Breaking News

ಅಕ್ರಮ ಗಾಂಜಾ ಮಾರಾಟ: ಆರೋಪಿ ಬಂಧನ

ನರಗುಂದ: ತಾಲ್ಲೂಕಿನ ಹದಲಿ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಹದಲಿ ಗ್ರಾಮದ ದಾವಲಸಾಬ ನರಗುಂದ ಎಂಬ ಆರೋಪಿಯಿಂದ ₹ 5,400 ಮೌಲ್ಯದ 131 ಗ್ರಾಂ ಒಣ ಗಾಂಜಾ ಇರುವ ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನು ಹಾಗೂ ₹ 20 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ‘ಅಬಕಾರಿ ಡಿಸಿ ಲಕ್ಷ್ಮಿನಾಯಕ ಅವರ ಮಾರ್ಗದರ್ಶನ ಮತ್ತು ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಲಾಗಿದ್ದು, …

Read More »

ನದಿಯಲ್ಲಿ ಮುಳುಗಿ ಇಬ್ಬರ ಸಾವು

ಹರಿಹರ: ದೀಪಾವಳಿ ಅಮಾವಾಸ್ಯೆ ಪೂಜೆಯ ಅಂಗವಾಗಿ ವಾಹನ ತೊಳೆಯಲು ತೆರಳಿದ್ದ ಇಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯ ಗುತ್ತೂರು ಬಳಿ ಗುರುವಾರ ನಡೆದಿದೆ. ರೈತ ಅಣ್ಣಪ್ಪ ಪಿ. ಗಿಡ್ಡಬಸಪ್ಪರ್ (46) ಮತ್ತು ಇವರ ಅಣ್ಣನ ಮಗ ಪ್ರಶಾಂತ್ ಪಿ. ಗಿಡ್ಡಬಸಪ್ಪರ್ (15) ಮೃತಪಟ್ಟವರು. ಪ್ರಶಾಂತ್‌ ಸೇಂಟ್ ಮೇರಿಸ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅಣ್ಣಪ್ಪ ಅವರು ವಾಹನವನ್ನು ತೊಳೆಯಲು ಗ್ರಾಮಕ್ಕೆ ಸಮೀಪದ ನದಿಗೆ ಬೆಳಿಗ್ಗೆ ತೆರಳಿದ್ದರು. ತಮ್ಮ …

Read More »

ನರಕ ಚತುರ್ದಶಿ; ಲಕ್ಷ್ಮಿ ಪೂಜೆ ಸಂಭ್ರಮ

ಹುಬ್ಬಳ್ಳಿ: ನಗರದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಗುರುವಾರ ನಗರದ ವಿವಿಧೆಡೆ ನರಕ ಚತುರ್ದಶಿ ಹಾಗೂ ಲಕ್ಷ್ಮಿ ಪೂಜೆಯನ್ನು ಸಂಭ್ರಮದಿಂದ ನೆರವೇರಿಸಲಾಯಿತು. ಹಬ್ಬದ ಪ್ರಯುಕ್ತ ಬೆಳಿಗ್ಗೆಯೇ ಮನೆ ಎದುರು ಶುಚಿಗೊಳಿಸಿ ರಂಗೋಲಿ ಹಾಕಿ, ಬಾಗಿಲಿಗೆ ತಳಿರು ತೋರಣ ಕಟ್ಟಿದ್ದರು. ಸಂಜೆ ಮನೆ ಮುಂದೆ, ತುಳಸಿಕಟ್ಟೆ ಎದುರು ದೀಪ ಹಚ್ಚಿ ಜನರು ಸಂಭ್ರಮಿಸಿದರು. ಲಕ್ಷ್ಮಿ ಪೂಜೆ ಅಂಗವಾಗಿ ಕೆಲವು ವ್ಯಾಪಾರಿಗಳು ಅಂಗಡಿಗಳನ್ನು ಬಗೆಬಗೆಯ ವಿದ್ಯುತ್‌ ದೀಪಗಳಿಂದ ಅಲಂಕರಿಸಿ, ಸಂಜೆ ವೇಳೆಗೆ ಪೂಜೆ …

Read More »

ಸುವರ್ಣ ರಾಜ್ಯ ಪ್ರಶಸ್ತಿಗೆ ಚಲವಾದಿ ಆಯ್ಕೆ

ಖಾನಾಪುರ: ಕರ್ನಾಟಕ ಸಂಭ್ರಮ ಸುವರ್ಣ ಮಹೋತ್ಸವ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಘೋಷಿಸಿದ ರಾಜ್ಯ ಪ್ರಶಸ್ತಿಗೆ ತಾಲ್ಲೂಕಿನ ಮಂಗೇನಕೊಪ್ಪ ಗ್ರಾಮದ ನಿವಾಸಿ, ನಿವೃತ್ತ ಅರಣ್ಯ ಅಧಿಕಾರಿ ಎಸ್.ಎಂ ಚಲವಾದಿ ಆಯ್ಕೆಯಾಗಿದ್ದಾರೆ. ಚಲವಾದಿಯವರು ಮೂರೂವರೆ ದಶಕ ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ಬಳಿಕ ಅರಣ್ಯ ಸಂರಕ್ಷಣೆ, ಪರಿಸರ ರಕ್ಷಣೆಯ ಕುರಿತು ಕಾಳಜಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. …

