ಬೆಂಗಳೂರು, ಮಾ.23- ಬೆಂಗಳೂರು ಮಹಾನಗರದಲ್ಲಿ ಸಿಇ ಹಾಗೂ ಸಿಇಒ ನಿಂದ ಅನುಮತಿ ಪಡೆಯದೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳು ಮತ್ತು ಕಟ್ಟಡಗಳ ಮಾಲೀಕರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಸಚಿವ ಆನಂದ್‍ಸಿಂಗ್ ವಿಧಾನ ಪರಿಷತ್‍ನಲ್ಲಿ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಮಹಾನಗರದಲ್ಲಿ ಕಾನ್‍ಸೆಂಟ್ ಫಾರ್ ಎಸ್ಟಾಬ್ಲಿಷ್‍ಮೆಂಟ್ ಹಾಗೂ ಕಾನ್‍ಸೆಂಟ್ ಫಾರ್ ಆಪರೇಷನ್‍ನಿಂದ ಕಟ್ಟಡಗಳು ಮತ್ತು ಕಾರ್ಖಾನೆಗಳು ಕಡ್ಡಾಯವಾಗಿ …
Read More »ಉದಗಟ್ಟಿ : ನಾಳೆಯಿಂದ ಗರ್ಭ ಗುಡಿ ದರ್ಶನ ಬಂದ್. ..
ಗೋಕಾಕ:ನಾಳೆ ನಡೆಯಬೇಕಿದ್ದ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿ ಜಾತ್ರೆಯನ್ನು ಕೊರೋನಾ ಭೀತಿಯಿಂದ ರದ್ದುಪಡಿಸಿದ್ದು, ಜತೆಗೆ ದೇವರ ದರ್ಶನವನ್ನು ಸಹ ಭಕ್ತಾದಿಗಳಿಗೆ ಬಾಗಿಲು ಮುಚ್ಚಲಾಗಿದೆ. ನಾಳೆಯಿಂದ ದಿ. 31 ರವರೆಗೆ ದೇವಿಯ ದರ್ಶನದ ಗರ್ಭ ಗುಡಿಯನ್ನು ಮುಚ್ಚಲಾಗುತ್ತದೆ. ಆದ್ದರಿಂದ ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಯ ಭೂತಪ್ಪ ಗೋಡೇರ (ಬಜ್ಜೇರಿ ಅಜ್ಜ) ಮತ್ತು ಹಣಮಂತ ಕೋಫ್ಪದ ಅವರು ತಿಳಿಸಿದ್ದಾರೆ.
Read More »ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ ರಾಜ್ಯದ ಸುಮಾರು 10 ಸಾವಿರ ಕಾರ್ಖಾನೆಗಳು ಇಂದಿನಿಂದ ಬಂದ್
ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ ರಾಜ್ಯದ ಸುಮಾರು 10 ಸಾವಿರ ಕಾರ್ಖಾನೆಗಳು ಇಂದಿನಿಂದ ಬಂದ್ ಆಗಲಿವೆ ಎಂದು ಎಫ್ ಕೆಸಿಸಿಐ ಅಧ್ಯಕ್ಷ ಜನಾರ್ಧನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಯೇ 4500ಕ್ಕೂ ಅಧಿಕ ಕಾರ್ಖಾನೆಗಳಿವೆ. ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು, ಪ್ರತಿ ಕಾರ್ಮಿಕರಿಗೆ ಕಾರ್ಖಾನೆಗಳೇ ವೇತನ ನೀಡಬೇಕು. ಕಾರ್ಖಾನೆಗಳನ್ನು ಇಂದಿನಿಂದಲೇ ಎಲ್ಲರೂ ಬಂದ್ ಮಾಡಬೇಕು. ಕಾರ್ಮಿಕರ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಮಾರ್ಚ್ 31 ರ ವರೆಗೂ ರಾಜ್ಯಾದ್ಯಂತ ಕಾರ್ಖಾನೆಗಳು ಕ್ಲೋಸ್ …
Read More »ರಾಜಕೀಯ ವೈರತ್ವವನ್ನು ಮರೆತು ಸ್ವತಃ ಯಡಿಯೂರಪ್ಪನವರೆ ಇಂದಿರಾ ಕ್ಯಾಂಟೀನಲ್ಲಿ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದಾರೆ
