ತುಮಕೂರು: ಇಡೀ ದೇಶವೇ ಮಹಾಮಾರಿ ಕೊರೊನಾ ವೈರಸ್ನಿಂದ ತತ್ತರಗೊಂಡಿದೆ. ಇದುವರೆಗೂ ಕೊರೊನಾ ವೈರಸ್ಗೆ ಸೂಕ್ತವಾದ ಔಷಧಿ ಸಿಗಲಿಲ್ಲ. ಸದ್ಯಕ್ಕೆ ತುಮಕೂರು ಜಿಲ್ಲೆಯ ರೈಸ್ ಮಿಲ್ ಒಂದರಲ್ಲಿ ವಿಶೇಷವಾದಂತಹ ಅಕ್ಕಿಯೊಂದು ತಯಾರಾಗುತ್ತಿದೆ. ಈ ಅಕ್ಕಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ. ಆಯುರ್ವೇದಿಕ್ ರೈಸ್ ಎಂದು ಇದರ ಹೆಸರು. ನೈಸರ್ಗಿಕವಾದಂತಹ ವಸ್ತುಗಳನ್ನು ಈ ಅಕ್ಕಿಯಲ್ಲಿ ಬೆರೆಸಿ ತಯಾರು ಮಾಡಲಾಗುತ್ತದೆ. ಈ ರೈಸ್ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ ಎನ್ನಲಾಗಿದೆ. …
Read More »ಮಹಾರಾಷ್ಟ್ರ ಕಂಟಕದಿಂದ ಯಾದಗಿರಿ ಜಿಲ್ಲೆಯ ಜನತೆ ತತ್ತರ……..
ಯಾದಗಿರಿ: ಮಹಾರಾಷ್ಟ್ರ ಕಂಟಕದಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದು, ಈಗ ಮತ್ತೊಂದು ಆತಂಕ ಎದುರಾಗಿದೆ. ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಲ್ಲಿದ್ದವರನ್ನು ಮನೆಗೆ ಕಳುಹಿಸಿದ ಪರಿಣಾಮ ಯಾದಗಿರಿ ನಗರದಲ್ಲಿ ಕೊರೊನಾ ಭೀತಿ ಶುರುವಾಗಿದೆ. ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಮಹಾರಾಷ್ಟ್ರದಿಂದ ಬಂದವರನ್ನು ಮನೆಗೆ ಕಳುಹಿಸಲಾಗಿದೆ. ನಗರದ ವಿವಿಧ ವಾರ್ಡ್ ಗಳಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ 18 ಜನರಿಗೆ, ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕು ಪತ್ತೆಯಾದ 18 ಜನ …
Read More »ಮಹಿಳಾ ಸಂಘದಲ್ಲಿ ಎರಡು ಗುಂಪುಗಳ ನಡುವೆ ಜಡೆ ಜಗಳ……
ಬೆಂಗಳೂರು: ಕೊರೊನಾ ವೈರಸ್ ನಡುವೆ ಯಾವುದೇ ಮಾಸ್ಕ್ ಇಲ್ಲದೆ, ಮಹಿಳಾ ಸಂಘದಲ್ಲಿನ ಎರಡು ಗುಂಪುಗಳ ನಡುವೆ ಜಡೆ ಜಗಳ ನಡೆದಿದ್ದು, ಮಹಿಳೆಯರು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಘದ ಅಧ್ಯಕ್ಷೆಯಿಂದ ಸದಸ್ಯ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಸಂಘದ ಸಭೆ ಮಾಡುವ ವಿಚಾರದಲ್ಲಿ ಇಬ್ಬರೂ ಜಗಳಾಡಿಕೊಂಡಿದ್ದು, ಬೀದಿ ರಂಪಾಟ ಮಾಡಿದ್ದಾರೆ. ಗಲಾಟೆಯಲ್ಲಿ ಬೈರಮ್ಮ ಗಾಯಗೊಂಡಿದ್ದು, ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ …
Read More »ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಊಟ ಇಲ್ಲ- ಸೌಲಭ್ಯ ನೀಡದೇ ನಿರ್ಲಕ್ಷ್ಯ ಮಾಡಿತಾ ಬ್ರಿಮ್ಸ್?
