Breaking News

ಮಂಡ್ಯ ಜಿಲ್ಲೆ ನಾಗಮಂಗಲ ಶಾಸಕ ಸುರೇಶಗೌಡ ರಿಂದ ಬಡ ಕುಟುಂಬಕ್ಕೆ ಫುಡ್ ಕಿಟ್ ಮತ್ತು ಮಾಸ್ಕ್ ವಿತರಣೆ.

ಮಂಡ್ಯ ಜಿಲ್ಲೆ ನಾಗಮಂಗಲ ಶಾಸಕ ಸುರೇಶಗೌಡ ರಿಂದ ಬಡ ಕುಟುಂಬಕ್ಕೆ ಫುಡ್ ಕಿಟ್ ಮತ್ತು ಮಾಸ್ಕ್ ವಿತರಣೆ. ವಿಶ್ವವನ್ನೆ ಬೆಚ್ಚಿ ಬೀಳಿಸಿರುವ ಕರೋನಾ ವೈರಸ್ ಮಹಾಮಾರಿಯಿಂದ ಅದಷ್ಟೋ ಜನಗಳ ಬದುಕು ದುಸ್ಥಿತಿ ತಲುಪಿರುವುದು ಬಹಿರಂಗ ಸತ್ಯ. ಈ ನಿಟ್ಟಿನಲ್ಲಿ ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಕಡುಬಡತನ ಎದುರಿಸುತ್ತಿರುವ ಮೂರು ಸಾವಿರ ಕುಟುಂಬಗಳಿಗೆ ತಾಲ್ಲೂಕು ಟಾಸ್ಕ್ ಪೋರ್ಸ್ ಸಮಿತಿ ಮೂಲಕ ಶಾಸಕ ಸುರೇಶ್ ಗೌಡ ಹಾಗೂ ವಿಧಾನ ಪರಿಷತ್ …

Read More »

ಕೊರೋನಾ ತಡೆಯಲು ಕೆ,ಎಮ್,ಎಫ್,ನಿರ್ದೇಶಕರಿಂದ ಸುರಂಗ ಮಾರ್ಗ ಉದ್ಘಾಟನೆ.

  ಗೋಕಾಕ: ಕೊಣ್ಣೂರ ಪಟ್ಟಣದ ವಾಲ್ಮೀಕಿ ವೃತ್ತದ ವಾರ್ಡ ನಂ 10 ರಲ್ಲಿ ದಾನಿಗಳಾದ ಆಶಾ ಟೆಕ್ಸ್ ಟೈಲ್ , ಶ್ರೀ ಐಶ್ವರ್ಯ ಸ್ಟೀಲ್ಸ ಆ್ಯಂಡ್ ಹಾರ್ಡವೆರ್ಸ ಮತ್ತು ವಿನೋದ ಕರನಿಂಗ ಇವರ ನೇತೃತ್ವದಲ್ಲಿ ಮತ್ತು ಸಾರ್ವಜನಿಕರಿಗಾಗಿ ಪದ್ಮಾವತಿ ಪೆಟ್ರೋಲಿಯಂ ಮಾಲೀಕರಾದ ಅಕ್ಷಯ ಬೆಡಕಿಹಾಳ ಇವರು ನೀಡಿದ ಸಾನಿಟೈಸರ್ ಸುರಂಗವನ್ನು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ಸುಪುತ್ರ ಹಾಗೂ ಕೆ,ಎಮ್,ಎಪ್,ನಿರ್ದೇಶಕರಾದ ಅಮರನಾಥ ಜಾರಕಿಹೋಳಿಯವರು ಉದ್ಘಾಟಿಸಿದರು ಇದೆ ಸಂದರ್ಭದಲ್ಲಿ …

Read More »