ರಾಜಕೀಯ ವೈರತ್ವವನ್ನು ಮರೆತು ಸ್ವತಃ ಯಡಿಯೂರಪ್ಪನವರೆ ಇಂದಿರಾ ಕ್ಯಾಂಟೀನಲ್ಲಿ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದಾರೆ. ಈ ಸಮಯದಲ್ಲಿ ಮೋದಿ ಹೇಳಿದ್ಕೆ ನಾನ್ ಚಪ್ಪಾಳೆ ತಟ್ಟಲ್ಲ, ಆವತ್ತು ಸಿದ್ದು ಕ್ಯಾಂಟೀನ್ ಮಾಡಿದ್ಕೆ ಇವತ್ತು ಊಟ ಸಿಕ್ತಿರೋದು ಅಂತ ಕೆಳಮಟ್ಟದ ರಾಜಕೀಯ ಮಾಡೋದು ಬಿಟ್ಟು ಎಲ್ಲರು ಒಂದಾಗಿ. ಇವತ್ತು ನೀವು ಸೋಲಿಸಬೇಕಿರುವುದು ಮೋದಿನೊ, ಸಿದ್ದುನೊ, ಕಾಂಗ್ರೆಸ್ಸೊ, ಬಿಜೆಪಿನೊ ಅಲ್ಲ…. ಇಡೀ ದೇಶಕ್ಕೆ ಮಾರಕವಾಗಿರೊ ಕೊರೊನವನ್ನ! ?
Read More »ಕೊರೊನಾ: ಶಂಕಿತರ ಐವರಲ್ಲಿ, 2 ವರದಿಗಳು ನೆಗೆಟಿವ್: ಡಾ.ಎಸ್.ಬಿ. ಬೊಮ್ಮನಹಳ್ಳಿ
ಬೆಳಗಾವಿ : ಕೊರೊನಾ ಶಂಕಿತರನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅವರಲ್ಲಿ ಇಬ್ಬರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಯೋಗಾಲಯಕ್ಕೆ ಕಳಿಸಲಾದ ವರದಿಗಳ ಪೈಕಿ ಒಂದು ಮಾದರಿಯನ್ನು ಪರೀಕ್ಷೆಗೆ ಪರಿಗಣಿಸಿರುವುದಿಲ್ಲ. ಒಂದು ನೆಗೆಟಿವ್ ಬಂದಿರುತ್ತದೆ. ಆದ್ದರಿಂದ ಐದು ಮಾದರಿಗಳ ಪೈಕಿ ಎರಡು ಮಾದರಿಗಳು ನೆಗೆಟಿವ್ ಎಂದು ಅಧಿಕೃತ ಪ್ರಕಟಿಸಲಾಗಿದೆ. ಇನ್ನುಳಿದ 3 ಮಾದರಿಗಳ ವರದಿ ನಿರೀಕ್ಷಿಸಲಾಗಿದೆ. ಹೊಸದಾಗಿ ಮತ್ತೊಂದು ಮಾದರಿಯನ್ನು ಪ್ರಯೋಗಾಲಯಕ್ಕೆ …
Read More »ಕರ್ನಾಟಕ ವಿಧಾನಸಭೆಯ ಉಪಸಭಾಪತಿಯಾಗಿ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಆಯ್ಕೆ
ಕರ್ನಾಟಕ ವಿಧಾನಸಭೆಯ ಉಪಸಭಾಪತಿಯಾಗಿ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಆಯ್ಕೆಯಾಗಿದ್ದಾರೆ. ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಮಾಮನಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಅವರ ಆಯ್ಕೆ ಖಚಿತವಾಗಿದೆ. ಮಂಗಳವಾರ ಈ ಕುರಿತು ಅಧಿಕೃತ ಘೋಷಣೆಯಾಗಲಿದ್ದು, ಅಂದೇ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತಮ್ಮ ತಂದೆಯೂ ಉಪಸಭಾಪತಿಯಾಗಿ ಕೆಲಸ ಮಾಡಿದ್ದರಿಂದ ತಮ್ಮನ್ನೂ ಉಪಸಭಾಪತಿ ಮಾಡಬೇಕೆನ್ನುವ ಬೇಡಿಕೆಯನ್ನು ಮಾಮನಿ ಮುಂದಿಟ್ಟಿದ್ದರು. ಆದರೆ ಅರಗ ಜ್ಞಾನೇಂದ್ರ ಕೂಡ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದರಿಂದ ತೊಡಕಾಗಿತ್ತು. …
Read More »ನಗರದಲ್ಲಿನ ಇಂದಿರಾ ಕ್ಯಾಂಟೀನ್ ನಲ್ಲಿ ಬಡವರಿಗೆ ಉಚಿತ ಊಟ, ತಿಂಡಿ ನೀಡಲಾಗುವುದು:B.S.Y.
