Breaking News

ತಂದೆ-ತಾಯಿ ಕಳೆದುಕೊಂಡು ಅನಾಥಳಾಗಿರುವ ಮೇಘನಾ

ದಾವಣಗೆರೆ, ಆ.20- ತಂದೆ-ತಾಯಿ ಕಳೆದುಕೊಂಡು ಅನಾಥಳಾಗಿರುವ ಮೇಘನಾ ಕೂಲಿನಾಲಿ ಮಾಡಿ ತಮ್ಮನನ್ನು ಸಾಕಿ ಸಲಹುತ್ತಿದ್ದರೂ ನೆತ್ತಿಯ ಮೇಲೊಂದು ಸೂರಿಲ್ಲದೆ ಪರಿತಪಿಸುತ್ತಿದ್ದಾರೆ. ಜಗಳೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗ್ರಾಮವೊಂದರ ಮಳೆ ಸೋರುವ ಹಾಳು ಮನೆಯಲ್ಲಿ ವಾಸಿಸುತ್ತಿರುವ ಮೇಘನಾ ಭವಿಷ್ಯದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದಾಳೆ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘನಾ ಭವಿಷ್ಯದಲ್ಲಿ ಬ್ಯಾಂಕ್ ಅಕಾರಿಯಾಗುವ ಕನಸು ಕಂಡಿದ್ದಾಳೆ. ತನ್ನ ಓದಿನ ಜತೆಗೆ ಕೂಲಿನಾಲಿ ಮಾಡಿ ಜೀವನ …

Read More »

ನನ್ನನ್ನು ಅಪರಾಧಿ ಎಂದು ಘೋಷಿಸಿರುವುದು ನನಗೆ ನೋವು ತಂದಿದೆ:ಪ್ರಶಾಂತ್ ಭೂಷಣ್

ಹೊಸದಿಲ್ಲಿ: “ನ್ಯಾಯಾಂಗ ನಿಂದನೆಗಾಗಿ ನನ್ನನ್ನು ಅಪರಾಧಿ ಎಂದು ಘೋಷಿಸಿರುವುದು ನನಗೆ ನೋವು ತಂದಿದೆ. ನನಗೆ ದೊರೆಯಬಹುದಾದ ಶಿಕ್ಷೆಯ ಕುರಿತಂತೆ ನನಗೆ ನೋವಿಲ್ಲ. ಆದರೆ ನನ್ನನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂಬುದಕ್ಕೆ ನೋವಿದೆ. ಪ್ರಜಾಪ್ರಭುತ್ವ ಮತ್ತದರ ಮೌಲ್ಯಗಳನ್ನು ರಕ್ಷಿಸಲು ಬಹಿರಂಗ ಟೀಕೆ ಅಗತ್ಯವಿದೆ ಎಂದು ನಾನು ನಂಬಿದ್ದೇನೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಇಂದು ಸುಪ್ರೀಂ ಕೋರ್ಟ್ ನ ಮುಂದೆ ಹೇಳಿದ್ದಾರೆ. https://youtu.be/gSlF434lvWE “ಸಂಸ್ಥೆ ಇನ್ನೂ ಉತ್ತಮವಾಗಿ ಕಾರ್ಯಾಚರಿಸುವಂತಾಗಲು ನಾನು …

Read More »

ಆಸ್ತಿ ವಿಚಾರವಾಗಿ ಅಣ್ಣ- ತಮ್ಮಂದಿರ ಮಧ್ಯೆ ಗಲಾಟೆ,ಸಿನಿಮಾ ಶೈಲಿಯಲ್ಲಿ ಬಡಿದಾಡಿಕೊಂಡ ಘಟನೆ

ಬಳ್ಳಾರಿ: ಆಸ್ತಿ ವಿಚಾರವಾಗಿ ಅಣ್ಣ- ತಮ್ಮಂದಿರ ಮಧ್ಯೆ ಗಲಾಟೆ ನಡೆದಿದ್ದು, ಬಡಿಗೆ ಹಿಡಿದುಕೊಂಡು ಸಿನಿಮಾ ಶೈಲಿಯಲ್ಲಿ ಬಡಿದಾಡಿಕೊಂಡ ಘಟನೆ ಬಳ್ಳಾರಿ ತಾಲೂಕಿನ ಮೋಕಾ ಬಳಿಯ ಯರ್ರಗುಂಡಿ ಗ್ರಾಮದಲ್ಲಿ ನಡೆದಿದೆ.ಹೊನ್ನಾರೆಡ್ಡಿ, ಕೃಷ್ಣಾ ರೆಡ್ಡಿ ಮತ್ತು ಶೇಷರೆಡ್ಡಿ ಎನ್ನುವ ಕುಟುಂಬದ ಸದಸ್ಯರ ನಡುವೆ ಈ ಜಗಳ ನಡೆದಿದ್ದು, ಮಹಿಳೆಯರನ್ನು ಬಿಡದೇ ಕುಟುಂಬದ ಸದಸ್ಯರು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಕುಟುಂಬದ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಮೂವರು ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು, ಆಸ್ತಿಗಾಗಿ ಆಗೊಮ್ಮೆ ಈಗೊಮ್ಮೆ ಜಗಳವಾಡುತ್ತಿದ್ದರು. …

