ಚಿಕ್ಕಬಳ್ಳಾಪುರ: ವೃದ್ಧ ತಾಯಿಗೆ ಬರುತ್ತಿದ್ದ ಪಿಂಚಣಿ ಹಣ ಹಂಚಿಕೆ ವಿಚಾರಕ್ಕೆ ಮೂವರು ಸಹೋದರರ ನಡುವೆ ಜಗಳವಾಗಿದ್ದು, ವಿಕೋಪಕ್ಕೆ ತಿರುಗಿ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ನರಸಿಂಹಮೂರ್ತಿ (45) ಕೊಲೆಯಾದ ಸಹೋದರ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊಲೆ ಆರೋಪಿಗಳಾದ ರಾಮಾಂಜಿ (39) ಮತ್ತು ಗಂಗಾಧರಪ್ಪ (39) ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೌರಿಬಿದನೂರು ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಯಾದ …
Read More »ಮಳೆ ಅಬ್ಬರಕ್ಕೆ ನಲುಗಿದ ಅನ್ನದಾತ
ಹಾವೇರಿ: ಭಾರಿ ಮಳೆಯಿಂದ ಜಿಲ್ಲೆಯ ಹಲವೆಡೆ ಬೆಳೆಗಳೆಲ್ಲ ರೋಗಕ್ಕೆ ತುತ್ತಾಗಿದ್ದು, ಬೇಸತ್ತ ರೈತನೋರ್ವ ಹತ್ತಿ ಬೆಳೆಯನ್ನು ಟ್ರ್ಯಾಕ್ಟರ್ ರೂಟರ್ ಹೊಡೆದು ನಾಶ ಮಾಡಿದ್ದಾರೆ. ಈ ವರುಷ ಉತ್ತಮ ಮುಂಗಾರು ಪೂರ್ವ ಮಳೆ ಆಗಿರುವ ಹಿನ್ನೆಲೆಯಲ್ಲಿ, ರೈತರು ಹೆಚ್ಚಿನ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಬೆಳೆಗಳು ನಾಶವಾಗಿವೆ. ಗೋವಿನಜೋಳ, ಹತ್ತಿ, ಸೋಯಾಬಿನ್, ಶೇಂಗಾ ಬೆಳೆಗಳಿಗೆ ಹಲವು ರೋಗಗಳು ಕಾಣಿಸಿಕೊಂಡಿವೆ. ಕೆಂಪುರೋಗ, ಬೂದಿರೋಗ ಸೇರಿದಂತೆ ಹಲವು ರೋಗಗಳಿಂದ ಬೆಳೆಗಳು …
Read More »ಏರ್ಗನ್ನಿಂದ ಹಾರಿದ ಗುಂಡು: ಶಿರಸಿಯಲ್ಲಿ 9 ವರ್ಷದ ಬಾಲಕ ಸಾವು
ಶಿರಸಿ(ಉತ್ತರಕನ್ನಡ): ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕನ ಕೈಯ್ಯಿಂದ ಏರ್ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ ವಿದ್ರಾಹಕ ಘಟನೆ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿಯ ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬುವರ ಇಬ್ಬರು ಮಕ್ಕಳು (ಅಣ್ಣ, ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದೆ. ಅಣ್ಣ ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ …
Read More »ರಾಜ್ಯಾದ್ಯಂತ ಇಂದಿನಿಂದ ಮಳೆ ಅಬ್ಬರ
ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಮಳೆ ಅಬ್ಬರ ಕಡಿಮೆಯಾದರೂ, ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 11 ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಆಗಲಿರುವ ಜಿಲ್ಲೆಗಳು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, …
Read More »ಗಣೇಶ ವಿಸರ್ಜನೆಗೆ ಮೂರು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ: ಕಮಿಷನರ್ ಭೂಷಣೆ ಬೋರಸೆ
ಬೆಳಗಾವಿ: ಗಣೇಶನ ವಿಸರ್ಜನೆಗೆ ಸೂಕ್ತ ಬಂದೋಬಸ್ತ್ ಒದಗಿಸಲು ಬೇರೆ ಜಿಲ್ಲೆಯಿಂದ 3 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ತಿಳಿಸಿದರು. ತಮ್ಮ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೆ ಶನಿವಾರ ನಡೆಯಲಿರುವ ಗಣೇಶನ ವಿಸರ್ಜನೆಯ ಭವ್ಯ ಮೆರವಣಿಗೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಗಣೇಶ ವಿಸರ್ಜನೆಗೆ ನಿಯಮಗಳನ್ನು ಪಾಲಿಸಿ ಶಾಂತಿಯುತವಾಗಿ ಸಹಕರಿಸಬೇಕೆಂದು ಎಂದು ಕರೆ ನೀಡಿದರು. ಗಣೇಶ ವಿಸರ್ಜನೆಗೆ …
Read More »ನಗರ ಪೊಲೀಸರು ಮಾಡಿರುವ ಹೋಸ ರೂಲ್ಸ್ ಗೆ ಬಿಜೆಪಿ ಶಾಸಕ ಅಭಯ ಪಾಟೀಲ್ ಅವರು ಕೆರಳಿದ್ದಾರೆ.
