Breaking News

ಅಕ್ಷಯ ಪಾತ್ರೆ ಮೂಲಕ ನಟಿ ರವೀನಾ ಟಂಡನ್ ಸಹಾಯ

ನವದೆಹಲಿ: ಕೆಜಿಎಫ್-2 ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ರವೀನಾ ಟಂಡನ್, ತಮ್ಮ ವಿವಿಧ ಕೆಲಸಗಳ ಮೂಲಕ ಸಹ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಸಹಾಯ ಹಸ್ತ ಚಾಚಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಟಿ ರವೀನಾ ಟಂಡನ್ ಲಾಕ್‍ಡೌನ್ ದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದು, ಮೊಮ್ಮಕ್ಕಳೊಂದಿಗೆ ಆಟವಾಡುವ ಮೂಲಕ ಕಾಲ ಕಳೆಯುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದಾರೆ. ರವೀನಾ ತಮ್ಮ ಚಟುವಟಿಕೆಗಳ ಕುರಿತು …

Read More »

ಏ. 20ರ ನಂತರ ದ್ವಿಚಕ್ರ ವಾಹನಕ್ಕೆ ರಿಲ್ಯಾಕ್ಸ್ ನೀಡಿದ್ದು ಸರಿಯಲ್ಲ: ಹೊರಟ್ಟಿ

ಹುಬ್ಬಳ್ಳಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನ ಸವಾರರಿಗೆ ರಿಲಾಕ್ಸ್ ನೀಡಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯತನಕ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಸದ್ಯ ರಾಜ್ಯ ಸರ್ಕಾರ ಲಾಕ್‍ಡೌನ್‍ನಲ್ಲಿ ವಿನಾಯಿತಿ ನೀಡಿದ್ದು, ನನಗೆ ಸರಿ ಅನ್ನಿಸುತ್ತಿಲ್ಲ ಎಂದರು. ಇಲ್ಲಿಯವರೆಗೆ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಇಲ್ಲ. ಆದರೆ ದ್ವಿಚಕ್ರ ವಾಹನ ಸವಾರರಿಗೆ ರಿಲ್ಯಾಕ್ಸ್ …

Read More »

ಹುಬ್ಬಳ್ಳಿ:ಜಗದೀಶ್ ಶೆಟ್ಟರ್ ಪುತ್ರನಿಂದ ಆಹಾರ ಕಿಟ್ ವಿತರಣೆ……

ಹುಬ್ಬಳ್ಳಿ: ಕೊರೊನಾ ವೈರಸ್ ಲಾಕ್‍ಡೌನ್ ನಡುವೆ ಸಚಿವ ಜಗದೀಶ್ ಶೆಟ್ಟರ್ ಅವರ ಮಗ ಸರ್ಕಾರದ ಆಹಾರ ಕಿಟ್ ವಿತರಣೆ ಮಾಡಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಹೌದು, ಯಾವುದೇ ಚುನಾಯಿತ ಪ್ರತಿನಿಧಿ ಅಲ್ಲದಿದ್ದರು ಕೂಡ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಕಾರ್ಮಿಕ ಇಲಾಖೆಯ ವತಿಯಿಂದ ವಿತರಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಮಾಡಿ ಫೇಸ್‍ಬುಕ್ ಪೋಸ್ಟ್ ಹಾಕಿರುವುದು ಟೀಕೆಗೆ ಗುರಿಯಾಗಿದೆ. ಅಲ್ಲದೇ ಯಾವುದೇ ಚುನಾಯಿತ ವ್ಯಕ್ತಿ ಆಗಿಲ್ಲದಿದ್ದರು ಕೂಡ ತಂದೆಯ …

Read More »

ದೇಹದ ಉಷ್ಣತೆಯ ಚೆಕ್ಕಿಂಗ್ ಸ್ಕ್ರೀನಿಂಗ್ ಮಷಿನ್ಕೈಕೊಟ್ಟಿದೆ.ಅಧಿಕಾರಿಗಳ ವಿರುದ್ಧ ಗ್ರಾಮಸ್ಥರೂ ಆಕ್ರೋಶ

