ಬೆಂಗಳೂರು: ಕೊರೊನಾ ಲಾಕ್ ಡೌನ್ 4.0 ಆರಂಭಕ್ಕೆ ಮುನ್ನವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಕಟಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿದಾರರಿಗೆ ಹೊಸ ಭರವಸೆ ಮತ್ತು ಚೈತನ್ಯವನ್ನು ತುಂಬಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ. ಜತೆಗೆ, ಲೋಕಲ್ ಸೇ ಗ್ಲೋಬಲ್ ಎನ್ನುವ ಮೋದಿ ಅವರ ಘೋಷಣೆ ಐತಿಹಾಸಿಕ. ಲೋಕಲ್ ಉತ್ಪನ್ನಗಳಿಗೆ ವೋಕೋಲ್ (ಬಾಯಿ ಮಾತಿನ …
Read More »”ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತರುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು” : ಹೆಚ್ಡಿಕೆ
ಬೆಂಗಳೂರು, ಮೇ 12- ರೈತರಿಗೆ ಮಾರಕವಾಗುವ ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕರಿಗೂ ಮಾರಕವಾಗಿರುವ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತರುವುದನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಖರೀದಿಸಲು ಅವಕಾಶ ನೀಡುವಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಎಪಿಎಂಸಿಗಳು ಮುಚ್ಚುವಂತಾಗುತ್ತದೆ ಎಂದು ಆರೋಪಿಸಿದರು. ರಾಜ್ಯ …
Read More »ಐಪಿಎಲ್ ರದ್ದಾದ್ರೆ ಬಿಸಿಸಿಐಗೆ ಅಂದಾಜು 4,000 ಕೋಟಿ ರೂ. ನಷ್ಟ!
ಮುಂಬೈ: ಕೊರೊನಾ ವೈರಸ್ ಕಾರಣದಿಂದ ವಿಶ್ವ ಕ್ರೀಡಾಲೋಕ ತತ್ತರಿಸಿದೆ. ಹಲವು ಪ್ರತಿಷ್ಠಿತ ಟೂರ್ನಿಗಳು ಕೊರೊನಾದಿಂದ ರದ್ದಾಗಿದ್ದು, ಮತ್ತಷ್ಟು ಟೂರ್ನಿಗಳನ್ನು ಮುಂದೂಡಲಾಗಿದೆ. ಇತ್ತ 2020ರ ಐಪಿಎಲ್ ಟೂರ್ನಿ ಕೂಡ ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಆದರೆ ಮತ್ತೆ ಲಾಕ್‍ಡೌನ್ ಮುಂದುವರಿಸಿದ ಕಾರಣ ಬಿಸಿಸಿಐ ಮುಂದಿನ ಆದೇಶದವರೆಗೂ ಐಪಿಎಲ್ ಮುಂದೂಡಿತ್ತು. ಆದರೆ ಇದುವರೆಗೂ ಐಪಿಎಲ್ ಆರಂಭವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಮತ್ತೆ 2020ರ ಐಪಿಎಲ್ ಶೆಡ್ಯೂಲ್ ಮುಂದೂಡಲು ಬಿಸಿಸಿಐ ಚಿಂತನೆ ನಡೆಸಲು …
Read More »ಡಾ. ಸಂತೋಷ ಕುರಬೆಟ್ ಅವರು ಶಸ್ತ್ರಚಿಕಿತ್ಸೆ ನೆರವೇರಿಸಿ ಬಾಲಕ ನುಂಗಿದ್ದ ೧೨ ಆಯಸ್ಕಾಂತೀಯ ಬಟನ್ ಹೊರತೆಗೆದು ಜೀವ ಉಳಿಸುವಲ್ಲಿ ಯಶಸ್ವಿ
ಬೆಳಗಾವಿ – ನೆರೆಯ ಗೋವಾ ರಾಜ್ಯದ ೨ ವರ್ಷದ ಮಗುವೊಂದು ತೀವ್ರ ಹೊಟ್ಟೆನೋವು ಹಾಗೂ ಕಪ್ಪಾದ ಬಣ್ಣದ ಮಲದೊಂದಿಗೆ ತೊಂದರೆಯನ್ನು ಅನುಭವಿಸುತ್ತ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಆಗಮಿಸಿತ್ತು. ಇದಕ್ಕೂ ಮುಂಚೆ ಕೊರೊನಾ ವೈರಸ್ ಕೋವಿಡ್ -೧೯ ಸಂದರ್ಭದಲ್ಲಿ ದೇಶಾದ್ಯಂತ ಲಾಕಡೌನ ಪರಿಸ್ಥಿಯಲ್ಲಿ ಬಾಲಕನ ಚಿಕಿತ್ಸೆಗಾಗಿ ಪಾಲಕರು ಸುತ್ತಾಡಿ ಸುಸ್ತಾಗಿದ್ದರು. ಕೊನೆಗೆ ಗೋವಾದ ಜಿಲ್ಲಾಡಳಿತದ ಅನುಮತಿ ಪಡೆದು ಬೆಳಗಾವಿಗೆ ಆಗಮಿಸಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಲಕನನ್ನು ಎಕ್ಸರೇ ತೆಗೆದು …
Read More »ಜೂ.ಎನ್‌ಟಿಆರ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಕೆಜಿಎಫ್ ನಿರ್ದೇಶಕ……….