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ: ಏಮ್ಸ್ ನಿರ್ದೇಶಕ

ನವದೆಹಲಿ: ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾಗೆ ಪರಿಣಾಮಕಾರಿಯೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈಗ ಈ ವಿಚಾರದ ಕುರಿತು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಪ್ರತಿಕ್ರಿಯಿಸಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಕೆಲ ಲ್ಯಾಬ್‍ಗಳು ವರದಿ ನೀಡಿವೆ. ಈ ವರದಿಗೆ ನೀಡಿದ ಡೇಟಾಗಳು ಗಟ್ಟಿಯಾಗಿಲ್ಲ. ಚೀನಾ ಮತ್ತು ಫ್ರಾನ್ಸ್ ಅಧ್ಯಯನಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಗಳು ಗಂಭೀರ ಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿವೆ ಎಂದು …

Read More »

ಇಟಲಿಯಲ್ಲಿದ್ದ ಮಂಗಳೂರಿನ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಖಾದರ್

ಮಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಬರಲಾಗದೇ ಬೆಂಗಳೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಂಗಳೂರು ಮೂಲದ ಯುವತಿಯನ್ನು ಮಾಜಿ ಸಚಿವ ಯು.ಟಿ ಖಾದರ್, ತನ್ನ ಕಾರಿನಲ್ಲಿ ಮಂಗಳೂರಿಗೆ ಕರೆತಂದು ಯುವತಿ ಮನೆಗೆ ಸೇಫ್ ಆಗಿ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಇಟಲಿಯಲ್ಲಿ ವಾಸವಾಗಿದ್ದ ಮಂಗಳೂರಿನ ಮೂಲದ ಶ್ರೀಮಧು ಇಟಲಿಯಿಂದ ಮಾ.22ರಂದು ಕೊನೆ ವಿಮಾನದಲ್ಲಿ ದೆಹಲಿ ತಲುಪಿದ್ದಳು. ಇಟಲಿಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ದೆಹಲಿಯಲ್ಲಿ ಕ್ವಾರಂಟೈನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿ …

Read More »

ಕಲಬುರಗಿಯಲ್ಲಿ 2 ವರ್ಷದ ಬಾಲಕಿಗೆ ಕೊರೊನಾ ಪಾಸಿಟಿವ್

ಕಲಬುರಗಿ: ಯಾವುದೇ ಕೊರೊನಾ ಸೋಂಕಿತ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿರದ ಎರಡು ವರ್ಷದ ಹೆಣ್ಣು ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಮಗಳಿಗೆ ಕೊರೊನಾ ಸೋಂಕು ಹರಡಿದೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಇಂದು  ಟ್ವಿಟ್ಟರ್ ಹಾಗೂ ಫೇಸ್‍ಬುಕ್‍ನಲ್ಲಿ ಈ ಮಾಹಿತಿಯನ್ನು …

Read More »

ಅಣ್ಣನ ಪತ್ನಿಯೊಂದಿಗೆ ಅನೈತಿಕ ಸಂಬಂಧಕ್ಕೆ ಅಡ್ಡಿ – ಸ್ನೇಹಿತನ ರುಂಡ ತುಂಡರಿಸಿ ಕೊಲೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ವಾರದ ಹಿಂದೆ ನಡೆದ ಕೊಲೆ ಪ್ರಕರಣವೊಂದನ್ನು ಬೇಧಿಸಿರುವ ಪೊಲೀಸರು ನಾಲ್ಕು ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳಿಯಾಳ ತಾಲೂಕಿನ ಬೆಳವಟಗಿಯ ಮಾರುತಿ ಮಾದಪ್ಪಗೌಡ ಬಂಧಿತ ಆರೋಪಿ. ಈತ ತನ್ನ ಸ್ನೇಹಿತ ನಾಗರಾಜ್‍ನನ್ನು ಕೊಲೆ ಮಾಡಿದ್ದನು. ಏನಿದು ಪ್ರಕರಣ? ಏಪ್ರಿಲ್ 4 ರಂದು ಬೆಳವಟಗಿಯ ನಾಗರಾಜ್ ಕೊಳದಾರ (31) ಮನೆಯಿಂದ ದೇವಸ್ಥಾನದ ಹತ್ತಿರ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದನು. ಆದರೆ ಈತನ ಮೃತದೇಹ ಏಪ್ರಿಲ್ …