ಅಥಣಿ: ಕೊರೊನಾ ವೈರಸ್ ಮೊದಲನೇ ಹಂತದ ಮಾನವನ ದೇಹದ ಉಷ್ಣತೆಯ ಚೆಕ್ಕಿಂಗ್ ಸ್ಕ್ರೀನಿಂಗ್ ಮಷಿನ್ ಕೈಕೊಟ್ಟಿರುವ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ. ಕೊರೊನಾ ಭೀತಿಯಿಂದ ಬೆಳಗಾವಿ ಜಿಲ್ಲೆಯು ತತ್ತರಿಸಿದೆ. ಈ ಮಧ್ಯೆ ಜಿಲ್ಲೆಯ ಅಥಣಿ ತಾಲೂಕಿನ ಗಡಿ ಹೊಂದಿರುವ ಗ್ರಾಮಗಳಿಗೆ ಮಹಾರಾಷ್ಟ್ರದಿಂದ, ಜನರು ಒಳ ರಸ್ತೆಯಿಂದ ನುಸುಳುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರ ಮೂಲದ ಇಬ್ಬರು ತಾಲೂಕಿನ ಕಕಮರಿ ಗ್ರಾಮದ ಸಂಬಂಧಿಕರ ಮನೆಗೆ ಬಂದಾಗ ಗ್ರಾಮಸ್ಥರು …

Read More »

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದಿಲ್ಲ:ರಮೇಶ್ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಕೊರೋನಾ ಸೋಂಕು ಹರಡುತ್ತಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಕೊರೊನಾ ನಿಯಂತ್ರಣ ಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಬೆಳಗಾವಿ ನಗರದ ಪ್ರವಾಸಿಮಂದಿರದಲ್ಲಿ ಶನಿವಾರ (ಏ.೧೮) ಜಿಲ್ಲೆಯ ಉನ್ನತ ಅಧಿಕಾರಿಗಳ ಜೊತೆಗೆ ನಡೆದ ಸಭೆ ಯಲ್ಲಿ ಮಾತನಾಡಿದರು. ಸದ್ಯಕ್ಕೆ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿರುವುದರಿಂದ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಆದ್ದರಿಂದ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ …

Read More »

ಕಳ್ಳಭಟ್ಟಿ ತಯಾರಿಕಾ ಅಡ್ಡೆ ಮೇಲೆ ದಾಳಿ, ಕಚ್ಚಾ ಸಾಮಗ್ರಿ ನಾಶ ಪಡಿಸಿದ ಪೊಲೀಸರು

ತಾಳಿಕೋಟೆ: ತಾಲ್ಲೂಕಿನ ಗಡಿ ಸೋಮನಾಳ ಗ್ರಾಮದ ತಾಂಡಾಕ್ಕೆ ಹೊಂದಿಕೊಂಡಿರುವ ಜಮೀನೊಂದರಲ್ಲಿ ಕಳ್ಳಬಟ್ಟಿ ತಯಾರಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪಿ.ಎಸ್ ಐ ವಸಂತ ಬಂಡಗಾರ ಅವರ ನೇತೃತ್ವದಲ್ಲಿ ಶನಿವಾರ ಮದ್ಯಾಹ್ನ ದಾಳಿ ಮಾಡಿ ಜಮೀನಿನಲ್ಲಿ ಹೂತ್ತಿಟ್ಟ ಸುಮಾರು ೨೦೦ ಲೀಟರ್‌ಗೂ ಅಧಿಕ ಕಚ್ಚಾ ಸಾಮಗ್ರಿಗಳನ್ನು ನಾಶ ಪಡಿಸಿದ್ದಾರೆ. ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಸರ್ಕಾರವು ಮದ್ಯ ಮಾರಾಟವನ್ನು ಸ್ಥಗಿತಗೊಳಿಸಿದ್ದರಿಂದ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವರು ಕಳ್ಳಭಟ್ಟಿ ಸರಾಯಿ ತಯಾರಿಸಿ …