ಹೈದರಾಬಾದ್: ಕೆಜಿಎಫ್ ಸಿನಿಮಾ ಹಿಟ್ ಆದ ಬೆನ್ನಲ್ಲೇ ಚಿತ್ರ ತಂಡ ಚಾಪ್ಟರ್-2ನಲ್ಲಿ ಬ್ಯುಸಿಯಾಗಿತ್ತು. ಇದೀಗ ಚಾಪ್ಟರ್-2 ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಚಿತ್ರ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದೆ. ಇದೇ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಮನೆ ಮಾಡಿತ್ತು. ಇದರ ಬೆನ್ನಲ್ಲೇ ಪ್ರಶಾಂತ್ ನೀಲ್ ಮುಂದಿನ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಎಲ್ಲ ಗಾಸಿಪ್‍ಗಳು ಸುಳ್ಳಾಗಿದ್ದು, ಸರ್ಪ್ರೈಸ್ …
Read More »ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ತತ್ತರಿಸಿದೆ- ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕಳವಳ
ಪೀಣ್ಯ: ಮಾರಾಣಾಂತಿಕ ಕೋವಿಡ್-19 ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ವಲಯ ಅಕ್ಷರಶಃ ನಲುಗಿದೆ. ಬೆಂಗಳೂರು ಹೊರವಲಯದ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ ಅಸ್ರಣ್ಣ ಕಳವಳ ವ್ಯಕ್ತಪಡಿಸಿದ್ದಾರೆ. ಕೈಗಾರಿಕ ವಲಯದ ಶೇ.70 ರಷ್ಟು ಭಾಗದ ಕೈಗಾರಿಕೆಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಉಳಿದ ಶೇ.30 ರಷ್ಟು ಕೈಗಾರಿಕೆಗಳು ಕಾರ್ಯ ನಿರ್ವಹಿಸದಿರುವುದು ವಿಷಾದನೀಯ ಸಂಗತಿ. ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ಗಂಭೀರವಾಗಿದ್ದು, ಮುಚ್ಚುವ ಸ್ಥಿತಿಗೆ ತಲುಪಿವೆ. ಪರಿಣಾಮ ಕಾರ್ಮಿಕರ ನೆರವಿಗೆ …
Read More »ಬಿಜೆಪಿಗೆ ಭಾರೀ ಮುಖಭಂಗ – ಗುಜರಾತ್ ಕಾನೂನು ಸಚಿವರ ಗೆಲುವು ಅಕ್ರಮ……….
