾಲ್ಕು ಸಾಲು ಬರೆಯುತ್ತಿದ್ದರು. ವ್ಯಂಗ್ಯ ಮಾಡುತ್ತಿದ್ದರು. ಆದರೆ ಈ ಬಾರಿ ಹೆಚ್ಚೇನೂ ಬರೆಯದೇ ಒಂದೇ ಸಾಲಿನಲ್ಲಿ ‘ಹ್ಯಾಪಿ ಬರ್ತ್​ ಡೇ, ಮೋದಿ ಜಿ’ ಎಂದಿದ್ದಾರೆ. ಪ್ರಧಾನಿ ಮೋದಿಯವರಿಗೆ ಅವಮಾನ ಮಾಡಲೆಂದೇ ರಾಹುಲ್​ ಗಾಂಧಿ ಹೀಗೆ ಒಂದೇ ಸಾಲಿನಲ್ಲಿ ಟ್ವೀಟ್​ ಮಾಡಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೂ ರಾಹುಲ್​ ಗಾಂಧಿಗೆ ಜನ್ಮದಿನದ ಶುಭಾಶಯ ಕೋರುತ್ತಾರೆ. ಆದರೆ ಎಂದಿಗೂ ಹೀಗೆ ಬರ್ತ್​ ಡೇ ವಿಶ್​​​ನಲ್ಲಿ ವ್ಯಂಗ್ಯ, ಅವಮಾನ ಮಾಡುವುದಿಲ್ಲ. ಆದರೆ, ರಾಹುಲ್​ ಗಾಂಧಿ ಯಾಕೆ ಹಾಗೆ ಮಾಡುತ್ತಾರೆ ಎಂದೂ ಟ್ವಿಟರ್​ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಹಾಗೇ, ಇಂದು ಯುವ ಕಾಂಗ್ರೆಸ್ಸಿಗರು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡುತ್ತಿರುವಾಗ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಯಾಕೆ ಪ್ರಧಾನಿಗೆ ವಿಶ್​ ಮಾಡುತ್ತಿದ್ದಾರೆ? ಎಂದೂ ಹಲವರು ಪ್ರಶ್ನಿಸಿದ್ದಾರೆ.

ವಿವಿಧ ಕಾರ್ಯಕ್ರಮ ಆಯೋಜಿಸಿದ ಕಾಂಗ್ರೆಸ್​
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ನಿಮಿತ್ತ  ರಾಷ್ಟ್ರೀಯ ನಿರುದ್ಯೋಗ ದಿನವನ್ನು ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಂದೇ ವರ್ಷದ ನಿರುದ್ಯೋಗ ಸಮಸ್ಯೆ ಶೇ.2.4ರಿಂದ 10.3ಕ್ಕೆ ಏರಿಕೆಯಾಗಿದೆ ಎಂದು ಯುವ ಕಾಂಗ್ರೆಸ್​ ಪ್ರತಿಪಾದಿಸಿದೆ.  ‘ದೇಶದ ಯುವಕರು ನಿರುದ್ಯೋಗದಿಂದ ಕಂಗಾಲಾಗಿ ಬೀದಿಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಒಂದು ವರ್ಷದಲ್ಲಿ 2 ಕೋಟಿ ಉದ್ಯೋಗ ಒದಗಿಸುವ ಭರವಸೆ ನೀಡಿಯೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಈಗ ಸಂಪೂರ್ಣವಾಗಿ ಅದನ್ನು ಮರೆತಿದೆ’ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ತಮಗೆ ಬೇಕಾದ ಉದ್ಯಮಿಗಳಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದೆ. ಇನ್ನು ನಿರುದ್ಯೋಗವನ್ನು ಹೆಚ್ಚಿಸುವ ಮೂಲಕ ಪ್ರಧಾನಿ ಮೋದಿ ಸರ್ಕಾರ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ ಎಂದು ಕಾಂಗ್ರೆಸ್​ ಟ್ವೀಟ್ ಮಾಡಿ ಕೂಡ ವ್ಯಂಗ್ಯವಾಡಿದೆ.  ಇನ್ನು ಕೊರೊನಾ ಸಮಯದಲ್ಲಿ ಫೇಕ್​ ಸುದ್ದಿಗಳು ಹೆಚ್ಚಾಗಿ ಹರಡಲೂ ಕೇಂದ್ರ ಸರ್ಕಾರವೇ ಕಾರಣ.  ಅವರಿಗೆ ಹೇಳಿಕೊಳ್ಳಲು ಸಾಧನೆಗಳು ಏನೂ ಇಲ್ಲದಾಗ ಹೀಗಿದ್ದನ್ನೇ ಏನಾದರೂ ಮಾಡುತ್ತಾರೆ ಎಂದು ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳ ಮೂಲಕ ಆರೋಪ ಮಾಡಿದೆ.


Spread the love

About Laxminews 24x7

Check Also

ಶಾಲೆ ಮೇಲೆ ಅದೇನ ಪ್ರೀತಿ..ಅದೇನ ಅಭಿಮಾನ.

Spread the loveದಿನ ಬೆಳಗಾದರೆ ಶತಮಾನೋತ್ಸವ ಆಚರಿಸಿಕೊಳ್ಳಲು ಸನ್ನದ್ಧವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿ… ಊರಿನ ಹಿರಿಯರು..ಹಳೆಯ ವಿದ್ಯಾರ್ಥಿಗಳು.. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