Read More »

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಗರದ ಮುಲ್ಲಾ ಓಣಿಯ ಸೋಂಕಿತ ವ್ಯಕ್ತಿಯಿಂದ ಸೋಂಕು ಹರಡ್ತಿದೆ. P-236 ರೋಗಿ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದ 63 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರೋಗಿ ನಂಬರ್ P-236ನೇ ವ್ಯಕ್ತಿ ಜೊತೆ ದ್ವಿತೀಯ ಸಂಪರ್ಕ ಹೊಂದಿದವರಿಗೆ ಸೋಂಕು ತಗುಲಿದೆ. ಪ್ರಯೋಗಾಲಯದಿಂದ ಬಂದ ವರದಿಯಲ್ಲಿ ಸೋಂಕು ತಗುಲಿರೋದು ಖಚಿತವಾಗಿದೆ. ಜಿಲ್ಲೆಯಲ್ಲಿ …

Read More »

ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಗಣಾಚಾರಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ

ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಗಣಾಚಾರಿ ಪಾರ್ಥಿವ ಶರೀರಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರಿಂದ ಅಂತಿಮ ನಮನ ಬೆಳಗಾವಿ, ಕೊರೋನಾ ಸೊಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯ ಪಿ‌ಎಸ್ಐ ಮನೋಹರ ಗಣಾಚಾರಿ ಅವರ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶ್ರದ್ಧಾಂಜಲಿ …

Read More »

ಕೋವಿಡ್-೧೯ ಸೋಂಕಿತ ವ್ಯಕ್ತಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್,ಚಪ್ಪಾಳೆ ತಟ್ಟಿ ಬೀಳ್ಕೊಟ್ಟ ವೈದ್ಯರು:

ಕೋವಿಡ್-೧೯ ಸೋಂಕಿತ ವ್ಯಕ್ತಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆಳಗಾವಿ, ಏ.೧೮(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಬೆಳಗುಂದಿ ಗ್ರಾಮದ ೭೦ ವರ್ಷದ ವ್ಯಕ್ತಿ(ಪಿ-೧೨೬)ಯನ್ನು ಶನಿವಾರ (ಏ.೧೮) ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ. …

Read More »

ಕೋವಿಡ್ – 19 ಪರೀಕ್ಷಾ ಪ್ರಯೋಗಾಲಯ ಆರಂಭಕ್ಕೆ ಈಗಾಗಲೇ ಅನುಮತಿ, ಜಲಸಂಪನ್ಮೂಲ ಸಚಿವ ರಮೇಶ್ ‌ಜಾರಕಿಹೊಳಿ ಯವರು ಭೇಟಿ

ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಹೊಸದಾಗಿ ಕೋವಿಡ್ – 19 ಲ್ಯಾಬ್ ಮಂಜೂರುಯಾಗಿದ್ದು,  ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯ ಆವರಣಕ್ಕೆ ಜಲಸಂಪನ್ಮೂಲ ಸಚಿವ ರ ಭೇಟಿ, ಪರಿಶೀಲನೆ ನಡೆಸಿದರು. ಬೆಳಗಾವಿಯ ನೆಹರೂ ನಗರದ ಕೆ.ಎಲ್.ಇ. ಆಸ್ಪತ್ರೆ ಎದುರಿಗೆ ಇರುವ ಭಾರತ ಸರ್ಕಾರದ ಆರೋಗ್ಯ ಸಂಶೋಧನಾ & ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ “ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ”ಯ ಆವರಣದಲ್ಲಿ ಕೋವಿಡ್ – 19 ಪರೀಕ್ಷಾ ಪ್ರಯೋಗಾಲಯ ಆರಂಭಕ್ಕೆ …

Read More »