ಬೆಳಗಾವಿ: ಬೆಳಗಾವಿ ನಗರದಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ವಿಸರ್ಜನೆ ನಡೆಯಲಿದ್ದು, ನಗರ ಪೊಲೀಸರು ಮಾಡಿರುವ ಹೋಸ ರೂಲ್ಸ್ ಗೆ ಬಿಜೆಪಿ ಶಾಸಕ ಅಭಯ ಪಾಟೀಲ್ ಅವರು ಕೆರಳಿದ್ದಾರೆ. ಇಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಮೆರವಣಿಗೆಯ ಸಮಯದಲ್ಲಿ ಪೊಲೀಸ್ ಇಲಾಖೆ ಹಾಕಿರುವ ಹೊಸ ಷರತ್ತುಗಳ ಬಗ್ಗೆ ಗಣೇಶ ಮಂಡಳಗಳ ಪದಾಧಿಕಾರಿಗಳ ಭಾವನೆಗಳನ್ನು ಕಮೀಷನರ್ ಅವರೊಂದಿಗೆ …
Read More »40 ವರ್ಷದಲ್ಲಿ 4ನೇ ಬಾರಿ ಭರ್ತಿಯ ಹಂತಕ್ಕೆ ತಲುಪಿದ ಸೂಪಾ ಜಲಾಶಯ!
ಕಾರವಾರ: ರಾಜ್ಯದ ಎರಡನೇ ಅತಿ ದೊಡ್ಡ ಜಲಾಶಯವಾಗಿರುವ ಜೋಯಿಡಾ ತಾಲೂಕಿನ ಸೂಪಾ ಜಲಾಶಯ ಭರ್ತಿಯ ಹಂತಕ್ಕೆ ತಲುಪಿದೆ. 564 ಮೀಟರ್ ಎತ್ತರದ ಜಲಾಶಯ ನಿರ್ಮಾಣದ ಬಳಿಕ ಈವರೆಗೆ ನಾಲ್ಕು ಬಾರಿ ಮಾತ್ರ ಭರ್ತಿಯಾಗಿದ್ದು, ಈ ಸಲ ಉತ್ತಮ ಮಳೆಯಾದ ಕಾರಣ ಭರ್ತಿಗೆ ಇನ್ನೂ ಕೇವಲ 5 ಮೀಟರ್ ಬೇಕಾಗಿದೆ. ರಾಜ್ಯದಲ್ಲೇ ಅತಿ ಎತ್ತರದ ನೀರು ಸಂಗ್ರಹಣೆ ಸಾಮರ್ಥ್ಯದ ಜಲಾಶಯವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಸೂಪಾ-ಜಲಾಶಯ ಭರ್ತಿ ಹಂತಕ್ಕೆ ತಲುಪಿದೆ. ಈ …
Read More »ದೇವಾಲಯ ಸುತ್ತ 200 ಮೀಟರ್ ಮಾಂಸಾಹಾರ ಸೇವನೆ ನಿಷೇಧ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದ ಹೊನ್ನೇಶ್ವರಸ್ವಾಮಿ ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿಸಿ ಪೊಲೀಸರು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು 2024ರ ಜುಲೈ 13ರಂದು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಹೊನ್ನೇಶ್ವರಸ್ವಾಮಿ ದೇವಸ್ಥಾನ …
Read More »ಅಕ್ರಮ ಬೆಟ್ಟಿಂಗ್ ಪ್ರಕರಣ: ಶಾಸಕ ಕೆ. ಸಿ. ವೀರೇಂದ್ರ ಇ.ಡಿ. ಕಸ್ಟಡಿ ಅವಧಿ ಸೆ.8ರ ವರೆಗೆ ವಿಸ್ತರಣೆ
ಬೆಂಗಳೂರು: ಆನ್ಲೈನ್ ಹಾಗೂ ಆಫ್ಲೈನ್ ಮುಖಾಂತರ ಅಕ್ರಮವಾಗಿ ಬೆಟ್ಟಿಂಗ್ ನಡೆಸಿದ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ. ಸಿ. ವೀರೇಂದ್ರ (ಪಪ್ಪಿ) ಅವರ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಇಂದು ಜನಪ್ರತಿನಿಧಿಗಳ ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು. ಇದಕ್ಕೂ ಮುನ್ನ ಆರೋಪಿಯನ್ನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ವೀರೇಂದ್ರ ಅವರನ್ನು …
Read More »ರಾಯಬಾಗ : ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಹೋಗಿ ಚನ್ನಾಗಿ ಓದಲಿ ಎಂಬುದು ತಂದೆ ತಾಯಿ ಕನಸು ಆಗಿರುತ್ತೆ
ರಾಯಬಾಗ : ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಹೋಗಿ ಚನ್ನಾಗಿ ಓದಲಿ ಎಂಬುದು ತಂದೆ ತಾಯಿ ಕನಸು ಆಗಿರುತ್ತೆ.. ಆದರೆ ರಾಯಬಾಗ ತಾಲೂಕಿನ ಹಾರೂಗೇರಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಎರಡು ಜನ ಶಾಲಾ ಮಕ್ಕಳನ್ನು ಸತತವಾಗಿ ಎರಡು ಗಂಟೆಗಳ ಕಾಲ ಗುಂಡಿ ಆಗಿಯುವ ಕೆಲಸ ಮಾಡಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ… ಸತತವಾಗಿ ಎರಡು ಗಂಟೆಗಳ ಕಾಲ ಶಾಲಾ ಮಕ್ಕಳ ಕೈಯಲ್ಲಿ ಆಯುಧಗಳನ್ನು …
Read More »
Laxmi News 24×7