ಬೆಳಗಾವಿ- ಬೆಳಗಾವಿ ನಗರದ ಶಹಾಪೂರ ಪ್ರದೇಶದ ಆಚಾರಿಗಲ್ಲಿಯಲ್ಲಿ ವಯಸ್ಕರ ಅಕ್ಕ ಮತ್ತು ತಮ್ಮ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನದ ಹಿಂದೆ ಆಚಾರಿಗಲ್ಲಿಯ ಮನೆಯಲ್ಲಿ ಅಕ್ಕ ಮತ್ತು ತಮ್ಮ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,ಮನೆಯಿಂದ ದುರ್ವಾಸನೆ ಬಂದು,ಪ್ರಕರಣ ಇವತ್ತು ಬೆಳಕಿಗೆ ಬಂದಿದೆ. 61 ವರ್ಷ ವಯಸ್ಸಿನ ಯದುಕುಲೇಶ ನಾಯಿಕ,70 ವರ್ಷದ ಪಂಕಜಾ ರಾಮಚಂದ್ರ ನಾಯಿಕ,ಆತ್ಯಹತ್ಯೆ ಮಾಡಿಕೊಂಡಿದ್ದು,ಇಬ್ಬರೂ ಅವಿವಾಹಿತರಾಗಿದ್ದರು,ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ …
Read More »ಕಾರ್ತಿಕ್ ರಾಜ್ ಮತ್ತು ಪೆಡ್ಲರ್ ಪ್ರತೀಕ್ ಶೆಟ್ಟಿ ಸೇರಿ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು…………!
ಬೆಂಗಳೂರು: ಸ್ಯಾಂಡಲ್‍ವುಡ್‍ಗೆ ಡ್ರಗ್ ಮಾಫಿಯಾ ನಂಟು ಇರೋದು ಸಿಸಿಬಿ ತನಿಖೆಯಿಂದ ಗೊತ್ತಾಗುತ್ತಿದೆ. ಇದರ ನಡುವೆಯೇ ಈ ಹಿಂದೆಯೇ ಪೆಡ್ಲರ್ ಪ್ರತೀಕ್ ಶೆಟ್ಟಿಯನ್ನು ಅರೆಸ್ಟ್ ಮಾಡಿದ್ದೇವು ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆಮಾತನಾಡಿದ ಅಲೋಕ್ ಕುಮಾರ್, 2018ರಲ್ಲೇ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಬಂಧನವಾಗಿತ್ತು. ಆದರೆ ಪ್ರತಿಕ್ ಶೆಟ್ಟಿ ಮತ್ತು ಕಾರ್ತಿಕ್ ರಾಜ್ ನಂಟಿನ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಸದ್ಯ ಸಿಸಿಬಿ ಪೊಲೀಸರ ವಶದಲ್ಲಿರುವ …
Read More »ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್
ಬೆಂಗಳೂರು: ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮೆಟ್ರೋ ಓಟಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಕೋವಿಡ್ 19 ಕಾರಣದಿಂದ ಮಾರ್ಚ್ 22 ರಿಂದ ಮೆಟ್ರೋ ಸೇವೆ ರದ್ದುಪಡಿಸಲಾಗಿತ್ತು. ಈಗ ಪ್ರಯಾಣಿಕರಿಗೆ ಕೆಲ ಷರತ್ತಗಳನ್ನು ವಿಧಿಸಿ ಮೆಟ್ರೋ ಓಡಿಸಲು ಸಿದ್ಧತೆ ನಡೆಸಿದೆ. ಸೆಪ್ಟೆಂಬರ್ 7 ರಿಂದ 10ನೇ ತಾರೀಖಿನವರೆಗೆ ನೇರಳೆ ಮಾರ್ಗದಲ್ಲಿ ಬೆಳಗ್ಗೆ 3 ಗಂಟೆ ಕಾಲ ಸಂಜೆ 3 ಗಂಟೆ ಕಾಲ ಮಾತ್ರ ಮೆಟ್ರೋ ಕಾರ್ಯಾಚರಣೆ …
Read More »ಯಾವುದೇ ರಂಗದಲ್ಲಿದ್ದರು, ಎಷ್ಟೇ ದೊಡ್ಡವರ ಮಕ್ಕಳಾಗಿದ್ದರು ಶಿಕ್ಷೆ ವಿಧಿಸುತ್ತೇವೆ