Read More »

ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ

ಉಡುಪಿ: 2023ರ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್​ ಪಕ್ಷ (Congress Party) ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ (Shakti Scheme) ಕೂಡ ಒಂದಾಗಿದ್ದು, ರಾಜ್ಯಾದ್ಯಂತ ಈ ಯೋಜನೆಗೆ ಭರ್ಜರಿ ರೆಸ್ಪಾನ್ಸ್​ ದೊರೆಯುತ್ತಿದೆ. ಯೋಜನೆ ಜಾರಿಯಾಗಿ ಒಂದು ವರ್ಷಕ್ಕೂ ಅಧಿಕ ಕಾಲಗಳಾಗಿದ್ದು, ಮಹಿಳೆಯರು ಉಚಿತ ಪ್ರಯಾಣದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ನಿಲ್ಲಿಸುವುದಾಗಿ ಪರೋಕ್ಷ ಹೇಳಿಕೆ ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ (Dk Shivakumar)​ …

Read More »

ಪ್ರಕಾಶ್ ಅಂಬೇಡ್ಕರ್‌ಗೆ ಎದೆ ನೋವು; ಆಸ್ಪತ್ರೆಗೆ ದಾಖಲು

ಮುಂಬೈ: ವಂಚಿತ್ ಬಹುಜನ್ ಅಘಾಡಿ (ವಿಬಿಎ) ಪಕ್ಷದ ಸಂಸ್ಥಾಪಕ ಪ್ರಕಾಶ್‌ ಅಂಬೇಡ್ಕರ್‌ (70) ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಪುಣೆಯ ಆಸ್ಪತ್ರೆಗೆ ಗುರುವಾರ ಮುಂಜಾನೆ ದಾಖಲಿಸಲಾಗಿದೆ. ಪ್ರಕಾಶ್‌ ಅಂಬೇಡ್ಕರ್‌ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗ. ವೃತ್ತಿಯಿಂದ ವಕೀಲ, ಸಾಮಾಜಿಕ ಹೋರಾಟಗಾರ ಮತ್ತು ರಾಜಕಾರಣಿಯೂ ಆಗಿರುವ ಅವರು ‘ಬಾಳಾ ಸಾಹೇಬ್‌ ಅಂಬೇಡ್ಕರ್‌’ ಎಂದು ಜನಪ್ರಿಯ. ಅವರು, ಅಕೋಲ ಕ್ಷೇತ್ರದಿಂದ ಎರಡು ಬಾರಿ ಸಂಸದ ಮತ್ತು …

Read More »

ದೀಪಾವಳಿ ಬಂದರೆ ಸಾಕು ಭರ್ಜರಿ ಖಾದ್ಯಗಳ ರಸದೌತಣ

ದೀಪಾವಳಿ ಬಂದರೆ ಸಾಕು ಭರ್ಜರಿ ಖಾದ್ಯಗಳ ರಸದೌತಣ. ಬಗೆಬಗೆಯ ತಿನುಸುಗಳ ಸೊಗಸೂ ಇರುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಗಡಿ ಜಿಲ್ಲೆಗಳಲ್ಲಿ ಕನ್ನಡ- ಮರಾಠಿ ಮಿಶ್ರ ಸಂಸ್ಕೃತಿ ಖಾದ್ಯಗಳನ್ನು ಸವಿಯುವುದೇ ಸಡಗರ. ಸಿಹಿಯೂ, ಖಾರವೂ, ಕರಿದ ಪದಾರ್ಥಗಳೂ, ಬೇಕರಿ ತಿನಿಸುಗಳೂ… ಒಂದೇ ಎರಡೇ. ತಿಂಡಿಪ್ರಿಯರಿಗಂತೂ ಇದು ಹೇಳಿ ಮಾಡಿಸಿದ ಹಬ್ಬ. ‘ಬಲೀಂದ್ರ ಪೂಜೆ’ ಅಮಾವಾಸ್ಯೆಯ ವಿಶೇಷ. ಈ ದಿನದಿಂದಲೇ ವಿಕ್ರಮ ಸಂವತ್ಸರ ಆರಂಭವಾಗುತ್ತದೆ. ವರ್ತಕರು, ಉದ್ಯಮಿಗಳಿಗೆ ಈ ದಿನ ಅತ್ಯಂತ …

Read More »

