ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಬಿಎಂಟಿಸಿ ಉದ್ಯೋಗಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್-19 ಪರೀಕ್ಷೆಯ ರಿಪೋರ್ಟ್ ಪಾಸಿಟಿವ್ ಬರುತ್ತಿದ್ದಂತೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಲು ಆರಂಭಿಸಿದ್ದಾರೆ. ಸೋಂಕಿತ ಬಿಎಂಟಿಸಿ ಉದ್ಯೋಗಿ ಮೂರು ದಿನಗಳ ರಜೆಯಲ್ಲಿದ್ದು, ಸ್ವಯಂ ಪ್ರೇರಿತವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದರು. ಜೂನ್ 10ರಂದು ಬಂದ ರಿಪೋರ್ಟ್ …
Read More »ಮುಂಬೈನಿಂದ ಬೆಳಗಾವಿ, ಬಂದವರನ್ನು ಕ್ವಾರೆಂಟೈನ್‍ನಲ್ಲಿಟ್ಟು ವರದಿಗೂ ಮುನ್ನವೇ ಮನೆಗೆ ಕಳಿಸುತ್ತಾರೆ.
ಬೆಳಗಾವಿ: ಮುಂಬೈನಿಂದ ಬಂದವರನ್ನು ಕ್ವಾರೆಂಟೈನ್‍ನಲ್ಲಿಟ್ಟು ವರದಿಗೂ ಮುನ್ನವೇ ಮನೆಗೆ ಕಳಿಸುತ್ತಾರೆ. ಮನೆಗೆ ಹೋದ ಎರಡೇ ದಿನಕ್ಕೆ ಸೋಂಕಿತರು ಅಂತ ಮತ್ತೆ ಕರೆತಂದು ಆಸ್ಪತ್ರೆಗೆ ದಾಖಲಿಸ್ತಾರೆ. ಹೌದು. ಬೆಳಗಾವಿಯ ಅತಿವಾಡ ಗ್ರಾಮದಲ್ಲಿ ಎಲ್ಲವೂ ಅತಿಯಾಗಿದೆ ಎನ್ನಿಸುತ್ತಿದೆ. ಮೇ 25ರಂದು ಮುಂಬೈನಿಂದ 48 ಮಂದಿ ವಾಪಸ್ ಬರುತ್ತಾರೆ. ಬಂದವರೆಲ್ಲರನ್ನೂ ಕ್ವಾರಂಟೈನ್ ಮಾಡ್ತಾರೆ. 14 ದಿನಗಳ ಬಳಿಕ ವರದಿ ಬರುವ ಮುನ್ನವೇ ಎಲ್ಲರನ್ನೂ ಮನೆಗೆ ಕಳುಹಿಸ್ತಾರೆ. ಮನೆಗೆ ಹೋದ 48 ಜನರಲ್ಲಿ 14 ಮಂದಿಗೆ …
Read More »ಚಿತ್ರೀಕರಣದಲ್ಲಿ ಭಾಗಿಯಾಗಲು ಅವಕಾಶ ಕೊಡಿ – ಹಿರಿಯ ಕಲಾವಿದರಿಂದ ಡಿಸಿಎಂಗೆ ಮನವಿ
ಬೆಂಗಳೂರು: ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹಿರಿಯ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಕೊಡಿಸಿ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಕಿರುತೆರೆಯ ಒಳಾಂಗಣ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ 60 ವರ್ಷ ಮೇಲ್ಪಟ್ಟ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳದಂತೆ ಷರತ್ತು ವಿಧಿಸಿದೆ. ಹೀಗಾಗಿ ಸೀರಿಯಲ್ ತಂಡ ಹಿರಿಯ ಕಲಾವಿದರನ್ನು ಬಿಟ್ಟು ಶೂಟಿಂಗ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಹಿರಿಯ ಕಲಾವಿದರು ಶೂಟಿಂಗ್ ಇಲ್ಲದೇ, ಸಂಪಾದನೆಗೆ ಬೇರೆ ದಾರಿಯಿಲ್ಲದೇ …
Read More »ಬೆಂಗ್ಳೂರಿನಲ್ಲಿ ಭಿಕ್ಷುಕನಿಗೆ ಕೊರೊನಾ- ಶವ ಪರೀಕ್ಷೆಯಲ್ಲಿ ಸೋಂಕು ಪತ್ತೆ………
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಮಾರಿ ತಾಂಡವಾಡುತ್ತಿದೆ. ಅಂತೆಯೇ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೂ ಕೊರೊನಾ ಸೋಂಕು ಹರಡಿದೆ. ಇಂದು ಬೆಂಗಳೂರಿನಲ್ಲಿ ಕೊರೊನಾಗೆ ನಾಲ್ವರು ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಮಂದಿ ಇಂದು ಮೃತಪಟ್ಟಿದ್ದಾರೆ. ಆದರೆ ಸೋಮವಾರ ಮೃತಪಟ್ಟಿದ್ದ ಅಪರಿಚಿತ ವ್ಯಕ್ತಿಯ ಕೋವಿಡ್ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಆಂತಕಕ್ಕೆ ಎಡೆಮಾಡಿಕೊಟ್ಟಿದೆ. ಸೋಮವಾರ ನಾಗರಬಾವಿ ಬ್ರಿಡ್ಜ್ ನಿಂದ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. …
Read More »ಬೆಂಗ್ಳೂರಲ್ಲಿ ಕೊರೊನಾಗೆ ನಾಲ್ವರು ಬಲಿ?…………..