ಬೆಂಗಳೂರು: ಯಾವುದೇ ರಂಗದಲ್ಲಿದ್ದರು, ಎಷ್ಟೇ ದೊಡ್ಡವರ ಮಕ್ಕಳಾಗಿದ್ದರು, ಎಷ್ಟೇ ಪ್ರಭಾವಿಗಳಾಗಿದ್ದರು ಸಹಿತ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರೆ, ಅಂತಹವರಿಗೆ ಶಿಕ್ಷೆ ವಿಧಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಡ್ರಗ್ಸ್ ದಂಧೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ವಿರುದ್ಧ ಕಳೆದ ಆರು ತಿಂಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಆರೋಪಿಗಳಿಗೆ ನೋಟಿಸ್ ಕೊಟ್ಟು ಕರೆಸಿ ವಿಚಾರಣೆ ಮಾಡ್ತಿದ್ದೇವೆ. ಸುಮ್ ಸುಮ್ಮನೆ ಹೆಸರುಗಳನ್ನು ಹೇಳೋದು ತಪ್ಪಾಗುತ್ತೆ. …
Read More »118 ಆ್ಯಪ್ ನಿರ್ಬಂಧ : ಚೀನಾ ಗರಂ
ಬೀಜಿಂಗ್,ಸೆ.3-ಚೀನಾ ಮೂಲದ 118 ಆ್ಯಪ್‍ಗಳನ್ನು ಭಾರತ ನಿರ್ಬಂಧಿಸಿದ ಕ್ರಮವನ್ನು ನಾವು ಕಟುವಾಗಿ ವಿರೋಧಿಸುತ್ತೇವೆ ಎಂದು ವಾಣಿಜ್ಯ ಸಚಿವಾಲಯದ ವಕ್ತಾರ ಗೋವಾಫಿಂಗ್ ಹೇಳಿದ್ದಾರೆ. ಭಾರತದ ಕ್ರಮಗಳು ಚೀನಾದ ಹೂಡಿಕೆದಾರರು ಮತ್ತು ಸೇವಾ ವಿತರಕರ ಕುರಿತ ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಭಾರತದ ಹಲವು ರಾಜ್ಯದಲ್ಲಿ ಆ್ಯಂಪ್‍ಗಳನ್ನು ಬಳಸಿ ಡೇಟಾಗಳನ್ನು ಶೇಖರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ದೇಶದ ಉದ್ಯಮಿಗಳು ಹೂಡಿದ್ದ ಬಂಡವಾಳವನ್ನು ಹಿಂತೆಗೆದುಕೊಳ್ಳುವಂತೆ ಮತ್ತು ದೇಶದಿಂದ ಓಡಿಸುವಂತಹ ಕ್ರಮವನ್ನು ಮಾಡಲಾಗುತ್ತಿದೆ. …
Read More »ಸೆ.5ರಂದು ಶಾಸಕ ಬಾಲಚಂದ್ರ ಅಧ್ಯಕ್ಷತೆಯಲ್ಲಿ ಸೆ.5ರಂದು ಶಿಕ್ಷಕರ ದಿನ ಆಚರಣೆ
ಮೂಡಲಗಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಸೆ.5ರಂದು ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲ್ಕರ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂಡಲಗಿ ವಲಯ ಶಿಕ್ಷಣಾಧಿಕಾರಗಳ ಕಚೇರಿಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಉದ್ಘಾಟಕರಾಗಿ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಆಗಮಿಸಲಿದ್ದಾರೆ. ಮೂಡಲಗಿ ತಹಶೀಲ್ದಾರ್ ಡಿ.ಜೆ.ಮಹಾತ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಕಾರ್ಯನಿರ್ವಾಹಕ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಬಿಇಒ ಅಜೀತ ಮನ್ನಿಕೇರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Read More »ಚಂದನವನದ ನಿರ್ಮಾಪಕ ಹಾಗೂ ನಿರ್ದೇಶಕ ಸ್ಟಿಲ್ ಸೀನು ಚಿಕಿತ್ಸೆ ಫಲಿಸದೆ ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಬೆಂಗಳೂರು, ಸೆ.3- ಅಪಘಾತದಿಂದಾಗಿ ಕೋಮಾ ಸ್ಥಿತಿಗೆ ಹೋಗಿದ್ದ ಚಂದನವನದ ನಿರ್ಮಾಪಕ ಹಾಗೂ ನಿರ್ದೇಶಕ ಸ್ಟಿಲ್ ಸೀನು ಚಿಕಿತ್ಸೆ ಫಲಿಸದೆ ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಗಹನ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಸ್ಟಿಲ್ ಸೀನು ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಕೋಮಾ ಸ್ಥಿತಿಗೆ ಹೋಗಿದ್ದರು. ಅಂದಿನಿಂದಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ. ಪಾರ್ವತಮ್ಮ ರಾಜ್‍ಕುಮಾರ್ ಅವರು ತಮ್ಮ ವಜ್ರೇಶ್ವರಿ ಕಂಬೈನ್ಸ್‍ನಡಿ ನಿರ್ಮಾಣ …
Read More »ಸ್ಯಾಂಡಲ್‍ವುಡ್ ಡ್ರಗ್ಸ್ ಗೆ ಬಾಲಿವುಡ್ ನಂಟು : ಸಂಬರಗಿ
ಬೆಂಗಳೂರು, ಸೆ.3- ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.ಸ್ಯಾಂಡಲ್‍ವುಡ್‍ನ ಡ್ರಗ್ಸ್ ನಂಟಿಗೂ ಬಾಲಿವುಡ್‍ಗೂ ಸಂಬಂಧವಿದೆ. ಈ ಬಗ್ಗೆ ತನಿಖೆಯಾಗಬೇಕು. ಬಾಲಿವುಡ್‍ನ ನಂಟು ಹೊಂದಿರುವ ಇಮ್ತಿಯಾಜ್ ಖಾತ್ರಿ ಎಂಬುವವರ ಬಗ್ಗೆ ತನಿಖೆ ನಡೆಸಿದರೆ ಮತ್ತಷ್ಟು ವಿಷಯಗಳು ಹೊರ ಬರಲಿವೆ ಎಂದು ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇಮ್ತಿಯಾಜ್ ಖಾತ್ರಿ ಎಂಬುವ ವರಿಗೆ ಬಾಲಿವುಡ್‍ನ ನಟ-ನಟಿಯರು, ನಿರ್ಮಾಪಕರ ನಂಟಿದೆ. ಮುಂಬೈನಲ್ಲಿ ನಡೆದ …
Read More »ಗ್ಲೋಬಲ್ ಇನ್ನೋವೇಷನ್ ಲಿಸ್ಟ್‍ನಲ್ಲಿ ಸ್ಥಾನ ಪಡೆದಿರುವ ವಿಶ್ವದ 50 ಅಗ್ರಮಾನ್ಯ ದೇಶಗಳಲ್ಲಿ ಭಾರತ ಇದೇ ಮೊದಲ ಬಾರಿ ಸೇರ್ಪಡೆ
ಮುಂಬೈ, ಸೆ.3- ಭಾರತದ ಅನ್ವೇಷಣೆ ಮತ್ತು ವಿಜ್ಞಾನ-ತಂತ್ರಜ್ಞನ ಕೀರ್ತಿಯ ಮುಕುಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದೆ. ಜಾಗತಿಕ ಅನ್ವೇಷಣೆ ಪಟ್ಟಿ-2020ರಲ್ಲಿ ಭಾರತಕ್ಕೆ 48ನೆ ಸ್ಥಾನ ಲಭಿಸಿದೆ. ಗ್ಲೋಬಲ್ ಇನ್ನೋವೇಷನ್ ಲಿಸ್ಟ್‍ನಲ್ಲಿ ಸ್ಥಾನ ಪಡೆದಿರುವ ವಿಶ್ವದ 50 ಅಗ್ರಮಾನ್ಯ ದೇಶಗಳಲ್ಲಿ ಭಾರತ ಇದೇ ಮೊದಲ ಬಾರಿ ಸೇರ್ಪಡೆಯಾಗಿರುವುದು ಮತ್ತೊಂದು ಹೆಗ್ಗಳಿಕೆ. ಅಲ್ಲದೆ, ಉದ್ಯಾನನಗರಿ ಬೆಂಗಳೂರು, ದೇಶದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞನ ತಾಣದಲ್ಲಿ …
Read More »ಡಿಜೆಹಳ್ಳಿ-ಕೆಜಿಹಳ್ಳಿ ಗಲಭೆ ಕುರಿತು ಕೇಂದ್ರಕ್ಕೆ ವರದಿ
ಬೆಂಗಳೂರು,ಸೆ.3- ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಜೆಹಳ್ಳಿ, ಕೆಜಿಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ ಆಗಸ್ಟ್ 11ರಂದು ನಡೆದಿದ್ದ ಗಲಭೆಯ ಕುರಿತು ರಾಜ್ಯ ಸರ್ಕಾರ, ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ. ನವೀನ್ ಎಂಬುವರು ಮುಹಮ್ಮದ್ ಪೈಗಂಬರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ನೂರಾರು ಜನರು ರಾತ್ರೋ ರಾತ್ರಿ ವಾಹನಗಳು ಹಾಗೂ ಶಾಸಕರ ಮನೆಗೂ …
Read More »