Breaking News

ಅರೆಬೆತ್ತಲೆಯಾಗಿ ಮಹಿಳೆಯ ಶವ ಪತ್ತೆ – ಅತ್ಯಾಚಾರ ನಡೆಸಿ ಕೊಲೆ ….?

ಚಿಕ್ಕಬಳ್ಳಾಪುರ: ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾರಕೂರು ಕ್ರಾಸ್ ಬಳಿ ನಡೆದಿದೆ. ಕಾರಕೂರು ಕ್ರಾಸ್ ಬಳಿಯ ನಿರ್ಮಾಣ ಹಂತದ ಬಡವಾಣೆಯ ಕಮಾನು ಗೋಡೆಯ ಸೆಕ್ಯೂರಿಟಿ ಗಾರ್ಡ್ ಕೊಠಡಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ವೇಲ್‍ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದ್ದು, ಅರೆಬೆತ್ತಲೆಯಾಗಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ …

Read More »

ದೆಹಲಿಯ ರುದ್ರಭೂಮಿಯ ಅಭಿವೃದ್ಧಿಯ ಜತೆಗೆ ಅಲ್ಲಿ ದಿ.ಸುರೇಶ್ ಅಂಗಡಿ ಅವರ ಸ್ಮಾರಕ ನಿರ್ಮಾಣ

ಬೆಳಗಾವಿ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ದಿ.ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ನಗರದ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿ ಇರುವ ಸುರೇಶ್ ಅಂಗಡಿ ಅವರ ನಿವಾಸಕ್ಕೆ ಬುಧವಾರ (ಅ.7) ಆಗಮಿಸಿದ ಮುಖ್ಯಮಂತ್ರಿಗಳು, ದಿ.ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ‌ ಸಲ್ಲಿಸಿದರು. ನಂತರ ಕುಟುಂಬದ ಸದಸ್ಯರ ಜತೆ ಮಾತನಾಡಿದ ಅವರು, ದಿ.ಸುರೇಶ್ ಅಂಗಡಿ ಅವರ …

Read More »

ಸುರೇಶ ಅಂಗಡಿ ಅವರ ಮನೆಗೆb.s.y.ಭೇಟಿ ,ಟಿಕೆಟ್ಬಿಜೆಪಿ ಯುವ ನಾಯಕರು ಲಾಭಿ ನಡೆಸ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿ: ದಿ.ಸುರೇಶ ಅಂಗಡಿ ನಿಧನ ಹಿನ್ನೆಲೆ ಖಾಲಿ ಇರುವ ಬೆಳಗಾವಿ ಲೋಕಸಭಾ ಕ್ಷೇತ್ರ ಚುನಾವಣೆಗೆ ದಿನಾಂಕ ಘೋಷಣೆ ಯಾಗುವ ಮುನ್ನವೇ ಮಾಜಿ ಶಾಸಕ , ಬಿಜೆಪಿ ನಾಯಕರು ಟಿಕೆಟ್‍ಗಾಗಿ ಲಾಭಿ ನಡೆಸಿದ್ದಾರೆ. ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಲು ಬೆಳಗಾವಿಗೆ ಆಗಮಿಸಿದ್ದಾರೆ. ಇದರ ಮಧ್ಯದಲ್ಲಿಯೇ ಚುನಾವಣೆ ದಿನಾಂಕ ಘೋಷಣೆ ಮುನ್ನವೇ ಬಿಜೆಪಿ ನಾಯಕರ ಟಿಕೆಟ್‍ಗಾಗಿ ಕಸರತ್ತು ಜೋರಾಗಿ ನಡೆಸಿದ್ದಾರೆ. ಮಾಜಿ …

Read More »

