ವಿಜಯಪುರ: ವಿಜಯಪುರ ನಗರದಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜನೆ ಆರಂಭಗೊಂಡಿದೆ. ವಿಜಯಪುರ ಮಹಾನಗರ ಪಾಲಿಕೆ ನಗರದ ಮಹಾತ್ಮಾ ಗಾಂಧೀಜಿ ವೃತ್ತದಿಂದ ಸರಾಫ ಬಜಾರ ಮಾರ್ಗದಲ್ಲಿ ಸರ್ಕಾರಿ ಸ್ಥಳ ಒತ್ತುವರಿ ತೆರವು ಹಾಗೂ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದೆ. ಜಿಲ್ಲಾಧಿಕಾರಿ ಭೂಬಾಲನ್, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸಾರಥ್ಯದಲ್ಲಿ ಒತ್ತುವರಿ ತೆರವಿಗಾಗಿ ಜೆಸಿಬಿ ಬಳಸಿದ್ದು, ಒತ್ತುವರಿ ಮಾಡಿ ನಿರ್ಮಿಸಿದ್ದಾರೆ ಎನ್ನಲಾದ ದೊಡ್ಡ ದೊಡ್ಡ ಕಟ್ಟಡಗಳು ನೆಲಸಮವಾಗಿವೆ. ಕಾರ್ಯಾಚರಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ …
Read More »ದೇವೇಗೌಡರ ಕುಟುಂಬಕ್ಕೆ ಮುಡಾದಿಂದ 48 ಸೈಟು ಹಂಚಿಕೆ : ಶಾಸಕ ಪ್ರದೀಪ್ ಈಶ್ವರ್
ಬೆಂಗಳೂರು: ಮುಡಾದಿಂದ ಹೆಚ್ ಡಿ ದೇವೇಗೌಡರ ಕುಟುಂಬಕ್ಕೆ 48 ಸೈಟುಗಳು ಹಂಚಿಕೆಯಾಗಿವೆ ಎಂದು ಯಡಿಯೂರಪ್ಪನವರು ಹೇಳಿದ್ದರು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2011ಮಾರ್ಚ್ 17ರಂದು ವಿಧಾನಸಭೆಯಲ್ಲಿ ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ತಮ್ಮ ಭಾಷಣದಲ್ಲಿ ಮುಡಾದಿಂದ ಹೆಚ್ ಡಿ ದೇವೇಗೌಡರ ಕುಟುಂಬಕ್ಕೆ 48ಸೈಟುಗಳು ಮತ್ತು ಈಗ ಕೇಂದ್ರ ಸಚಿವರಾಗಿರುವ ಹೆಚ್ ಡಿ ಕುಮಾರಸ್ವಾಮಿಯವರಿಗೆ 300 X 200ಚದರ ಅಡಿ ಸೈಟು ಹಂಚಿಕೆಯಾಗಿರುವ ಸಂಗತಿಯನ್ನು …
Read More »ಮೆಡಿಕಲ್ ಸೀಟು ಕೊಡಿಸುವುದಾಗಿ ಕೋಟಿ ರೂ. ವಂಚನೆ ; ವಂಚಕನ ಹೆಡೆಮುರಿ ಕಟ್ಟಿದ ಬೆಳಗಾವಿ ಪೊಲೀಸ್
ದೇಶದಲ್ಲೇ ಸದ್ದು ಮಾಡಿದ ನೀಟ್ ಪರೀಕ್ಷೆ ಅಕ್ರಮ ಒಂದು ಕಡೆಯಾದರೆ, ಇದನ್ನೇ ಬಂಡವಾಳ ಮಾಡಿಕೊಂಡ ಐನಾತಿ ಓರ್ವ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ, ಕೋಟ್ಯಾಂತರ ರೂಪಾಯಿ ಎಗರಿಸಿ ಪರಾರಿಯಾಗಿದ್ದ ಅಂತರಾಜ್ಯ ಖದೀಮನನ್ನು ಬೆಳಗಾವಿಯ ಮಾರ್ಕೆಟ್ ಪೊಲೀಸರು ಹೆಡೆಮೂರಿ ಕಟ್ಟಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಪಾಸ್ ಮಾಡಿಸಿ, ಎಂಬಿಬಿಎಸ್ ಸೀಟ್ ಕೊಡಿಸುವದಾಗಿ ನಂಬಿಸಿ ಸುಮಾರು 10 ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾನೆ. ಅವರಿಂದ …
Read More »ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹಿರೇಬಾಗೇವಾಡಿ ಪೊಲೀಸರರು ಬಂಧಿಸುವಲ್ಲಿ ಯಶಸ್ವಿ