Read More »

ಗುಣಮುಖರಾದ ಸೋಂಕಿತರಿಗೆ ಹೂ ಗಿಡ, ಹಣ್ಣು ಕೊಟ್ಟು ಬೀಳ್ಕೊಡುಗೆ

ಇದುವರೆಗೂ 8 ಮಂದಿ ಸೋಂಕಿತರು ಗುಣಮುಖ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ದಿನ 5 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಚಿಕ್ಕಬಳ್ಳಾಪುರ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ ಒಂದೇ ಕುಟುಂಬದ ನಾಲ್ವರು ಏಕಕಾಲದಲ್ಲಿ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಗುಣಮುಖರಾದ ನಾಲ್ವರನ್ನ ಇಂದು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಒಂದೇ ಕುಟುಂಬದ ನಾಲ್ವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅವರು ಮನೆಗೆ ಹೋಗುವಾಗ ಸರದಿ ಸಾಲಿನಲ್ಲಿ ನಿಂತು …

Read More »

ಬೋರ್ ಆಗ್ತಿದೆಂದು ಲಾಕ್‍ಡೌನ್ ನಡುವೆ ವಿದ್ಯಾರ್ಥಿಯ ಖತರ್ನಾಕ್  ಪ್ಲಾನ್”……

ಲಾಕ್‍ಡೌನ್ ನಡುವೆ ವಿದ್ಯಾರ್ಥಿಯ ಖತರ್ನಾಕ್  ಪ್ಲಾನ್ ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತವ್ಯ ಇರುವವರು ಬಿಟ್ಟು ಹೊರಗಿನಿಂದ ಬರುವವರಿಗೆ ಪ್ರವೇಶಕ್ಕೆ ಕೆಲವು ಕಡೆ ನಿರ್ಬಂಧ ವಿಧಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಯೊಬ್ಬ ಸೂಟ್‍ಕೇಸ್‍ನೊಳಗೆ ಗೆಳೆಯನನ್ನ ಸಾಗಿಸುವಾಗ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಮಂಗಳೂರಿನ ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ನಡೆದಿದೆ. ಆರ್ಯ ಸಮಾಜದ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯೊಬ್ಬ ಬಾಡಿಗೆಗೆ …

Read More »

ಬೆಳಗಾವಿ –ಅಬಕಾರಿ ನಾಕಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲಾ 5 ಸೋಲಾರ್ ಲೈಟ್

ಬೆಳಗಾವಿ –  ಗೋವಾ ಮತ್ತು ಕರ್ನಾಟಕದ ಗಡಿ ಖಾನಾಪುರ ತಾಲೂಕಿನ  ಸುರಾಲ್ ಕ್ರಾಸ್ ನ ಅಬಕಾರಿ ನಾಕಾದಲ್ಲಿ ದಿನದ ಇಪ್ಪತ್ನಾಲ್ಕು ಘಂಟೆಯೂ  ಅಬಕಾರಿ ಪೊಲೀಸರು ಮತ್ತು ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತರು ಗೋವಾದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ ಎಲ್ಲ ಕಾರ್ಮಿಕ ಪಾದಚಾರಿಗಳ ಪ್ರಾಥಮಿಕ ಚಿಕಿತ್ಸೆ ನಡೆಸುತ್ತಿದ್ದಾರೆ. ಎಲ್ಲರ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾತ್ರಿ ವಿದ್ಯುತ್ತಿನ ತೀವ್ರ ಅಭಾವದಿಂದಾಗಿ ದಟ್ಟ ಅರಣ್ಯದ ಈ ಭಾಗದಲ್ಲಿ ಕೆಲಸ ನಿರ್ವಹಣೆ …

Read More »

ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇಂದು ಒಂದೇ ದಿನದಲ್ಲಿ 11 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರಲ್ಲಿ ಬೆಳಗಾವಿಯಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯ ರಾಯಭಾಗದ ಮೂವರಿಗೆ ಮತ್ತು ಹೀರೇಬಾಗೆವಾಡಿಯ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ. …

Read More »