ಮೊಣಕೈನಲ್ಲಿ ಅಭಿಮಾನಿ ಬಿಡಿಸಿದ ಭಾವಚಿತ್ರಕ್ಕೆ ಅಪ್ಪು ಫುಲ್ ಫಿದಾ

ಬೆಂಗಳೂರು: ಬೆಂಗಳೂರು: ತಮ್ಮ ನೆಚ್ಚಿನ ನಟ-ನಟಿಯರಿಗಾಗಿ ಅಭಿಮಾನಿಗಳು ಏನು ಮಾಡಲು ಸಿದ್ಧರಿದ್ದಾರೆ. ಹುಟ್ಟುಹಬ್ಬಗಳು ಬಂದರಂತೂ ಕೇಳೋದೇ ಬೇಡ, ನಟ ಅಥವಾ ನಟಿಯ ಬರ್ತ್ ಡೇಯನ್ನು ತಮ್ಮದೇ ಹುಟ್ಟುಹಬ್ಬ ಎಂಬಂತೆ ಆಚರಿಸುತ್ತಾರೆ. ಒಟ್ಟಿನಲ್ಲಿ ಏನೆಲ್ಲಾ ಹರಸಾಹಸ ಮಾಡಿ ತನ್ನ ನೆಚ್ಚಿನ ನಟ ತಮ್ಮತ್ತ ಒಂದು ಬಾರಿ ತಿರುಗಿ ನೋಡುವಂತೆ ಪ್ರಯತ್ನ ಪಡುತ್ತಿರುತ್ತಾರೆ. ಅಂತೆಯೇ ಅಭಿಮಾನಿಯೊಬ್ಬ ತನ್ನ ಮೊಣಕೈನಲ್ಲಿ ಭಾವಚಿತ್ರ ಬಿಡಿಸಿ ನಟ ಪುನೀತ್ ರಾಜ್ ಕುಮಾರ್ ಗಮನ ಸೆಳೆದಿದ್ದಾನೆ. ತನ್ನ ಮೊಣಕೈ …

Read More »

ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿರುವ ಬುರ್ಜ್​ ಖಲೀಫಾ

ಮರಳುಗಾಡಿನ ಮಧ್ಯೆ ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪರಿಣಮಿಸಿರುವ ನಗರವೆಂದರೆ ಅದು ದುಬೈ. ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿರುವ ಬುರ್ಜ್​ ಖಲೀಫಾವನ್ನು ಹೊಂದಿರುವ ಖ್ಯಾತಿ ಸಹ ದುಬೈ ಪಡೆದಿದೆ. ಇದೀಗ, ಇದೇ ದುಬೈ ನಗರ ಮತ್ತೊಂದು ದಾಖಲೆ ಸೃಷ್ಟಿಸಲು ಮುಂದಾಗಿದೆ. ಹೌದು, ಇದೇ ಅಕ್ಟೋಬರ್​ 22ರಂದು ದುಬೈ ಪ್ರಪಂಚದ ಅತಿದೊಡ್ಡ ಕಾರಂಜಿಯನ್ನು ಲೋಕಾರ್ಪಣೆ ಮಾಡಲಿದೆ. ಈ ಮೂಲಕ ಪ್ರಪಂಚದ ಅತಿದೊಡ್ಡ ಕಾರಂಜಿ ಎಂಬ ಗಿನ್ನಿಸ್​ ದಾಖಲೆ ರಚಿಸಲು ಮುಂದಾಗಿದೆ. …

Read More »

ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ?:ಡಿ.ಕೆ. ರವಿ ಹೆಂಡತಿ

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿಗೆ ಕಾರಣವಾದ ಕಾಂಗ್ರೆಸ್​ ಪಕ್ಷಕ್ಕೇ, ಅವರ ಹೆಂಡತಿ ಕುಸುಮಾ ಸೇರ್ಪಡೆ ಆಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ಟ್ವೀಟ್​ ಮಾಡಿದ್ದರು. ಜೊತೆಗೆ, ಕುಸುಮಾ ಕಾಂಗ್ರೆಸ್​ಗೆ ಸೇರ್ಪಡೆಯಾದ ವೇಳೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಆಶೀರ್ವದಿಸುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿ ಕುಸುಮಾ ಅವರ ದುರದೃಷ್ಟ ಇದೀಗ ಡಿ.ಕೆ ರವಿಯಿಂದ ಡಿ.ಕೆ ಶಿವಕುಮಾರ್​ಗೆ ವರ್ಗಾವಣೆಗೊಳ್ಳುತ್ತಿದೆ ಎಂದು ಹೇಳಿದ್ದರು.   …

Read More »