ಬೆಳಗಾವಿ : ತಾಲೂಕಿನ ವಿವಿಧ ಭಾಗಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹಿರೇಬಾಗೇವಾಡಿ ಪೊಲೀಸರರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಆಜಾದ್ ಕೀಲ್ಲೆದಾರ್ ಬಂಧಿತ ಆರೋಪಿಯಿಂದ ಸುಮಾರು ಐದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಿರೇಬಾಗೆವಾಡಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಟಿ. ಬಿ ನೀಲಗಾರ, ಪಿ.ಎಸ್.ಐ ಎಸ್ ಆರ್ ಮುತ್ತತ್ತಿ, ಅವಿನಾಶ್ ಎ ವೈ , ಸಿ ಎಚ್ ಸಿ …
Read More »ಪ್ರತಿಭಾವಂತರಿಗೆ ಪ್ರೋತ್ಸಾಹ ಕಾರ್ಯ ನಿರಂತರವಾಗಲಿ
ಬೈಲಹೊಂಗಲ: ‘ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮತ್ತೊಬ್ಬರ ಪ್ರಯತ್ನದ ದಾರಿಗೆ ವಿಧಾಯಕ ಕಾರ್ಯಗಳು ಮಾಡಲು ಸಹಕಾರಿಯಾಗಲು ಸಾಧ್ಯವಿದೆ’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕ ವತಿಯಿಂದ ಶನಿವಾರ ನಡೆದ ಪ್ರತಿಭಾವಂತ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು ‘ದೇಶದಲ್ಲಿ ವಿದ್ಯಾರ್ಜನೆ ಮಾಡಿದ ಪ್ರತಿಭಾವಂತರು ಇಲ್ಲಿಯೇ ತಮ್ಮ ಕೌಶಲವನ್ನು ಸದ್ಬಳಕೆ …
Read More »ಮೂಡಲಗಿ ಲೋಕ್ ಅದಾಲತ್: 1,954 ಪ್ರಕರಣ ಇತ್ಯರ್ಥ
ಮೂಡಲಗಿ: ‘ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಸೌಹಾರ್ದಯುತ ರೀತಿ ಇತ್ಯರ್ಥಪಡಿಸುವ ಲೋಕ್ ಅದಾಲತ್ ಕಾರ್ಯಕ್ರಮ ಕಕ್ಷಿದಾರರಿಗೆ ಬಹಳ ಅನುಕೂಲವಾಗುವುದು’ ಎಂದು ಪಟ್ಟಣದ ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು. ಪಟ್ಟಣದ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜರುಗಿದ ಲೋಕ್ ಅದಾಲತನಲ್ಲಿ ಮಾತನಾಡಿ, ‘ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಲೋಕ್ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರಿಂದ ಸಮಯ ಹಾಗೂ ಹಣವನ್ನು ಉಳಿಸಿ ಕೊಳ್ಳಬಹುದಾಗಿದೆ’ ಎಂದರು. 43 …
Read More »ಗೋವಾಕ್ಕೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಪಣಜಿ: ಕರಾವಳಿ ರಾಜ್ಯ ಗೋವಾದಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿಂ) ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನಲೆ ಗೋವಾ ಶಿಕ್ಷಣ ಇಲಾಖೆಯು 12ನೇ 2ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಿಸಿದೆ. ಕಳೆದ ಮೂರು ದಿನಗಳಿಂದ ಗೋವಾದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಇಂದು (ಸೋಮವಾರ) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಐಎಂಡಿ ರಾಜ್ಯದಲ್ಲಿ ಸೋಮವಾರ ಭಾರಿ ಮಳೆಯಾಗುವ ಮುನ್ಸೂಚನೆ …
