ಡಾ. ಅಂಜನಾ ಬಾಗೇವಾಡಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಬ್ಯಾಂಕಾಕ್ನಲ್ಲಿ ನಡೆದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನ ಬ್ಯಾಂಕಾಕ್ನಲ್ಲಿ ನಡೆದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಅಂಜನಾ ಬಾಗೇವಾಡಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೆಎಲ್ಇ ವಿಕೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಬೆಳಗಾವಿಯ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಉಪ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಾದ ಡಾ. ಅಂಜನಾ ಬಾಗೇವಾಡಿ, ಜುಲೈ 9 ರಿಂದ 12ರ ವರೆಗೆ ಥೈಲ್ಯಾಂಡ್ನ …
Read More »ಬಿ. ಸರೋಜಾದೇವಿ ಎಲ್ಲ ಪಾತ್ರಕ್ಕೂ ಜೀವ ತುಂಬುವ ಅಭಿನಯ ಸರಸ್ವತಿ… ಬಿ.ಸರೋಜಾದೇವಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ
ಬಿ. ಸರೋಜಾದೇವಿ ಎಲ್ಲ ಪಾತ್ರಕ್ಕೂ ಜೀವ ತುಂಬುವ ಅಭಿನಯ ಸರಸ್ವತಿ… ಬಿ.ಸರೋಜಾದೇವಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ ಬಹುಭಾಷಾ ನಟಿ ಬಿ. ಸರೋಜಾ ದೇವಿ ಸೋಮವಾರದಂದು ತಮ್ಮ 87ರ ಹರೆಯದಲ್ಲಿ ಇಹಲೋಕ ತ್ಯಜಿಸಿದ್ದು, ಇಂದು ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ. ಸಿಎಂ ಸಿದ್ದರಾಮಯ್ಯ ಅವರಿಂದು ನಟಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಬಿ.ಸರೋಜಾ ದೇವಿ ಅವರ ನಿಧನ …
Read More »ಹಣಕಾಸಿನ ವಿಚಾರವಾಗಿ ಕಂಠಿಗಲ್ಲಿಯಲ್ಲಿ ಇತ್ತೀಚೆಗೆ ನಡೆದ ಚಾಕು ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ.
ಧಾರವಾಡ: ಹಣಕಾಸಿನ ವಿಚಾರವಾಗಿ ಕಂಠಿಗಲ್ಲಿಯಲ್ಲಿ ಇತ್ತೀಚೆಗೆ ನಡೆದ ಚಾಕು ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ. ರಾಘವೇಂದ್ರ (ರಾಜು) ಗಾಯಕವಾಡ ಮೃತರು. ಕಳೆದ ಗುರುವಾರ ಧಾರವಾಡದ ಕಂಠಿಗಲ್ಲಿಯಲ್ಲಿ ಚಾಕು ಇರಿತ ನಡೆದಿತ್ತು. ಹಣಕಾಸಿನ ವಿಚಾರವಾಗಿ ಯುವಕ ರಾಜು ಗಾಯಕವಾಡನಿಗೆ ಮಲ್ಲಿಕ್ ಎಂಬಾತ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ರಾಜುನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. …
Read More »ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಏರಿಕೆ
ಬೆಂಗಳೂರು: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಆಟೋರಿಕ್ಷಾಗಳ ಪ್ರಯಾಣ ದರ ಏರಿಕೆಗೆ ಕೊನೆಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ. ಕನಿಷ್ಠ ದರವನ್ನು 30 ರೂಪಾಯಿಗಳಿಂದ 36 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಪರಿಷ್ಕ್ರತ ದರದಂತೆ ಮೊದಲ ಎರಡು ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ದರ 36 ರೂಪಾಯಿಗಳಿರಲಿದೆ. ಎರಡು ಕಿಲೋಮೀಟರ್ ನಂತರದ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್ಗೆ ಈ ಮೊದಲು ಇದ್ದ ದರವನ್ನು 15 ರೂ.ನಿಂದ 18 ರೂ.ಗೆ ಹೆಚ್ಚಳ ಮಾಡಲಾಗಿದೆ. ಅಂದರೆ ಎರಡು …
Read More »ನಕಲಿ ದಾಖಲೆಗಳ ಮೂಲಕ ಶೂರಿಟಿ ನೀಡುತ್ತಿದ್ದ 8 ಆರೋಪಿಗಳ ಬಂಧನ
ಬೆಂಗಳೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ನಕಲಿ ಶೂರಿಟಿ ನೀಡುತ್ತಿದ್ದ 8 ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಫಿ, ಪ್ರವೀಣ್ ಕುಮಾರ್, ಅಭಿಷೇಕ್, ಗೋವಿಂದ ನಾಯ್ಕ್ ಮತ್ತು ದೊರೆರಾಜು ಹಾಗೂ ಮತ್ತೊಂದು ಪ್ರಕರಣದಲ್ಲಿ ಅಬೀದ್, ವಾಸಿಂ ಅಹಮ್ಮದ್ ಮತ್ತು ಗೋವಿಂದರಾಜು ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ಶೂರಿಟಿಗಳನ್ನು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಭೂಮಿ ಆ್ಯಪ್ನ ಮೂಲಕ ಬೇರೆ …
Read More »ಬಡತನಕ್ಕೆ ಬಗ್ಗದ ಛಲ… ಬೆಳಗಾವಿಯ ಪ್ರಶಾಂತ್’ಗೆ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ
ಬಡತನಕ್ಕೆ ಬಗ್ಗದ ಛಲ… ಬೆಳಗಾವಿಯ ಪ್ರಶಾಂತ್’ಗೆ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಶಕ್ತಿ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂಬುದಕ್ಕೆ ಬಹುದೊಡ್ಡ ಸಾಕ್ಷ್ಯವಾಗಿದ್ದಾರೆ ಬೆಳಗಾವಿಯ ಯುವಕನ ಈ ಸಾಧನೆ. ಹಾಗಾದರೇ, ಆ ಯುವಕ ಮಾಡಿರುವ ಸಾಧನೆಯಾದರೂ ಯಾವುದು? ಎಂಬುದನ್ನು ನೋಡೋಣ ಬನ್ನಿ. ಹೌದು, ಬೆಳಗಾವಿಯ ಕಂಗ್ರಾಳಿ ಬುದ್ರುಕ್ ಗ್ರಾಮದ ಪ್ರಶಾಂತ್ ಮಂಗೇಶ್ ಚೌಗುಲೆ. ಆರ್ಥಿಕ ಸಂಕಷ್ಟಗಳಿಂದ ಜರ್ಜರಿತ ಕುಟುಂಬದಿಂದ ಬಂದ ಈ ಪ್ರತಿಭಾವಂತ ಯುವಕ. ಈತ …
Read More »ನಂದಗಡ ಠಾಣೆಯ ಪೊಲೀಸ್ ಮೆಂಡಿಗೇರಿಗೆ ಎಸ್ಪಿ ಪ್ರಶಂಸನಾ ಪತ್ರ
ನಂದಗಡ ಠಾಣೆಯ ಪೊಲೀಸ್ ಮೆಂಡಿಗೇರಿಗೆ ಎಸ್ಪಿ ಪ್ರಶಂಸನಾ ಪತ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಅವರಿಂದ ವಿತರಣೆ ಐತಿಹಾಸಿಕ ಪುಣ್ಯ ಭೂಮಿ ನಂದಗಡದ ಗ್ರಾಮದಲ್ಲಿರುವ ಪೋಲಿಸ್ ಠಾಣೆಯ ಪೊಲೀಸರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಿದಾನಂದ ಮೆಂಡಿಗೇರಿ ಅವರಿಗೆ ಬೆಳಗಾವಿ ಹೆಚ್ಚುವರಿ ಅಧಿಕ್ಷಕರಾದ ರಾಮಗೊಂಡ ಬಸರಗಿ ಅವರಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಚಿದಾನಂದ ಮೆಂಡಿಗೇರಿ ಅವರು ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಠಾಣೆಯ ಅವಧಿ ಮೀರದ ದಾಖಲೆಗಳ ವಿಲೇವಾರಿ ಹಾಗೂ …
Read More »ಕತ್ತಲಲ್ಲಿ ಮುಳುಗಿದ ಖಾನಾಪೂರ!!!