Read More »

ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

ಬೆಳಗಾವಿ:  ಕೋವಿಡ್ ನಿರ್ವಹಣೆಯಲ್ಲಿ ವಿಫಲ   ಸೇರಿದಂತೆ ರೈತರಿಗೆ ಹಾಗೂ ಕೃಷಿ ಕೂಲಿಕಾರರಿಗೆ ಮಾರಕವಾಗಿರುವ ಭೂ ಸುಧಾರಣಾ, ಎಪಿಎಂಸಿ,  ಕಾರ್ಮಿಕ  ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಗುರುವಾರ  ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ, ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ …

Read More »

ಸಂಗೊಳ್ಳಿ ರಾಯಣ್ಣ ಸೊಸೈಟಿ ಬಹುಕೋಟಿ ವಂಚನೆಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳು

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಸೊಸೈಟಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಐಡಿ ಡಿವೈಎಸ್​ಪಿ ಕೆ.ಪುರುಷೋತ್ತಮ ನೇತೃತ್ವದ ತಂಡ ಸುಮಾರು 2,063 ಪುಟಗಳ ದೋಷಾರೋಪ ಪಟ್ಟಿಯನ್ನು ಬೆಳಗಾವಿ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಚಲನಚಿತ್ರ ನಿರ್ದೇಶಕ ಆನಂದ ಅಪ್ಪುಗೋಳ್ ನೇತೃತ್ವದ ಸಂಗೊಳ್ಳಿ ರಾಯಣ್ಣ ಸೊಸೈಟಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ 35 ಶಾಖೆಗಳನ್ನು ಹೊಂದಿದ್ದು, 26 ಸಾವಿರ ಗ್ರಾಹಕರಿಂದ ₹281.14 …

Read More »

ಒಂದು ವರ್ಷ ವಾದರೂ ಇನ್ನೂ ಸಿಕ್ಕಿಲ್ಲ ಪರಿಹಾರ

ಬೆಳಗಾವಿ: ಕಳೆದ ವರ್ಷದ ನೆರೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಆಗ್ರಹಿಸಿ ಮೂಡಲಗಿ ತಾಲೂಕಿ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಅವರಾದಿ ಗ್ರಾಮದ  ನೆರೆ ಸಂತ್ರಸ್ತರು ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಕಳೆದ ವರ್ಷ ಭೀಕರ ಪ್ರವಾಹದಿಂದ ಅವರಾದಿ ಗ್ರಾಮದ ದಂಡಪ್ಪನವರ ತೋಟ, ದೊಂಬರ ತೋಟ,  ಉರಬಿ ತೋಟ, ಮಾಡಲಗಿಯವರ ತೋಟ ಸೇರಿ  ಸುಮಾರು 75  ಮನೆಗಳು ಹಾನಿಗೊಳಗಾಗಿವೆ.  …

Read More »

ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಆಗಸ್ಟ್ 23 ಹಾಗೂ 24ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ  ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ. – ಘಟಪ್ರಭಾ ಜಲಾಶಯ ಗರಿಷ್ಠ ಮಟ್ಟ- 662.94 ಮೀಟರ್​ ಇಂದಿನ ಮಟ್ಟ- 662.51 ಮೀಟರ್​ ಗರಿಷ್ಠ ಸಾಮರ್ಥ್ಯ- 51 ಟಿಎಂಸಿ ಇಂದಿನ ನೀರು ಸಂಗ್ರಹ- 49.53 ಟಿಎಂಸಿ ಇಂದಿನ ಒಳಹರಿವು- 34,308 ​ಕ್ಯೂಸೆಕ್ಸ್ ಇಂದಿನ ಹೊರ …

Read More »

