Breaking News

ಮಲೆನಾಡಲ್ಲಿ ಭಾರೀ ಮಳೆ, ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ…

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭರಣಿ ಮಳೆ ಅಬ್ಬರಕ್ಕೆ ಮಲೆನಾಡಿಗರು ತತ್ತರಿಸಿದೆ. ಮೂಡಿಗೆರೆಯಲ್ಲಿ ಸಂಜೆಯಿಂದ ಧಾರಾಕಾರ ಮಳೆ ಸುರಿದಿದ್ದು, ಜನ ಆತಂಕಕ್ಕೀಡಾಗಿ, ಕಳೆದ ವರ್ಷದ ಮಳೆಯನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ತೋರಣಮಾವು ಗ್ರಾಮದಲ್ಲಿ ಮಳೆ ಆರಂಭಕ್ಕೂ ಮುನ್ನ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿದೆ. ನೋಡನೋಡ್ತಿದ್ದಂತೆ ತೆಂಗಿನ ಸಂಪೂರ್ಣ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆ ಭಾಗ ಕಳಸಾಪುರ, ಬೆಳವಾಡಿ ಹಾಗೂ …

Read More »

ಹೂವು ಬೆಳೆಗಾರರಿಗೆ ಮಾತ್ರ ಪರಿಹಾರ!- ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟನೆ……

ಮಡಿಕೇರಿ: ರೈತರಿಗೆ ಬಡ್ಡಿ ರಹಿತ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಈಗಾಗಲೇ ಬಡ್ಡಿ ರಹಿತ ಸಾಲ ಮರುಪಾವತಿ ಅವಧಿ ಮುಗಿದು ಹೋಗಿದೆ. ಆದರೆ ಲಾಕ್‍ಡೌನ್ ಕಾರಣ ರೈತರಿಗೆ ಅನುಕೂಲ ಆಗಬೇಕೆಂಬ ದೃಷ್ಠಿಯಿಂದ ಅವಧಿ ವಿಸ್ತರಿಸಲಾಗಿದೆ. ಸಾಲ ಮಾಡಿರುವ ರೈತರಿಗೆ ಯಾವುದೇ ಕಾರಣಕ್ಕೂ ಬ್ಯಾಂಕ್‍ಗಳು ಕಿರುಕುಳ ನೀಡಬಾರದು ಎಂದರು. ಲಾಕ್ ಡೌನ್ ಸಂದರ್ಭದಲ್ಲಿ ತರಕಾರಿ ಬೆಳೆಗಾರರು …

Read More »

ಇಂದಿನಿಂದ ಎಣ್ಣೆ ಮತ್ತಷ್ಟು ದುಬಾರಿ?……..

ಬೆಂಗಳೂರು: ಲಾಕ್ ಡೌನ್ ನಿಂದಾಗಿ ಎಣ್ಣೆ ಇಲ್ಲದೆ 42 ದಿನಗಳನ್ನು ಮುಗಿಸಿದ ಮದ್ಯಪ್ರಿಯರಿಗೆ ಇಂದು ಬಿಗ್ ಶಾಕ್ ಸುದ್ದಿಯೊಂದು ಸಿಗುವ ಸಾಧ್ಯತೆಗಳಿವೆ. ಈಗಾಗಲೇ ಶೇ.6 ರಷ್ಟು ಅಬಕಾರಿ ಸುಂಕ ಹೆಚ್ಚಳದ ಬಿಸಿ ಅನುಭವಿಸಿದ್ದ ಮದ್ಯಪ್ರಿಯರಿಗೆ ಈಗ ಕೊರೊನಾ ಶಾಕ್ ಫಿಕ್ಸ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಹೌದು. ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆಯೆಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಅಬಕಾರಿ ಸುಂಕದ ಜೊತೆಗೆ ಮದ್ಯದ …

Read More »

ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ…………..

ಧಾರವಾಡ: ಚಲಿಸುತ್ತಿದ್ದ ಲಾರಿಯಲ್ಲಿದ್ದ ಮಶಿನ್‍ಗೆ ಏಕಾಏಕಿ ಬೆಂಕಿ ತಗುಲಿದ ಘಟನೆ ಧಾರವಾಡ ಜಿಲ್ಲೆಯ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪುಣೆಯಿಂದ ಬೆಂಗಳೂರಿನ ಕೈಗಾರಿಕಾ ಪ್ರದೇಶಕ್ಕೆ ಈ ಮಶಿನ್‍ನ್ನು ಲಾರಿ ಹೊತ್ತೊಯ್ಯುತ್ತಿತ್ತು. ತೇಗೂರು ಬಳಿ ಮಿನಿ ಲಾರಿ ಬರುತ್ತಿದ್ದಂತೆ ಲಾರಿಯಲ್ಲಿದ್ದ ಮಶಿನ್‍ಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಬೆಂಕಿ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡ ಲಾರಿ ಚಾಲಕ, ಪಕ್ಕದಲ್ಲೇ ನೀರು ಇರುವುದನ್ನು ಕಂಡು ರಸ್ತೆ ಬದಿ ಲಾರಿ ನಿಲ್ಲಿಸಿ ಕೆಳಗಿಳಿದಿದ್ದಾನೆ. ಪಕ್ಕದಲ್ಲೇ …