ಬೆಂಗಳೂರು: ಸಿಲಿಕಾನ್ ಸಿಟಿಗೆ ಬೆಳ್ಳಂಬೆಳಗ್ಗೆ ಕೊರೊನಾ ಶಾಕ್ ನೀಡಿದ್ದು, ಮಾಹಾಮಾರಿಗೆ ಬೆಂಗಳೂರಿನಲ್ಲಿ ನಾಲ್ವರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಈ ಮೂಲಕ ನಗರದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ರೋಗಿ 4079 ಗದಗ ಮೂಲದ 54 ವರ್ಷ ವ್ಯಕ್ತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿರುವ ಟ್ರಾವೆಲ್ ಹಿಸ್ಟರಿಯಿದೆ. ರೋಗಿ 4845- 61 ವರ್ಷದ ವ್ಯಕ್ತಿ, ರೋಗಿ 5340 ಬಳ್ಳಾರಿ ಮೂಲದ 58 ವರ್ಷದ ವ್ಯಕ್ತಿ ಅಂತರ್ ಜಿಲ್ಲೆ …
Read More »ರಾಜ್ಯದ ಕ್ರಿಕೆಟ್ ಮಂಡಳಿಗೆ ಗಂಗೂಲಿ ಪತ್ರ – ಐಸಿಸಿ ಟಿ20 ಕ್ರಿಕೆಟ್ ಮುಂದೂಡಿಕೆ ಸಾಧ್ಯತೆ…….
ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕ್ರಿಕೆಟ್‌ನ್ನು ಮುಂದೂಡಲು ಐಸಿಸಿ ಚಿಂತನೆ ನಡೆಸಿದ ಬೆನ್ನಲ್ಲೇ ಬಿಸಿಸಿಐ ಐಪಿಎಲ್ ಆಡಿಸಲು ಮುಂದಾಗುತ್ತಿದೆ. ಹೌದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಸಂಬಂಧ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ನಡೆಸುವ ಸಂಬಂಧ ರಾಜ್ಯದ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದು ನಿಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡಿದ್ದಾರೆ. ಈ ವರ್ಷ ಐಪಿಎಲ್ ಆಯೋಜಿಸಲು ಬಿಸಿಸಿಐ ವಿವಿಧ ಆಯ್ಕೆಗಳನ್ನು ಹುಡುಕುತ್ತಿದೆ. ಈ ಸಂಬಂಧ ಖಾಲಿ ಸ್ಟೇಡಿಯಂನಲ್ಲೂ ನಡೆಸುವ ಬಗ್ಗೆ …
Read More »ವೇಗವಾಗಿ ಬಂದು ಆಟೋ, ಕಾರುಗಳಿಗೆ ಕ್ರೇನ್ ಡಿಕ್ಕಿ- ಪಾದಚಾರಿ ಸಾವು…………..