Read More »ಸೌಹಾರ್ದದ ಮೊರಬದ ಮೊಹರಂ
ರಾಯಬಾಗ: ಜಾತಿಯ ಹಂಗಿಲ್ಲದೇ ಮನುಕುಲ ಒಂದೇ ಎಂಬ ಸಂದೇಶ ಸಾರಿ, ಸರ್ವಧರ್ಮಗಳ ಭಾವೈಕ್ಯದ ಕೊಂಡಿಯಾಗಿರುವ ಮೊಹರಂ ಹಬ್ಬ ಆಚರಣೆ ಆಧುನಿಕ ಯುಗದಲ್ಲೂ ಸ್ನೇಹ, ಭ್ರಾತೃತ್ವದ ಸಂಕೇತವಾಗಿ ನಡೆದುಕೊಂಡು ಬಂದಿದೆ. ಮೊರಬದಲ್ಲಿ ಮೊಹರಂ ಸರ್ವ ಧರ್ಮೀಯರು ಆಚರಿಸುವ ವೈಶಿಷ್ಟ್ಯಪೂರ್ಣ ಹಬ್ಬವಾಗಿದೆ. ಇದಕ್ಕೆ ಅಲಾಯಿ ಹಬ್ಬ ಅಂತಲೂ ಹೆಸರು. ಮೊರಬ ಗ್ರಾಮದಲ್ಲಿ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಚಿಣ್ಣರನ್ನು ನೋಡುವುದೇ ಒಂದು ಮಜವಾಗಿರುತ್ತದೆ. ಐದು ದಿನಗಳ ಕಾಲ ಕೂರಿಸಲಾಗುವ …
Read More »ರ್ಭಿಣಿ ಹಸುವಿಗೆ ಸೀಮಂತ ಸಂಭ್ರಮ
ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಗುರು ಮಡಿವಾಳೇಶ್ವರ ಮಠದ ಕಲ್ಯಾಣ ಮಂಟಪ ಆವರಣದಲ್ಲಿ ಶುಕ್ರವಾರ ಸಂಭ್ರಮ ಮನೆ ಮಾಡಿತ್ತು. ಬಂಧು-ಬಳಗದವರೆಲ್ಲ ಸೇರಿ ಕುಪ್ಪಸ ಕಾರ್ಯಕ್ರಮ (ಸೀಮಂತ) ನಡೆಸಿಕೊಟ್ಟರು. ತುಂಬು ಗರ್ಭಿಣಿಯ ಕಣ್ಣಲ್ಲಿ ಕರುಳ ಕುಡಿಯ ಕನಸು ಚಿಮ್ಮಿತು… ಅಂದಹಾಗೆ ಇದು ಯಾವುದೋ ಹೆಣ್ಣುಮಗಳಿಗೆ ಮಾಡಿದ ಸೀಮಂತವಲ್ಲ. ಗರ್ಭ ಧರಿಸಿದ ಹಸುವನ್ನು ತಮ್ಮ ತವರ ಮಗಳು ಎಂಬಂತೆ ಗ್ರಾಮಸ್ಥರೇ ಮಾಡಿದ ಕುಪ್ಪಸ ಕಾರ್ಯಕ್ರಮ. ಮಡಿವಾಳೇಶ್ವರ ಮಠದ ಗರ್ಭಿಣಿ ಆಕಳಿಗೆ ಮಂಟಪ ಹಾಕಿ, …
Read More »ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಕಲಬುರಗಿ : ಕೃಷಿ ಜಮೀನೊಂದರಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆ ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಇದೀಗ ಹಳೆ ದ್ವೇಷದ ಹಿನ್ನೆಲೆ ಹತ್ಯೆ ಮಾಡಿರರಬಹುದೆಂದು ಶಂಕೆ ವ್ಯಕ್ತವಾಗುತ್ತಿದೆ. ಹೌದು ಕಲಬುರಗಿ ಜಿಲ್ಲೆಯ ಕಮಲಾಪುರ್ ತಾಲೂಕಿನ ನಾಗೂರ ಗ್ರಾಮದ ಖಾಸಗಿ ಕೃಷಿ ಜಮೀನಿನ ದಂಡೆಯಲ್ಲಿ ಅರ್ಧ ಸುಟ್ಟಿರುವ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಒಂದು ದಿನ ಹಿಂದೆ ಈ ಕೊಲೆ ನಡೆದಿರಬಹುದೆಂಬ ಅನುಮಾನ ಹುಟ್ಟಿಕೊಂಡಿದೆ. …
Read More »
Laxmi News 24×7