ಬೆಳಗಾವಿ: ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೈಲಹೊಂಗಲ ತಾಲೂಕಿನಿಂದ ಇದೇ ಮೊದಲ ಬಾರಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಇವರ ಸ್ಪರ್ಧೆಯಿಂದ ಬೈಲಹೊಂಗಲದಲ್ಲಿ ಚುನಾವಣಾ ಕಣ ರಂಗೇರಿದೆ. ಬೆಳಗಾವಿಯ ಡಿಸಿಸಿ ಬ್ಯಾಂಕಿಗೆ ತಮ್ಮ ಆಪ್ತರೊಂದಿಗೆ ಆಗಮಿಸಿದ ಡಾ. ವಿಶ್ವನಾಥ ಪಾಟೀಲ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖಂಡರಾದ ಪರ್ವತಗೌಡ ಪಾಟೀಲ, ಆನಂದ ಮೂಗಿ, ಬಾಳನಗೌಡ ಪಾಟೀಲ, ಚನ್ನಪ್ಪ ಹೊಳೆಪ್ಪನವರ, ಬಾಬುರಾವ ಬೋಳಶೆಟ್ಟಿ ಸೇರಿ …
Read More »ಬಿಗ್ ಬಾಸ್ ಸ್ಥಗಿತ: 10 ದಿನ ಕಾಲಾವಕಾಶ ಕೇಳಿ ಡಿಸಿಗೆ ಮನವಿ ಸಲ್ಲಿಸಿದ ಜಾಲಿವುಡ್ ಸ್ಟುಡಿಯೋ
ರಾಮನಗರ/ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿಗೆ ಜಾಲಿವುಡ್ ಆಡಳಿತ ಮಂಡಳಿ ಇಂದು ಭೇಟಿ ನೀಡಿ, ನೋಟಿಸ್ಗೆ ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶ ಕೇಳಿ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯನ್ನು ಭೇಟಿಯಾಗಿರುವ ಜಾಲಿವುಡ್ ಆಡಳಿತ ಮಂಡಳಿ, ಜಾಲಿವುಡ್ ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದೆ. ಈ ರೀತಿ ಏಕಾಏಕಿ ಬಂದ್ ಮಾಡಿದ್ರೆ ಕಾರ್ಮಿಕರ ಕೆಲಸಕ್ಕೆ ಕುತ್ತು ಬರಲಿದೆ. ನಮ್ಮಿಂದ ತಪ್ಪಾಗಿದೆ. ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ …
Read More »2 ಸಾವಿರ ಗ್ರಾಮೀಣ ಮಹಿಳೆಯರಿಗೆ ಶಕ್ತಿ ತುಂಬಿದ ಜಿ.ಪಂ ಸಿಇಒ
ಬೆಳಗಾವಿ: ಶಾವಿಗೆ ಹುಗ್ಗಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ?. ಶಾವಿಗೆ ಪಾಯಸ ಮತ್ತು ಉಪ್ಪಿಟ್ಟು ಎಲ್ಲರಿಗೂ ಇಷ್ಟ. ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಾವಿಗೆ ತಯಾರಿಸಲಾಗುತ್ತದೆ. ಈಗ ಆ ಶಾವಿಗೆಗೆ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು (ಸಿಇಒ) ಬ್ರ್ಯಾಂಡ್ ನೇಮ್ ಕೊಟ್ಟಿದ್ದಾರೆ. ‘ಬೆಳಗಾವಿ ಸಂಜೀವಿನಿ ಶಾವಿಗೆ’ ಶೀರ್ಷಿಕೆಯಡಿ ಪ್ಯಾಕೆಟ್ ಮೂಲಕ ಶಾವಿಗೆ ಮಾರಾಟ ಶುರುವಾಗಿದೆ. ಇದು ಶಾವಿಗೆ ತಯಾರಿಸುವ ಮಹಿಳೆಯರಿಗೆ ಹೊಸ ಭರವಸೆ ಮೂಡಿಸಿದ್ದು, ಉತ್ತಮ …
Read More »ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಇನ್ನೂ ಸಿಕ್ಕಿಲ್ಲ ಬದಲಿ ನಿವೇಶನ
ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರ ಪಾಡು ಹೇಳತೀರದಾಗಿದೆ. ಭೂಮಿ ನೀಡಿದ ರೈತರಿಗೆ ಹಣ ನೀಡಿ, ಕುಟುಂಬಕ್ಕೊಂದು ನಿವೇಶನ ನೀಡುವ ಕುರಿತು ಹಿಂದಿನ ಸರ್ಕಾರ ಘೋಷಿಸಿತ್ತು. ಆದರೆ ಕಾಮಗಾರಿ ಮುಕ್ತಾಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ, ಎರಡು ವರ್ಷವಾದರೂ ಕೆಹೆಚ್ಬಿಯಿಂದ ರೈತರಿಗೆ ಒಂದು ನಿವೇಶನವೂ ಸಿಕ್ಕಿಲ್ಲ. ಜಿಲ್ಲಾಡಳಿತ ನಿವೇಶನ ನೀಡದೇ ಹೋದಾಗ ರೈತರು ವಿಮಾನ ನಿಲ್ದಾಣದ ಉದ್ಘಾಟನೆಗೂ ಮುನ್ನ ಧರಣಿ ಕೈಗೊಂಡಿದ್ದರು. ಇದರಿಂದ ಎಚ್ಚೆತ್ತ ಅಂದಿನ …
Read More »ಜಾಲಿವುಡ್ ಸ್ಟುಡಿಯೋ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡುವಂತೆ ಡಿಸಿಎಂ ಡಿಕೆಶಿ ಸೂಚನೆ: ಬಿಗ್ ಬಾಸ್ ಪುನಾರಂಭ?
ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ವೀಕ್ಷಕರಿಗೆ ಸಂತಸದ ಸುದ್ದಿ ಸಿಕ್ಕಿದೆ. ”ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಬಿಗ್ ಬಾಸ್ ಕಾರ್ಯಕ್ರಮ ಪುನಾರಂಭಗೊಳ್ಳುವ ಸಾಧ್ಯತೆ ಇದೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ”ಬಿಗ್ ಬಾಸ್ ಕಾರ್ಯಕ್ರಮ …
Read More »ಶ್ರೀ ಪಂತ ಮಹಾರಾಜರ ಪುಣ್ಯತಿಥಿ ಹಿನ್ನೆಲೆ ಬೆಳಗಾವಿಯಿಂದ ಪಂತ ಬಾಳೇಕುಂದ್ರಿವರೆಗೆ ಪ್ರೇಮಧ್ವಜದ ಪಾದಯಾತ್ರೆ ಆರಂಭ
ಶ್ರೀ ಪಂತ ಮಹಾರಾಜರ ಪುಣ್ಯತಿಥಿ ಹಿನ್ನೆಲೆ ಬೆಳಗಾವಿಯಿಂದ ಪಂತ ಬಾಳೇಕುಂದ್ರಿವರೆಗೆ ಪ್ರೇಮಧ್ವಜದ ಪಾದಯಾತ್ರೆ ಆರಂಭ ಬೆಳಗಾವಿಯಿಂದ ಪಂತ ಬಾಳೇಕುಂದ್ರಿವರೆಗೆ ಪಾದಯಾತ್ರೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗಿ ಶ್ರೀ ಪಂತ ಮಹಾರಾಜರ ಪುಣ್ಯತಿಥಿಯ ನಿಮಿತ್ಯ ಪ್ರೇಮಧ್ವಜ ಮೆರವಣಿಗೆಯೂ ಬೆಳಗಾವಿ ಪಂತವಾಡಾದಿಂದ ಆರಂಭಗೊಂಡಿದೆ. ಶ್ರೀ ಪಂತ ಮಹಾರಾಜರ ಪುಣ್ಯತಿಥಿಯ ನಿಮಿತ್ಯ ಪ್ರೇಮಧ್ವಜ ಮೆರವಣಿಗೆಯೂ ಬೆಳಗಾವಿ ಪಂತವಾಡಾದಿಂದ ಆರಂಭಗೊಂಡಿದ್ದು, ಭಕ್ತರು ಹಾಡುತ್ತ, ಕುಣಿಯುತ್ತ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ನಗರದ ವಿವಿಧ ಮಾರ್ಗಗಳ ಮೂಲಕ ಸಂಚರಿಸುವ …
Read More »ವಾಯುಮಾಲಿನ್ಯ ಗಣನೀಯ ಹೆಚ್ಚಳ: ಕೇಂದ್ರದ ಪಟ್ಟಿಯಲ್ಲಿ ಮತ್ತಷ್ಟು ಕುಸಿದ ಬೆಂಗಳೂರು
ಬೆಂಗಳೂರು, ಅಕ್ಟೋಬರ್ 8: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ವಾಯು ಮಾಲಿನ್ಯದ (Air Pollution) ಪ್ರಮಾಣ ಹೆಚ್ಚಾಗುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ವಾಯುಮಾಲಿನ್ಯದ ಪ್ರಮಾಣ ಹೆಚ್ಚಳವಾಗಿರುವುದು ತಿಳಿದುಬಂದಿದೆ. ಈಗಾಗಲೇ ಐಐಎಸ್ಸಿ ತಜ್ಞರು ಬೆಂಗಳೂರಿನಲ್ಲಿ ಈ ಹಿಂದೆ ಶೇ 70 ರಷ್ಟಿದ್ದ ಪರಿಸರದ ಪ್ರಮಾಣ ಶೇ 3 ಕ್ಕೆ ಇಳಿಕೆಯಾಗಿದೆ ಎಂಬ ವರದಿ ನೀಡಿದ್ದರು. ಇದೀಗ ಕೇಂದ್ರ ಸರ್ಕಾರದ ‘ಸ್ವಚ್ಛ ವಾಯು ಸರ್ವೇಕ್ಷಣ-2025 (Swachh Vayu Sarvekshan 2025)’ ವಾರ್ಷಿಕ ಶುದ್ಧ ಗಾಳಿ ಸಮೀಕ್ಷಾ ವರದಿಯಲ್ಲಿ ರಾಜಧಾನಿಯು 28 …
Read More »ಬಿಜೆಪಿ ಯುವ ಮುಖಂಡ ವೆಂಕಟೇಶ್ ಬರ್ಬರ ಹತ್ಯೆ
