ಗೋಕಾಕ: ಗೋಕಾಕ ತಾಲ್ಲೂಕನ ನೂತನ ಕಂದಾಯ ನಿರೀಕ್ಷಕರಾಗಿ ಸಂತೋಷ ಪಾಶ್ಚಾಪುರ ಅವರು ಇಂದು (ಮಂಗಳವಾರ) ಅಧಿಕಾರವನ್ನು ಸ್ವೀಕಾರಿಸಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಯಾಗಿ ಸುದೀರ್ಘ 23 ವರ್ಷಗಳ ಕಾಲ ಕಂದಾಯ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ಸಂತೋಷ ಪಾಶ್ಚಾಪುರ ಅವರು ಸದ್ಯ ಗೋಕಾಕನ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂತೋಷ ಪಾಶ್ಚಾಪುರ ಅವರು ಕರ್ತವ್ಯ ನಿಷ್ಠೆ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ, ಸರಳ ಮತ್ತು ಸಜ್ಜನಿಕೆಯ ವಕ್ತಿತ್ವವನ್ನು ಹೊಂದಿದ್ದಾರೆ.
Read More »ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಸ್ವಾಮೀಜಿಯಿಂದ ನಿರ್ಬಂಧ ಹಿನ್ನೆಲೆ. ರಾಯಬಾಗದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿ ಭಕ್ತವೃಂದದಿಂದ ಪ್ರತಿಭಟನೆ.
ಚಿಕ್ಕೋಡಿ : ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಸ್ವಾಮೀಜಿಯಿಂದ ನಿರ್ಬಂಧ ಹಿನ್ನೆಲೆ. ರಾಯಬಾಗದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿ ಭಕ್ತವೃಂದದಿಂದ ಪ್ರತಿಭಟನೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಕ್ತವೃಂದರು. ಸ್ವಾಮೀಜಿ ಮೇಲೆ ವಿಧಿಸಿದ ನಿರ್ಬಂಧ ವಾಪಾಸ್ಸು ಪಡೆಯುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದ ಪ್ರತಿಭಟನೆ. ಕನ್ಹೇರಿ ಮಠದ ಸ್ವಾಮೀಜಿಯವರಿಗೆ ನಿರ್ಭಂಧ ಹೇರಿರುವ ರಾಜ್ಯ ಸರ್ಕಾರ.
Read More »ಮೈಸೂರಿನ ಇಂದಿರಾನಗರದ ದೊಡ್ಡಕೆರೆ ಮೈದಾನದಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ
ಮೈಸೂರಿನ ಇಂದಿರಾನಗರದ ದೊಡ್ಡಕೆರೆ ಮೈದಾನದಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ, ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಅಯುಬ್ ಖಾನ್ ಅವರಿಂದ ಸನ್ಮಾನ ಸ್ವೀಕರಿಸಿದ ಸಚಿವ ಸತೀಶ ಜಾರಕಿಹೊಳಿ.. ಈ ವೇಳೆ ಇಲ್ಲಿ ನೂತನವಾಗಿ ಬೃಂದಾವನ ಉದ್ಯಾನ ಮಾದರಿಯಲ್ಲಿ ನಿರ್ಮಿಸಲಾದ ಮ್ಯೂಸಿಕಲ್ ಫೌಂಟೆನ್ ಪ್ರದರ್ಶನವನ್ನು ವೀಕ್ಷಿಸಿದೆ. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಅನಿಲ್ ಚಿಕ್ಕಮಾದು, ಶ್ರೀ ಹರೀಶ್ ಗೌಡ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Read More »ಸಕ್ರೆಬೈಲು ಆನೆ ಬಾಲಣ್ಣನ ಕಿವಿ ಕತ್ತರಿಸಿದ ವೈದ್ಯರ ತಂಡ: ಚಿಕಿತ್ಸೆ ಕುರಿತು ಡಿಎಫ್ಒ ಹೇಳಿದ್ದಿಷ್ಟು
ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಬಾಲಣ್ಣ ಎಂಬ ಹೆಸರಿನ ಸಾಕಾನೆಯ ಬಲ ಕಿವಿಯನ್ನು ಬೆಂಗಳೂರಿನ ವೈದ್ಯರ ತಂಡವು ಕಟ್ ಮಾಡಿದೆ. ಆನೆಗೆ ಕಿವಿಯ ಬಳಿ ಸಣ್ಣದೊಂದು ಗಾಯವಾಗಿತ್ತು. ಗಾಯಕ್ಕೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಅದು ದೊಡ್ಡದಾಗಿತ್ತು. ಹಾಗಾಗಿ ಕಿವಿಯನ್ನೇ ಕತ್ತರಿಸಲಾಗಿದೆ. ಕಳೆದ ತಿಂಗಳು ಶಿವಮೊಗ್ಗದಲ್ಲಿ ನಡೆದಿದ್ದ ಅದ್ಧೂರಿ ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಬಾಲಣ್ಣ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿತ್ತು. ಬೆಂಗಳೂರು ವೈದ್ಯರಿಂದ ಸೂಕ್ತ ಚಿಕಿತ್ಸೆ: ಚಿಕಿತ್ಸೆ ಸಂದರ್ಭದಲ್ಲಿ ಬಾಲಣ್ಣ ಆನೆಯ …
Read More »ಸುರಂಗ ರಸ್ತೆ ಬದಲು ಮೆಟ್ರೋ ವಿಸ್ತರಣೆ, ಸಾರ್ವಜನಿಕ ಸಾರಿಗೆಗೆ ಆದ್ಯತೆಯಿಂದ ಮಾತ್ರ ಸಂಚಾರದಟ್ಟಣೆ ತಹಬದಿಗೆ: ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು: 18 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ರಸ್ತೆ ನಿರ್ಮಾಣದಿಂದ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಹೇಗೆ ಸಾಧ್ಯ. ಪೂರ್ವ ಸಿದ್ಧತೆ ನಡೆಸದೆ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಸಾರ್ವಜನಿಕರ ಹಣ ಪೋಲು ಮಾಡುವ ಬದಲು ಸಮೂಹ ಸಾರಿಗೆಗೆ ಆದ್ಯತೆ ನೀಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಸುರಂಗ ರಸ್ತೆ ನಿರ್ಮಾಣದಿಂದಾಗಿ ಎದುರಾಗುವ ತೊಡಕುಗಳು ಹಾಗೂ …
Read More »ಗೋವಾದಲ್ಲಿ ಎಮ್ಮೆಗೆ ಡಿಕ್ಕಿಯಾದ ಕಾರವಾರದ ವೈದ್ಯ ವಿದ್ಯಾರ್ಥಿಗಳ ಬೈಕ್: ಓರ್ವ ಸಾವು, ಇನ್ನೋರ್ವನ ಸ್ಥಿತಿ ಗಂಭೀರ
ಕಾರವಾರ: ಗೋವಾಗೆ ತೆರಳಿ ಅಲ್ಲಿಂದ ವಾಪಸಾಗುತ್ತಿದ್ದ ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಎಮ್ಮೆಯೊಂದು ಅಡ್ಡಬಂದ ಪರಿಣಾಮ ರಸ್ತೆಗೆ ಬಿದ್ದು ಓರ್ವ ವಿದ್ಯಾರ್ಥಿ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಗೋವಾದ ಮಾಷೆಂ ಬಳಿ ನಡೆದಿದೆ. ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಮೃತ ವಿದ್ಯಾರ್ಥಿಯನ್ನು ಕ್ರಿಮ್ಸ್ ಎಂಬಿಬಿಎಸ್ ಮೂರನೇ ವರ್ಷದ ಆದರ್ಶ ಪುಜಾರಿ (23) ಎಂದು ಗುರುತಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ರೌನಕ್ ಚಾವ್ಲಾ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಂಗಳವಾರ ರಾತ್ರಿ ಇಬ್ಬರೂ …
Read More »ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26
ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26 ಮೊಬೈಲ್ ಗೀಳಿನಿಂದ ಹೊರ ಬಂದು ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ; ಶಾಸಕ ಆಸೀಫ್ ಸೇಠ್ ಕ್ರಿಯಾಶಕ್ತಿ, ಜ್ಞಾನಶಕ್ತಿ, ಕಲಾ ಶಕ್ತಿಯೇ ಜೀವನಕ್ಕೆ ಸ್ಫೂರ್ತಿ; ಪ್ರೋ.ಸಿ.ಎಂ. ತ್ಯಾಗರಾಜ್ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2025-26 ಮೊಬೈಲ್ ಗೀಳಿನಿಂದ ಹೊರ ಬನ್ನಿ ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ; ಶಾಸಕ ಆಸೀಫ್ ಸೇಠ್ ಕ್ರಿಯಾಶಕ್ತಿ, ಜ್ಞಾನಶಕ್ತಿ, ಕಲಾ ಶಕ್ತಿಯೇ ಜೀವನಕ್ಕೆ ಸ್ಫೂರ್ತಿ; ಪ್ರೋ.ಸಿ.ಎಂ. ತ್ಯಾಗರಾಜ್ ಈಗೀನ ಯುವಪೀಳಿಗೆಯೂ ದಿನದ ಶೇ.75 …
Read More »ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಕುಖ್ಯಾತ ಅಪರಾಧಿ ಸಲೀಂ ಸೌದಾಗರ ಬಂಧನ
ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಕುಖ್ಯಾತ ಅಪರಾಧಿ ಸಲೀಂ ಸೌದಾಗರ ಬಂಧನ ಕರ್ನಾಟಕದಲ್ಲಿ ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಅಡಿ ಮೊದಲ ಬಂಧನ! 37 ಪ್ರಕರಣಗಳ ಆರೋಪಿ ಕೊಲೆ, ಸುಲಿಗೆ, ಡಕಾಯಿತಿ ಸೇರಿದಂತೆ ಘೋರ ಅಪರಾಧಗಳು. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಕ್ರಿಮಿನಲ್ ಕೃತ್ಯ ಪೊಲೀಸ್ ಕಮೀಷನರೇಟ್, ಬೆಳಗಾವಿ ನಗರ ಸೃಜಿಸಿದ ನಂತರ ಇದೇ ಮೊದಲ ಬಾರಿಗೆ ಪಿಐಟಿ-ಎನ್‌ಡಿಪಿಎಸ್ ಕಾಯ್ದೆ-1988 ರ ಅಡಿಯಲ್ಲಿ ಕುಖ್ಯಾತ ಅಪರಾಧಿ ಸಲೀಂ @ ಅಂದಾಸಲೀಂ ಸೌದಾಗರನನ್ನು ಬಂಧಿಸಲಾಗಿದೆ. ಆರೋಪಿ ಸಲೀಂ …
Read More »ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ: ೧೬ ಪ್ರಕರಣ ದಾಖಲು
ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ: ೧೬ ಪ್ರಕರಣ ದಾಖಲು ಬೆಳಗಾವಿಯ ಶಹಾಪೂರದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿ ದಾಳಿ ೧೬ ಪ್ರಕರಣ ದಾಖಲು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಪೊಲೀಸ್ ಇಲಾಖೆಯ ಸಹಯೋಗ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಸಹಯೋಗದೊಂದಿಗೆ ಬೆಳಗಾವಿ ನಗರದ ಶಹಾಪೂರದಲ್ಲಿ ಇಂದು ಕೋಟ್ಪಾ-೨೦೦೩ ಕಾಯ್ದೆಯಡಿಯಲ್ಲಿ ದಾಳಿಯನ್ನು ನಡೆಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣಾಧಿಕಾಗಳ ಮಾರ್ಗದರ್ಶನದಡಿಯಲ್ಲಿ …
Read More »ಗ್ರಾಮೀಣ ಜನಜೀವನಕ್ಕೆ ನೀರಿನ ಆಶಾಕಿರಣ.
ಗ್ರಾಮೀಣ ಜನಜೀವನಕ್ಕೆ ನೀರಿನ ಆಶಾಕಿರಣ. ನನ್ನ ಹಾಗೂ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ Prakash Hukkeri ಅವರ ನಿರಂತರ ಪ್ರಯತ್ನದ ಫಲವಾಗಿ ಮಂಜೂರಾದ ₹8.40 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಇಂದು ಚಾಲನೆ ನೀಡಲಾಯಿತು. ಈ ಯೋಜನೆಯಿಂದ ನವಲಿಹಾಳ, ಸಂಕನವಾಡಿ, ಕುಠಾಳಿ ಹಾಗೂ ತಪಕರವಾಡಿ ಗ್ರಾಮಗಳ ಸಾವಿರಾರು ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಲಭಿಸಲಿದೆ. ಪ್ರತಿಯೊಂದು …
Read More »
Laxmi News 24×7