ಅಹಮದಾಬಾದ್: ಗುಜರಾತ್ ನಲ್ಲಿರುವ ಬಿಜೆಪಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದ್ದು, ಸಚಿವರಾಗಿರುವ ಭೂಪೇಂದ್ರ ಸಿಂಹ ಚೂಡಾಸಮಾ ಅವರ ಚುನಾವಣಾ ಗೆಲುವನ್ನು ಹೈಕೋರ್ಟ್ ರದ್ದುಗೊಳಿಸಿದೆ. 2017ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಭೂಪೇಂದ್ರ ಸಿಂಹ ಚೂಡಾಸಮಾ ಗೆದ್ದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾ. ಪರೇಶ್ ಉಪಾಧ್ಯಾಯ ನೇತೃತ್ವದ ಪೀಠ ಮತ ಎಣಿಕೆಯ ವೇಳೆ ಅಕ್ರಮ ನಡೆದಿದೆ ಎಂದು ಅಭಿಪ್ರಾಯಪಟ್ಟು ಗೆಲುವನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ …
Read More »ಕರಾವಳಿ ಭಾಗದ ಮೊದಲ ಕೋವಿಡ್-19 ಪ್ರಯೋಗಾಲಯ ಉದ್ಘಾಟನೆ
ಕಾರವಾರ: ಕರಾವಳಿ ಭಾಗದ ಮೊದಲ ಕೋವಿಡ್-19 ಪ್ರಯೋಗಾಲಯವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉದ್ಘಾಟನೆ ಮಾಡಿದರು. ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಕರಾವಳಿ ಭಾಗದ ಮೊದಲ ಕೋವಿಡ್-19 ಪ್ರಯೋಗಾಲಯವನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಇಂದು ಉದ್ಘಾಟಿಸಿದರು. ಇಷ್ಟು ದಿನ ಉತ್ತರ ಕನ್ನಡ ಜಿಲ್ಲೆಯಲ್ಲಿನ ಸೋಂಕಿತರ ಪರೀಕ್ಷೆಯನ್ನು ಶಿವಮೊಗ್ಗ ಅಥವಾ ಬೆಂಗಳೂರಿಗೆ ಕಳುಹಿಸಿ ವರದಿ ತರಿಸಬೇಕಿತ್ತು. ಇದು ತುಂಬಾ ತಡವಾಗುತ್ತಿತ್ತು. ಇದೀಗ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿಯೇ ಮಾಡಲು …
Read More »ಲಾಕ್‍ಡೌನ್ ಡ್ಯೂಟಿ ಮಧ್ಯೆ 20 ಸಾವಿರ ಸಸಿ ಬೆಳೆಸಿದ ರಾಯಚೂರು ಪೊಲೀಸರು……….
ರಾಯಚೂರು: ಬಿಸಿಲನಾಡು ರಾಯಚೂರನ್ನು ಹಸಿರು ಜಿಲ್ಲೆಯನ್ನಾಗಿಸಲು ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಕೊರೊನಾ ಲಾಕ್ ಡೌನ್ ಸಮಯದಲ್ಲೂ 20 ಸಾವಿರ ಸಸಿಗಳನ್ನು ಬೆಳೆಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಹಸಿರು ಜಿಲ್ಲೆಗಾಗಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರೊಂದಿಗೆ 5 ಲಕ್ಷ ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ರಾಯಚೂರಿನ ನಾಗರಿಕರ ಸಹಕಾರದೊಂದಿಗೆ …
Read More »2 ಗಂಟೆಗೆ ಮೊದಲು ಚೆಕ್ ಇನ್, ಕ್ಯಾಬಿನ್ ಲಗೇಜ್ ಇಲ್ಲ – ವಿಮಾನ ಪ್ರಯಾಣಕ್ಕೂ ಮುನ್ನ ಓದಿ
ನವದೆಹಲಿ: ಕೋವಿಡ್ 19 ಬಗ್ಗೆ ಸಂಬಂಧಿಸಿದ ಪ್ರಶ್ನಾವಳಿ, ಕ್ಯಾಬಿನ್ ಲಗೇಜ್ ತಗೆದುಕೊಂಡು ಹೋಗುವಂತಿಲ್ಲ, ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆ ಜೊತೆಗೆ ವಿಮಾನ ಪ್ರಯಾಣಿಸುವ 2 ಗಂಟೆಯ ಮೊದಲು ಚೆಕ್ ಇನ್ – ಇದು ಲಾಕ್‍ಡೌನ್ ತೆರವಾದ ಬಳಿಕ ವಿಮಾನ ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳು. ಕೋವಿಡ್ 19 ನಿಂದಾಗಿ ಮಾರ್ಚ್ 25ರಿಂದ ಪ್ರಯಾಣಿಕ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಈ ನಡುವೆ ದೇಶೀಯ ವಿಮಾನಗಳ ಹಾರಾಟಕ್ಕೆ ವಿಮಾನಯಾನ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಅಧಿಕೃತವಾಗಿ …
Read More »
Laxmi News 24×7