ಬೆಂಗಳೂರು: ನಗರದಲ್ಲಿನ ಇಂದಿರಾ ಕ್ಯಾಂಟೀನ್ ನಲ್ಲಿ ಬಡವರಿಗೆ ಉಚಿತ ಊಟ, ತಿಂಡಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾ. 31ರೆವರೆಗೆ ಬಂದ್ ಮುಂದುವರೆಸಲಾಗುವುದು. ಕೊರೊನಾ ವೈರಸ್ ವಿರುದ್ದ ಹೋರಾಟ ನಡೆಸಲು ಸರ್ಕಾರ ಸನ್ನದ್ಧವಾಗಿದೆ. ವೈದ್ಯರೊಂದಿಗೆ ಸಭೆ ನಡೆಸಿದ್ದೇವೆ. ವೈದ್ಯರು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು. 30 ಫೀಮರ್ ಕ್ಲಿನಿಕ್ ತೆರೆಯಲಾಗುವುದು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ …
Read More »ಜನರ ಜೀವದ ಜತೆಗೆ ಚೆಲ್ಲಾಟವಾಡಿ ಪರಿಸ್ಥಿತಿ ಲಾಭ ಪಡೆದುಕೊಳ್ಳವವರಿಗೆ ತಕ್ಕ ಶಾಸ್ತಿ:ಲಕ್ಷ್ಮಣ ಸವದಿ
ಬೆಂಗಳೂರು : ಜನರ ಜೀವದ ಜತೆಗೆ ಚೆಲ್ಲಾಟವಾಡಿ ಪರಿಸ್ಥಿತಿ ಲಾಭ ಪಡೆದುಕೊಳ್ಳವವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಾಸಗಿ ವಾಹನಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ವೈರಸ್ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಸಾರಿಗೆ ಸಂಸ್ಥೆಗಳ ಬಸ್ಸುಗಳ ಮತ್ತು ರೈಲು ಸಂಚಾರಗಳನ್ನು ಕಡಿಮೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದು …
Read More »ನಾಳೆಯಿಂದ ಸಂಪೂರ್ಣ ರಾಜ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ?.bsy
27 ಕ್ಕೇರಿದ ಕೊರೋನಾ ಸೊಂಕೀತರ ಸಂಖ್ಯೆ: ನಾಳೆಯಿಂದ ಇಡೀ ರಾಜ್ಯ ಸಂಪೂರ್ಣ ಲಾಕಡೌನ್ ಸಾಧ್ಯತೆ ಬೆಂಗಳೂರು: ಕೊರೋನಾ ವೈರಸ್ ಸೋಂಕು ನಿಗ್ರಹಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಇಂದಿನಿಂದ ಬಂದ್ ಆದೇಶ ಹೊರಡಿಸಿದೆ. ಇನ್ನು, ನಾಳೆಯಿಂದ ಸಂಪೂರ್ಣ ರಾಜ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ …
Read More »144 ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್!!
ಬೆಳಗಾವಿ: ಬೈಲಹೊಂಗಲದಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರುವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಆ ಭಾಗದ ವರದಿ ನೆಗೆಟಿವ್ ಬಂದಿರುವುದರಿಂದ ಜನರು ಆತಂಕಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 144 ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್!! ಈಗಾಗಲೇ 144 ಕಲಂ ಮೇರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು ಅಥವಾ ಒಟ್ಟಾಗಿ ಸಂಚರಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಒಂದು …
Read More »
Laxmi News 24×7