ಬೀದರ್: ಕೋವಿಡ್ 19 ನಿರ್ವಹಣೆಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡ್ತಿದೆ. ಆದರೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಹಾಗೂ ಸೌಕರ್ಯಗಳು ಸಿಗ್ತಿದ್ಯಾ ಅನ್ನೋ ಪ್ರಶ್ನೆ ಮೂಡಲು ಗಡಿ ಜಿಲ್ಲೆಯ ಸೋಂಕಿತರ ಆಕ್ರೋಶವೇ ಕಾರಣವಾಗಿದೆ ಹೌದು. ಮುಂಬೈ ಕಂಟಕದಿಂದ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗ್ತಿದ್ದು ಸೋಂಕಿತರ ಸಂಖ್ಯೆ ತ್ರಿಶತಕದತ್ತ ಬಂದು ನಿಂತಿದೆ. ಹೀಗಿದ್ದರೂ ಬ್ರಿಮ್ಸ್ ಆಸ್ಪತ್ರೆ ಕೋವಿಡ್ ವಿಶೇಷ ವಾರ್ಡಿನಲ್ಲಿರೋ 124 ಸೋಂಕಿತರಿಗೆ ಯಾವುದೇ ಸೌಲಭ್ಯ ನೀಡದೇ ನಿರ್ಲಕ್ಷ್ಯ …
Read More »ಆತ್ಮಹತ್ಯೆ ಮಾಡ್ಕೊಂಡ ಪತಿ,ಪತ್ನಿ , ಅನಾಥವಾದ ಇಬ್ಬರು ಮಕ್ಕಳು……
ಬೆಳಗಾವಿ: ಗಂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳುತ್ತಿದ್ದಂತೆಯೇ ಪತ್ನಿಯೂ ನೇಣಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ನಡೆದಿದೆ. ಗುರುನಾಥ್ ತಾವರೆ(45), ಹೆಂಡತಿ ಮೀನಾಕ್ಷಿ (35) ಜೋಡಿ ಇಬ್ಬರು ಮುದ್ದಾದ ಮಕ್ಕಳನ್ನ ಅನಾಥ ಮಾಡಿ ಹೋಗಿದ್ದಾರೆ. ಗುರುನಾಥ್ ಬೈಲಹೊಂಗಲ ತಾಲೂಕಿನ ಅಮಟೆ ಗ್ರಾಮದ ಪ್ರೌಢ ಶಾಲೆಯ ಶಿಕ್ಷಕರಾಗಿದ್ದು, ಹೀಗಾಗಿ ದಂಪತಿ ಬೈಲಹೊಂಗಲ ಪಟ್ಟಣಕ್ಕೆ ಬಂದು ನೆಲೆಸಿದ್ದಾರೆ. ಆಗಾಗ ಸಣ್ಣಪುಟ್ಟ ಜಗಳ ಬಿಟ್ಟರೆ ಬಡಿದಾಡಿಕೊಂಡ …
Read More »ಅತ್ಯಾಚಾರಕ್ಕೆ ಯತ್ನ- ಆತ್ಮಹತ್ಯೆಗೆ ಶರಣಾದ ವಿಕಲಾಂಗ ಚೇತನ ಮಹಿಳೆ………….
ಗದಗ: ಅತ್ಯಾಚಾರ ಯತ್ನಕ್ಕೊಳಗಾದ ಮಹಿಳೆ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದಿದೆ. ಜೂನ್ 4ರಂದು ಮಹಿಳೆ ಕುರಿ ಮೇಯಿಸಲು ಹೋಗಿದ್ದರು. ಈ ವೇಳೆ ಯಾರು ಇಲ್ಲದ ಸಂದರ್ಭದಲ್ಲಿ ಸ್ಥಳೀಯ ಬಸಪ್ಪ ಕಂಬಳಿ ಎಂಬಾತ ಅತ್ಯಾಚಾರಕ್ಕೆ ಮುಂದಾಗಿದ್ದನು ಎಂಬ ಆರೋಪ ಕೇಳಿ ಬಂದಿದೆ. ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಸಂತ್ರಸ್ತೆ ವಿಷ ಸೇವಿಸಿದ್ದರು. ಕೂಡಲೇ ಕುಟುಂಬಸ್ಥರು ಮಹಿಳೆಯನ್ನು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿ …
Read More »ನೀರು-ಕೆಸರಲ್ಲಿ ಬೈಕ್ ತಳ್ಳುತ್ತಾ ಕರ್ನಾಟಕಕ್ಕೆ ಎಂಟ್ರಿ………..
ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಬಂದವರಲ್ಲೇ ಸೋಂಕು ಹೆಚ್ಚಾಗಿ ಪತ್ತೆಯಾಗಿದೆ. ಇದರಿಂದ ಜಿಲ್ಲಾಡಳಿತ ಒಂದಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಜನ ಜಿಲ್ಲಾಡಳಿತದ ಕಣ್ಣಿನಿಂದ ತಪ್ಪಿಸಿಕೊಂಡು ಕಳ್ಳದಾರಿ ಮೂಲಕ ಎಂಟ್ರಿ ಆಗುತ್ತಿದ್ದಾರೆ. ಕರ್ನಾಟಕಕ್ಕೆ ಮುಂಬೈನದ್ದೇ ಟೆನ್ಶನ್. ಮಹಾರಾಷ್ಟ್ರದಿಂದ ಬರೋರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಸಾವಿರ ಗಡಿದಾಟಿದೆ. ಈಗ 7 ದಿನ ಕ್ವಾರಂಟೈನ್ಗೆ ಸೂಚಿಸಿದ್ದರಿಂದ ಮುಂಬೈನಿಂದ ಬರುವವರು ಕಳ್ಳಾಟ ಮಾಡುತ್ತಿದ್ದಾರೆ. ಕ್ವಾರಂಟೈನ್ ತಪ್ಪಿಸಿಕೊಳ್ಳಲು ನದಿಯಿಂದ …
Read More »SSLC ಪರೀಕ್ಷೆ ಯಾವುದೇ ಕಾರಣಕ್ಕೂ ರದ್ದು ಪಡಿಸಲ್ಲ- ಸಚಿವ ಶ್ರೀರಾಮುಲು ಸ್ಪಷ್ಟನೆ…….
ಮಡಿಕೇರಿ: ಕೆಲ ರಾಜ್ಯಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಿರುವಂತೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ನಡೆದ ಕೊರೊನಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿಯೇ ಬರಲು ವ್ಯವಸ್ಥೆ ಮಾಡಲಾಗುವುದು. ಎಲ್ಲ ವಿದ್ಯಾರ್ಥಿಗಳಿಗೆ ತಪ್ಪದೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಅಲ್ಲದೆ ಸ್ಯಾನಿಟೈಸರ್ …
Read More »ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪುತ್ರ, ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪುತ್ರ, ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಜೂನ್ 7ರ ಮಧ್ಯರಾತ್ರಿ ಕರೆ ಮಾಡಿದ ಅಪರಿಚಿತ, ಜೀವ ಬೆದರಿಕೆ ಹಾಗೂ ಅವಾಚ್ಯ ಪದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪೊಲೀಸ್ ಮಹಾ ನಿರ್ದೆಶಕ ಪ್ರವೀಣ್ ಸೂದ್ ಅವರಿಗೆ ದೂರು ಸಲ್ಲಿಸಿದ್ದಾರೆ. ಅಪರಿಚಿತ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತನಾಡಿ …
Read More »ಜ್ಯೋತಿರಾದಿತ್ಯ ಸಿಂಧಿಯಾ, ತಾಯಿ ಮಾಧವಿ ರಾಜೇಗೆ ಕೊರೊನಾ ಸೋಂಕು…….
ಭೋಪಾಲ್: ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿ ಮಾಧವಿ ರಾಜೇ ಅವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನು ಸಿಂಧಿಯಾರ ಪತ್ನಿ, ಮಗ ಮತ್ತು ಮಗಳ ವರದಿ ನೆಗೆಟಿವ್ ಬಂದಿದೆ. ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಸಿಂಧಿಯಾ ತಮ್ಮ ತಾಯಿಯ ಜೊತೆ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಐದು ದಿನಗಳ ಹಿಂದೆ ಗ್ವಾಲಿಯರ್ ನಲ್ಲಿ ಸಿಂಧಿಯಾ, ತಾಯಿ ಮಾಧವಿ ರಾಜೇ, ಪತ್ನಿ ಪ್ರಿಯದರ್ಶಿನಿ, ಮಗಳು ಅನನ್ಯಾ …
Read More »