ಬೆಂಗಳೂರು: ವೇಗವಾಗಿ ಬಂದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಆಟೋ, ಓಮಿನಿ ಹಾಗೂ ಕಾರಿಗೆ ಡಿಕ್ಕಿಯಾಗಿ ಓರ್ವ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಸುಂಕದಕಟ್ಟೆಯಲ್ಲಿ ನಡೆದಿದೆ. ಮುನಿಯಪ್ಪ ಸಾವನ್ನಪ್ಪಿದ್ದ ವ್ಯಕ್ತಿ. ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಭಯಾನಕ ಅಪಘಾತದ ದೃಶ್ಯ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬ್ರೇಕ್ ಫೇಲ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕ್ರೇನ್ ರಸ್ತೆ ಪಕ್ಕದಲ್ಲೇ …
Read More »ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಗಸ್ಟ್ ತಿಂಗಳಲ್ಲಿ…….
ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಸಲು,ಸರ್ಕಾರ ತೀರ್ಮಾಣಿಸಿದೆ.ಚುನವಣೆ ನಡೆಸಲು ರಿಟರ್ನಿಂಗ್ ಆಫಿಸರ್ ನೇಮಕ ಮಾಡಿ,ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಭೀಮ್ಸ್ ಆಡಳಿತಾಧಿಕಾರಿ ಸಯೀದಾ ಆಫ್ರೀನ್ ಎಸ್ ಬಳ್ಳಾರಿ ಇವರನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ರಿಟರ್ನಿಂಗ್ ಆಫಿಸರ್ ಎಂದು ನೇಮಕ ಮಾಡಲಾಗಿದ್ದು,ಸಹಕಾರ ಚುನಾವಣಾ ಪ್ರಾಧಿಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಈ ಮೊದಲು ಕಾಡಾ ಉಪ ಅಡಳಿತಾಧಿಕಾರಿ ಜಯಶ್ರೀ ಶಿಂತ್ರಿ ಅವರನ್ನು ರಿಟರ್ನಿಂಗ್ ಆಫಿಸರ್ ಎಂದು ನೇಮಿಸಲಾಗಿದ್ದು,ಸರ್ಕಾರ …
Read More »ಬೆಂಗ್ಳೂರಿನಲ್ಲಿ ಪೊಲೀಸರಿಗೆ ಕೊರೊನಾ ಕಂಟಕ- ನಗರದ 7 ಠಾಣೆಯ ಪೇದೆಗಳಿಗೆ ಸೋಂಕು……….
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾನೆ ಇದೆ. ಇದರ ಬೆನ್ನಲ್ಲೇ ಜನರನ್ನು ರಕ್ಷಣೆ ಮಾಡಬೇಕಾದ ಆರಕ್ಷಕರಿಗೆ ಕೊರೊನಾ ಪಾಸಿಟಿವ್ ಬರುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ ಇಲ್ಲಿವರೆಗೂ ಏಳು ಪೊಲೀಸ್ ಠಾಣೆಯ ಪೊಲೀಸ್ ಪೇದೆಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಮತ್ತಷ್ಟು ಆತಂಕಕ್ಕೆ ದೂಡಿದೆ. ನಗರದ ಬಂಡೇಪಾಳ್ಯ ಪೊಲೀಸ್ ಠಾಣೆ, ಜೆಜೆ ನಗರ ಪೊಲೀಸ್ ಠಾಣೆ, ಜೆಬಿ ನಗರ ಪೊಲೀಸ್ ಠಾಣೆ, ಡಿಜಿ …
Read More »ಅಮ್ಮ ನನ್ನ ಬಿಟ್ಟು ಹೋಗಿ ಇಂದಿಗೆ 26 ವರ್ಷ: ಜಗ್ಗೇಶ್………….
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ತನ್ನ ಬಾಲ್ಯ, ಕಷ್ಟದ ದಿನ, ಸಂತಸ, ನೋವು ಎಲ್ಲವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ. ನಟ ಜಗ್ಗೇಶ್ ಅವರಿಗೆ ತಾಯಿ ನಂಜಮ್ಮ ಎಂದರೆ ತುಂಬಾ ಪ್ರೀತಿ. ನಂಜಮ್ಮ 1993ರಲ್ಲಿ ನಿಧನರಾಗಿದ್ದರು. ಜಗ್ಗೇಶ್ ಅವರ ತಾಯಿ ನಿಧನರಾಗಿ ಇಂದಿಗೆ 26 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡಿ …
Read More »