Breaking News

ಖಡಕ್ ಸೂಚನೆ ಹಿನ್ನೆಲೆ, ಅಂಕಲಗಿ ಪುಡಾರಿ ರಾಜು ತಳವಾರ್ ಅರೆಸ್ಟ್

Spread the love

ಗೋಕಾಕ: ಬಿಜೆಪಿ ಮುಖಂಡ ರಾಜು ತಳವಾರ ಹಾಗೂ ಕುಟುಂಬಸ್ಥರಿಂದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕಲಗಿಯ ಬಿಜೆಪಿ ಮುಖಂಡ ರಾಜು ತಳವಾರನನ್ನ ಬಂಧಿಸಲಾಗಿದೆ. ಗೋಕಾಕ ಡಿವೈಎಸ್ಪಿ ನೇತೃತ್ವದ ತಂಡ ರಾಜು ತಳವಾರನನ್ನ ಹೆಡೆಮುರಿ ಕಟ್ಟಿದ್ದು, ರಾಜು ತಳವಾರನನ್ನ ಕೂಡಲೇ ಬಂಧಿಸುವಂತೆ ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನಿನ್ನೆಯಷ್ಟೇ ಖಡಕ್ ಸೂಚನೆ ನೀಡಿದ್ದರು. ಕ್ಷುಲ್ಲಕ ಕಾರಣಕ್ಕೆ ಚಿಕ್ಕುಗೋಳ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರಾಜು ತಳವಾರ ಆಂಡ್ ಗ್ಯಾಂಗ್ ಮೇಲೆ, ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನಗಳ ಅಡಿಯಲ್ಲಿ ಅಂಕಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಕಳೆದ ಸೋಮವಾರ ರಾತ್ರಿ ನಡೆದಿದ್ದ ಈ ಘಟನೆ ಎರಡು ದಿನಗಳ ಬಳಿಕ ಭಾರೀ ಸದ್ದು ಮಾಡಿತ್ತು, ರಾಜು ತಳವಾರ ಬಂಧನಕ್ಕೆ ಸತೀಶ್ ಜಾರಕಿಹೊಳಿ ಕೂಡ ಆಗ್ರಹಿಸಿದ್ದರು. ನಿನ್ನೆಯಷ್ಟೇ ಅಂಕಲಗಿ ಗ್ರಾಮದ ಮುಖಂಡರ ಸಭೆ ನಡೆಸಿದ್ದ ಸಚಿವ ರಮೇಶ ಜಾರಕಿಹೊಳಿ ತಕ್ಷಣವೇ ರಾಜು ತಳವಾರ ಬಂಧನಕ್ಕೆ ಸೂಚಿಸಿದ ಹಿನ್ನೆಲೆ ಪೋಲಿಸರು ಲೋಕಲ್ ಪುಡಾರಿಯನ್ನ ಬಂಧಿಸಿದ್ದಾರೆ.


Spread the love

About Laxminews 24x7

Check Also

ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹ ತಡೆದ ಬಾಲಕಿ: ವಿದ್ಯಾಭ್ಯಾಸಕ್ಕೆ ಬೆಳಕಾದ ತಹಶೀಲ್ದಾರ್

Spread the loveವಿಜಯನಗರ: ಬಾಲಕಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹವನ್ನು ತಾನೇ ತಡೆದ ಘಟನೆ ಜಿಲ್ಲೆಯ ಹಗರಿಬೊಮ್ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