ನೀರಿನ ರಬಸಕ್ಕೆ ಕಸ ಕಡ್ಡಿಗಳು ಸೇತುವೆ ಮೇಲೆ ಬಂದಿವೆ. ಸೇತುವೆಗೆ ಸ್ವಲ್ಪ ಮಟ್ಟಿಗೆ ಹಾನಿ

ಗೋಕಾಕ: ಕಳೆದ ಎರಡು ದಿನಗಳಿಂದ‌ ಮಳೆ‌ ಪ್ರಮಾಣದಲ್ಲಿ ಕಡಿತವಾಗಿರುವದರಿಂದ‌ ಘಟಪ್ರಭಾ ನದಿಯ ನೀರಿನ‌ ಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸೋಮವಾರದಿಂದ ಬಂದ್ ಆಗಿದ್ದ ಲೋಳಸುರ ಸೇತುವೆ ಈಗ ಮುಕ್ತವಾಗಿದೆ. ಆದ್ರೆ ನೀರಿನ ರಬಸಕ್ಕೆ ಕಸ ಕಡ್ಡಿಗಳು ಸೇತುವೆ ಮೇಲೆ ಬಂದಿವೆ. ಸೇತುವೆಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದು ಜನರು ಸಂಚರಿಸುತ್ತಿದ್ದಾರೆ. ಗೋಕಾಕ ನಗರಕ್ಕೆ ಮಹಾರಾಷ್ಟ್ರ ಮತ್ತು ವಿಜಯಪುರಕ್ಕೆ ರಸ್ತೆ ಕಲ್ಪಿಸುವ ಲೋಳಸುರ ಸೇತುವೆ ಬಂದ್ ಆಗಿದ್ದರಿಂದ ನಿತ್ಯ ಸಂಚರಿಸುವ ಜನರು ಪರದಾಡುವಂತಾಗಿತ್ತು. …

Read More »

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜಯಂತಿ- ತಂದೆಯ ಬಗ್ಗೆ ರಾಹುಲ್ ಗಾಂಧಿ ಭಾವನಾತ್ಮಕ ಮಾತು

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75ನೇ ಜಯಂತಿ. ಈ ದಿನದಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ತಂದೆಯ ಬಗ್ಗೆ ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.ರಾಜೀವ್ ಗಾಂಧಿ ಅವರು ಓರ್ವ ದೂರ ದೃಷ್ಟಿಯುಳ್ಳ ನಾಯಕಾರಗಿದ್ದರು. ಭವಿಷ್ಯದ ದೃಷ್ಟಿಕೋನದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ ಉದಾರ ಮತ್ತು ಪ್ರೀತಿಯ ಸ್ನೇಹ ಜೀವಿಯಾಗಿದ್ದರು. ಅವರನ್ನ ತಂದೆಯಾಗಿ ಪಡೆದ ನಾನಯ ಅದೃಷ್ಟವಂತ ಹಾಗೂ ಹೆಮ್ಮೆ ಪಡುತ್ತೇನೆ. ಪ್ರತಿದಿನ …

Read More »

ಕೆ.ಎಲ್.ರಾಹುಲ್ ಮಾಡಿರುವ ಕಮೆಂಟ್ ಗೆ ಅಭಿಮಾನಿಗಳು ಫುಲ್ ಕನ್ಫ್ಯೂಸ್

ಬೆಂಗಳೂರು: ಗೆಳತಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಫೋಟೋಗೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಮಾಡಿರುವ ಕಮೆಂಟ್ ಗೆ ಅಭಿಮಾನಿಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ. ರಾಹುಲ್ ಕಮೆಂಟ್‍ಗೆ ಪ್ರತಿಕ್ರಿಯೆ ನೀಡಿರುವ ಫ್ಯಾನ್ಸ್, ಅಣ್ಣ ಈ ಪದದ ಅರ್ಥ ಏನು ಎಂದು ಪ್ರಶ್ನೆ ಮಾಡಿದ್ದಾರೆ.ಬುಧವಾರ ಆಥಿಯಾ ಶೆಟ್ಟಿ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಿರರ್ ಸೆಲ್ಫಿ ಹಾಕಿಕೊಂಡಿದ್ದರು. ಇತ್ತ ನಟಿ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಕೆ.ಎಲ್.ರಾಹುಲ್, ಜೆಫಾ ಎಂದು ಕಮೆಂಟ್ ಮಾಡಿದ್ದಾರೆ. ಬಹುತೇಕರು ಜೆಫಾ ಅರ್ಥ ಹುಡುಕಲು …

Read More »