ಇಂದಿನಿಂದ ಪೊಲೀಸರೇ ವಸೂಲಿ ಮಾಡ್ತಾರೆ ಮಾಸ್ಕ್ ಫೈನ್…………

ಬೆಂಗಳೂರು: ಕೊರೊನಾ.. ಈ ಪೀಡೆಯಿಂದ ಮುಕ್ತವಾಗಲೂ ಎಷ್ಟೆಲ್ಲಾ ಸಾಹಸ ಮಾಡಿದ್ರು ಇನ್ನೂ ಮುಕ್ತಿ ಸಿಕ್ಕಿಲ್ಲ. ಬಿಬಿಎಂಪಿ, ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿವೆ. ಆದ್ರೆ ಯಾವುದಕ್ಕೂ ನಮ್ಮ ಜನ ಕ್ಯಾರೇ ಅಂತಿಲ್ಲ. ಹೀಗಾಗಿ ಬಿಬಿಎಂಪಿ ಮಾರ್ಷಲ್​ಗಳು ಫೀಲ್ಡಿಗಿಳಿದು ರೂ1000 ದಂಡ ವಸೂಲಿ ಮಾಡುದ್ರು. ಆದರೆ ನಮ್ಮ ಜನ ಮಾರ್ಷಲ್​ಗಳ ಜೊತೆಯೇ ಜಗಳಕ್ಕೆ ಮುಂದಾಗಿದ್ರೂ ಹೀಗಾಗಿ ಈಗ ಮಾಸ್ಕ್​ ಹಾಕದವರಿಗೆ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಲ್ಲಿ ಇಂದಿನಿಂದ ಪೊಲೀಸರು …

Read More »

ಕೊರೋನಾ ಆತಂಕದ ನಡುವೆಯೂ ತಿಮ್ಮಪ್ಪನ ಹುಂಡಿಯಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹ

ತಿರುಪತಿ,ಅ.6- ಕೆಲವು ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ವಿಶ್ವ ಪ್ರಸಿದ್ದ ತಿರುಪತಿ ದೇವಾಲಯವನ್ನು ಮತ್ತೆ ತೆರೆದಿರುವುದರಿಂದ ಭಾರೀ ಪ್ರಮಾಣದ ಭಕ್ತರು ಆಗಮಿಸುತ್ತಿದ್ದು, ಇದರಿಂದ ತಿಮ್ಮಪ್ಪನ ಹುಂಡಿಯಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆಗಳು ಸಂಗ್ರಹವಾಗುತ್ತಿದೆ. ವಿಶ್ವ ಪ್ರಸಿದ್ದ ತಿರುಪತಿ ಶ್ರೀ ವೆಂಕಟೇಶ್ವರನಿಗೆ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ. ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಸಹ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸುತ್ತಾರೆ. ಅಕ್ಟೋಬರ್ 2ರಂದು ಗಾಂ ಜಯಂತಿಗೆ ರಜೆ ಇದ್ದ ಕಾರಣ ಅಸಂಖ್ಯಾತ ಭಕ್ತರು ದೇವಾಲಯಕ್ಕೆ …

Read More »

ಖಾಸಗಿ ದರ್ಬಾರ್ ಗೆ ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ನಿರ್ಬಂಧ

ಮೈಸೂರು, ಅ. 7- ದಸರಾ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ 10 ದಿನಗಳ ಕಾಲ ಧಾರ್ಮಿಕ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದು, ಕೋವಿಡ್ ಕಾರಣ ಕುಟುಂಬದ ಸದಸ್ಯರು ಒಳಗೊಂಡಂತೆ ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಈ ಬಾರಿ ಪ್ರವೇಶ ನಿರ್ಬಂಸಲಾಗಿದೆ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಿಳಿಸಿದ್ದಾರೆ. ಈ ವರ್ಷ ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯ ನಡೆಯಲಿದೆ. ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅವರು …

Read More »

ಆರ್‌ಬಿಐ ಎಂಪಿಸಿಗೆ ಕನ್ನಡಿಗ ಶಶಾಂಕ್ ಭಿಡೆ ನೇಮಕ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಗೆ (ಎಂಪಿಸಿ) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಶಾಂಕ್ ಭಿಡೆ ಸದಸ್ಯರಾಗಿ ನೇಮಕವಾಗಿದ್ದಾರೆ. ಹಣಕಾಸು ನೀತಿ ಸಮಿತಿಯ ಸದಸ್ಯರ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ನೇಮಕಾತಿ ಸಮಿತಿಯು (ಸಿಸಿಎ) ಅನುಮೋದನೆ ನೀಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಶಶಾಂಕ್ ಭಿಡೆ ಯಾರು? ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಜನಿಸಿದ್ದ ಶಶಾಂಕ್ ಭಿಡೆ …

Read More »