ಕೊಪ್ಪಳ, ಅಕ್ಟೋಬರ್ 8: ದೇವಿಕ್ಯಾಂಪ್ನಿಂದ ಗಂಗಾವತಿಗೆ ಬೈಕ್ ನಲ್ಲಿ ಬರುತ್ತಿದ್ದ ಗಂಗಾವತಿ ಬಿಜೆಪಿ (BJP) ಯುವ ಮೋರ್ಚಾ ಅಧ್ಯಕ್ಷನ ಭೀಕರ ಹತ್ಯೆಯಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿನಗರದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಘಟನೆ ನಡೆದ ಸ್ಥಳಕ್ಕೆ ಧಾವಿಸಿರುವ ಡಿವೈಎಸ್ಪಿ ಸಿದ್ದನಗೌಡ ಪಾಟೀಲ್ ಪರಿಶೀಲನೆ ನಡೆಸಿದ್ದಾರೆ. ಗಂಗಾವತಿಯ ಹೆಚ್ಆರ್ಎಸ್ ಕಾಲೋನಿಯಲ್ಲಿ ದುಷ್ಕರ್ಮಿಗಳು ಬಳಸಿರುವ ಟಾಟಾ ಇಂಡಿಕಾ ಕಾರು ಪತ್ತೆಯಾಗಿದೆ. ನಡೆದಿದ್ದೇನು? ಕೊಪ್ಪಳ ಜಿಲ್ಲೆಯ ಗಂಗಾವತಿ ಯುವ ಮೋರ್ಚಾದ ಅಧ್ಯಕ್ಷ ವೆಂಕಟೇಶ್(31) ಕೊಲೆಯಾದ …
Read More »ಪತಿ – ಪತ್ನಿ ನಡುವೆ ಜಗಳ: ಗಂಡನ ಮೈಮೇಲೆ ಸುಡುವ ಎಣ್ಣೆ ಎರಚಿ ದುಷ್ಕೃತ್ಯ ಮೆರೆದ ಮಹಿಳೆ: ಪ್ರಕರಣ ದಾಖಲು
ಬೆಳಗಾವಿ: ಬೇರೆ ಮಹಿಳೆಯರ ಜೊತೆಗೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ ಸುಡುವ ಎಣ್ಣೆ ಮೈಮೇಲೆ ಎರಚಿ ಮಹಿಳೆಯೊಬ್ಬರು ದುಷ್ಕೃತ್ಯ ಮೆರೆದಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಸುಭಾಷ್, ಆಸ್ಪತ್ರೆಯಲ್ಲಿ ಚಿಕಿತ್ಸೆ: ಮಚ್ಛೆ ಗ್ರಾಮದ ಶ್ರೀರಾಮನಗರದ ನಿವಾಸಿ ಸುಭಾಷ ಪಾಟೀಲ ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ಸುಭಾಷ ಪತ್ನಿ ವೈಶಾಲಿ ಕಾಯ್ದ ಎಣ್ಣೆ ಎರಚಿದ ಮಹಿಳೆ. ಸುಡುವ ಎಣ್ಣೆ ಮೈಮೇಲೆ ಬೀಳುತ್ತಿದ್ದಂತೆ ಹೊರಗೆ ಓಡಿ ಬಂದ …
Read More »ಬಿಗ್ಬಾಸ್ ಸ್ಪರ್ಧಾಳುಗಳು ಈಗಲ್ ಟನ್ ರೆಸಾರ್ಟ್ಗೆ
ರಾಮನಗರ: ಬಿಗ್ಬಾಸ್ ಕನ್ನಡ ಸೀಸನ್ – 12ರ ಶೋ ಆರಂಭವಾದ ಎರಡೇ ವಾರದಲ್ಲಿ ದೊಡ್ಡನೆಗೆ ಬೀಗ ಮುದ್ರೆ ಬಿದ್ದಿದೆ. ಬಿಗ್ಬಾಸ್ ಸ್ಪರ್ಧಾಳನ್ನು ಈಗಲ್ ಟನ್ ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಬಿಗ್ ಬಾಸ್ ಮನೆಯಿದೆ. ಮಾಲಿನ್ಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಆರೋಪದಡಿ ಬಿಡದಿಯ ಬಳಿಯ ಜಾಲಿವುಡ್ ಸ್ಟುಡಿಯೋ & ಅಡ್ವೆಂಚರ್ಸ್ ಪಾರ್ಕ್ ಬಂದ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿತ್ತು. ನಿತ್ಯ ಜಲಕ್ರೀಡೆಗೆ 2.50 ಲಕ್ಷ ಲೀಟರ್ ನೀರು …
Read More »
Laxmi News 24×7