ಬೆಂಗಳೂರು : ಒಂದೇ ಕುಟುಂಬದ ಮೂರು ಜನರು ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ನಗರದ ತಾವರೆಕೆರೆಯ 1ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಮಾದಮ್ಮ (68), ಅವರ ಪುತ್ರಿ ಸುಧಾ (38) ಹಾಗೂ ಸುಧಾ ಅವರ 14 ವರ್ಷ ವಯಸ್ಸಿನ ಪುತ್ರ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ, ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಹಾಗೂ ಸೋಕೋ ತಂಡದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. …
Read More »ಹಣಕ್ಕಾಗಿ ಉದ್ಯಮಿಯ ಅಪಹರಣ, ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ಮೈಸೂರು: ಒಂದು ಕೋಟಿ ರೂ. ಹಣಕ್ಕಾಗಿ ರಿಯಲ್ ಎಸ್ಟೇಟ್ ಹಾಗೂ ಲೇವಾದೇವಿ ಉದ್ಯಮಿ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸುವ ಮೂಲಕ ಅಪಹರಿಸಿದ್ದ ಐವರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಮೈಸೂರಿನ ವಿಜಯ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃತ್ಯ ನಡೆದ ಏಳು ಗಂಟೆಯ ಅವಧಿಯಲ್ಲಿಯೇ ಉದ್ಯಮಿಯನ್ನು ಅಪಹರಿಸಿದ್ದ ಐವರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದು, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅಪಹರಣ ಕೃತ್ಯಕ್ಕೆ ಪರಿಚಿತನೇ ಮಾಸ್ಟರ್ ಮೈಂಡ್ ಎಂಬುದು ತಿಳಿದು …
Read More »ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾವೆಲ್ಲಾ ಕೈ ಜೋಡಿಸೋಣ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: “ಎಲ್ಲಾ ಪಕ್ಷಗಳ ಶಾಸಕರು ತಮ್ಮ ರಾಜಕಾರಣ ಪಕ್ಕಕ್ಕಿಟ್ಟು ಕಿತ್ತೂರು ಕರ್ನಾಟಕ ಅಭಿವೃದ್ಧಿ ಪರವಾದ ಚಿಂತನೆಯನ್ನು ಹತ್ತು ದಿನಗಳ ಅಧಿವೇಶನದಲ್ಲಿ ಮಾಡಬೇಕು” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೋರಿದರು. ಸುವರ್ಣ ವಿಧಾನಸೌಧ ಬಳಿ ಭಾನುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಕಿತ್ತೂರು ಕರ್ನಾಟಕ ಏಳಿಗೆ ಮತ್ತು ಅಭಿವೃದ್ಧಿ ಕಡೆಗೆ ಆಡಳಿತ, ವಿಪಕ್ಷದ ಎಲ್ಲ ಶಾಸಕರು ವಿಚಾರ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರ ಮೇಲೂ …
Read More »ಮಹಾಮೇಳಾವ್ಗೆ ಮುಂದಾದ ಎಂಇಎಸ್ ಮುಖಂಡರ ಬಂಧನ
ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ಆಚರಿಸಲು ಮುಂದಾದ ಎಂಇಎಸ್ ಮುಖಂಡರಿಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಬ್ಬೊಬ್ಬರನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಬೆಳಗಾವಿಯಲ್ಲಿ ಇಂದಿನಿಂದ ಹತ್ತು ದಿನ ಅಧಿವೇಶನ ನಡೆಯಲಿದೆ. ಪ್ರತಿವರ್ಷವೂ ಕರ್ನಾಟಕ ಸರ್ಕಾರಕ್ಕೆ ಮುಜುಗರ ತರುವ ಉದ್ದೇಶಿದಿಂದ ಅಧಿವೇಶನ ನಡೆಯುವ ಮೊದಲ ದಿನವೇ ಮಹಾಮೇಳಾವ್ ಹೆಸರಿನಲ್ಲಿ ಎಂಇಎಸ್ ಮುಖಂಡರು ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಇಲ್ಲಿನ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಸಮಾವೇಶ …
Read More »ಬೆಳಗಾವಿ ವಿಭಜನೆ ಬಗ್ಗೆ ಸಭೆ ಕರೆದು ಚರ್ಚಿಸುವುದಾಗಿ ಸಿಎಂ ಹೇಳಿದ್ದಾರೆ: ಸತೀಶ್ ಜಾರಕಿಹೊಳಿ
ಬೆಳಗಾವಿ: ಬೆಳಗಾವಿಯನ್ನು ವಿಭಜಿಸುವ ಕುರಿತು ಸದನದ ಸಮಯದಲ್ಲಿ ಸಭೆ ಕರೆದು ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸುವರ್ಣ ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡುತ್ತಾ, ನೂತನ ಜಿಲ್ಲಾ ರಚನೆ ಬಗ್ಗೆ ಸಿಎಂ ಸಭೆ ಕರೆಯುವುದಾಗಿ ಹೇಳಿದ್ದಾರೆ. ಇದೇ ಅಧಿವೇಶನದ ವೇಳೆಯೇ ಸಭೆ ನಡೆಸಿ ಶಾಸಕರೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ ಎಂದು ಜಾರಕಿಹೊಳಿ ಮಾಹಿತಿ ನೀಡಿದರು. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ …
Read More »ಕೌಜಲಗಿ (ತಾ:ಗೋಕಾಕ): ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು- ಸರ್ಕಾರಕ್ಕೆ ಕನ್ನಡ ಕೌಸ್ತುಭ ಆಗ್ರಹ
ಕೌಜಲಗಿ (ತಾ:ಗೋಕಾಕ): ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು- ಸರ್ಕಾರಕ್ಕೆ ಕನ್ನಡ ಕೌಸ್ತುಭ ಆಗ್ರಹ ಕೌಜಲಗಿ(ತಾ:ಗೋಕಾಕ):ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಜಿಲ್ಲೆಯಾಗಿಸಿ, ಗೋಕಾಕ ತಾಲ್ಲೂಕಿನ ಕೌಜಲಗಿ ಪಟ್ಟಣವನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಕೌಜಲಗಿ ಕನ್ನಡ ಕೌಸ್ತುಭ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ಪಟ್ಟಣದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ, ಕನ್ನಡ ಕೌಸ್ತುಭದ ಅಧ್ಯಕ್ಷ – ಸಾಹಿತಿ ಡಾ ರಾಜು ಕಂಬಾರ ಮಾತನಾಡಿ, ಕೌಜಲಗಿ …
Read More »ನಾಗರಿಕರು ಭಯಪಡಬೇಕಾಗಿಲ್ಲ ನಿಮ್ಮೊಂದಿಗೆ ನಾವಿದ್ದೇವೆ.”
ನಿಪ್ಪಾಣಿ ನಗರದಲ್ಲಿ ಪೋಲಿಸ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳ್ಳತನದ ಘಟನೆಗಳು ಹೆಚ್ಚುತ್ತಿದ್ದು ಅದನ್ನು ತಡೆಯಲು ಪೊಲೀಸ್ ಆಡಳಿತವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ನಗರದಲ್ಲಿ ಕಳ್ಳತನ ಹೆಚ್ಚುತ್ತಿದ್ದು ಪೊಲೀಸ್ ಇಲಾಖೆ ನಿಖರವಾಗಿ ಕೆಲಸ ಮಾಡುತ್ತಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ, ಪೊಲೀಸ್ ಇಲಾಖೆ ಮತ್ತು ನಗರಸಭೆ ಸಮನ್ವಯ ಸಾಧಿಸುವ ಮೂಲಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.ಅಗತ್ಯವಿದ್ದರೆ ಪೊಲೀಸ್ ಸಿಬ್ಬಂದಿಗಳನ್ನು ಮತ್ತಷ್ಟು ಹೆಚ್ಚಿಸಬೇಕು.ಇನ್ನೂ ಮುಂದೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ …
Read More »ಕ್ಷೇತ್ರದಲ್ಲಿ 151ನೇ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪೂಜೆ*
ಬೆಳಗಾವಿ ಅಧಿವೇಶನ ಮುನ್ನಾದಿನ ಗ್ರಾಮೀಣ ಕ್ಷೇತ್ರದ ಸುಳಗಾ ಗ್ರಾಮದಲ್ಲಿ ಚಾಲನೆ ಬೆಳಗಾವಿ : ಶಾಸಕರಾಗಿ ಏಳೂವರೆ ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 150 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗುವ ಮುನ್ನಾದಿನ, ಭಾನುವಾರ ಸುಳಗಾ ಗ್ರಾಮದಲ್ಲಿ 151ನೇ ದೇವಸ್ಥಾನದ ಕಾಲಂ ಪೂಜೆ ನೆರವೇರಿಸಿದರು. ತಲಾ 25 ಲಕ್ಷ ರೂ.ಗಳಿಂದ ಆರಂಭವಾಗಿ 5 ಕೋಟಿ ರೂ.ವರೆಗಿನ …
Read More »ದಿ ಹಿಂದ್ ಸೊಸೈಟಿಯಿಂದ ಕ್ಯಾಂಪಿನಲ್ಲಿ “ಮೆಗಾ ಉಚಿತ ಆರೋಗ್ಯ ತಪಾಸಣೆ” ಶಿಬಿರ “ಮೆಗಾ ಉಚಿತ ಆರೋಗ್ಯ ತಪಾಸಣೆ” ಶಿಬಿರ
ದಿ ಹಿಂದ್ ಸೊಸೈಟಿಯಿಂದ ಕ್ಯಾಂಪಿನಲ್ಲಿ “ಮೆಗಾ ಉಚಿತ ಆರೋಗ್ಯ ತಪಾಸಣೆ” ಶಿಬಿರ “ಮೆಗಾ ಉಚಿತ ಆರೋಗ್ಯ ತಪಾಸಣೆ” ಶಿಬಿರ ದಿ ಹಿಂದ್ ಸೊಸೈಟಿಯ ಸಹಯೋಗ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಆಯೋಜನೆ ಹಲವಾರು ಜನರು ಪಡೆದುಕೊಂಡರು ಸದುಪಯೋಗ ಬೆಳಗಾವಿ ಕ್ಯಾಂಪಿನ ದಿ ಹಿಂದ್ ಶಿಕ್ಷಣ ಮತ್ತು ಸಾಮಾಜೀಕ ಸಂಸ್ಥೆಯ ವತಿಯಿಂದ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ದಿ ಹಿಂದ್ ಶಿಕ್ಷಣ ಮತ್ತು ಸಾಮಾಜೀಕ ಸಂಸ್ಥೆಯ ವತಿಯಿಂದ ಉಚಿತ …
Read More »ಡಿ.9 ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿರುವ ಬಿಜೆಪಿ ಇಂದು ಪ್ರತಿಭಟನಾ ಸ್ಥಳವನ್ನು ಪರಿಶೀಲಿಸಿದ ನಾಯಕರು
ಡಿ.9 ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿರುವ ಬಿಜೆಪಿ ಇಂದು ಪ್ರತಿಭಟನಾ ಸ್ಥಳವನ್ನು ಪರಿಶೀಲಿಸಿದ ನಾಯಕರು ಅಧಿವೇಶನದ ಹಿನ್ನೆಲೆ ಬಿಜೆಪಿ ಪ್ರತಿಭಟನೆ ಡಿ.9 ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಪ್ರತಿಭಟನಾ ಸ್ಥಳವನ್ನು ಪರಿಶೀಲಿಸಿದ ಬಿಜೆಪಿ ನಾಯಕರು ಡಿ. 9 ರಂದು ನಡೆಯಲಿರುವ ಪ್ರತಿಭಟನೆ ಡಿಸೆಂಬರ್ 9 ರಂದು ಬಿಜೆಪಿ ಪಕ್ಷವು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಇಂದು ಬಿಜೆಪಿ ನಾಯಕರು ಪ್ರತಿಭಟನಾ ಸ್ಥಳವನ್ನು ಪರಿಶೀಲಿಸಿದರು. ಡಿಸೆಂಬರ್ 9 …
Read More »
Laxmi News 24×7