ಬೆಳಕಿನ ಹಬ್ಬಕ್ಕೆ ‍ಪಗಡೆಯಾಟದ ಸಡಗರ

ದೀಪಾವಳಿ ಹಬ್ಬ ಬರುತ್ತಿದ್ದಂತೆ ಮೂಡಲಗಿ ತಾಲ್ಲೂಕಿನ ಹಳ್ಳಿಗಳಲ್ಲಿ ಪಗಡೆ ಆಟ ಆಡುವುದಕ್ಕೆ ಸಜ್ಜಾಗುತ್ತಾರೆ. ದೀಪಾವಳಿಗೆ ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಪಗಡೆ ಆಟದ ಸಂಭ್ರಮ ತುಂಬಿಕೊಳ್ಳುತ್ತದೆ. ಕೈಯಲ್ಲಿ ಪಗಡೆ ಹಾಸು, ಕವಡೆ ಕಾಯಿಗಳನ್ನು ಹಿಡಿದುಕೊಂಡು ಗ್ರಾಮದ ಅಗಸಿ ಕಟ್ಟೆ, ಪಂಚಾಯಿತಿ ಕಟ್ಟೆ, ದೇವಸ್ಥಾನದ ಕಟ್ಟೆಗೋ ಹೊರಟರೆಂದರೆ ದೀಪಾವಳಿ ಮೈದುಂಬಿಕೊಂಡಿದೆ ಎಂದರ್ಥ.   ದೀಪಾವಳಿಯ ಸುತ್ತ ಐದು ದಿನಗಳ ವರೆಗೆ ಪಗಡೆ ಆಟದ ರಂಗು ಏರುತ್ತದೆ. ಊರುಗಳಲ್ಲಿ ಆಕಾಶಬುಟ್ಟಿ ಮತ್ತು ಹಣತೆಗಳ …

Read More »

ವೈವಿಧ್ಯಮಯ ವಿನ್ಯಾಸಗಳ ಆಕಾಶಬುಟ್ಟಿಗಳು

ವೈವಿಧ್ಯಮಯ ವಿನ್ಯಾಸಗಳ ಆಕಾಶಬುಟ್ಟಿಗಳು ಬೆಳಗಾವಿ ಮಾರುಕಟ್ಟೆಯ ಬಣ್ಣವನ್ನು ಆಕರ್ಷಕಗೊಳಿಸಿದೆ. ತರಕಾರಿ, ಹಣ್ಣು-ಹಂಪಲುಗಳ ರಾಶಿ ಕಾಣಿಸುತ್ತಿದ್ದ ರಸ್ತೆಗಳಲ್ಲಿ ಏಕಾಏಕಿ ಕಾಮನಬಿಲ್ಲಿನಂಥ ಲೋಕ ಸೃಷ್ಟಿಯಾಗಿದೆ. ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಸಾಮಾನ್ಯ ಮಾರುಕಟ್ಟೆ ಈಗ ವರ್ಣರಂಜಿತ ರೂಪ ಪಡೆದು ಕಂಗೊಳಿಸುತ್ತಿದೆ. ಜನರಿಂದ ಕಿಕ್ಕಿರಿದು ಸೇರಿರುವ ಮಾರುಕಟ್ಟೆಗೆ ಕಾಲಿಟ್ಟರೆ ಸಾಕು; ಹೂಮಾಲೆಗಳು, ನಕ್ಷತ್ರಗಳು, ಬಗೆಬಗೆಯ ವಿನ್ಯಾಸಗಳ ಆಭರಣಗಳು, ಬಟ್ಟೆಗಳು, ವಿದ್ಯುದ್ದೀಪಗಳು ಚುಂಬಕಶಕ್ತಿಯಂತೆ ಸೆಳೆಯುತ್ತಿವೆ. ವರ್ಣರಂಜಿತ ಶಿವನಬುಟ್ಟಿಗಳಂತೂ ಒಂದಕ್ಕಿಂತ ಮತ್ತೊಂದು ಸುಂದರವಾಗಿವೆ. ಅವುಗಳ ಖರೀದಿಗೆ …

Read More »

ಸಾಂಪ್ರದಾಯಿಕ ಹಣತೆಗಳು, ಬೇಕಿದೆ ಸರ್ಕಾರದ ನೆರವು

ಚಿಕ್ಕೋಡಿ: ದೀಪಾವಳಿ ಬಂದರೆ ಸಾಕು; ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ಸಡಗರ ಇಮ್ಮಡಿಯಾಗುತ್ತಿತ್ತು. ಮಣ್ಣಿನ ಹಣತೆಗಳನ್ನು ಮಾಡಲು ನಾಲ್ಕು ತಿಂಗಳು ಮೊದಲು ಸಿದ್ಧತೆ ನಡೆಯುತ್ತಿದ್ದವು. ಇಲ್ಲಿನ 30ಕ್ಕೂ ಹೆಚ್ಚು ಕುಂಬಾರ ಕುಟುಂಬಗಳು ಈ ಹಬ್ಬಕ್ಕಾಗಿ ಕಾಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಕುಂಬಾರರಿಗೂ ದೀಪಾವಳಿಗೆ ಸಂಬಂಧವೇ ಇಲ್ಲ ಎಂಬಷ್ಟು ಸಮಸ್ಯೆ ತಲೆದೋರಿದೆ. ಜೇಡಿಮಣ್ಣಿನ ಹಣತೆಗೆ ಬೇಡಿಕೆ ಇಲ್ಲದೇ ಕುಂಬಾರರು ಕುಂಬಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ದೀಪಾವಳಿ ಹಬ್ಬದಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿಸುವುದು ಸಾಮಾನ್ಯವಾಗಿತ್ತು. ಆದರೆ ಇಂದು …

Read More »