Read More »

ರಾಯಚೂರಿನಲ್ಲಿ ವೈದ್ಯಕೀಯ ಸಿಬ್ಬಂದಿಗೆ 3 ತಿಂಗಳಿಂದ ಸಂಬಳವನ್ನೇ ನೀಡಿಲ್ಲ!

ರಾಯಚೂರು: ಕೊರೊನಾ ವಿರುದ್ಧ ಆರೋಗ್ಯ ಇಲಾಖೆ, ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ಆದರೆ ರಾಯಚೂರಿನಲ್ಲಿ ಇವರ ಸೇವೆಗೆ ಬೆಲೆಕಟ್ಟುವುದಿರಲಿ ಸರಿಯಾಗಿ ಸಂಬಳವನ್ನೇ ನೀಡುತ್ತಿಲ್ಲ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ. ಹೌದು. ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಕೋವಿಡ್ ಆಸ್ಪತ್ರೆಗಳಾದ ರಾಯಚೂರಿನ ಓಪೆಕ್ ಹಾಗೂ ರಿಮ್ಸ್ ಸಿಬ್ಬಂದಿಗೆ ಮೂರು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ. ವೇತನವಿಲ್ಲದೆ ಸಾವಿರಕ್ಕೂ ಅಧಿಕ ಸಿಬ್ಬಂದಿ ನಿತ್ಯ ದುಡಿಯುತ್ತಿದ್ದಾರೆ. ರಿಮ್ಸ್‍ನಲ್ಲಿ ಬಹುತೇಕ ಸಿ ಹಾಗೂ …

Read More »

ಪಬ್‍ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದಕ್ಕೆ ಕೊಲೆಗೈದವನ ಕಾಲಿಗೆ ಗುಂಡೇಟು…..

ಬೆಂಗಳೂರು: ಪಬ್ ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದಕ್ಕೆ ಗೆಳೆಯನನ್ನು ಕೊಲೆಗೈದಿದ್ದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು ತಗುಲಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡೇಟು ಸದ್ದು ಕೇಳಿದೆ. ಪಬ್ ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದ ಅನ್ನೋ ಕಾರಣಕ್ಕೆ ಕರಣ್ ಸಿಂಗ್ ಎಂಬವನ್ನ ರೌಡಿ ಶೀಟರ್ ಪ್ರಭು ಕೊಲೆ ಮಾಡಿದ್ದನು. ಇಂದು ಪೊಲೀಸರು ಆಚಾರ್ಯ ಕಾಲೇಜ್ ಬಳಿಯ ಸಾಸಿವೆಘಟ್ಟದಲ್ಲಿ ಪ್ರಭು ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಪೇದೆ …

Read More »

ಹಸಿರು ವಲಯದಲ್ಲಿರೋ ಚಾಮರಾಜನಗರಕ್ಕೆ ಕಂಟಕವಾಗ್ತಾರಾ ಪೊಲೀಸ್ ಪೇದೆ?

ಬೆಂಗಳೂರು: ಇಷ್ಟು ದಿನ ಲಾಕ್‍ಡೌನ್ ಆದಾಗಿನಿಂದ ಹಸಿರು ವಲಯದಲ್ಲಿರೋ ಚಾಮರಾಜನಗರ ಕೆಂಪು ವಲಯಕ್ಕೆ ಸೇರ್ಪಡೆಯಾಗುತ್ತಾ ಅನ್ನೋ ಆತಂಕ ಮನೆ ಮಾಡಿದೆ. ಕೊರೊನಾ ಸೋಂಕಿತ ಪೊಲೀಸ್ ಪೇದೆ ಚಾಮರಾಜನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 22 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿರೋ ಜಿಲ್ಲಾಡಳಿತ ವರದಿಗಾಗಿ ಕಾಯುತ್ತಿದೆ. ಇಂದು ಇವರೆಲ್ಲರ ವರದಿ ಬರುವ ಸಾಧ್ಯತೆಗಳಿವೆ. ಪೊಲೀಸ್ ಪೇದೆ ಬೆಂಗಳೂರಿನಲ್ಲಿಯೂ ನಾಲ್ಕು ಜನರ ಜೊತೆ ಸಂಪರ್ಕದಲ್ಲಿದ್ದನು. …

Read More »

ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು…………..