ಉರಿಯದ ಬೀದಿ ದೀಪಗಳು… ಕತ್ತಲಲ್ಲಿ ಮುಳುಗಿದ ಖಾನಾಪೂರ!!! ಖಾನಾಪೂರ – ನಂದಗಡ ಹಾಗೂ ಖಾನಾಪೂರ – ಬೆಳಗಾವಿ ರಸ್ತೆಗಳ ಖಾನಾಪೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭಾಗಗಳಲ್ಲಿ ರಸ್ತೆ ಮಧ್ಯದಲ್ಲಿರುವ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರ ಪರಿಣಾಮವಾಗಿ ಆ ಪ್ರದೇಶ ಸಂಪೂರ್ಣವಾಗಿ ಕತ್ತಲೆಯಲ್ಲಿ ಮುಳುಗಿದೆ. ದಟ್ಟ ಅಂಧಕಾರದ ಹಿನ್ನೆಲೆ ಪ್ರವಾಸಿಗರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸಲು ಸಂಕಷ್ಟ ಎದುರಾಗುತ್ತಿದೆ. ಮೊದಲೇ ರಸ್ತೆಯು ತೆಗ್ಗುಮಯವಾಗಿದ್ದು, ಇದರ …
Read More »ಬನಹಟ್ಟಿಯಲ್ಲಿ ವಿಚಿತ್ರ ಘಟನೆ… ಅರಳಿ ಮರ ಕಡಿಯಲು ಹೋದವರಿಗೆ ಆಂಜನೇಯನ ದರ್ಶನ!
ಬನಹಟ್ಟಿಯಲ್ಲಿ ವಿಚಿತ್ರ ಘಟನೆ… ಅರಳಿ ಮರ ಕಡಿಯಲು ಹೋದವರಿಗೆ ಆಂಜನೇಯನ ದರ್ಶನ! ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸೋಮವಾರಪೇಟೆಯ ನಾಮದೇವ ಗಲ್ಲಿಯಲ್ಲಿ ಇರುವ ಹನುಮ ದೇವಾಲಯದಲ್ಲಿ ಧಾರ್ಮಿಕ ನಂಬಿಕೆಗಳನ್ನು ಪುಷ್ಟಿಪಡಿಸುವ ರೀತಿಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ದೇವಸ್ಥಾನದ ಜೀರ್ಣೋದ್ಧಾರದ ಭಾಗವಾಗಿ ಮುಂಭಾಗದಲ್ಲಿದ್ದ ಅರಳಿ ಮರವನ್ನು ಕಡಿದು ಕಟ್ಟಡ ನಿರ್ಮಿಸಲು ಆಡಳಿತ ಸಮಿತಿ ಮುಂದಾಗಿತ್ತು. ಮರ ಕಡಿತದ ವೇಳೆ ಮರದ ಕಾಂಡ ಕಡಿದು, ಮುಂದಿನ ಭಾಗವನ್ನು ಕತ್ತರಿಸಲು ಪ್ರಯತ್ನಿಸಿದಾಗ ಗರಗಸ ಸೇರಿದಂತೆ ಬಳಸಿದ …
Read More »ಕೂಡಲಸಂಗಮ ಪೀಠಕ್ಕೆ ಬೀಗ…
ಕೂಡಲಸಂಗಮ ಪೀಠಕ್ಕೆ ಬೀಗ… ಮೃತ್ಯುಂಜಯ ಶ್ರೀಗಳ ನಾಲ್ವರು ಬೆಂಬಲಿಗರ ವಿರುದ್ಧ ದೂರು…!!! ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಲಾಗಿದೆ. ನಿನ್ನೆ ರಾತ್ರಿ ಪೀಠಕ್ಕೆ ಬೀಗ ಹಾಕಿರುವ ಮಾಹಿತಿ ಲಭ್ಯವಾಗಿದ್ದು, ಬೀಗ ಹಾಕಿದ್ದು ಯಾರು? ಯಾಕೆ? ಎನ್ನುವುದು ನಿಗೂಢವಾಗಿದೆ. ಕೂಡಲಸಂಗಮ ಪಂಚಮಸಾಲಿ ಪೀಠದ ವಿಚಾರ ಬುಗಿಲೆದ್ದಿದೆ. ಕಳೆದ ಕೆಲವು ದಿನಗಳ ಹಿಂದೆ ಶುರುವಾಗಿದ್ದ ಹೊಸ ಪೀಠದ ಚರ್ಚೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಪ್ರಸಂಗ ಬಂದರೆ …
Read More »