ಚಿತ್ರದುರ್ಗ: ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿರು ಚಿತ್ರದುರ್ಗಕ್ಕೆ ತಬ್ಲಿಘಿಗಳು ವಾಪಸ್ ಆಗಿದ್ದಾರೆ. ಭಾರತದಲ್ಲಿ ಕೊರೊನಾ ಶುರುವಾದಾಗ ವಿದೇಶಕ್ಕೆ ತೆರಳಿದ್ದ ಚಿತ್ರದುರ್ಗ ಮೂಲದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದದಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಮಹಿಳೆ ಗುಣಮುಖರಾಗಿ ಮನೆ ಸೇರಿದ ಬಳಿಕ ನಿಟ್ಟುಸಿರು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿದೆ. ಆದರೆ ಮಂಗಳವಾರ ಗುಜರಾತ್‍ನಿಂದ ಬಂದಿರುವ 33ಜನ ತಬ್ಲಿಘಿಗಳು ಬಂದಿದ್ದಾರೆ. …

Read More »

ಡಿಎಲ್/ಎಲ್‍ಎಲ್ ಪರೀಕ್ಷೆಗೆ ಕಾಯುತ್ತಿರುವ ಮಂದಿಗೆ ಗುಡ್‍ನ್ಯೂಸ್. ಮೇ 7ರ ಗುರುವಾರದಿಂದ ಹಸಿರು ವಲಯದಲ್ಲಿ ಈ ಪರೀಕ್ಷೆಗಳು ಆರಂಭ

ಬೆಂಗಳೂರು: ಡಿಎಲ್/ಎಲ್‍ಎಲ್ ಪರೀಕ್ಷೆಗೆ ಕಾಯುತ್ತಿರುವ ಮಂದಿಗೆ ಗುಡ್‍ನ್ಯೂಸ್. ಮೇ 7ರ ಗುರುವಾರದಿಂದ ಹಸಿರು ವಲಯದಲ್ಲಿ ಈ ಪರೀಕ್ಷೆಗಳು ಆರಂಭವಾಗಲಿದೆ. ಡಿಎಲ್/ ಎಲ್‍ಎಲ್ ಲೈಸೆನ್ಸ್ ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಈ ಪರೀಕ್ಷೆ ನಡೆಯಲಿದೆ. ಪ್ರತಿದಿನ ಶೇ.50 ರಷ್ಟು ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ದಿನಾಂಕವನ್ನು ಆರ್‌ಟಿಒ ಅಭ್ಯರ್ಥಿಗಳ ಮೊಬೈಲ್‍ಗೆ ಸಂದೇಶ ಕಳುಹಿಸಿದೆ. ಹಸಿರು ವಲಯದಲ್ಲಿರುವ 14 ಜಿಲ್ಲೆಗಳಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದ್ದು, …

Read More »

ಸ್ಥಳೀಯರ ಮನವೊಲಿಸಿ 17 ತಬ್ಲಿಘಿಗಳು ತುಮಕೂರಿನಲ್ಲಿ ಕ್ವಾರಂಟೈನ್…………

ತುಮಕೂರು: ಶತಾಯಗತಾಯ ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಗ್ರಾಮಸ್ಥರ ಮನವೊಲಿಸಿ 17 ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ. ಅಹಮದಾಬಾದ್ ನಿಂದ ಬಂದು ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದ ತುಮಕೂರಿನ 17 ಜನ ತಬ್ಲಿಘಿಗಳನ್ನು ಪಾವಗಡದ ವೈ.ಎನ್.ಹೊಸಕೋಟೆಯ ಕುರುಬರಹಳ್ಳಿ ಬಳಿಯ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ ಪಾವಗಡದ ವೈ.ಎನ್.ಹೊಸಕೋಟೆಯ 13 ಜನರಿದ್ದು, ಉಳಿದ 5 ಜನ ಆಂಧ್ರ ಮೂಲದವರು ಎಂದು ಗುರುತಿಸಲಾಗಿದೆ. ಕ್ವಾರಂಟೈನ್ ಮಾಡಲು ಅವಕಾಶ ಕೊಡದೆ ಸ್ಥಳೀಯರು ಆರಂಭದಲ್ಲಿ ತಗಾದೆ …

Read More »